ಖಾಸಗಿ ವಾಹನ ಚಾಲಕ-ಮಾಲಕರ ಸಂಕಷ್ಟ ಕೇಳ್ಳೋರಿಲ್ಲ
Team Udayavani, May 10, 2020, 4:05 PM IST
ಹೊನ್ನಾವರ: ಮುಂಗಡವಾಗಿ ತೆರಿಗೆ ತುಂಬುತ್ತ ಮಳೆಗಾಲದಲ್ಲಿ ಹಾನಿಯಾದರೂ ಸರಕು ಸಾಗಾಣಿಕೆ ಮತ್ತು ಪ್ರಯಾಣಿಕರನ್ನು ಸಾಗಿಸುತ್ತ ಗುಡ್ಡಗಾಡು ಪ್ರದೇಶವಾದ ಉತ್ತರ ಕನ್ನಡಕ್ಕೆ ಸೇವೆ ನೀಡುತ್ತಿರುವ ಖಾಸಗಿ ಲಾರಿ, ಬಸ್, ಟೆಂಪೋ, ಟ್ಯಾಕ್ಸಿಗಳನ್ನು ಸಾಲಮಾಡಿ ಖರೀದಿಸುವ ವ್ಯವಹಾರಸ್ಥರು ಲಾಕ್ ಡೌನ್‌ನಿಂದ ಸಂಪೂರ್ಣ ಹಾನಿಯಲ್ಲಿದ್ದಾರೆ.
ರೈತ, ಉದ್ಯಮಿ ಇತರ ವರ್ಗಗಳಿಗೆ ರಿಯಾಯಿತಿ ನೀಡಿದಂತೆ ತಮಗೂ ಏನಾದರೂ ಸರ್ಕಾರಗಳ ನೆರವು ದೊರೆಯಬಹುದು ಎಂದು ನಿರೀಕ್ಷಿಸಿದವರಿಗೆ ನಿರಾಸೆ ಉಂಟಾಗಿದೆ. ಈ ಕುರಿತು ಜಿಲ್ಲೆಯ ಸಾರಿಗೆ ಉದ್ಯಮಿ ವೆಂಕಟ್ರಮಣ ಹೆಗಡೆ ಮಾತನಾಡಿ, ಕೋವಿಡ್ ಭಯ ಇದ್ದರೂ ಸರ್ಕಾರ ಹೇಳಿದಂತೆ ತರಕಾರಿ, ಕಿರಾಣಿ, ಸಾಮಾನು, ಗ್ಯಾಸ್, ಔಷಧ ಮೊದಲಾದವನ್ನು ನಮ್ಮಲ್ಲಿ ಕೆಲವರು ಸಾಗಿಸುತ್ತ ಲಾಕ್‌ಡೌನ್‌ಗೆ ಸಹಕಾರ ನೀಡಿದ್ದಾರೆ. ನಾವು ಎಷ್ಟೇ ಕಷ್ಟವಾದರೂ ವಾಹನವನ್ನು ನಿಲ್ಲಿಸಿ ಲಾಕ್ ಡೌನ್‌ಗೆ ಸಹಕಾರ ನೀಡಿದ್ದೇವೆ. ವಾಹನಗಳ ಚಕ್ರ ತಿರುಗದಿದ್ದರೆ ಕಾರ್ಮಿಕರ ಸಂಬಳವೂ ಗಿಟ್ಟುವುದಿಲ್ಲ. ಲಾಕ್‌ಡೌನ್ ಮುಗಿದರೂ ಸಾರಿಗೆ ಆರಂಭಕ್ಕೆ ಸರ್ಕಾರ ಅನುಮತಿ ನೀಡಿಲ್ಲ. ಕಡಿಮೆ ಸೀಟ್ ಹಾಕಿಕೊಂಡು, ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಯಾಣಿಕರನ್ನು ಸಾಗಿಸಲು ಹೊರಟರೆ ಟಿಕೆಟ್ ದರವನ್ನು ಎರಡುಪಟ್ಟು ಹೆಚ್ಚಿಸಬೇಕಾಗುತ್ತದೆ. ಇದರಿಂದ ಜನರ ಸುಲಿಗೆ ಮಾಡಿದಂತಾಗುತ್ತದೆ. ಬರುವುದು ಮಳೆಗಾಲ, ದೀಪಾವಳಿಯವರೆಗೆ ಶೇ. 50ರಷ್ಟು ವ್ಯವಹಾರ ಕುಸಿಯುತ್ತದೆ. ಆದ್ದರಿಂದ ಎಲ್ಲ ಚಟುವಟಿಕೆಗಳೊಂದಿಗೆ ವಾಹನ ಚಟುವಟಿಕೆಗಳು ಆರಂಭವಾಗದಿದ್ದರೆ ಪ್ರಗತಿ ಅಸಾಧ್ಯ. ಸರ್ಕಾರ ಇದನ್ನು ಗಮನದಲ್ಲಿಟ್ಟುಕೊಂಡು ರಸ್ತೆ ತೆರಿಗೆ ಮನ್ನಾದಂತಹ ಕ್ರಮ ಕೈಗೊಳ್ಳಬೇಕೆಂದು ಅವರು ವಿನಂತಿಸಿದ್ದಾರೆ.
ಅಂಕೋಲೆಯ ವಂದನಾ, ಗೋಕರ್ಣದ ಗೌರಿ, ಕುಮಟಾದ ವಿಎಂಪಿ ಮತ್ತು ಟೆಂಪೋ ಚಾಲಕ, ಮಾಲಕ ಸಂಘಟನೆ ಅಧ್ಯಕ್ಷರು ಇವರ ಹೇಳಿಕೆಗೆ ಧ್ವನಿಗೂಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಸ್ಕೂಟರಿಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ
Mangaluru: ಗುತ್ತಿಗೆದಾರ ಸಚಿನ್ ಪ್ರಕರಣ; ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.