ಶಿರಸಿ: ಮೊಗೇರ ಸಮುದಾಯಕ್ಕೆ ಪರಿಶಿಷ್ಟ ಜಾತಿ ಸೌಲಭ್ಯ ಮುಂದುವರಸಲು ಆಗ್ರಹ
Team Udayavani, Apr 6, 2022, 3:55 PM IST
ಶಿರಸಿ: ಜಿಲ್ಲಾ ಮೊಗೇರ ಸಮುದಾಯಕ್ಕೆ ಅಸಂವಿಧಾನಿಕವಾಗಿ ತಡೆ ಹಿಡಿಯಲ್ಪಟ್ಟ ಪರಿಶಿಷ್ಟ ಜಾತಿ ಸೌಲಭ್ಯವನ್ನು ವಿಳಂಬವಿಲ್ಲದೇ ಮುಂದುವರಿಸಬೇಕು ಎಂದು ಜಿಲ್ಲಾ ಮೊಗೇರ ಸಂಘದ ಶಿರಸಿ ಘಟಕ ಸರಕಾರವನ್ನು ಆಗ್ರಹಿಸಿದೆ.
ಜಿಲ್ಲೆಯ ಮೊಗೇರ ಸಮುದಾಯದ ಪೂರ್ವಿಕರು ಅನೇಕ ವರ್ಷಗಳ ಹಿಂದೆ ಅವಿಭಜಿತ ಮೈಸೂರ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಿಂದ ವಲಸೆ ಬಂದವರು. ವಲಸೆ ಬಂದ ಸ್ಥಳದಲ್ಲಿ ಅವರ ಮೂಲ ಉದ್ಯೋಗ ಬೇಟೆ ಆಡುವದು ದುಸ್ತರವಾದಾಗ ಜೀವನೋಪಾಯಕ್ಕೆ ಸ್ಥಳೀಯವಾಗಿ ಕರಾವಳಿ ಪ್ರದೇಶದಲ್ಲಿ ಲಭ್ಯವಿದ್ದ ಮೀನುಗಾರಿಕೆ ಹಾಗೂ ಕರಾವಳಿ ಹೊರತುಪಡಿಸಿದ ಭಾಗದಲ್ಲಿ ಕೃಷಿಯಲ್ಲಿ ಕೂಲಿಯಾಳಾಗಿ ಉದ್ಯೋಗ ನಡೆಸತೊಡಗಿದರು. ಈ ಸಮುದಾಯದ ಅಂದಿನ ಹೀನಸ್ಥಿತಿಯ ಆರ್ಥಿಕ ಮತ್ತು ಸಾಮಾಜಿಕ ಪರಿಸ್ಥಿತಿಯನ್ನು ಅವಲೋಕಿಸಿದ ಭಟ್ಕಳ ಕ್ಷೇತ್ರದ ಅಂದಿನ ಶಾಸಕ ಎಸ್.ಎಂ.ಯಾಹ್ಯಾ ಅವರ ಪ್ರಯತ್ನದಿಂದ ಕೇಂದ್ರ ಸರಕಾರವು ಮೊಗೇರ ಜಾತಿಗೆ ಪ್ರಾದೇಶಿಕ ನಿರ್ಬಂಧನೆಯನ್ನು ತೆಗೆದು ಪರಿಶಿಷ್ಟ ಜಾತಿ ಸೌಲಭ್ಯವನ್ನು ನೀಡಿತು ಎಂದು ಪ್ರಸ್ತಾಪಿಸಿದ್ದಾರೆ.
1978ರಿಂದ ಮೊಗೇರ ಜಾತಿಯು ಪರಿಶಿಷ್ಟ ಜಾತಿ ಸೌಲಭ್ಯವನ್ನು ಪಡೆಯಲು ಪ್ರಾರಂಭಿಸಿತು. ಅಲ್ಲಿಂದ ಸುಮಾರು 30 ವರ್ಷಗಳ ಕಾಲ ನಿರಾತಂಕವಾಗಿ ಪಡೆಯುತ್ತಿದ್ದ ಪರಿಶಿಷ್ಟ ಜಾತಿ ಸೌಲಭ್ಯವನ್ನು ಜಿಲ್ಲೆಯ ಕೆಲ ಪಟ್ಟಭದ್ರ ಹಿತಾಸಕ್ತಿಗಳ ನಡೆಯಿಂದ ಜಿಲ್ಲಾಡಳಿತ ಚಿನ್ನಪ್ಪ ರೆಡ್ಡಿ, ಎಚ್.ಕೆ.ಭಟ್ಟ ವರದಿಯಲ್ಲಿನ ಕೆಲ ಅಸಂವಿಧಾನಿಕ ಅಂಶಗಳ ಆಧಾರದಲ್ಲಿ ಸಂದೇಹ ವ್ಯಕ್ತಪಡಿಸಿ 2008ರಿಂದ ಮೊಗೇರರಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರದ ನೀಡಿಕೆಯನ್ನು ತಡೆ ಹಿಡಿಯಿತು. ಈ ಕುರಿತು ಕಾನೂನು ಹೋರಾಟ ಕೂಡ ನಡೆದಿದೆ. ಇವರಿಗೆ ಪರಿಶಿಷ್ಟ ಜಾತಿ ಸೌಲಭ್ಯವನ್ನು ನೀಡುವಂತೆ ಆದೇಶಿಸಿದೆ. ಈ ಮೂಲಕ ಸಮಸ್ಯೆಗೆ ತಾರ್ಕಿಕ ಅಂತ್ಯ ಕಂಡರೂ ಕೂಡ ಕರ್ನಾಟಕ ಸರಕಾರವು 2018 ರಲ್ಲಿ ಗೊಂದಲಕಾಲಿಯಾದ ಸುತ್ತೋಲೆಯನ್ನು ನೀಡಿದ್ದರೂ ಅದನ್ನು 2019 ರಲ್ಲಿ ವಾಪಸ್ ಪಡೆದಿದೆ. ಆದಾಗ್ಯೂ ಕೂಡಾ ಉತ್ತರ ಕನ್ನಡ ಜಿಲ್ಲಾಡಳಿತವು ಉತ್ತರ ಕನ್ನಡ ಜಿಲ್ಲಾ ಮೊಗೇರ ಸಮುದಾಯಕ್ಕೆ ಪರಿಶಿಷ್ಟ ಜಾತಿ ಸೌಲಭ್ಯವನ್ನು ನೀಡುತ್ತಿಲ್ಲ ಎಂದು ಅಸಮಧಾನಿಸಲಾಯಿತು.
ಮೊಗೇರ ಜಾತಿಗೆ ತಡೆ ಹಿಡಿಯಲ್ಪಟ್ಟ ಪರಿಶಿಷ್ಟ ಜಾತಿ ಸೌಲಭ್ಯವನ್ನು ವಿಳಂಬವಿಲ್ಲದೇ ಮುಂದುವರಿಸಬೇಕು, ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ವಿಫಲಿಸುವ ಉತ್ತರ ಕನ್ನಡ ಜಿಲ್ಲೆಯ ತಂತ್ರಾಂಶದಲ್ಲಿ ಮೊಗೇರ ಜಾತಿಯನ್ನು ಪ್ರವರ್ಗ -1 ರಲ್ಲಿ ಕಡಿಮೆಗೊಳಿಸಬೇಕು, ಉದ್ಯೋಗ ಹಾಗು ಶಿಕ್ಷಣ ಆಕಾಂಕ್ಷಿಗಳ ತಡೆಹಿಡಿಯಲ್ಪಟ್ಟಿರುವ ಸಿಂಧುತ್ವ ಪ್ರಮಾಣ ಪತ್ರವನ್ನು ಬಿಳಂಬವಿಲ್ಲದೇ ನೀಡಬೇಕು, ಜಾತಿ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ಸಮಾಜದವರ ವಿರುದ್ಧ ದಾಖಲಿಸಿದ ಕ್ರಿಮಿನಲ್
ಪ್ರಕರಣವನ್ನು ಹಿಂಪಡೆಯಬೇಕು, ಮೊಗೇರ ಜಾತಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರವನ್ನು ರದ್ದುಪಡಿಸಲು ನೀಡಿದ ಅದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿತು.
ಈ ವೇಳೆ ಮಾಜಿ ಶಾಸಕ ವಿವೇಕಾನಂದ ವೈದ್ಯ, ಸುಮಾ ಉಗ್ರಾಣಕರ, ರಾಜು ಉಗ್ರಾಣಕರ, ಮಂಜು ಮೊಗೇರ, ಶಶಿಕಲಾ ಜೈವಂತ, ನಾಗರಾಜ ಮುರ್ಡೇಶ್ವರ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್ ದಾಖಲೆ ಮುರಿದ ಟೀಂ ಇಂಡಿಯಾ
Udupi: ಸಿಎನ್‌ಜಿ ಪೂರೈಕೆಯಲ್ಲಿ ಕೊರತೆಯಾಗದಂತೆ ಕ್ರಮ ಕೈಗೊಳ್ಳಿ: ಸಂಸದ ಕೋಟ ಸೂಚನೆ
BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್, ರಾಹುಲ್ ಬಳಿಕ ಮತ್ತೊಬ್ಬ ಬ್ಯಾಟರ್ ಗೆ ಗಾಯ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.