ಮಣ್ಮನೆಯಲ್ಲಿ ನಮ್ಮೂರ ಹಬ್ಬ: ಸಂಭ್ರಮಕ್ಕೆ ತೆರೆ
Team Udayavani, Nov 15, 2021, 2:54 PM IST
ಶಿರಸಿ: ಎರಡು ದಿನಗಳ ಕಾಲ ನಡೆಸಲಾದ ನಮ್ಮೂರ ಹಬ್ಬ ತಾಲೂಕಿನ ಕೋಡ್ನಗದ್ದೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಣ್ಮನೆಯಲ್ಲಿ ಸಂಪನ್ನಗೊಂಡಿತು. ಸಾಧಕರಿಗೆ ಸಮ್ಮಾನ, ಸಾಂಸ್ಕೃತಿಕ, ಸ್ಪರ್ಧಾ ಕಾರ್ಯಕ್ರಮಗಳ ಸಂಭ್ರಮದ ಮೂಲಕ ನಿಸರ್ಗದ ನಡುವಿನ ರಂಗಭೂಮಿಯಲ್ಲಿ ತೆರೆ ಕಂಡಿತು.
ಬೆಳಿಗ್ಗೆ ಮಕ್ಕಳಿಗೆ ಮತ್ತು ಮಹಿಳೆಯರಿಗೆ ಸ್ಪರ್ಧಾ ಕಾರ್ಯಕ್ರಮಗಳು ನಡೆದವು. ಮಕ್ಕಳಿಗೆ ಪರಿಸರದ ಕುರಿತಾದ ಚಿತ್ರಕಲಾ ಸ್ಪರ್ಧೆ, ಸಂಗೀತ ಕುರ್ಚಿ ಮತ್ತು ಒಂದೇ ಒಂದು ನಿಮಿಷದ ಸ್ಪರ್ಧೆಗಳಲ್ಲಿ ಮಕ್ಕಳು ಸಂಭ್ರಮದಲ್ಲಿ ಪಾಲ್ಗೊಂಡರು. ಮಹಿಳೆಯರಿಗೆ ಸಂಪ್ರದಾಯದ ಹಾಡು ಮತ್ತು ರಂಗವಲ್ಲಿ, ಸಂಗೀತ ಕುರ್ಚಿ ಸ್ಪರ್ಧೆಗಳು ನಡೆದಿದ್ದು ಎಲ್ಲ ವಯೋಮಾನದವರೂ ಭಾಗವಹಿಸಿ ಬಹುಮಾನ ಪಡೆದುಕೊಂಡರು. ನಿರ್ಣಾಯಕರಾಗಿ ರಾಮಚಂದ್ರ ಭಟ್ಟ ಶಿರಳಗಿ, ಗಾಯತ್ರಿ ರಾಘವೇಂದ್ರ, ಭುವನೇಶ್ವರಿ ಜೋಶಿ, ಜಾನಕಿ ಭಟ್ಟ ಪಾಲ್ಗೊಂಡರು. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಪಿ ಎಸ್ ಭಟ್ಟ ಬೋಳ್ಮಠ ತಂಡದಿಂದ ಭಜನಾ ಕಾರ್ಯಕ್ರಮಗಳು ನಡೆದವು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡ ಹುಲೇಕಲ್ ವಲಯಾರಣ್ಯಾಧಿಕಾರಿ ಮಂಜುನಾಥ ಹೆಬ್ಬಾರ, ಇಂತಹ ನಮ್ಮೂರ ಹಬ್ಬಗಳು ಎಲ್ಲಡೆ ಆಗುವ ಮೂಲಕ ಹಳ್ಳಿ ಹಳ್ಳಿಗಳಲ್ಲಿ ಸಾಂಘಿಕ ಶಕ್ತಿ ವೃದ್ಧಿಸುತ್ತದೆ ಎಂದರು.
ಉ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ನರಸಿಂಹ ಅಡಿ, ಧರ್ಮ, ಮತಾಂತರ ಕೇಳಿದ್ದೆವು. ಆದರೆ, ಈಗ ಜಾತಿ ಜಾತಿಗಳು ವಿಲೀನಗೊಂಡು ಹೊಸ ಸಂಸ್ಕೃತಿ ಬರುತ್ತಿದೆ ಎಂದರು.
ಇದನ್ನೂ ಓದಿ:ಬಿಜೆಪಿ ಸರ್ಕಾರ ಗೋಮಂತಕೀಯ ಕಲಾವಿದರ ಗೌರವ ಉಳಿಸಿಕೊಳ್ಳುವಲ್ಲಿ ವಿಫಲ: ಕಾಮತ್
ಉದಯವಾಣಿ ವರದಿಗಾರ ರಾಘವೇಂದ್ರ ಬೆಟ್ಟಕೊಪ್ಪ, ಯಕ್ಷಗಾನ ಅಕಾಡೆಮಿಗೆ ಶೀಘ್ರ ಅಧ್ಯಕ್ಷರ ನೇಮಕಾತಿ ಆಗಬೇಕು. ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರಕ್ಕೆ ಸರಕಾರ ಇನ್ನಷ್ಟು ಮಹತ್ವ ನೀಡಬೇಕು ಎಂದರು. ಸೊಸೈಟಿ ನಿರ್ದೇಶಕಿ ಭಾಗೀರಥಿ ಹೆಗಡೆ ಪಾಲ್ಗೊಂಡು ಮಾತನಾಡಿದರು.
ಸಂಪ್ರದಾಯದ ಹಾಡುಗಳನ್ನು ರಚಿಸುವ ಮತ್ತು ಹಾಡುವದರಲ್ಲಿ ಸಾಧನೆ ಮಾಡಿದ ಅನಸೂಯಾ ಭಟ್ಟ ಗೋಪನಮರಿ, ಕೃಷಿ ಪದವಿಯಲ್ಲಿ ಹದಿಮೂರು ಚಿನ್ನದ ಪದಕ ಪಡೆದ ಶರತ್ ಕೊಠಾರಿ, ಉತ್ತರ ಕನ್ನಡ ಜಿಲ್ಲೆಯ ಸಂಪ್ರದಾಯದ ಚಿತ್ರಕಲೆಯ ಕುರಿತಾಗಿ ಸಂಶೋಧನಾ ಪ್ರಬಂಧ ಮಂಡಿಸಿ ಪಿ ಎಚ್ ಡಿ ಪದವಿ ಪಡೆದ ಜ್ಯೋತಿ ಭಟ್ಟರ ಅಪರವಾಗಿ ಅವರ ತಾಯಿಗೆ ಸಮ್ಮಾನ ಮಾಡಲಾಯಿತು. ನಾಗರಜ್ ಜೋಶೊ ಪ್ರಾಸ್ತಾವಿಕ ಮಾತನಾಡಿದರು. ನವ್ಯಾ ಭಟ್ಟ ಸಮ್ಮಾನ ಪತ್ರ ವಾಚಿಸಿದರು. ಸಹನಾ ಭಟ್ಟ, ನವ್ಯ ಭಟ್ಟ ಬಹುಮಾನ ಘೋಷಿಸಿದರು. ಸುರೇಖಾ ಹೆಗಡೆ ವಂದಿಸಿದರು. ಅರುಣಕುಮಾರ ಭಟ್ಟ, ನಮ್ಮೂರ ಹಬ್ಬ ಸ್ವಾಗತ ಸಮಿತಿ ಅಧ್ಯಕ್ಷ ಪ್ರವೀಣ ಹೆಗಡೆ ಮಣ್ಮನೆ ನಿರ್ವಹಿಸಿದರು.
ನಂತರ ಸಾಂಸ್ಕೃತಿಕ ಕಾರ್ಯಕ್ರಮ ಸಿದ್ಧಿವಿನಾಯಕ ಕಲಾಮಂಡಳಿ ಗದ್ದೇಹಳ್ಳಿ ದಮಾಮಿ ಕುಣಿತ, ಸಾಕ್ಷಿ ಹೆಗಡೆ ಅಲ್ಲಾಳಮನೆ ಸಂಗಡಿಗರಿಂದ ಭಾವಗೀತೆ ಪಕ್ಕದ ಮಾರಿಕಾಂಬಾ ದೇವಾಲಯದ ಎದುರು ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
Murdeshwar: ನಾಲ್ವರು ವಿದ್ಯಾರ್ಥಿನಿಯರು ಸಮುದ್ರಪಾಲು; 1 ಶವ ಪತ್ತೆ
MUST WATCH
ಹೊಸ ಸೇರ್ಪಡೆ
Sri Krishnadevaraya ವಿ.ವಿ.ಗೆ ಮಂಗಳಮುಖಿ ಅತಿಥಿ ಉಪನ್ಯಾಸಕಿ; ರಾಜ್ಯದಲ್ಲೇ ಮೊದಲು
Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ
Winter Session: ಬಾಣಂತಿ ಸಾವು: ನ್ಯಾಯಾಂಗ ತನಿಖೆಗೆ ಬಿಜೆಪಿ ಪಟ್ಟು
United Nations: ನಾಡಿದ್ದು ವಿಶ್ವ ಧ್ಯಾನ ದಿನ: ಶ್ರೀ ರವಿಶಂಕರ್ ನೇತೃತ್ವ
Operation: ಕಾಸರಗೋಡಿನಲ್ಲಿ ಎನ್.ಐ.ಎ. ದಾಳಿ: ತಲೆಮರೆಸಿಕೊಂಡಿದ್ದ ಉಗ್ರಗಾಮಿ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.