Karwar ನೊಂದವರ ಪರ ಭೀಮ್ ಆರ್ಮಿ ಕೆಲಸ ಮಾಡಲಿದೆ: ರಾಜ್ ಗೋಪಾಲ್ ಡಿ.ಎಸ್.
ಬಿಜೆಪಿ ಜೊತೆ ಸೇರಿದ ಮಾಯಾವತಿ ಬಿಎಸ್ಪಿ ನಾಶ ಮಾಡಿದರು
Team Udayavani, Aug 16, 2023, 4:49 PM IST
ಕಾರವಾರ :ನೊಂದವರ ಪರ ಭೀಮ್ ಆರ್ಮಿ ಕೆಲಸ ಮಾಡಲಿದೆ ಎಂದು ರಾಜ್ ಗೋಪಾಲ್ ಡಿ.ಎಸ್. ಹೇಳಿದರು.
ಕಾರವಾರದ ಪತ್ರಿಕಾಭವನದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಅಂಬೇಡ್ಕರ್ ಹಾಕಿ ಕೊಟ್ಟ ಹಾದಿಯಲ್ಲಿ ನಾವು ನಡೆಯಲಿದ್ದೇವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಭೀಮ್ ಆರ್ಮಿ ಘಟಕ ಪ್ರಾರಂಭವಾಗಿದೆ. ಉತ್ತರ ಕನ್ನಡದಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ನೀಡುವ ಘಟನೆಗಳು ನಡೆಯುತ್ತಿವೆ, ದಲಿತರ ಜಾತಿ ಪ್ರಮಾಣ ಪತ್ರವನ್ನು ದಲಿತೇತರ ಜಾತಿಗಳು ಪಡೆಯುತ್ತಿವೆ ಎಂಬ ದೂರು ಇದೆ. ಇದರ ವಿರುದ್ಧ ನಮ್ಮ ಹೋರಾಟ ನಡೆಯಲಿದೆ ಎಂದರು.
ಭೀಮ್ ಆರ್ಮಿ ದಲಿತರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದವರ ಪರ ಕೆಲಸ ಮಾಡಲಿದೆ. ಚಂದ್ರಶೇಖರ್ ಅಜಾದ್ ರಾವಣ ಅವರ ಮೇಲೆ ಜಂತರ ಮಂಥರ್ ನಲ್ಲಿ ಗುಂಡಿನ ದಾಳಿ ನಡೆದಾಗ ಅದರ ವಿರುದ್ಧ ಪ್ರತಿಭಟನೆ ಮಾಡಿದೆವು. ಈಗ ಕರ್ನಾಟಕದ ಎಲ್ಲಾ ಕಡೆ ಶಾಖೆ ಪ್ರಾರಂಭಿಸಲು ಪ್ರಯತ್ನ ನಡೆದಿವೆ.
ಭೀಮ್ ಆರ್ಮಿ ದೇಶದ ಎಲ್ಲಾ ರಾಜ್ಯಗಳಲ್ಲಿ ಇದ್ದು, ಭೀಮ್ ಆರ್ಮಿ ಭಿನ್ನವಾಗಿ ಕೆಲಸ ಮಾಡಲಿದೆ ಎಂದರು. ಇತರೆ ದಲಿತ ಸಂಘಟನೆಗಳು ಜಿಲ್ಲಾಕೇಂದ್ರ, ರಾಜಧಾನಿಗೆ ಸೀಮಿತವಾಗಿದೆ. ಆದರೆ ಭೀಮ್ ಆರ್ಮಿ ದೇಶದ ಎಲ್ಲಾ ಭಾಗದಲ್ಲಿ ಇದೆ.ಚಂದ್ರಶೇಖರ್ ಅಜಾದ್ ವಕೀಲರು. ಹಾಗಾಗಿ ಭೀಮ್ ಆರ್ಮಿಗೆ ಹೆಚ್ಚಿನ ತಿಳುವಳಿಕೆ ಇದೆ ಎಂದು ಹೇಳಿದರು.
ಬಿಜೆಪಿ ಜೊತೆ ಸೇರಿದ ಮಾಯಾವತಿ ಬಿಎಸ್ಪಿ ನಾಶ ಮಾಡಿದರು:
ಮಾಯಾವತಿ ಬಿಜೆಪಿಮಯ ಆಗಿದ್ದಾರೆ. 82 ಜಿಲ್ಲೆಗಳಲ್ಲಿ ಬಿಎಸ್ ಪಿ ಒಬ್ಬನೇ ಶಾಸಕ ಗೆದ್ದಿಲ್ಲ. ಮಾಯಾವತಿ ಸಹ ತಮ್ಮನ ಮಗನನ್ನು ಬಿಎಸ್ಪಿಗೆ ತಂದು ಕೂರಿಸಲು ಯತ್ನಿಸಿದರು. ಮಾಯಾವತಿ ಬಿ ಎಸ್ಪಿಯ ಸಮಾಧಿ ಮಾಡಿದ್ದಾರೆ.
ಹಾಗಾಗಿ ದಲಿತರಿಗೆ ಭೀಮ್ ಆರ್ಮಿಯೇ ಆಶಾವಾದ ಎಂದರು.
ಕರ್ನಾಟಕದಲ್ಲಿ ಬಿಎಸ್ಪಿ ಯನ್ನು ಬೆಳಸಲಿಲ್ಲ. 35 ವರ್ಷದಿಂದ ಬಿಎಸ್ಪಿ ಇದ್ದರೂ ಬೀದರ್ ನಿಂದ ಒಬ್ಬ ಎಂಪಿ,ಕೊಳ್ಳೇಗಾಲದಿಂದ ಒಬ್ಬ ಶಾಸಕ ಇದ್ದರು. ಈಗ ಅದು ಸಹ ಇಲ್ಲ ಎಂದರು. ರಾಜಕೀಯ ಪಕ್ಷ ಸ್ಥಾಪನೆಯ ಉದ್ದೇಶ ಇದೆ. ಆದರೆ ಇದಕ್ಕೂ ಮುಂಚೆ ಸಂಘಟನೆ ಗಟ್ಟಿ ಮಾಡಲು ಪ್ರಯತ್ನ ನಡೆದಿದೆ ಎಂದು ಹೇಳಿದರು.
ಜಿಲ್ಲಾಧ್ಯಕ್ಷರ ನೇಮಕ:
ಉತ್ತರ ಕನ್ನಡ ಭೀಮ್ ಆರ್ಮಿ ಜಿಲ್ಲಾಧ್ಯಕ್ಷರಾಗಿ ಮೇಘರಾಜ ಮೇತ್ರಿ, ಬಸವರಾಜ ಸಂಗಮೇಶ್ವರ ಉಪಾಧ್ಯಕ್ಷರಾಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಾಗಿ ರವಿ ಮಡಿವಾಳ ಹಂಚಿನಮನೆ, ಜಿಲ್ಲಾ ಕಾರ್ಯದರ್ಶಿಯಾಗಿ ವಿಲಾಸ್ ಮೇತ್ರಿ, ಮಲ್ಲಿಕಾರ್ಜುನ ಸುಣಗಾರ ಸಹ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ವಕೀಲ ಸಂದೀಪ್ ಕಾಬ್ರೇಕರ್ , ಮುಂಡಗೋಡ, ದಾಂಡೇಲಿ, ತಾಲೂಕುಗಳ ಭೀಮ್ ಆರ್ಮಿ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.