ಗಾಳಿ ಮಳೆಗೆ ನೆಲಕಚ್ಚಿದ ಭತ್ತ: ಬೆಳೆ ಕಟಾವಿಗೆ ತೀವ್ರ ತೊಂದರೆ
Team Udayavani, Oct 15, 2020, 3:48 PM IST
ಮುಂಡಗೋಡ: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆ ಗಾಳಿಗೆ ತಾಲೂಕಿನಾದ್ಯಂತ ಭತ್ತದ ಬೆಳೆ ನೆಲ ಕಚ್ಚಿದ್ದು ರೈತರು ತೀವ್ರ ಹಾನಿ ಅನುಭವಿಸುವಂತಾಗಿದೆ. ರೈತರು ಪ್ರತಿವರ್ಷ ಒಂದಿಲ್ಲೊಂದು ರೀತಿಯ ಸಂಕಷ್ಟಕ್ಕೆ ಸಿಲುಕುತ್ತಲೆ ಬಂದಿದ್ದಾರೆ. ಈ ಬಾರಿ ಉತ್ತಮ ಮಳೆ ಸುರಿದ ಪರಿಣಾಮ ತಾಲೂಕಿನಲ್ಲಿ ಭತ್ತ ಬೆಳೆದ ರೈತರು ಉತ್ತಮ ಇಳುವರಿ ಹೊಂದಬಹುದು ಎಂಬ ಆಶಾಭಾವನೆಯಲ್ಲಿದ್ದರು. ಇದೀಗ ಭತ್ತದ ಬೆಳೆಯೂ ಕಟಾವ್ ಹಂತದಲ್ಲಿದೆ. ಕಳೆದ ಎರಡು ದಿನಗಳಿಂದ ಸಂಜೆ ವೇಳೆ ಗಾಳಿಯೊಂದಿಗೆ ಮಳೆ ಸುರಿಯುತ್ತಿದೆ.
ಇದರಿಂದ ಭತ್ತದ ಬೆಳೆ ನೆಲಕಚ್ಚಿದೆ. ಕೆಲವಡೆ ಅರ್ಧದಷ್ಟು ಬೆಳೆನೆಲ ಕಚ್ಚಿದ್ದರೆ ಮತ್ತಷ್ಟು ಕಡೆ ಸಂಪೂರ್ಣ ನಾಶವಾಗಿದೆ.
ತಾಲೂಕಿನಲ್ಲಿ ಈಗ ಸ್ಥಳೀಯ ಗಿಡ್ಡ ತಳಿಯ ಭತ್ತದ ಬೆಳೆಯೂ ಕಟಾವ್ ಹಂತ ತಲುಪಿದೆ. ಇನ್ನು ಇತರೆ ತಳಿಯ ಭತ್ತವೂ
ಮುಂದಿನ ತಿಂಗಳು ಕಟಾವ್ ಆಗಲಿದೆ. ಸದ್ಯ ಗಿಡ್ಡ ತಳಿಯ ಭತ್ತದ ಬೆಳೆ ಸಂಪೂರ್ಣ ಒಣಗಿ ನಿಂತಿದೆ.
ಇದನ್ನೂ ಓದಿ:ನಟ ಯಶ್ ಅಭಿವೃದ್ದಿ ಪಡಿಸಿದ ತಲ್ಲೂರ ಕೆರೆ! ರೈಲ್ವೆ ಗುತ್ತಿಗೆದಾರರ ಎಡವಟ್ಟಿಗೆ ಕೆರೆ ಭಣಭಣ
ಕಟಾವ್‌ಗೆ ತೊಂದರೆ: ಭತ್ತದ ಬೆಳೆ ಒಣಗಿ ನಿಂತಿದೆ. ತಗ್ಗು ಪ್ರದೇಶ ಹೊರತು ಪಡಿಸಿದರೆ ಹಕ್ಕಲು ಭೂಮಿಯಲ್ಲಿನ ಭತ್ತದ ಬೆಳೆ ಸಂಪೂರ್ಣ ಒಣಗಿ ಕಟಾವ್ ಮಾಡುವ ಹಂತದಲ್ಲಿದೆ. ದಸರಾ ಮುಗಿದ ನಂತರ ಭತ್ತದ ಬೆಳೆ ಕಟಾವ್ ಮಾಡಬೇಕು ಎಂಬುದು ರೈತರ ಮಾತು. ಆದರೆ ಕಳೆದ ಎರಡು ದಿನಗಳಿಂದ ಸಂಜೆ ವೇಳೆ ಗಾಳಿಯೊಂದಿಗೆ ಮಳೆ ಸುರಿದ ಪರಿಣಾಮ ಭತ್ತದ ಬೆಳೆ ಮಕಾಡೆ
ಮಲಗಿದೆ. ಇದರಿಂದ ಭತ್ತದ ಬೆಳೆ ಕಟಾವ್ ಗೆ ತೊಂದರೆಯಾಗುತ್ತದೆ ಹಾಗೂ ಭತ್ತದ ಬೆಳೆ ನೆಲ ಕಚ್ಚಿದ ಪರಿಣಾಮ ಕಟಾವ್‌ಗೆ
ಹೆಚ್ಚು ಹಣವ್ಯಯ ಮಾಡಬೇಕಾದ ಪರಿಸ್ಥಿತಿ ಉಂಟಾಗಿದೆ.
ಉದರುವ ಭತ್ತದ ಕಾಳು: ಮಳೆ ಗಾಳಿಗೆ ಭತ್ತ ನೆಲ ಕಚ್ಚಿರುವುದರಿಂದ ಕಟಾವ್ ಮಾಡುವ ವೇಳೆ ಭತ್ತದ ಕಾಳುಗಳು
ಉದುರುತ್ತವೆ. ಇದರಿಂದ ರೈತರು ಹಾನಿ ಅನುಭವಿಸಬೇಕಾಗುತ್ತದೆ. ನಿಂತ ಬೆಳೆಯಾದರೆ ಕಟಾವ್ ಮಾಡುವ ವೇಳೆ ಭತ್ತದ ಕಾಳು ಉದುರುವುದಿಲ್ಲ. ಮಳೆಗಾಳಿಗೆ ನೆಲ ಕಚ್ಚಿದ ಭತ್ತದ ಗೀಡಗಳು ಒಂದರ ಮೇಲೊಂದು ಸುತ್ತುವರಿದು ಬಿಳ್ಳುವುದರಿಂದ ಕಟಾವ್ ಮಾಡುವಾಗ ಭತ್ತದ ಕಾಳು ಉದುರುತ್ತವೆ.
ಬೆಳೆ ಇದ್ದರೆ ಬೆಲೆ ಇರುವುದಿಲ್ಲ: ಬೆಲೆ ಇದ್ದಾಗ ಬೆಳೆ ಇರುವುದಿಲ್ಲ ಎರಡು ಇದ್ದಾಗ ಪ್ರಕೃತಿ ಮುನಿಸಿನಿಂದಾಗಿ ರೈತರು ಹಾನಿ
ಅನುಭವಿಸುತ್ತಾರೆ. ಈ ಭಾರಿ ಮಳೆ, ಬೆಳೆ, ಬೆಲೆ ಎಲ್ಲವೂ ಉತ್ತಮವಾಗಿತ್ತು. ಇದೀಗ ಕೊನೆಯ ಹಂತದಲ್ಲಿ ಮಳೆ ಸುರಿಯುತ್ತ
ಇರುವುದರಿಂದ ಭತ್ತದ ಬೆಳೆಗಾರರು ಹಾನಿ ಅನುಭವಿಸುವಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Dandeli: ವಿದ್ಯುತ್ ಕಂಬದ ಜಿಓಎಸ್ ಕಳವು ಮಾಡಿದ್ದ ಆರೋಪಿ;ಮಾಲು ಸಹಿತ ವಶಕ್ಕೆ ಪಡೆದ ಪೊಲೀಸರು
Gujjar Kere: ಕೆರೆ ಪರಿಸರದ ರಕ್ಷಣೆಗೆ ಆದ್ಯತೆ ಅಗತ್ಯ; ತಹಶೀಲ್ದಾರ್‌ಗೆ ಮರು ಮನವಿ
Dandeli:ತುಂಡಾಗಿ ಬಿದ್ದಿದ್ದ ಕೇಬಲ್ ವೈರ್ ಸುತ್ತಿ ದ್ವಿಚಕ್ರ ವಾಹನ ಸ್ಕಿಡ್: ಸವಾರನಿಗೆ ಗಾಯ
MUST WATCH
ಹೊಸ ಸೇರ್ಪಡೆ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.