ಮುಂಡಗೋಡ: ವಿಜೃಂಭಣೆಯ ಬಾಣಂತಿದೇವಿ ಜಾತ್ರೆ -ವಿಶೇಷ ಪೂಜೆ-ಹರಕೆ ಸಲ್ಲಿಕೆ
Team Udayavani, Jan 16, 2025, 5:45 PM IST
ಉದಯವಾಣಿ ಸಮಾಚಾರ
ಮುಂಡಗೋಡ: ಮಕರ ಸಂಕ್ರಮಣದಂದು ನಡೆಯುವ ತಾಲೂಕಿನ ಸಾಲಗಾಂವ ಗ್ರಾಮದ ಬಾಣಂತಿ ದೇವಿ ಜಾತ್ರಾ ಮಹೋತ್ಸವ ಬುಧವಾರ ಅತ್ಯಂತ ವಿಜೃಂಭಣೆಯಿಂದ ಜರುಗಿತು. ಪಟ್ಟಣದ ಹುಬ್ಬಳ್ಳಿ-ಶಿರಸಿ ರಸ್ತೆಯ ಸಾಲಗಾಂವ ಗ್ರಾಮದ ಕೆರೆ ದಂಡೆ ಮೇಲೆ ವಿರಾಜಮಾನವಾಗಿರುವ ಬಾಣಂತಿದೇವಿಯ ಜಾತ್ರಾ ಮಹೋತ್ಸವವು ಪ್ರತಿ ವರ್ಷ ನಡೆಯುವ ಒಂದು ದೊಡ್ಡ ಜಾತ್ರೆಯಾಗಿದೆ.
ಹೊಸ ವರ್ಷದ ಮೊದಲ ಹಬ್ಬ ಸಂಕ್ರಾಂತಿಯಂದು ನಡೆಯುವ ಜಾತ್ರೆ ಇದಾಗಿದ್ದು ಸುತ್ತಮುತ್ತಲಿನ ಹಳ್ಳಿಗಳಿಂದ ಹಾಗೂ ತಾಲೂಕುಗಳಿಂದ ಭಕ್ತರು ಪಾಲ್ಗೊಂಡು ದೇವಿ ದರ್ಶನ ಪಡೆದರು. ವರ್ಷದಿಂದ ವರ್ಷಕ್ಕೆ ಜನಸಾಗರವೇ ಇಲ್ಲಿ ಹರಿದು ಬರುತ್ತಿದೆ.
ವಿಶೇಷವಾಗಿ ಮಕ್ಕಳಿಲ್ಲವೆಂದು ಈ ಬಾಣಂತಿದೇವಿಗೆ ಹರಕೆ ಹೊತ್ತಿರುತ್ತಾರೆ. ಹರಕೆ ಫಲಿಸಿ ಮಕ್ಕಳಾದ ಕೆಲವು ಮಹಿಳೆಯರು ಮಕ್ಕಳನ್ನು ಕೆರೆಯಲ್ಲಿ ಸ್ನಾನ ಮಾಡಿಸಿದರೆ ಇನ್ನು ಕೆಲವರು ತೆಪ್ಪದಲ್ಲಿ ತೇಲಿಸಿ ತೆಗೆದರು. ಮೆರವಣಿಗೆ ನಂತರ ತೆಪ್ಪವನ್ನು ಬಿಡುವಾಗ ಭಕ್ತರು ತೆಪ್ಪಕ್ಕೆ ಬಾಳೆಹಣ್ಣು, ಉತ್ತತ್ತಿ ಎಸೆದು ಸಂಭ್ರಮಿಸಿದರು. ಈ ಬಾರಿ 147 ಮಕ್ಕಳನ್ನು ಸ್ನಾನ ಮಾಡಿಸುವ ಮೂಲಕ ಹರಕೆ ತೀರಿಸಲಾಯಿತು.
ಜಾತ್ರೆಗೆ ಮುಂಡಗೋಡ ತಾಲೂಕಿನ ಸುತ್ತಮುತ್ತಲಿನ ಜನ ಎತ್ತಿನ ಬಂಡಿ ಹಾಗೂ ವಾಹನಗಳ ಮೂಲಕ ಆಗಮಿಸಿ ದೇವಿಯ ಆಶೀರ್ವಾದ ಪಡೆದುಕೊಂಡರು. ಅಲ್ಲದೆ ಶಾಸಕ ಶಿವರಾಮ ಹೆಬ್ಟಾರ, ಮಾಜಿ ಶಾಸಕ ವಿ.ಎಸ್. ಪಾಟೀಲ ದೇವಿ ದರ್ಶನ ಪಡೆದರು.
ಬಾಣಂತಿದೇವಿ ಜಾತ್ರೆ ಜನವರಿ 13 ರಿಂದ ಆರಂಭವಾಗಿದ್ದು ಐದು ದಿನಗಳ ಕಾಲ ನಡೆಯಲಿದ್ದು ಈ ಜಾತ್ರೆ ಹೊಸವರ್ಷ ಆರಂಭವಾದ ಕೂಡಲೇ ನಡೆಯುವ ಪ್ರಥಮ ಜಾತ್ರೆಯಾಗಿದೆ. ಸುತ್ತಮುತ್ತಲಿನ ಹಳ್ಳಿ ಹಾಗೂ ಪಟ್ಟಣದಿಂದ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡು ದೇವಿಯ ಆಶೀರ್ವಾದ ಪಡೆಯುತ್ತಾರೆ.
ಐದು ದಿನಗಳ ಜಾತ್ರೆ ಮುಗಿದ ನಂತರ ಇಲ್ಲಿ ದನಗಳ ಜಾತ್ರೆ ನಡೆಯಲಿದೆ. ಗ್ರಾಮೀಣ ಭಾಗದ ರೈತರು ಇಲ್ಲಿ ದನಗಳನ್ನು ಖರೀದಿಸುತ್ತಾರೆ. ಆರೇಳು ವರ್ಷಗಳ ಹಿಂದೆ ತಿಂಗಳುಗಳವರೆಗೆ ದನಗಳ ಜಾತ್ರೆ ನಡೆಯುತ್ತಿತ್ತು ಆದರೆ ಇತ್ತೀಚಿನ ವರ್ಷಗಳಲ್ಲಿ ದನಗಳ ವ್ಯಾಪಾರ ಕಡಿಮೆಯಾಗಿದೆ.
ಮುಂಡಗೋಡ ತಾಲೂಕಿನ ಸುತ್ತಮುತ್ತಲಿನ ಸಾವಿರಾರು ಭಕ್ತರು ಈ ಜಾತ್ರೆಯಲ್ಲಿ ಪಾಲ್ಗೊಂಡು ತಮ್ಮ ಹರಕೆ ತೀರಿಸಿ ಜಾತ್ರಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರೋದು ಹಿಂದಿನಿಂದಲೂ ನಡೆದುಬಂದ ಸಂಪ್ರದಾಯವಾಗಿದೆ. ಈ ಬಾರಿ ಯಾವುದೇ ಅನಾಹುತವಾಗದಂತೆ ಮೊದಲ ಬಾರಿಗೆ ಅಗ್ನಿಶಾಮಕದಳದವರು ಸ್ಥಳದಲ್ಲಿ ಇದ್ದು ಕಾರ್ಯ ನಿರ್ವಹಿಸಿದರು.
ಕೆರೆಗಿದೆ ಹಿನ್ನೆಲೆ
ಗುಡಿಯ ಪಕ್ಕದಲ್ಲಿಯೇ ಬಾಣಂತಿ ಕೆರೆಯಿದೆ. ಕೆರೆಗೆ ಈ ಹೆಸರು ಬರಲು ಹಿನ್ನೆಲೆಯಿದೆ ಎಂದು ಹಿರಿಯರು ಹೇಳುತ್ತಾರೆ. ಕೆರೆ ನಿರ್ಮಾಣ ಸಂದರ್ಭದಲ್ಲಿ ಎಷ್ಟೇ ಆಳವಾಗಿ ತೋಡಿದರೂ ನೀರು ಬರಲಿಲ್ಲವಂತೆ. ಆಗ ಬಾಣಂತನಕ್ಕೆ ಬಂದಿದ್ದ ಊರ ಮನೆ ಮಗಳೊಬ್ಬಳು ಕೆರೆಯಲ್ಲಿ ನೀರೇಕೆ ಬಂದಿಲ್ಲವೆಂದು ಕೆರೆಗೆ ಹೋಗಿ ನೋಡಲು ಒಮ್ಮಿಂದೊಮ್ಮೆಲೆ ನೀರು ಉಕ್ಕಿ ಆ
ಬಾಣಂತಿಯನ್ನು ಬಲಿ ತೆಗೆದುಕೊಂಡಿತು ಎಂಬ ಪ್ರತೀತಿಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಸ್ಸಿನಲ್ಲಿ ಬಿಟ್ಟು ಹೋದ ಹಣದ ಚೀಲವನ್ನು ಮಹಿಳೆಗೆ ತಲುಪಿಸಿ ಪ್ರಾಮಾಣಿಕತೆ ಮೆರೆದ ಸಿಬ್ಬಂದಿ
Sirsi: ಟ್ರಾಫಿಕ್ ಪೊಲೀಸ್ ಠಾಣಾ ಕಟ್ಟಡ ಪರಿಶೀಲಿಸಿದ ಎಸ್ಪಿ ನಾರಾಯಣ
Sirsi: ಸಂಸದ ಕಾಗೇರಿ ಮನೆ ಅಂಗಳದಲ್ಲಿ ಚಿರತೆ ಓಡಾಟ; ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ
ಯಲ್ಲಾಪುರ: ನೀರಿನ ಟ್ಯಾಂಕ್‌ನಲ್ಲಿ ಕೊಳೆತ ಹಾವು; ಜನರಲ್ಲಿ ಆತಂಕ
Dandeli: ನಿಯಮ ಉಲ್ಲಂಘಿಸಿದ ದ್ವಿಚಕ್ರ ವಾಹನಗಳಿಗೆ ಬಿಸಿ ಮುಟ್ಟಿಸಿದ ಅಧಿಕಾರಿ
MUST WATCH
ಹೊಸ ಸೇರ್ಪಡೆ
Nanjanagudu: ನಂಜುಂಡೇಶ್ವರನಿಗೆ ಹರಕೆ ಬಿಟ್ಟಿದ್ದ ಕರುವಿನ ಬಾಲ ಕತ್ತರಿಸಿದ ದುಷ್ಕರ್ಮಿಗಳು!
Congress;ಪೂಜಾ ಸ್ಥಳಗಳ ಕಾಯಿದೆ ಪ್ರಶ್ನಿಸುವ ಮನವಿಗಳನ್ನು ವಿರೋಧಿಸಿ ಸುಪ್ರೀಂಗೆ ಅರ್ಜಿ
BBK11: ಕೊನೆಗೂ ನಡೆಯಿತು ಮಿಡ್ ವೀಕ್ ಎಲಿಮಿನೇಷನ್: ವೀಕ್ಷಕರು ಊಹಿಸಿದ ಸ್ಪರ್ಧಿಯೇ ಔಟ್
Central government ನೌಕರರಿಗೆ ಗಿಫ್ಟ್; 8ನೇ ವೇತನ ಆಯೋಗ ರಚನೆಗೆ ಅನುಮೋದನೆ
ಎರಡಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಸ್ಥಳೀಯ ಸಂಸ್ಥೆ ಚುನಾವಣೆ ಸ್ಪರ್ಧೆಗೆ ಅವಕಾಶ: ಸಿಎಂ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.