Sirsi: ಮುಡಾ ಹಗರಣದ ಮೂಲಕ ಸಿದ್ರಾಮಣ್ಣ ಹೊಸ ದಾಖಲೆಯನ್ನೇ ನಿರ್ಮಿಸಿದ್ದಾರೆ: ಕಾಗೇರಿ ಲೇವಡಿ
Team Udayavani, Oct 21, 2024, 12:36 PM IST
ಶಿರಸಿ: ಹಿಂದೆಲ್ಲ ಇದ್ದ ಕಾಂಗ್ರೆಸ್ ಭ್ರಷ್ಟಾಚಾರ ಹಗರಣ ಮುರಿದು ಸಿದ್ದರಾಮಯ್ಯ ಅವರು ಮುಡಾ ಹಗರಣದ ಮೂಲಕ ಹೊಸ ದಾಖಲೆ ಮಾಡಿದ್ದಾರೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಲೇವಡಿ ಮಾಡಿದ್ದಾರೆ.
ಸೋಮವಾರ ಅವರು ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಮೈಸೂರಿನ ಮುಡಾ ಹಗರಣದಲ್ಲಿ ಇಡಿ ಸಾಕಷ್ಟು ದಾಖಲೆ ಪಡೆದಿದೆ. ಸಿದ್ದರಾಮಯ್ಯ ಅವರ ಪತ್ನಿಗೆ 14 ಸೈಟು ಕೊಟ್ಟಿದೆ. ಮುಡಾ ಹಗರಣಕ್ಕೆ ಸಂಬಂಧಿಸಿ ಲೋಕಾಯುಕ್ತ, ಇಡಿ ತನಿಖೆಗೆ ರಾಜ್ಯ ಸರಕಾರದ ಅಧಿಕಾರಿಗಳು ಸಹಕಾರ ಕೊಡಬೇಕು. ಹಾಗೂ ಇದರ ಸಮಗ್ರ ತನಿಖೆಗೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದರು.
ಈ ಹಿಂದೆ ಸಿದ್ದರಾಮಯ್ಯ ಅವರು ಪ್ರತಿ ಪಕ್ಷದಲ್ಲಿ ಇದ್ದಾಗ ಮಾಡಿದ ಆರೋಪ ಈಗ ಸತ್ಯ ಅನ್ನಿಸೋದಿಲ್ಲವಾ ಎಂದು ಕೇಳಿದ ಅವರು, ಕಾಂಗ್ರೆಸ್ ಭ್ರಷ್ಟಾಚಾರದ ಜನಕ ಆಗಿದೆ. ಇದರಿಂದ ಸಿದ್ದರಾಯಮಯ್ಯ ಅವರು ಸ್ವತಃ ರಾಜೀನಾಮೆ ಕೊಡಲು ಮನಸ್ಸಿದ್ದರೂ ಹೈಕಮಾಂಡ್ ಕಾರಣದಿಂದ ರಾಜೀನಾಮೆ ಕೊಡಲಾಗದ ಸ್ಥಿತಿ ಇರಬೇಕು ಎಂದೂ ಲೇವಡಿ ಮಾಡಿದರು.
ಮರ್ಯಾದೆಗೆಟ್ಟ ಸರಕಾರ, ಸಿದ್ದರಾಮಯ್ಯ ಅವರು ವಾಪಸ್ ಕೊಟ್ಟ ಬಳಿಕ ಹಗರಣ ಮುಗಿದು ಹೋಗುತ್ತಾ? ರಾಜ್ಯದ ಜನರಲ್ಲಿ ಭ್ರಮೆ ಸೃಷ್ಟಿಸುವುದು ಬಿಡಬೇಕು. ಕಾಂಗ್ರೆಸ್ ಸ್ಥಿತಿ ಹತಾಶ ಸ್ಥಿತಿ ಆಗಿದೆ. ದ್ವೇಷ ರಾಜಕಾರಣ, ಎಫ್ಐಆರ್, ನ್ಯಾಯಾಲಯದಲ್ಲಿ ಇದೆ. ಕೇಂದ್ರ ಸಚಿವರ ಮೇಲೆ ಕಾಂಗ್ರೆಸ್ ಬೇಜವಬ್ದಾರಿಯಾಗಿ ಮಾತನಾಡುವುದನ್ನು, ಬಿಜೆಪಿ ನಾಯಕರ ಮೇಲೆ ಮಸಿ ಬಳಿಯುವುದನ್ನು ಖಂಡಿಸುತ್ತೇವೆ ಎಂದರು.
ಜನ ವಿರೋಧಿ ಸರಕಾರ ಎನ್ನಲು ಹಾಪ್‌ಕಾಮ್ಸ್ ಮಳಿಗೆ ಬಂದ್ ಆಗಿದ್ದೂ ಉದಾಹರಣೆ. ರಾಜ್ಯದಲ್ಲಿ ನೂರಾರು ಬಂದ್ ಆಗಿದೆ ಇದಕ್ಕೆ ಸರಕಾರ ಏನು ಹೇಳುತ್ತದೆ ಎಂದೂ ಕೇಳಿದರು.
ಪ್ರಮುಖರಾದ ಗುರುಪ್ರಸಾದ ಹೆಗಡೆ, ಶರ್ಮಿಳಾ ಮಾದನಗೇರಿ, ರಮಾಕಾಂತ ಭಟ್ಟ, ಗಣಪತಿ ನಾಯ್ಕ, ನಂದನ ಸಾಗರ, ನಾಗರಾಜ್ ನಾಯ್ಕ, ಆರ್.ವಿ.ಹೆಗಡೆ, ರವಿಕಾಂತ ಶೆಟ್ಟಿ ಇತರರು ಇದ್ದರು.
ಸಿದ್ದರಾಮಯ್ಯ ಅವರ ಮುಡಾ ಹಗರಣದ ನಿಷ್ಪಕ್ಷಪಾತ ತನಿಖೆಗೆ ರಾಜೀನಾಮೆ ನೀಡಬೇಕಾಗಿದೆ. ಕಾಂಗ್ರೆಸ್ ನಲ್ಲಿ ಪರ್ಯಾಯ ಸಿಎಂ ಮಾಡಿಕೊಳ್ಳಲಿ.
– ಕಾಗೇರಿ, ಸಂಸದ
ಇದನ್ನೂ ಓದಿ: New Threat: ನ.1ರಿಂದ 19ರವರೆಗೆ ಏರ್ ಇಂಡಿಯಾದಲ್ಲಿ ಪ್ರಯಾಣಿಸಬೇಡಿ: ಪನ್ನು ಬೆದರಿಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya; ಭೀಕರ ಅಪಘಾ*ತದಲ್ಲಿ ಮೂವರು ವಿದ್ಯಾರ್ಥಿಗಳು ಮೃ*ತ್ಯು
Mangaluru: ಅಂಬೇಡ್ಕರ್ – ಸಂವಿಧಾನ ಯಾರಿಗೂ ಟೂಲ್ ಆಗಬಾರದು: ಕೈ ವಿರುದ್ದ ಸಂತೋಷ್ ಟೀಕೆ
Chintamani: ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಕಾರು… ಪತಿ ಸಾ*ವು, ಪತ್ನಿ ಗಂಭೀರ
Nelamangala: ಐಷಾರಾಮಿ ಕಾರಿನ ಮೇಲೆ ಬಿದ್ದ ಕಂಟೈನರ್… ಒಂದೇ ಕುಟುಂಬದ 6 ಮಂದಿ ಸಾ*ವು
Aadhar Card: ಆಧಾರ್ ನವೀಕರಣ ಮಾಡಿಕೊಂಡಿದ್ದೀರಾ?: ಹಾಗಾದರೆ ಈ ಸುದ್ದಿ ಓದಲೇಬೇಕು!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.