ಮೋದಿ-ಹಿಂದುತ್ವ-ಪರೇಶ ಹೆಸರಿನಿಂದ ಗೆಲುವು
Team Udayavani, May 16, 2018, 12:58 PM IST
ಹೊನ್ನಾವರ: ಪ್ರಧಾನಿ ನರೇಂದ್ರ ಮೋದಿಯವರ ಹವಾ, ಸಚಿವ ಅನಂತಕುಮಾರ ಹೆಗಡೆ ಹಿಂದುತ್ವ,ಪರೇಶ್ ಮೇಸ್ತ ಹೆಸರು ಕರಾವಳಿಯಲ್ಲಿ ಬಿಜೆಪಿ ಗೆಲುವಿಗೆ ಕಾರಣವಾಗಿದ್ದು ಹವ್ಯಕರ ಒಕ್ಕಟ್ಟು ಘಟ್ಟದ ಮೇಲಿನ ಇಬ್ಬರ ಗೆಲುವಿಗೆ ಕಾರಣವಾಗಿ ನಾಲ್ವರು ಬಿಜೆಪಿ, ಇಬ್ಬರು ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದಾರೆ.
ಸಚಿವ ಅನಂತಕುಮಾರ ಹೆಗಡೆ ಸತತ ತಾವು ಸಂಸತ್ತಿಗೆ ಆಯ್ಕೆಯಾಗುವುದರ ಜೊತೆ ಜಿಲ್ಲೆಯಲ್ಲಿ ಹಿಂದುತ್ವವನ್ನು ಜಾಗೃತವಾಗಿಡಲು ತಮ್ಮ ಸರ್ವಶಕ್ತಿಯನ್ನು ಬಳಸಿದವರು. ಈ ಬಾರಿ ಡಿಸೆಂಬರ್‌ನಲ್ಲಿ ನಡೆದ ಪರೇಸ್ ಮೇಸ್ತ ಸಾವಿನ ಪ್ರಕರಣ ಬಿಜೆಪಿ ಗೆಲುವನ್ನು ವಾರದ ಮೊದಲೇ ಖಾತ್ರಿಗೊಳಿಸಿತ್ತು. ಶಿರಸಿ, ಯಲ್ಲಾಪುರ, ಸಿದ್ದಾಪುರ ಸೀಮೆಯಲ್ಲಿ ಎಲ್ಲ ರೀತಿಯಲ್ಲಿ ಬಲಾಡ್ಯರಾಗಿರುವ ಬ್ರಾಹ್ಮಣರು ಒಗ್ಗಟ್ಟಿಗೆ ಹೆಸರು ವಾಸಿ. ಶಿರಸಿಯಲ್ಲಿ ಇಬ್ಬರು ಬ್ರಾಹ್ಮಣರು ನಿಂತರೂ ಗೆಲ್ಲುವ ಕಾಗೇರಿಗೆ ಮತಹಾಕಿದಂತೆ ಹೆಬ್ಟಾರರನ್ನು ಯಲ್ಲಾಪುರದಲ್ಲಿ ಗೆಲ್ಲಿಸಿದ್ದಾರೆ.
ಮೀನುಗಾರ ಸಮಾಜದವರು ಮೊದಲಿನಿಂದಲೂ ಬಿಜೆಪಿ ಒಲವುಳ್ಳವರು. ಪರೇಸ್ ಮೇಸ್ತ ಹತ್ಯೆ ನಂತರ ಇದನ್ನು ಪರಿಣಾಮಕಾರಿಯಾಗಿ ಬಿಜೆಪಿ ಬಳಸಿಕೊಂಡಿದೆ. ಪಕ್ಷದ ಕಾರ್ಯಕರ್ತನಲ್ಲವಾದರೂ ನನ್ನ ಮಗ ಹಿಂದು ಎಂಬ ಕಾರಣಕ್ಕೆ ಹತ್ಯೆ ಮಾಡಲಾಗಿದೆ ಎಂದು ಪರೇಶನ ತಂದೆ ಮತ್ತು ಕುಟುಂಬದವರು ಕಾರವಾರದಿಂದ ಕುಂದಾಪುರದವರೆಗೆ ಓಡಾಡಿ ತಮ್ಮ ಸಮಾಜದವರು ಒಟ್ಟಾಗಿ ಬಿಜೆಪಿಗೆ ಮತ ಹಾಕುವಂತೆ ಮಾಡಿದ್ದಾರೆ. ಪರೇಶನ ಚಿತ್ರಗಳು, ಗಲಾಟೆಯ ಚಿತ್ರ, ವಿಡಿಯೋಗಳನ್ನು ಬಿಜೆಪಿ ಯಶಸ್ವಿಯಾಗಿ ಬಳಸಿಕೊಂಡಿದೆ.
ರಿಕ್ಷಾ ಸಂಘದ ಅಧ್ಯಕ್ಷ ಸ್ಥಾನದಿಂದ ಆರಂಭಿಸಿ ಜನರ ಸಂಪರ್ಕ ಸಾಧಿ ಸಿದ ದಿನಕರ ಶೆಟ್ಟಿ ಅಧಿ ಕಾರ ಇರಲಿ, ಇಲ್ಲದಿರಲಿ ಒಂದು ಬಾರಿ ಗೆದ್ದು ಮೂರು ಬಾರಿ ಬೆರಳೆಣಿಕೆ ಅಂತರದಿಂದ ಸೋತಿದ್ದರೂ ಬೇಸರಿಸದೆ ಜನ ಸಂಪರ್ಕದಲ್ಲಿದ್ದರು. ಬಿಜೆಪಿ ಖಾಯಂ ಮತ ಮತ್ತು ದಿನಕರ ಶೆಟ್ಟಿಯವರ ಸಾರ್ವಜನಿಕ ಸಂಪರ್ಕ 32293 ಮತಗಳ ಅಂತರದ ಗೆಲುವು ದೊರಕಿಸಿದೆ. ಸೂರಜ್‌ರ ಭಾವನಾತ್ಮಕ ಸಂಗತಿ, ಯಶೋಧರ ನಾಯ್ಕರ ಸಂಘಗಳು, ಪ್ರದೀಪರ ಸಾಮಾಜಿಕ ಕೆಲಸ ಎಲ್ಲವೂ ಹಿಂದೆ ಸರಿದಿದೆ. ಉಳಿದವರು ಠೇವಣಿ ಕಳೆದುಕೊಂಡಿದ್ದಾರೆ.
ಎಲ್ಲ ಗಾಳಿ ಇದ್ದರೂ ಮಂಕಾಳ ವೈದ್ಯ ಸಾಕಷ್ಟು ಕೆಲಸ ಮಾಡಿದ ಕಾರಣ ಸುನಿಲ್ ನಾಯ್ಕ ಭಟ್ಕಳದಲ್ಲಿ 5930 ಮತಗಳ ಅಂತರದಿಂದ ಗೆಲ್ಲುವುದು ಸಾಧ್ಯವಾಯಿತು. ಈ ಎರಡು ಗೆಲುವಿನಲ್ಲಿ ಪರೇಸ್ ಮೇಸ್ತ ಹೆಸರು ಮತ್ತು ಮಾಗೋಡಿನ ವಿದ್ಯಾರ್ಥಿಯೊಬ್ಬಳ ಮೇಲೆ ನಡೆಯಿತು ಎನ್ನಲಾದ ಅತ್ಯಾಚಾರ ಪ್ರಯತ್ನದ ಪ್ರಕರಣದ ಸುದ್ದಿ ಕಾರಣವಾಗಿದೆ. ಈ ಎರಡು ಪ್ರಕರಣಗಳು ನಡೆದಾಗ ಶಾಸಕಿ ಶಾರದಾ ಶೆಟ್ಟಿ ಮತ್ತು ಮಂಕಾಳ ವೈದ್ಯ ಎರಡೂ ಸಮಾಜದ ಪ್ರಮುಖರನ್ನು ಸೇರಿಸಿ ಶಾಂತಿ ಸಭೆ ನಡೆಸಿ, ಪರಿಸ್ಥಿತಿ ತಿಳಿಗೊಳಿಸಬೇಕಿತ್ತು. ಅದರ ಬದಲು ಇಬ್ಬರೂ ಪ್ರಕರಣದಿಂದ ದೂರ ಉಳಿದರು. ಪೊಲೀಸರು ಯಾರ್ಯಾರನ್ನೋ ಬಂಧಿಸಿದರು. ಹಿಂದುಗಳ ಬಂಧನಕ್ಕೆ ಶಾಸಕರಿಬ್ಬರು ಕಾರಣ ಎಂದು ಜನ ಭಾವಿಸಿದರು. ಯಾವತ್ತೂ ತನ್ನ ಬೆಂಬಲವನ್ನು ಬಹಿರಂಗಗೊಳಿಸದೇ ಇದ್ದ ತಂಜಿಮ್ ವಾರ ಮೊದಲೇ ಮಂಕಾಳ ವೈದ್ಯರಿಗೆ ಬೆಂಬಲ ಘೋಷಿಸಿದ್ದು ಹಿಂದು ಶಾಸಕ ಬೇಕು ಎಂಬ ಭಾವನೆಗೆ ಪ್ರಚೋದನೆ ದೊರೆಯುವಂತಾಯಿತು. ಆದ್ದರಿಂದ ಮಂಕಾಳ ವೈದ್ಯರ ಕೆಲಸವನ್ನು ಮತದಾರರು ಮರೆತರು. ಇದೇ ಭಾವನೆ ಚುನಾವಣೆ ತನಕ ಮುಂದುವರಿದ ಕಾರಣ ಬಿಜೆಪಿಗೆ ಹೆಚ್ಚು ಲಾಭವಾಯಿತು.
ಇತ್ತೀಚಿನ ವರ್ಷದಲ್ಲಿ ಆರ್.ವಿ. ದೇಶಪಾಂಡೆ ಹಳಿಯಾಳ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ. ಮೋದಿ ಮತ್ತು ಯೋಗಿ ಆದಿತ್ಯನಾಥ ಹೆಸರು ಗೆಲ್ಲಿಸುತ್ತದೆ ಎಂದು ಸುನಿಲ್ ಹೆಗಡೆ ದೇಶಪಾಂಡೆ ಟೀಕಿಸುತ್ತಾ ಕಾಲಕಳೆದರು. ಇದರಿಂದ ದೇಶಪಾಂಡೆ 5140 ಮತಗಳಿಂದ ಗೆಲುವು ಸಾಧಿ ಸಿದರು. ಶಿರಸಿ, ಸಿದ್ದಾಪುರ ಕ್ಷೇತ್ರದಲ್ಲಿ ಕಾಗೇರಿ ಗೆಲುವು ನಿಶ್ಚಿತವಾಗಿತ್ತು. ಅವರ ಸರಳತೆ, ಸಜ್ಜನಿಕೆ, ಅನುಭವ, ಕಾರ್ಯಕರ್ತರ ಬೆಂಬಲ ಒಂದು ಕಾರಣವಾದರೆ ಯಾರಿಗೂ ಕೆಡುಕು ಮಾಡದ ಗುಣ ಇನ್ನೊಂದು ಕಾರಣ. ಪರೇಶ ಮೇಸ್ತ ಪ್ರಕರಣದ ನಂತರ ಶಿರಸಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾಗೇರಿ ಸಾವಿನ ಹತ್ತಿರ ಹೋಗಿ ಬಂದಿದ್ದರು. ಹಿಂದುತ್ವ ಮತ್ತು ಬ್ರಾಹ್ಮಣರ ಒಕ್ಕಟ್ಟು ಕಾಗೇರಿಯವರನ್ನು ಮತ್ತೆ ವಿಧಾನಸೌಧಕ್ಕೆ ಕಳಿಸಿದೆ.
ಇಬ್ಬರು ಬ್ರಾಹ್ಮಣರು ನಿಂತಾಗಲೆಲ್ಲಾ ಸೋಲಾಗಿರುವುದನ್ನು ನೆನಪಿಸಿಕೊಂಡು ಯಲ್ಲಾಪುರ ಭಾಗದ ಮತದಾರರು ಶಿವರಾಮ ಹೆಬ್ಟಾರರನ್ನು ಗೆಲ್ಲಿಸಿದ್ದಾರೆ. ವಿ.ಎಸ್. ಪಾಟೀಲ ಮತ್ತು ಸಚಿವ ಅನಂತ ನಡುವೆ ಸಂಬಂಧ ಸರಿಯಿರಲಿಲ್ಲ. ಮೋದಿ ಗಾಳಿಯಿದ್ದರೂ ಶಿವರಾಮ ಹೆಬ್ಟಾರ 1483ಮತಗಳಿಂದ ಗೆಲುವು ಸಾಧಿ ಸಿದ್ದಾರೆ. ಪ್ರಥಮವಾಗಿ ಸ ರ್ಧಿಸಿದ ರೂಪಾಲಿ ನಾಯ್ಕ ಮೋದಿ, ಅನಂತ, ಪರೇಶ್ ಹವಾದಿಂದಾಗಿ ಇಬ್ಬರು ಮಾಜಿಗಳನ್ನು 13809 ಮತಗಳಿಂದ ಸೋಲಿಸಿದ್ದಾರೆ.
ಮೂವರು ಬ್ರಾಹಣರು, ಇಬ್ಬರು ಹಿಂದುಳಿದ ವರ್ಗಕ್ಕೆ ಸೇರಿದವರು, ಇನ್ನೊಬ್ಬರು ಸಂಖ್ಯಾಬಲ ಕಡಿಮೆ ಇದ್ದ ಸಮಾಜದವರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಸುನಿಲ ಮತ್ತು ರೂಪಾಲಿ ಪ್ರಥಮವಾಗಿ ಶಾಸಕ ಸ್ಥಾನಕ್ಕೆ ಆಯ್ಕೆಯಾದವರು. ದಿನಕರ ಶೆಟ್ಟಿ, ಶಿವರಾಮ ಹೆಬ್ಟಾರ ಒಂದು ಅವಧಿಯ ಅನುಭವ ಇದ್ದರೆ ಕಾಗೇರಿಯವರಿಗೆ ಐದು ಅವ ಧಿಯ, ದೇಶಪಾಂಡೆಯವರಿಗೆ ಆರು ಅವಧಿಯ ಅನುಭವ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi; ಬಹಳ ನೋವಾಗಿದೆ, ನೂರು ಸಿ.ಟಿ.ರವಿ ಬಂದರೂ ಹೆದರುವುದಿಲ್ಲ: ಲಕ್ಷ್ಮೀ ಹೆಬ್ಬಾಳಕರ
Cricket: ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ ಅಂತಿಮ; ಭಾರತದ ಪಂದ್ಯಗಳಿಗೆ ಯುಎಇ ಆತಿಥ್ಯ
Arrested: ನಟ ಸುನಿಲ್ ಪಾಲ್, ಮುಸ್ತಾಕ್ ಅಪಹರಣ; ಎನ್‌ಕೌಂಟರ್ ಮೂಲಕ ಪ್ರಮುಖ ಆರೋಪಿ ಬಂಧನ
Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.