Dandeli; ಪ್ರವಾಸೋದ್ಯಮದ ಹಿರಿಮೆ ಹೆಚ್ಚಿಸುತ್ತಿರುವ ಮೌಳಂಗಿ ಇಕೋ ಪಾರ್ಕ್
Team Udayavani, Jun 27, 2023, 12:20 PM IST
ದಾಂಡೇಲಿ: ಹಚ್ಚ ಹಸಿರಿನ ದಟ್ಟ ಕಾಡು, ಸುಂದರ ಮತ್ತು ಸ್ವಚ್ಚ ಶುಭ್ರ ಕಾಳಿ ನದಿ, ವಿವಿಧ ಸ್ತರಗಳ ಜೀವವೈವಿಧ್ಯತೆಗಳ ಆಗರವಾಗಿರುವ ದಾಂಡೇಲಿ ಜೋಯಿಡಾ ಪ್ರವಾಸೋದ್ಯಮಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುವ ಮೂಲಕ ಪ್ರವಾಸೋದ್ಯಮ ಕ್ಷೇತ್ರದ ಹಿರಿಮೆಯನ್ನು ಹೆಚ್ಚಿಸಿದ ಕೀರ್ತಿಯನ್ನು ಹೊಂದಿರುವ ಮೌಳಂಗಿ ಇಕೋ ಪಾರ್ಕ್ ಮಾತ್ರ ಜೋಯಿಡಾ ತಾಲ್ಲೂಕು ವ್ಯಾಪ್ತಿಗೆ ಬರುತ್ತಿದೆಯಾದರೂ ದಾಂಡೇಲಿ ನಗರದ ಸಮೀಪದಲ್ಲಿದೆ.
ಅರಣ್ಯ ಇಲಾಖೆಯ ನೇತೃತ್ವದಲ್ಲಿ ಮೌಳಂಗಿ ಗ್ರಾಮ ಅರಣ್ಯ ಸಮಿತಿಯ ಮೂಲಕ ಮೌಳಂಗಿ ಇಕೋ ಪಾರ್ಕ್ ಪ್ರವಾಸಿಗರಿಗೆ ಉತ್ತಮ ಸೇವೆಯನ್ನು ನೀಡುತ್ತಾ ಬರುತ್ತಿದೆ.
ಒಂದು ಕಡೆ ಕಾಳಿ ನದಿ, ಇನ್ನೊಂದು ಕಡೆ ದಟ್ಟ ಅರಣ್ಯ, ಇವುಗಳ ನಡುವೆ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿರುವ ಇಕೋ ಪಾರ್ಕ್ ಅಂದ ಹಾಗೆ ಇಲ್ಲಿ ಮಕ್ಕಳಿಂದ ಹಿಡಿದು ಹಿರಿಯ ನಾಗರಿಕರವರೆಗೆ ವಿವಿಧ ರೀತಿಯ ಮನೊರಂಜನಾ ಚಟುವಟಿಕೆಗಳನ್ನು ಅಳವಡಿಸಲಾಗಿದೆ.
ಬೋಟಿಂಗ್, ಕಾಯಕಿಂಗ್ ಸೇರಿದಂತೆ ಇನ್ನಿತರ ಜಲಸಾಹಸ ಚಟುವಟಿಕೆಗಳು ಇಲ್ಲಿ ನಡೆಯುತ್ತಿದೆ. ಇನ್ನೂ ಜೋಕಾಲಿ, ಜಾರು ಬಂಡಿ, ಗೂಳಿಯಾಟ ಹೀಗೆ ಇನ್ನಿತರ ಆಕರ್ಷಕ ಚಟುವಟಿಕೆಗಳು ಪ್ರವಾಸಿಗರಿಗೆ ಮತ್ತಷ್ಟು ಸಂತಸವನ್ನು ನೀಡುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.