ಮಸೀದಿಗಳಲ್ಲಿ ಸಾಮೂಹಿಕ ನಮಾಜ್ ಶುರು
Team Udayavani, Jun 10, 2020, 3:55 PM IST
ಭಟ್ಕಳ: ತಾಲೂಕಿನಲ್ಲಿ ಮಸೀದಿಗಳಲ್ಲಿ ನಮಾಜ್ ಆರಂಭವಾಗಿದ್ದು ಮುಸ್ಲಿಂಮರು ಮಸೀದಿಗೆ ತೆರಳಿ ಮಾಸ್ಕ್ ಧರಿಸುವುದರ ಜತೆಗೆ ಅಂತರ ಕಾಯ್ದುಕೊಂಡು ನಮಾಜ್ ಮಾಡಿದರು.
ಮಸೀದಿಯಲ್ಲಿ ಪ್ರವೇಶಿಸುವ ಪೂರ್ವ ದ್ವಾರದಲ್ಲಿ ನೀರು ಮತ್ತು ಸೋಪ್‌ನ್ನು ಇಡಲಾಗಿದ್ದು ಜನರು ಕೈ ತೊಳೆದುಕೊಂಡು ಮಸೀದಿ ಪ್ರವೇಶಿಸಿದರು. ಕೆಲ ಮಸೀದಿಗಳಲ್ಲಿ ಥರ್ಮಲ್ ಸ್ಕ್ಯಾನಿಂಗ್ ಕೂಡ ಮಾಡಲಾಯಿತು. ಈ ಕುರಿತಂತೆ ಸುದ್ದಿಗಾರರ ಜತೆ ಮಾತನಾಡಿದ ಖಲಿಫಾ ಜಾಮಿಯಾ ಮಸೀದಿ ಇಮಾಮ್ ಮತ್ತು ಖತೀಬ್ ಮೌಲಾನ ಕ್ವಾಜಾ ಮೊಹಿನುದ್ದೀನ್ ನದ್ವಿ ಮದನಿ ಮಸೀದಿಗಳು ಪುನರ್ ಆರಂಭಗೊಂಡಿದ್ದಕ್ಕೆ ಅಲ್ಲಾಹನಿಗೆ ಕೃತಜ್ಞತೆ ಸಲ್ಲಿಸಿದರು. ಮುಸ್ಲಿಂಮರು ತಮ್ಮ ಮನೆಗಳಿಂದ ಬೇಕಾದರೆ ದೂರ ಇರಬಹುದು, ಆದರೆ ಮಸೀದಿಗಳಿಂದ ದೂರ ಇರಲು ಸಾಧ್ಯವಿಲ್ಲ ಎಂದರು.
ಅಹ್ಮದ್ ಸಯೀದ್ ಜಾಮಿಯಾ ಮಸೀದಿಯ ಇಮಾಮ್ ಮತ್ತು ಖತೀಬ್ ಮೌಲಾನ ಮುಹಮ್ಮದ್ ಜಾಫರ್ ಫಕ್ಕಿಭಾವ್ ಮಾತನಾಡಿ ಲಾಕೌಡೌನ್ ಸಂದರ್ಭ ಮುಸ್ಲಿಮರು ತಪ್ಪದೆ ತಮ್ಮ ತಮ್ಮ ಮನೆಗಳಲ್ಲಿ ಐದು ಹೊತ್ತಿನ ನಮಾಜ್ ನಿರ್ವಹಿಸಿದರು. ಈಗ ಮಸೀದಿಗಳು ಆರಂಭಗೊಂಡಿವೆ. ಮಸೀದಿಗಳು ಮುಸ್ಲಿಂಮರಿಗೆ ಅತ್ಯಂತ ಪವಿತ್ರ ಸ್ಥಳಗಳಾಗಿವೆ. ಶೈಕ್ಷಣಿಕ ಮತ್ತು ಸಾಮಾಜಿಕ ಚಟುವಟಿಕೆಗಳ ಕೇಂದ್ರವೂ ಆಗಿವೆ ಎಂದು ಹೇಳಿದರು.
ತಂಝೀಮ್ ಸಂಸ್ಥೆ ಅಧ್ಯಕ್ಷ ಎಸ್.ಎಂ. ಪರ್ವೇಝ್ ಭಟ್ಕಳದ ಎಲ್ಲ ಮಸೀದಿಗಳಲ್ಲಿ ಸರಕಾರದ ಮಾರ್ಗದರ್ಶಿ ನಿಯಮಗಳನ್ನು ಪಾಲಿಸುವಂತೆ ಆಡಳಿತ ಮಂಡಳಿಗೆ ನಿರ್ದೇಶನ ನೀಡಲಾಗಿದ್ದು ಎಲ್ಲ ಮಸೀದಿಗಳಲ್ಲಿ ದೈಹಿಕ ಅಂತರ ಕಾಪಾಡುತ್ತ ವೃದ್ಧರು ಹಾಗೂ ಮಕ್ಕಳನ್ನು ಮಸೀದಿಗಳಿಗೆ ಕಳುಹಿಸದಂತೆ ತಿಳಿಸಲಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
Murdeshwar: ನಾಲ್ವರು ವಿದ್ಯಾರ್ಥಿನಿಯರು ಸಮುದ್ರಪಾಲು; 1 ಶವ ಪತ್ತೆ
MUST WATCH
ಹೊಸ ಸೇರ್ಪಡೆ
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.