ಮಂಗನ ಕಾಯಿಲೆ ನಿಯಂತ್ರಣ ಆರೋಗ್ಯ ಇಲಾಖೆ ಮೇಲುಗೈ
Team Udayavani, Jun 20, 2020, 1:18 PM IST
ಹೊನ್ನಾವರ: ಚಳಿಗಾಲದಿಂದ ಮಳೆಗಾಲದವರೆಗೆ ಕಾಡುವ ಮಂಗನ ಕಾಯಿಲೆ ಈ ವರ್ಷ ಜಿಲ್ಲೆಯಲ್ಲಿ 91 ಜನರಿಗೆ ತಗುಲಿರುವುದು ರಕ್ತಪರೀಕ್ಷೆಯಿಂದ ಖಚಿತಪಟ್ಟಿತ್ತು. ಇವರಲ್ಲಿ ಕೇವಲ ಒಬ್ಬರು ಮೃತಪಟ್ಟಿದ್ದಾರೆ. ಕಾಯಿಲೆ ಪೀಡಿತರಿಗೆ ಸ್ಥಳೀಯ ತಾಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿದ್ದು, ಗಂಭೀರ ಸ್ಥಿತಿಯಲ್ಲಿದ್ದವರು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಗುಣಮುಖರಾಗಿ ಬಂದಿದ್ದಾರೆ. ಇವರ ವೆಚ್ಚವನ್ನು ಸರ್ಕಾರವೇ ವಹಿಸಿಕೊಂಡಿದೆ.
ತಾಲೂಕಿನ ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ, ಸಿದ್ದಾಪುರ, ಜೋಯಿಡಾ, ಶಿರಸಿ ತಾಲೂಕುಗಳಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಿತ್ತು. ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಇಲಾಖೆ ಇದರ ಮಾರ್ಗದರ್ಶನದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆಯ ವೈದ್ಯರು, ಜಿಲ್ಲಾ ಕೆಎಫ್‌ಡಿ ವೈದ್ಯಾಧಿಕಾರಿ ಡಾ| ಸತೀಶ ಶೇಟ್ ಇವರ ಸಂಯೋಜನೆಯಲ್ಲಿ ಕೆಲಸಮಾಡಿದ ಕಾರಣ ಮಂಗನ ಕಾಯಿಲೆ ಹೆಚ್ಚಾಗಿ ಹಬ್ಬಲಿಲ್ಲ. ಜನ ಹೆಚ್ಚಾಗಿ ಆಸಕ್ತಿವಹಿಸಿ ಲಸಿಕೆ ಪಡೆದುಕೊಂಡಿದ್ದರೆ ಇನ್ನೂ ಕಡಿಮೆ ಪ್ರಮಾಣದಲ್ಲಿ ಕಾಯಿಲೆ ಬಾಧಿಸುತ್ತಿತ್ತು. ಮೂಲ ಸೌಲಭ್ಯ ಮತ್ತು ಸಿಬ್ಬಂದಿ ಕೊರತೆ ಹೊಂದಿದ ಮಂಗನ ಕಾಯಿಲೆ ಜಿಲ್ಲಾಘಟಕವನ್ನು ಇನ್ನೂ ಬಲಪಡಿಸಬೇಕಾದ ಅಗತ್ಯವಿದೆ.
ಜಿಲ್ಲೆಯಲ್ಲಿ 145 (ಸಿದ್ದಾಪುರದಲ್ಲಿ 103) ಮಂಗಗಳು ಸತ್ತಿರುವುದನ್ನು ಗುರುತಿಸಲಾಯಿತು. 24 ಮಂಗಗಳ ಶವಪರೀಕ್ಷೆ ನಡೆಸಲಾಯಿತು. ಒಂದು ಮಂಗನಲ್ಲಿ ಪಾಸಿಟಿವ್ ಕಾಣಿಸಿಕೊಂಡಿತ್ತು. 29 ಉಣ್ಣಿ ಸಂಗ್ರಹಿಸಿದ್ದರೂ ಅದರಲ್ಲಿ ಪಾಸಿಟಿವ್ ಬಂದಿರಲಿಲ್ಲ. 764 ಜನರ ರಕ್ತದ ಮಾದರಿಯನ್ನು (ಸಿದ್ದಾಪುರ 641) ಅದರಲ್ಲಿ 91 ಪಾಸಿಟಿವ್ ಬಂದಿದ್ದು (ಸಿದ್ದಾಪುರ 61) ಸಿದ್ದಾಪುರದಲ್ಲಿ ಒಂದು ಸಾವು ಸಂಭವಿಸಿದೆ. 2,38,300 ಕರಪತ್ರ, 4,505 ಐಈಸಿಗಳಿಂದ ಜನಜಾಗೃತಿ ಮೂಡಿಸಲಾಯಿತು. ಎಲ್ಲ ತಾಲೂಕುಗಳಲ್ಲಿ ಶಿಕ್ಷಕರಿಗೆ ತರಬೇತಿ ನೀಡಲಾಯಿತು. ಎಲ್ಲ ತಾಲೂಕುಗಳಲ್ಲಿ ಕೆಎಫ್‌ಡಿ ವಾರ್ಡ್‌ಗಳನ್ನು ಸಜ್ಜುಗೊಳಿಸಲಾಗಿತ್ತು. 46,872 ಡಿಎಂಪಿ ತೈಲದ ಬಾಟಲ್ ವಿತರಿಸಲಾಗಿತ್ತು. 593 ಕೆಜಿ ಮೆಲೆಥಿಯನ್ ಸಂಗ್ರಹಿಸಲಾಗಿತ್ತು. 50 ಸಾವಿರ ಲಸಿಕಾ ಕಾರ್ಡ್ ಸಿದ್ಧಗೊಳಿಸಲಾಗಿತ್ತು. 7,138 ಕೊಟ್ಟಿಗೆಗಳ ಉಣ್ಣಿ ನಾಶಮಾಡಲಾಯಿತು. 54,457 ಜಾನುವಾರುಗಳಿಗೆ ತಗಲಿದ ಉಣ್ಣಿಗಳನ್ನು ನಿವಾರಿಸಲಾಯಿತು.
ಜೊತೆಯಲ್ಲಿ 1,17,087 ಡೋಸ್ ಲಸಿಕೆಗಳನ್ನು ನೀಡುವ ಗುರಿ ಹೊಂದಲಾಗಿತ್ತು, ಸಾಕಷ್ಟು ಪ್ರಚಾರ ಮಾಡಿದ್ದರೂ ಜನ ಮುಂದೆ ಬರದ ಕಾರಣ 49,140 ಡೋಸ್ ಲಸಿಕೆ ವಿತರಣೆಯಾಯಿತು. ಮುಂದಿನ ವರ್ಷವಾದರೂ ಮಂಗನ ಕಾಯಿಲೆ ಸಂಭವನೀಯ ಪ್ರದೇಶದ ಎಲ್ಲ ಜನ ಲಸಿಕೆ ಪಡೆಯುವಂತೆ ಮನವೊಲಿಸಬೇಕಾಗಿದೆ.
ಮುಂದಿನ ವರ್ಷಕ್ಕಾಗಿ ಈಗಲೇ ಯೋಜನೆ ರೂಪಿಸುತ್ತಿದ್ದು, ಉಣ್ಣಿ ನಿವಾರಣೆ ಕಾರ್ಯಕ್ರಮ ಆರಂಭವಾಗಲಿದೆ. ಆಗಸ್ಟ್‌ನಿಂದ ಲಸಿಕೆ ನೀಡಲು ಯೋಜನೆ ಸಿದ್ಧಪಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ಕಾಯಿಲೆಯ ಮೇಲೆ ಶೇ. 100ರಷ್ಟು ಗೆಲುವು ಸಾಧಿಸಬಹುದಾಗಿದೆ. – ಡಾ| ಸತೀಶ ಶೇಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
FIR 6to6 movie: ಆ್ಯಕ್ಷನ್ ಚಿತ್ರದಲ್ಲಿ ವಿಜಯ ರಾಘವೇಂದ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.