ಅಭಿವೃದ್ಧಿಗೆ ಅಡ್ಡಗಾಲಾದರೆ ಸುಮ್ಮನಿರಲ್ಲ
ಕಾನೂನು ಭಯ ಇದ್ದವರು ವರ್ಗವಾಗಿ ಹೋಗಲು ಅಧಿಕಾರಿಗಳಿಗೆ ಸಚಿವ ಹೆಬ್ಟಾರ್ ಖಡಕ್ ಎಚ್ಚರಿಕೆ
Team Udayavani, Feb 14, 2021, 4:43 PM IST
ಶಿರಸಿ: 125 ಕೋಟಿ ರೂ.ಗೆ ಮುಗಿಯಬೇಕಿದ್ದ ಅಂಕೋಲಾ ಹುಬ್ಬಳ್ಳಿ ರೈಲ್ವೆ ಈಗ 1400 ಕೋ. ರೂ. ಬೇಕಾಗುತ್ತದೆ. ಪರಿಸರದ ಹೆಸರಿನಲ್ಲಿ ಅಧಿಕಾರಿಗಳು, ಪರಿಸರವಾದಿಗಳು ಅಡ್ಡಗಾಲು ಹಾಕಿದರೆ ಸುಮ್ಮನಿರಲು ಸಾಧ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಟಾರ್ ಖಡಕ್ ಎಚ್ಚರಿಕೆ ನೀಡಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶನಿವಾರ ಆತ್ಮನಿರ್ಭರ ಭಾರತ ಹಾಗೂ ಪ್ರಸಕ್ತ ವರ್ತಮಾನ ಕೇಂದ್ರ ಬಜೆಟ್ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಉತ್ತರ ಕನ್ನಡ ಜಿಲ್ಲೆ ಪ್ರವಾಸೋದ್ಯಮ ಜಿಲ್ಲೆ. ಇಲ್ಲಿನ ಪ್ರವಾಸಿ ತಾಣಗಳಲ್ಲಿ ಮೂಲಭೂತ ಅಭಿವೃದ್ಧಿ ಆಗಬೇಕು. ಇಲ್ಲಿನ ದುಡಿಯುವ ಕೈಗಳಿಗೆ ಉದ್ಯೋಗ ಸೃಷ್ಟಿ ಆಗಬೇಕು. ಪರಿಸರದ ಹೆಸರಿನಲ್ಲಿ ಇವುಗಳ ಅಭಿವೃದ್ಧಿಗೆ ಹಿನ್ನಡೆ ಮಾಡಿದರೆ ಸಹಿಸಲು ಸಾಧ್ಯವಿಲ್ಲ. ಸಾಗರಮಾಲಾ ಯೋಜನೆಗೂ, ಕುಮಟಾ ಹೆದ್ದಾರಿಗೂ, ಬಂದರಿನ ಅಭಿವೃದ್ಧಿಗೂ ತೊಡಕಾದರೆ ಹೇಗೆ? ಅರಣ್ಯ ಅಧಿಕಾರಿಗಳೂ ಪರಿಸರದ ಹೆಸರಿನಲ್ಲಿ ಜನರಿಗೆ, ಅಭಿವೃದ್ಧಿಗೆ ತೊಂದರೆ ಮಾಡಿದರೆ ಆಗದು. ಕಾನೂನಿನ ಭಯ ಇದ್ದವರು ಇಲ್ಲಿ ಇರಬೇಕು ಎಂದೂ ಇಲ್ಲ. ವರ್ಗಾವಣೆ ಮಾಡಿಕೊಳ್ಳಬಹುದು ಎಂದರು.
1978ನೇ ಇಸವಿಗಿಂತ ಮೊದಲೇ ಅತಿಕ್ರಮಣ ಮಾಡಿಕೊಂಡವರ ಸ್ಥಳದ ಡಿನೋಟಿಫಿಕೇಶನ್ ಆಗಿದೆ. ಇಲಾಖೆ ಅದನ್ನು ಕಾಗದ ಪತ್ರದಲ್ಲಿ ಮಾಡಿಕೊಳ್ಳದೇ ಹೋದರೆ ಜನ ಹೊಣೆಗಾರರಲ್ಲ. ಅರಣ್ಯವನ್ನು ಉಳಿದ ಜಿಲ್ಲೆಗಳಿಗಿಂತ 10 ಪಟ್ಟು ಹೆಚ್ಚು ಉಳಿಸಿದ್ದೇವೆ, ಬೆಳಸಿದ್ದೇವೆ. ಅಧಿ ಕಾರಿಗಳಿಂದ, ಪರಿಸರ ವಾದಿಗಳಿಂದ ಅರಣ್ಯ ಉಳಿಸುವ ಪಾಠ ಹೇಳಿಸಿಕೊಳ್ಳಬೇಕಿಲ್ಲ ಎಂದೂ ವಾಗ್ಧಾಳಿ ಮಾಡಿದರು.
ದಾಂಡೇಲಿ, ಜೋಯಿಡಾ ಭಾಗದಲ್ಲಿ ಪರಿಸರದ ಕಾರಣದಿಂದ ತಡೆ ಹಿಡಿಯಲಾಗಿದ್ದ 32 ಕಾಮಗಾರಿಗಳಲ್ಲಿ ಕೇವಲ 9 ಪ್ರಕರಣ ಬಾಕಿ ಇದೆ. ಅದರ ಕುರಿತೂ ಅಧಿಕಾರಿಗಳ ಜೊತೆ ಮಾತನಾಡುತ್ತೇವೆ ಎಂದ ಹೆಬ್ಟಾರ್, ಕಸ್ತೂರಿ ರಂಗನ್ ವರದಿ ಕೂಡ ತಿರಸ್ಕಾರ ಮಾಡಿದ್ದೇವೆ. ಕೇಂದ್ರಕ್ಕೂ ರಾಜ್ಯ ಸರಕಾರ ತಿಳಿಸಿದೆ. ವರದಿಯೇ ಅವೈಜ್ಞಾನಿವಾಗಿದೆ. ಗೋವಾಕ್ಕೆ, ಕರ್ನಾಟಕಕ್ಕೆ, ಮಹಾರಾಷ್ಟ್ರಕ್ಕೆ ಒಂದೊಂದು ವರದಿ ಕೊಟ್ಟಿದೆ. ಪಶ್ಚಿಮ ಘಟ್ಟವನ್ನು ವಿಭಾಗಿಸಿ ನೋಡುವ ಕೆಲಸ ಯಾಕೆ ಮಾಡಬೇಕು? ಎಂದು ಕೇಳಿದರು.
ಜನಪ್ರತಿನಿಧಿಗಳಿಗೆ ಇಚ್ಛಾಶಕ್ತಿ ಇದ್ದರೆ ಎಷ್ಟೂ ಕಾಮಗಾರಿ ತರಬಹುದು. ಕುಮಟಾ, ಗೋಕರ್ಣ, ಪಾಳಾ, ದಾಸನಕೊಪ್ಪ, ಬನವಾಸಿ, ಕುಮಟಾ ಅಳವೆಕೋಡಿ, ಶಿರಾಲಿ, ಮಂಕಿ ಸೇರಿದಂತೆ ಹಲವೆಡೆ ಅನೇಕ ಕುಡಿಯುವ ನೀರಿನ ಯೋಜನೆ ಅನುಷ್ಠಾನ ಸರಕಾರದ ಮುಂದೆ ಪ್ರಸ್ತಾವನೆ ಇದೆ. ಜಿಲ್ಲೆಯ ಪ್ರವಾಸಿ ತಾಣಗಳ ಆಕರ್ಷಣೆಗೆ ನೇವಿ ವಿಮಾನ ನಿಲ್ದಾಣ ನಾಗರಿಕ ವಿಮಾನ ನಿಲ್ದಾಣವಾಗುತ್ತದೆ. ಅಲ್ಲಿ ಜಾಗ ಬಿಟ್ಟುಕೊಟ್ಟ ರೈತರಿಗೆ ಕೃತಜ್ಞತೆ ಸಲ್ಲಿಸುತ್ತೇವೆ. ಅವರಿಗೆ ಪರಿಹಾರ ಕೂಡ ಕೇಂದ್ರ ಸರಕಾರದ ನೂತನ ಮಾನದಂಡದಂತೆ ಒದಗಿಸಲಾಗುತ್ತದೆ ಎಂದರು.
ಉತ್ತರ ಕನ್ನಡ ಜಿಲ್ಲೆ ಇಬ್ಭಾಗ ಕುರಿತು ಎಲ್ಲ ಶಾಸಕರ, ಜನಪ್ರತಿನಿಧಿಗಳ ಅಭಿಪ್ರಾಯ ಪಡೆದು ಮುಂದುವರಿಯುತ್ತೇವೆ. ಈಗಲೇ ಏನೂ ಹೇಳುವುದಿಲ್ಲ. ಮೊನ್ನೆ ಕಂದಾಯ ಸಚಿವರು 18 ಶಾಸಕರು ಇರುವ ಬೆಳಗಾವಿಯನ್ನೇ ವಿಭಾಗಿಸಲು ಆಗಿಲ್ಲ ಎಂದೂ ಹೇಳಿದ್ದಾರೆ. ನಾನೂ ಚರ್ಚೆ ಮಾಡಿ ತಿಳಿಸುವೆ. ಅದು ಪûಾತೀತವಾಗಿ ಚರ್ಚೆ ಆಗಬೇಕಾದ್ದು ಎಂದ ಹೆಬ್ಟಾರ್, ಕೇಂದ್ರ ಸರಕಾರದ ಬಜೆಟ್ ಶ್ಲಾಘಿಸಿ, ರಾಜ್ಯದಲ್ಲೂ ರೈತ ಪರ ಬಜೆಟ್ ಬರಲಿದೆ ಎಂದೂ ವಿಶ್ವಾಸ ವ್ಯಕ್ತಪಡಿಸಿದರು.
ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮ ಅವರು ವಿಶ್ವದ ಮಾರುಕಟ್ಟೆಗೆ ಭಾರತ ಒಯ್ಯಬೇಕಾದ ಸಿದ್ಧತೆ ಮಾಡಿದ್ದಾರೆ. ರೈತರ ಆರ್ಥಿಕತೆ ಎತ್ತರಿಸುವ ಬಜೆಟ್ ಕೂಡ ಇದಾಗಿದೆ. ಆರೋಗ್ಯ, ವಿದ್ಯುತ್, ರಾಷ್ಟ್ರಯ ಹೆದ್ದಾರಿ, ರೈಲ್ವೆಗೂ ಆದ್ಯತೆ ಇದೆ. ಕೇಂದ್ರ ರಾಜ್ಯ ಸರಕಾರಗಳು ರೈತ ವಿರೋಧಿಯಲ್ಲ. ಅವರಿಗೆ ಅನುಕೂಲ ಆಗುವ ಕೆಲಸವನ್ನೇ ಸರಕಾರ ಮಾಡುತ್ತಿವೆ ಎಂದೂ ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯ ಬಜೆಟ್ ಕೂಡ ಅನ್ನದಾತನನ್ನ ಎತ್ತಿ ಹಿಡಿಯುವ ಹಾಗೂ ಸ್ವಾಭಿಮಾನಿ ರಾಜ್ಯ, ದೇಶ, ಸ್ವಾಭಿಮಾನಿ ರೈತ ಕುರಿತಾದ ಬಜೆಟ್ ಆಗಲಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯ್ಕ, ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ಧಿ, ನಿಕಟಪೂರ್ವ ಅಧ್ಯಕ್ಷ ಕೆ.ಜಿ. ನಾಯ್ಕ, ಮಾಜಿ ಶಾಸಕ ಸುನೀಲ ಹೆಗಡೆ, ಮಾಧ್ಯಮ ವಕ್ತಾರ ನಾಗರಾಜ್ ನಾಯ್ಕ, ಸಹ ವಕ್ತಾರ ಸದಾನಂದ ಭಟ್ಟ, ಡಾನಿ ಡಿಸೋಜಾ, ಆರ್.ಡಿ. ಹೆಗಡೆ, ಚಂದ್ರು ಎಸಳೆ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೆಳೆವಿಮೆ ಸಿಗದೆ ಕೃಷಿಕರ ಪರದಾಟ: ಅಡಕೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸದ ಸರ್ಕಾರ
Belekeri Mining Case: ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಜೈಲು ಶಿಕ್ಷೆಗೆ ಹೈಕೋರ್ಟ್ ತಡೆ
ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಹೊತ್ತಿ ಉರಿದ ಲಾರಿ… ಅಪಾರ ಪ್ರಮಾಣದ ಸೊತ್ತು ಬೆಂಕಿಗಾಹುತಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Gangavathi: 25 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.