ಮುಂಡಗೋಡ: ಸತ್ಯ-ಶುದ್ಧತೆಯಿಂದ ಮಾಡುವ ಎಲ್ಲ ಕಾಯಕವೂ ಶ್ರೇಷ್ಠ-ಮಾತೆ ಬಸವೇಶ್ವರಿ
Team Udayavani, Jan 18, 2024, 6:02 PM IST
ಮುಂಡಗೋಡ: ಸಿದ್ದರಾಮೇಶ್ವರರು ಕಾಯಕ ಯೋಗಿಗಳು. ಸತ್ಯ, ಶುದ್ಧತೆ ಇದ್ದರೆ ಪ್ರಾಮಾಣಿಕವಾಗಿ ಮಾಡುವ ಯಾವ ಕಾಯಕವೂ ಕನಿಷ್ಠವಲ್ಲ. ಎಲ್ಲವೂ ಶ್ರೇಷ್ಠ ಕಾಯಕವೇ ಆಗಿದೆ ಎಂದು ಅತ್ತಿವೇರಿ ಬಸವಧಾಮದ ಮಾತೆ ಬಸವೇಶ್ವರಿ ಹೇಳಿದರು.
ಪಟ್ಟಣದ ತಾಲೂಕು ಆಡಳಿತ ಸೌಧದ ಬಳಿ ಇರುವ ಶಿವಯೋಗಿ ಸಿದ್ದರಾಮೇಶ್ವರ ಗದ್ದುಗೆ ಆವರಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯತ ಹಾಗೂ ಪಟ್ಟಣ ಪಂಚಾಯತ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಶಿವಯೋಗಿ ಸಿದ್ದರಾಮೇಶ್ವರ
ಜಯಂತ್ಯುತ್ಸವ ಉದ್ಘಾಟಿಸಿ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
12ನೇ ಶತಮಾನದ ಪೂರ್ವದಲ್ಲಿ ಕಾಯಕಕ್ಕೆ ಅತ್ಯಂತ ಕೀಳಾದ ಸ್ಥಾನಮಾನ ಇತ್ತು. ಇಂತಹ ಕೀಳಾಗಿ ನೋಡಿಕೊಳುತ್ತಿದ್ದ ಸಮಾಜವನ್ನು ಎಲ್ಲರೂ ಒಂದೇ ಎಂದು ಹಲವಾರು ಮಹಾನ್ ವ್ಯಕ್ತಿಗಳು, ಶರಣರು ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದಾರೆ. ಸಮಾಜದ ಅನೇಕ ತಾರತಮ್ಯ ಹೊಡೆದು ಹಾಕಿದ ಇವರು ಕರ್ಮಯೋಗಿ ಕಾಯಕ ಯೋಗಿಯಾಗಿದ್ದರು.
ಎಲ್ಲರಿಗೂ ಅರ್ಥವಾಗುವಂತೆ 1992 ವಚನಗಳನ್ನು ಬರೆದಿದ್ದಾರೆ. ಭೋವಿ ಸಮಾಜದವರು ಇಂದು ಸಾಕಷ್ಟು
ಮುಂದುವರಿದಿದ್ದಾರೆ. ಸರ್ಕಾರದ ಸೌಲಭ್ಯಗಳು ಅವರಿಗೆ ಸಿಗುವಂತಾಗಲಿ. ಸಿದ್ದರಾಮೇಶ್ವರರ ಮೌಲ್ಯಗಳನ್ನು ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ನಡೆಯೋಣ ಎಂದರು.
ಶಾಸಕ ಶಿವರಾಮ ಹೆಬ್ಟಾರ ಮಾತನಾಡಿ, ಎಲ್ಲಾ ಸಮುದಾಯ ಆಶೋತ್ತರ ಈಡೇರಿಸವುದಕ್ಕಾಗಿಯೇ ಸಂವಿಧಾನ ರಚನೆಯಾಯಿತು. ಸಂವಿಧಾನದ ಆಧಾರದ ಮೇಲೆ ಜಾತಿಗಳ ನಡುವೆ ಇದ್ದ ಕಂದಕವನ್ನು ದೂರ ಮಾಡಿ ದೇಶದಲ್ಲಿ ಮಾನವ ಕುಲ ಒಂದಾಗಿ ಇರಬೇಕು. ಎಲ್ಲರನ್ನು ಜೊತೆಯಲ್ಲಿಯೇ ಕರೆದುಕೊಂಡು ಹೋಗಬೇಕೆಂಬುದು ಸಿದ್ದರಾಮೇಶ್ವರ ಆದಿಯಾಗಿ ಎಲ್ಲ ಗುರುಗಳು ಹಾಕಿಕೊಟ್ಟ ಆದರ್ಶಗಳಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ ಶಂಕರ ಗೌಡಿ ಮಾತನಾಡಿದರು. ಎಲ್.ಟಿ ಪಾಟೀಲ, ಅಶೋಕ ಚಲವಾದಿ, ಎಸ್ ಫಕ್ಖಿರಪ್ಪ, ಚಿದಾನಂದ ಹರಿಜನ, ಹನುಮಂತ ಆರೆಗೊಪ್ಪ ಮತ್ತು ರವಿ ಹಾವೇರಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಮಾತೆ ಬಸವೇಶ್ವರಿ ಅವರನ್ನು, ಶಾಸಕ ಶಿವರಾಮ ಹೆಬ್ಬಾರ, ಮತ್ತು ಅತಿಥಿಗಳನ್ನು ಸನ್ಮಾನಿಸಲಾಯಿತು.
ಭೋವಿ ಸಮಾಜದ ಅಧ್ಯಕ್ಷ ದಯಾನಂದ ಕಳಸಾಪುರ, ರವಿಗೌಡ ಪಾಟೀಲ, ನಾಗಭೂಷಣ ಹಾವಣಗಿ, ಗುಡ್ಡಪ್ಪ ಕಾತೂರ, ಫಣಿರಾಜ ಹದಳಗಿ, ದುರ್ಗಪ್ಪ ಬಂಡಿವಡ್ಡರ, ಸುಭಾಸ ಭೋವಿ, ಹನಮಂತ ಭೋವಿ, ಶ್ರೀಕಾಂತ ಸಾನು, ಶೇಖರ ಲಮಾಣಿ, ತಾ.ಪಂ ಇಒ ಟಿವೈ ದಾಸನಕೊಪ್ಪ, ಸಿಪಿಐ ಬಿ. ಆರ್ ಲೋಕಾಪುರ, ಸಮಾಜದ ಬಾಂಧವರು, ಅಧಿಕಾರಿಗಳು, ಸಿಬ್ಬಂದಿ ಹಾಗೂ ಮುಂತಾದವರು ಉಪಸ್ಥಿತರಿದ್ದರು.
ಶಾಸಕರ ಮಾದರಿ ಶಾಲೆ ವಿದ್ಯಾರ್ಥಿಗಳು ಪ್ರಾರ್ಥನೆ ಹಾಗೂ ನಾಡಗೀತೆ ಹೇಳಿದರು. ಇದಕ್ಕೂ ಮುನ್ನ ಪಟ್ಟಣದ ಪರಿವೀಕ್ಷಣಾ ಮಂದಿರದಿಂದ ಪ್ರಮುಖ ಬೀದಿಗಳಲ್ಲಿ ಡೊಳ್ಳು ವಾದ್ಯದೊಂದಿಗೆ ಶಿವಯೋಗಿ ಸಿದ್ದರಾಮೇಶ್ವರರ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
Murdeshwar: ನಾಲ್ವರು ವಿದ್ಯಾರ್ಥಿನಿಯರು ಸಮುದ್ರಪಾಲು; 1 ಶವ ಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.