ನೆರೆ ಪೀಡಿತ ಪ್ರದೇಶಕ್ಕೆ ಸಚಿವರ ಭೇಟಿ
Team Udayavani, Aug 8, 2020, 2:59 PM IST
ಹೊನ್ನಾವರ: ರಾಜ್ಯದ ಕಂದಾಯ ಸಚಿವ ಆರ್. ಅಶೋಕ ತಾಲೂಕಿನ ನೆರೆ ಪೀಡಿತ ಪ್ರದೇಶಗಳಾದ ಗುಂಡಬಾಳಾ, ಹೊಳೆಸಾಲಿನ, ಚಿಕ್ಕನಕೋಡ ಮತ್ತು ಹಡಿನಬಾಳ ಭಾಗಕ್ಕೆ ಭೇಟಿ ನೀಡಿ ನಿರಾಶ್ರಿತರ ಸಮಸ್ಯೆ ಆಲಿಸಿದರು.
ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲಾ ಪ್ರವಾಸದಲ್ಲಿರುವ ಸಚಿವರು ಮೊದಲು ಭಟ್ಕಳಕ್ಕೆ ಭೇಟಿ ನೀಡಿ ಅಲ್ಲಿಂದ ಮಧ್ಯಾಹ್ನ ಹೊನ್ನಾವರಕ್ಕೆ ಆಗಮಿಸಿ ಚಿಕ್ಕನಕೋಡದಲ್ಲಿರುವ ಕಾಳಜಿ ಕೇಂದ್ರ ಹಾಗೂ ಹಡಿನಬಾಳದ ನದಿ ತೀರದಲ್ಲಿರುವ ಮನೆಗೆ ಭೇಟಿ ನೀಡಿದರು. ಸಚಿವರು ಕಾಳಜಿ ಕೇಂದ್ರದಲ್ಲಿದ್ದ ಸಂತ್ರಸ್ತರ ಸಮಸ್ಯೆ ವಿಚಾರಿಸಿದರು. ಕಳೆದ 30 ವರ್ಷಗಳಿಂದ ಮಳೆಗಾಲದಲ್ಲಿ ಎದುರಾಗುವ ಪ್ರವಾಹದ ಹೊಡೆತ ತಾಳಿಕೊಂಡು ಬಂದಿದ್ದೇವೆ. ನಮಗೆ ತಾತ್ಕಾಲಿಕ ಪರಿಹಾರವನ್ನಾಗಿ ಏನನ್ನೂ ಕೊಡುವುದು ಬೇಡ. ಎತ್ತರದ ಜಾಗದಲ್ಲಿ ಮನೆ ಕಟ್ಟಿಕೊಂಡು ವಸತಿಗೆ ಅವಕಾಶಮಾಡಿಕೊಟ್ಟರೆ ಸಾಕು ಎಂದರು ಸಂತ್ರಸ್ತರು.
ಗ್ರಾಮದಲ್ಲಿ ಮೂರು ಎಕರೆ ಕಂದಾಯ ಭೂಮಿ ಇದೆ. ಅದರಲ್ಲಿಯೇ ಮನೆ ಕಟ್ಟಿಕೊಳ್ಳುವುದಕ್ಕೆ ಅವಕಾಶ ಮಾಡಿಕೊಡುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದೇನೆ ಎಂದು ಸ್ಥಳೀಯ ಶಾಸಕರು ತಿಳಿಸಿದಾಗ, ಜನರ ಬೇಡಿಕೆಗೆ ಸ್ಥಳದಲ್ಲಿಯೇ ಒಪ್ಪಿಗೆ ಸೂಚಿಸಿದರು. ನಂತರ ಮಾತನಾಡಿದ ಸಚಿವರು, ಜಿಲ್ಲೆಯ ನೆರೆ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸುತ್ತಿದ್ದಾರೆ. ಈ ಭಾಗದ ಬೇಡಿಕೆಯಂತೆ 3 ಎಕರೆ ಜಾಗದ ಬಗ್ಗೆ ಸೂಕ್ತ ದಾಖಲೆ ಒದಗಿಸಿದಲ್ಲಿ ಅವರಿಗೆ ಮನೆ ನಿರ್ಮಾಣ ಮಾಡಲು ವ್ಯವಸ್ಥೆ ಕಲ್ಪಿಸಲಾಗುವುದು. ಜಿಲ್ಲೆಯಲ್ಲಿ ನಿರಾಶ್ರಿತರ ಕ್ರೇಂದ್ರ ನಿರ್ಮಾಣಕ್ಕೂ ಹಣ ಬಿಡುಗಡೆ ಮಾಡಿದ್ದು, ಸೂಕ್ತ ಸ್ಥಳವನ್ನು ಅಧಿಕಾರಿಗಳು ಗುರುತಿಸಬೇಕಿದೆ. ಮನೆಗೆ ಹಾನಿಯಾದಲ್ಲಿ ಕೂಡಲೇ ಪರಿಹಾರ ಒದಗಿಸಲು ಸೂಕ್ತ ಅನುದಾನ ಜಿಲ್ಲಾಡಳಿತದ ಬಳಿ ಇರುವುದರಿಂದ ಪರಿಹಾರಕ್ಕೆ ವಿಳಂಬವಿಲ್ಲ. ಕಳೆದ ಬಾರಿಗಿಂತ ಮೂರು ಪೆಟ್ಟು ಹೆಚ್ಚು ಅನುದಾನ ಕೇಂದ್ರ ನೀಡಲು ಸಿದ್ಧವಿದೆ. ಸರ್ಕಾರದ ಬಳಿ ಹಣವಿಲ್ಲ ಎನ್ನುವುದು ಕೇವಲ ಆಧಾರರಹಿತ ಆರೋಪ ಎಂದರು. ಸಚಿವ ಶಿವರಾಮ ಹೆಬ್ಟಾರ ಮಾತನಾಡಿ, ಈ ಭಾಗದ ಹಲವು ವರ್ಷದ ಬೇಡಿಕೆಯಾದ ಬದಲಿ ವಸತಿ ವ್ಯವಸ್ಥೆ ಕಲ್ಪಿಸಲು ಸಚಿವರು ಒಪ್ಪಿಗೆ ಸೂಚಿಸಿದ್ದಾರೆ. ಇನ್ನುಳಿದ ತಾಲೂಕಿನ ಸಮಸ್ಯೆಯನ್ನು ಕೂಡಾ ಹಂತಹಂತವಾಗಿ ಶಾಶ್ವತ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದು ಭರವಸೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Development: ಭಾರತದ ಅಭಿವೃದ್ಧಿಯಲ್ಲಿ ಯುವ ಶಕ್ತಿಯ ಪ್ರಾಮುಖ್ಯತೆ
Actor Arrested: ಸ್ಯಾಂಡಲ್‌ವುಡ್ ನಿರ್ದೇಶಕನ ಮೇಲೆ ಗುಂಡು ಹಾರಿಸಿ ಹತ್ಯೆಗೆ ಯತ್ನ; ನಟ ಬಂಧನ
ಹರಗಾಪುರ ಕೇಸ್ ಗೆ ತಿರುವು: ದರೋಡೆ ಆಗಿದ್ದು 75 ಲಕ್ಷ ರೂ., ಸಿಕ್ಕಿದ್ದು ಒಂದು ಕೋಟಿ ರೂ.!
Dense Smog: ಸರಣಿ ಅಪಘಾತ… ಇಬ್ಬರು ಮೃತ್ಯು, ಹಲವು ಮಂದಿಗೆ ಗಾಯ
Actor Siddique: ಅತ್ಯಾಚಾರ ಆರೋಪ; ನಟ ಸಿದ್ದಿಕ್‌ಗೆ ನಿರೀಕ್ಷಣಾ ಜಾಮೀನು ಮಂಜೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.