Monkey disease: ಶೀಘ್ರ ಶಿರಸಿಗೆ ಮಂಗನ ಕಾಯಿಲೆ ತಪಾಸಣಾ ಲ್ಯಾಬ್: ಭೀಮಣ್ಣ
Team Udayavani, Nov 27, 2024, 1:20 PM IST
ಶಿರಸಿ: ಶಿವಮೊಗ್ಗ ಹಾಗೂ ಉತ್ತರ ಕನ್ನಡದಲ್ಲಿ ಕಾಣಿಸಿಕೊಂಡ ಮಂಗನ ಕಾಯಿಲೆ ಶಂಕಿತ ರೋಗಿಯ ರಕ್ತ ತಪಾಸಣೆಗಾಗಿ ಶಿರಸಿಯಲ್ಲಿ ರಕ್ತ ತಪಾಸಣಾ ಘಟಕ ಆರಂಭಿಸಲು ಆರೋಗ್ಯ ಇಲಾಖೆ ಅನುಮತಿ ನೀಡಿದೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ನ.27ರ ಬುಧವಾರ ಅವರು ತಾಲೂಕಿನ ಯಡಹಳ್ಳಿಯಲ್ಲಿ ಮಾತನಾಡಿ, ಮಂಗನ ಖಾಯಿಲೆಗೆ ಸಂಬಂಧಿಸಿ ರಕ್ತ ತಪಾಸಣೆಗೆ ಶಿವಮೊಗ್ಗ ಅಥವಾ ಪೂನಾಕ್ಕೆ ಕಳಿಸಬೇಕು. ಅದರಿಂದ ವಿಳಂಬ ಕೂಡ ಆಗಲಿದೆ. ಸಿದ್ದಾಪುರ, ಶಿರಸಿ, ಹೊನ್ನಾವರ ಭಾಗದಲ್ಲಿ ಮಂಗನ ಖಾಯಿಲೆ ಕಾಣಿಸಿಕೊಳ್ಳುತ್ತಿದೆ. ನಮ್ಮಲ್ಲೇ ಈ ಬಗ್ಗೆ ರಕ್ತ ಮಾದರಿ ಪರಿಶೀಲನೆಗೆ ಒಂದು ಲ್ಯಾಬ್ ಬೇಕು ಎಂಬ ಬೇಡಿಕೆಯನ್ನು ದಿನೇಶ್ ಗುಂಡೂರಾವ್ ಅವರಲ್ಲಿ ಸಾಗರದ ಸಭೆಯಲ್ಲಿ ಪ್ರಸ್ತಾಪಿಸಿದ್ದೆ. ತಕ್ಷಣ ಶಿರಸಿಗೆ 30 ಲಕ್ಷ ರೂ. ನೀಡುವ ಮೂಲಕ ಮಂಗನ ಖಾಯಿಲೆ ಲ್ಯಾಬ್ ಮಂಜೂರು ಮಾಡಿದ್ದಾರೆ. ತಕ್ಷಣ ಅನುಷ್ಠಾನದ ಬಗ್ಗೆ ಕೂಡ ಕ್ರಮಕೈಗೊಳ್ಳುವುದಾಗಿ ಹೇಳಿದರು.
ಬೇಸಿಗೆ ಬಂದಿದೆ, ರೈತರು ಮಂಗನ ಖಾಯಿಲೆ ಬಗ್ಗೆ ಎಚ್ಚರಿಕೆ ವಹಿಸಿಕೊಳ್ಳಬೇಕು ಎಂದೂ ಮನವಿ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.