ರಾಷ್ಟ್ರೀಯ ಮಟ್ಟದ ಹ್ಯಾಮರ್ ಥ್ರೋನಲ್ಲಿ ದ್ವಿತೀಯ ಸ್ಥಾನ ಪಡೆದ ಗ್ರಾಮೀಣ ಪ್ರತಿಭೆ ರೇವತಿ
Team Udayavani, Mar 23, 2022, 5:47 PM IST
ಶಿರಸಿ: ತಾಲೂಕಿನ ಬನವಾಸಿ ಸಮೀಪದ ತಿಗಣಿ ಗ್ರಾಮದ ವಿದ್ಯಾರ್ಥಿನಿ ರೇವತಿ ಚಂದ್ರ ಚನ್ನಯ್ಯ ರಾಷ್ಟ್ರೀಯ ಮಟ್ಟದಲ್ಲಿ ಹ್ಯಾಮರ್ ಥ್ರೋ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದು ಅಂತಾರಾಷ್ಟ್ರೀಯ ಪ್ರಾನ್ಸ್ ಮೀಟ್ ಗೆ ಆಯ್ಕೆ ಆಗಿದ್ದಾಳೆ.
ಕ್ರೀಡಾ ಕ್ಷೇತ್ರದಲ್ಲಿ ಮಿಂಚುತ್ತಿರುವ ಹಳ್ಳಿಯ ಪ್ರತಿಭೆ ಆದ ರೇವತಿ, ಓರಿಸ್ಸಾದ ಭುವನೇಶ್ವರದಲ್ಲಿ ಸ್ಕೂಲ್ ಗೇಮ್ಸ್ ಫೆಡರೇಶನ್ ಹಮ್ಮಿಕೊಂಡ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ 48 ಮೀಟರ್ ಹ್ಯಾಮರ್ ಥ್ರೋ ಮಾಡಿದ್ದಳು. ಪ್ರಥಮ ಸ್ಥಾನ ಪಡೆದ ಹರಿಯಾಣದ ಕ್ರೀಡಾಳು 48.1 ಮೀಟರ್ ಉದ್ದ ಎಸೆದಿದ್ದರು. ರೇವತಿ ಕೇವಲ .01 ಮೀಟರ್ ಅಂತರದಿಂದ ಪ್ರಥಮ ಸ್ಥಾನದಿಂದ ವಂಚಿತಳಾದಳು.
ಸುಬೇದಾರ್ ಕಾಶೀನಾಥ ನಾಯ್ಕ, ಜಿಲ್ಲಾ ಕೋಚ್ ಪ್ರಕಾಶ್ ರೇವಣಕರ್ ಕಾರವಾರ, ಶಮೀಂದ್ರ ನಾಯಕ ಕಾರವಾರ, ಉಡುಪಿ ಸ್ಪೋರ್ಟ್ಸ್ ಕ್ಲಬ್ ಅಜ್ಜರಕಾಡು ಅವರ ಸಹಕಾರ, ಮಾರ್ಗದರ್ಶನಿಂದ ಇದು ಸಾಧ್ಯ ಆಗಿದೆ ಎಂದು ಸ್ಥಳೀಯ ಶಿಕ್ಷಕ ರೇವತಿಗೆ ಶೈಕ್ಷಣಿಕ ಪಾಠ ಮಾಡಿದ್ದ ಮಾರುತಿ ಬನವಾಸಿ ಸಂತಸ ವ್ಯಕ್ತಪಡಿಸಿದ್ದಾರೆ.
ರೇವತಿ ಪ್ರಸ್ತುತ ಉಡುಪಿಯಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದಾಳೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್ ಸೂಚನೆ
Dandeli: ಸಾರಿಗೆ ಬಸ್ಸಿನಲ್ಲೇ ಪ್ರಯಾಣಿಕನಿಗೆ ಹೃದಯಾಘಾತ… ಆಸ್ಪತ್ರೆ ಮಾರ್ಗದಲ್ಲಿ ಮೃತ್ಯು
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Dandeli: ವಕ್ಫ್ ಮಂಡಳಿ ಮತ್ತು ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ಬಿಜೆಪಿಯಿಂದ ಪ್ರತಿಭಟನೆ
Dandeli: ನಗರಸಭೆಯ ಜವಾನನನ್ನು ನಿಂದಿಸಿರುವುದರ ವಿರುದ್ಧ ನಗರ ಸಭೆಯ ಪೌರಾಯುಕ್ತರಿಗೆ ದೂರು
MUST WATCH
ಹೊಸ ಸೇರ್ಪಡೆ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Threat: ತಪ್ಪಾಯಿತೆಂದು ಕ್ಷಮೆ ಕೇಳಿ ಇಲ್ಲ 5ಕೋಟಿ ನೀಡಿ.. ಸಲ್ಮಾನ್ ಖಾನ್ ಗೆ ಮತ್ತೆ ಬೆದರಿಕೆ
ಅಂಗಡಿಯಲ್ಲಿ ಬಿಟ್ಟು ಹೋಗಿದ್ದ 1.20 ಲ.ರೂ ಹಿಂದಿರುಗಿಸಿ ಮಾನವೀಯತೆ ಮೆರೆದ ಶಾಸಕ ಬಸವಂತಪ್ಪ
Kavoor: ಎಡನೀರು ಮಠದ ಶ್ರೀಗಳ ಮೇಲೆ ಹಲ್ಲೆ… ಶಾಸಕ ಡಾ.ಭರತ್ ಶೆಟ್ಟಿ ವೈ. ಖಂಡನೆ
ಅಕ್ರಮ ಮರಳುಗಾರಿಕೆ ಕುರಿತು ಮಾಹಿತಿ ನೀಡಿದ ಆರೋಪ… ವ್ಯಕ್ತಿಗೆ ಹಲ್ಲೆ ನಡೆಸಿ ಇರಿಯಲು ಯತ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.