ನರೇಗಾ: ಕೆಲಸಕ್ಕಿಂತ ಸಿಬ್ಬಂದಿ ಹೆಚ್ಚು!
Team Udayavani, Dec 13, 2021, 12:43 PM IST
ಭಟ್ಕಳ: ಸರಕಾರ ಜನತೆಗೆ ಅನುಕೂಲವಾಗುವಂತೆ ಹತ್ತು ಹಲವಾರು ಯೋಜನೆಗಳನ್ನು ರೂಪಿಸುತ್ತದೆ. ಆದರೂ ಅವುಗಳೆಲ್ಲವೂ ಜನರ ತನಕ ತಲುಪುವುದು ಕೂಡಾಇಲ್ಲ. ಅನೇಕ ಯೋಜನೆಗಳು ಜನರಿಗೆ ತಲುಪಿದರೂ ಸಹ ಪ್ರಯೋಜನ ಪಡೆಯುವವರು ಮಾತ್ರ ಕೇವಲ ಕೆಲವೇ ಜನರು.
ಸರಕಾರದ ಉದ್ಯೋಗ ಖಾತ್ರಿ ಯೋಜನೆ. ಭಟ್ಕಳ ತಾಲೂಕಿನಲ್ಲಿ ಉದ್ಯೋಗ ಖಾತ್ರಿ ಯೋಜನೆಪ್ರಯೋಜನ ಪಡೆದುಕೊಳ್ಳುತ್ತಿರುವವರು ತೀರಾಕಡಿಮೆ ಜನರು. ಇದರಿಂದಾಗಿ ತಾಲೂಕಿನಲ್ಲಿ ಕೂಲಿಕಾರ್ಮಿಕರಿಗೆ ವೆಚ್ಚ ಮಾಡುವುದಕ್ಕಿಂತ ನಿಯೋಜಿತಸಿಬ್ಬಂದಿ ವೆಚ್ಚವೇ ಹೆಚ್ಚಾಗಿದ್ದು ಅನಾವಶ್ಯಕ ಆಡಳಿತಾತ್ಮಕ ವೆಚ್ಚ ಹೆಚ್ಚಾದಂತಾಗಿದೆ.
ತಾಲೂಕಿನಲ್ಲಿರುವ 16 ಗ್ರಾಪಂಗಳಲ್ಲಿ ನರೇಗಾ ಯೋಜನೆಯಡಿ ಆಗುತ್ತಿರುವ ಕಾಮಗಾರಿಗಳನ್ನು ಹೋಲಿಸಿದರೆ, ಇರುವ ಸಿಬ್ಬಂದಿಗಳೇ ಹೆಚ್ಚಾಗಿದ್ದಾರೆ. ಇದರಿಂದ ಆಡಳಿತಾತ್ಮಕ ವೆಚ್ಚವೇ ಅಧಿಕವಾಗಿ ಸರಕಾರಕ್ಕೆ ಹೊರೆಯಾಗಿದೆ. ನರೇಗಾ ಯೋಜನೆಯಡಿಕೂಲಿ ಕೆಲಸಗಾರರ ಮಾನವ ದಿನಗಳನ್ನು ಅವಲಂಬಿಸಿ ಸಿಬ್ಬಂದಿಗಳನ್ನು ಬಳಸಿಕೊಳ್ಳಬೇಕು. ಆದರೆ ತಾಲೂಕಿನಲ್ಲಿಮಾತ್ರ ಕೂಲಿ ಕೆಲಸಗಾರರ ಮಾನವ ದಿನಗಳಿಗಿಂತ ಅಧಿಕಸಿಬ್ಬಂದಿ ಇರುವುದೇ ಇಲ್ಲಿ ಸರಕಾರಕ್ಕೆ ಹೊರೆಯಾಗಲು ಕಾರಣವಾಗಿದೆ.
ತಾಲೂಕಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ತಾಂತ್ರಿಕ ಸಿಬ್ಬಂದಿಗಳೆಂದರೆ, ಓರ್ವ ಸಹಾಯಕ ನಿರ್ದೇಶಕರಿದ್ದು ಅವರ ಹುದ್ದೆ ಖಾಲಿ ಇದೆ.3 ಇಂಜಿನಿಯರ್‌ಗಳು, 6 ಜನರು ತಾಂತ್ರಿಕ ಟೆಕ್ನಿಷಿಯನ್ ಗಳು ಇವರಲ್ಲಿ ಈಗಾಗಲೇ ಓರ್ವರು ರಾಮನಗರಕ್ಕೆವರ್ಗಾವಣೆಗೊಂಡಿದ್ದಾರೆ, ಓರ್ವ ಕಂಪ್ಯೂಟರ್ ತಾಲೂಕು ಸಂಯೋಜಕರು, ಓರ್ವ ಡಾಟಾ ಎಂಟ್ರಿಆಪರೇಟರ್ ಇದ್ದು ಇದವರೆಲ್ಲರ ಸಂಬಳವೇ ಸುಮಾರು 5 ಲಕ್ಷದಷ್ಟಾಗುತ್ತಿದ್ದು ಅಷ್ಟೊಂದು ಮಾನವದಿನಗಳ ಕೆಲಸವೇ ಆಗುತ್ತಿಲ್ಲವಾಗಿದೆ. ಈಗಾಗಲೇ ಗ್ರಾಪಂಗಳಲ್ಲಿರುವ ಕಂಪ್ಯೂಟರ್ ಆಪರೇಟರ್‌ಗಳನ್ನಸಂಬಳ (ಕಾಮಗಾರಿಯ ಶೇ.6 ಮೀರಬಾರದೆನ್ನುವನಿಯಮದಡಿ) ಕೊಡಲಾಗುತ್ತಿಲ್ಲ ಎನ್ನುವ ಕಾರಣಕ್ಕೆ ತೆಗೆದು ಹಾಕಲಾಗಿದೆ ಎನ್ನಲಾಗಿದೆ.
ತಾಲೂಕಿನಲ್ಲಿ ನರೇಗಾ ಯೋಜನೆ ಸಿಬ್ಬಂದಿಗಳೇ ಸರಕಾರಕ್ಕೆ ಹೊರೆಯಾಗುತ್ತಿದ್ದಾರೆ. ತಾಲೂಕಿನಲ್ಲಿನರೇಗಾ ಯೋಜನೆಯಡಿ ನಡೆಯುವ ಕಾಮಗಾರಿಗೆಅನುಗುಣವಾಗಿ ಸಂಬಳ ಕೊಡಬೇಕಾಗುತ್ತದೆ. ಜಿಲ್ಲೆಯ ಉಳಿದ ತಾಲೂಕಿಗೆ ಹೋಲಿಸಿದರೆ,ಭಟ್ಕಳ ತಾಲೂಕಿನಲ್ಲಿ ನಡೆಯುವ ಕಾಮಗಾರಿಗಳೇ ಅತ್ಯಲ್ಪವಾಗಿರುವಾಗ ತಾಂತ್ರಿಕ ಸಿಬ್ಬಂದಿಗೆ ಒಟ್ಟೂತಿಂಗಳ ಸಂಬಳ ಮಾತ್ರ ಮೂಗಿಗಿಂತ ಮೂಗುತಿ ಭಾರ ಎನ್ನುವಂತಾಗಿದೆ. ಈಗಾಗಲೇ ಜಿಲ್ಲೆಯ ಬೇರೆ ಬೇರೆತಾಲೂಕುಗಳಲ್ಲಿ ನರೇಗಾ ಯೋಜನೆಯಡಿ ಉತ್ತಮಕೆಲಸವಾಗುತ್ತಿದ್ದರೂ ಕೆಲವು ತಾಲೂಕುಗಳಲ್ಲಿ ಸಿಬ್ಬಂದಿ ಕೊರತೆ ಇದೆ.
ಯಲ್ಲಾಪುರ, ಮುಂಡಗೋಡ, ಹಳಿಯಾಳ ಹಾಗೂ ಹೊನ್ನಾವರ, ಶಿರಸಿಗಳಲ್ಲಿ ಸಿಬ್ಬಂದಿ ಕೊರತೆಇದ್ದು ಉತ್ತಮ ಕೆಲಸವಾಗುತ್ತಿದೆ. ಇಲ್ಲಿಗೆ ಸಿಬ್ಬಂದಿಅವಶ್ಯಕತೆ ಇದ್ದರೂ ಸಹ ಕಾಮಗಾರಿಯೇ ನಡೆಯದಭಟ್ಕಳದಲ್ಲಿ ಮಾತ್ರ ಇಷ್ಟೊಂದು ಸಿಬ್ಬಂದಿ ಅವಶ್ಯಕತೆಇದೆಯೇ ಎನ್ನುವುದು ಪ್ರಶ್ನೆಯಾಗಿದೆ. ಅಧಿಕಾರಿಗಳುಇದಕ್ಕೆ ಉತ್ತರ ನೀಡಬೇಕಾಗಿದೆ. ನರೇಗಾ ಕೆಲಸವೇಇಲ್ಲದ ಭಟ್ಕಳದಲ್ಲಿ ಸಿಬ್ಬಂದಿಗಳನ್ನು ಇಡುವುದಕ್ಕಿಂತಅಗತ್ಯವಿದ್ದಲ್ಲಿ ನಿಯೋಜನೆ ಮಾಡಿದಲ್ಲಿ ಸರಕಾರಕ್ಕೂಲಾಭ, ತಾಲೂಕಿನ ಸಿಬ್ಬಂದಿಗೂ ಅನುಕೂಲವಾಗಲಿದೆ. ಇನ್ನಾದರೂ ಹಿರಿಯ ಅಧಿಕಾರಿಗಳೂ ಗಮನ ಹರಿಸುವರೇ ಕಾದು ನೋಡಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bigg Boss: ಫಿನಾಲೆಗೆ ಕೆಲ ದಿನಗಳು ಇರುವಾಗಲೇ ಇಬ್ಬರು ಖ್ಯಾತ ಸ್ಪರ್ಧಿಗಳು ಎಲಿಮಿನೇಟ್.!
Katpadi: ನಕಲಿ ದಾಖಲೆ ಸೃಷ್ಟಿಸಿ 45 ಲಕ್ಷ ರೂ. ಸಾಲ ಪಡೆದು ವಂಚನೆ ; ಪ್ರಕರಣ ದಾಖಲು
Belthangady: ಮೃತ್ಯುಂಜಯ ನದಿಯಲ್ಲಿ ಗೋ ಮಾಂಸ ಪತ್ತೆ ಪ್ರಕರಣ; ಇಬ್ಬರು ಆರೋಪಿಗಳ ವಶ
ಜ.6: ಕಕ್ಕಿಂಜೆಯಲ್ಲಿ ವಿಹಿಂಪ, ಬಜರಂಗ ದಳ ಬೃಹತ್ ಪ್ರತಿಭಟನೆ
Vijay Hazare: ಕರ್ನಾಟಕಕ್ಕೆ ಇಂದು ನಾಗಾಲ್ಯಾಂಡ್ ಎದುರಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.