ಬೆಸ್ತರಿಗೆ ತೊಂದರೆಯಾಗದು: ಪೂಜಾರಿ


Team Udayavani, Dec 25, 2019, 2:44 PM IST

uk-tdy-1

ಕಾರವಾರ: ಇಲ್ಲಿನ ಸರ್ವಋತು ಬಂದರು ಎರಡನೇ ಹಂತದ ವಿಸ್ತರಣೆ ಹಾಗೂ ಅಲೆತಡೆಗೋಡೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬಂದರು ಮತ್ತು ಮೀನುಗಾರಿಕಾ ಸಚಿವ ಕೋಟಾ ಶ್ರೀನಿವಾಸಪೂಜಾರಿ ಸಮ್ಮುಖದಲ್ಲಿ ಡಿಸಿ ಕಚೇರಿಯಲ್ಲಿ ಮೀನುಗಾರ ಮುಖಂಡರ ಅಹವಾಲು ಆಲಿಕೆ ಸಭೆ ಮಂಗಳವಾರ ನಡೆಯಿತು.

ಸಚಿವರು ತಾಳ್ಮೆಯಿಂದ ಮೀನುಗಾರ ಮುಖಂಡರ ಆತಂಕವನ್ನು ಆಲಿಸಿದರು. ಬಂದರು ವಿಸ್ತರಣೆಯಿಂದ ಮೀನುಗಾರಿಕೆಗೆ ತೊಂದರೆಯಾಗಲಿದೆ. ಕಾರವಾರ ಸಮುದ್ರ ಕೊರೆತಕ್ಕೆ ತುತ್ತಾಗಬಹುದು. ಅಲೆತಡೆಗೋಡೆಯನ್ನು ಬಾವುಟ ಕಟ್ಟೆಯ ಸರಹದ್ದು ಮೀರಿ, ಮಕ್ಕಳ ಉದ್ಯಾನವನದಪ್ಯಾರಾಗೋಲಾದಿಂದ ಪ್ರಾರಂಭಿಸುತ್ತಿರುವುದು ಅವೈಜ್ಞಾನಿಕ ಎಂದು ವಾದ ಮಂಡಿಸಿದರು. ಕಾರವಾರ ಬಂದರು ಈಗ ಹೇಗಿದೆಯೋ ಹಾಗೆ ಇರಲಿ. ಇಲ್ಲಿ ಎರಡನೇ ಹಂತದ ವಿಸ್ತರಣೆ ಅಗತ್ಯವಿಲ್ಲ. ಬೀಚ್‌ ಪ್ರವಾಸಿಗರಿಗೆ, ಸಾಂಪ್ರದಾಯಿಕ ಮೀನುಗಾರರಿಗೆ ಉಳಿಯಬೇಕು. ಯಾಂತ್ರಿಕ ಮೀನುಗಾರರಿಗೂ ಬಂದರು ವಿಸ್ತರಣೆಯಿಂದ ತೊಂದರೆಯಾಗಲಿದೆ ಎಂಬ ಅಭಿಪ್ರಾಯವನ್ನು ಹಲವರು ವ್ಯಕ್ತಪಡಿಸಿದರು.

ಕೆ.ಟಿ. ತಾಂಡೇಲ, ಪ್ರಸಾದ್‌ ಕಾರವಾರಕರ್‌, ಬಿ.ಎಸ್‌. ಪೈ, ಪ್ರೀತಮ್‌ ಮಾಸೂರಕರ್‌ ಬಂದರು ವಿಸ್ತರಣೆಗೆ ವಿರೋಧ ವ್ಯಕ್ತಪಡಿಸಿದರು. ಫಿಶರಿಸ್‌ ಫೆಡರೇಶನ್‌ ಅಧ್ಯಕ್ಷ ಗಣಪತಿ ಮಾಂಗ್ರೆ ಮಾತನಾಡಿ, ಕಾರವಾರ ಬಂದರಿನ ಗುಣವನ್ನು ಸುದೀರ್ಘ‌ವಾಗಿ ವಿವರಿಸಿದರು. ಬಂದರು ವಿಸ್ತರಣೆ, ಅಲೆತಡೆಗೋಡೆ ಯೋಜನೆಗಳನ್ನು ಬೇರೆಡೆ ಸ್ಥಳಾಂತರಿಸಿ, ಕಾರವಾರಕ್ಕೆ ಈ ಯೋಜನೆಗಳು ಬೇಡ ಎಂದರು.

ಶಾಸಕಿ ರೂಪಾಲಿ ನಾಯ್ಕ ಮಾತನಾಡಿ, ಈ ಯೋಜನೆ ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಜಾರಿಯಾದುದು. ಅವರೇ ಯೋಜನೆಗೆ ಬಜೆಟ್‌ನಲ್ಲಿ ಹಣ ನೀಡಿ, ಅಡಿಗಲ್ಲು ಸಹ ಹಾಕಿದ್ದರು. ಆಗ ಮೀನುಗಾರ ಮುಖಂಡರು ಯೋಜನೆಗೆ ವಿರೋಧ ವ್ಯಕ್ತಮಾಡದೇ, ಈಗ ಮಾಡುತ್ತಿದ್ದಾರೆ ಎಂದು ಗಮನ ಸೆಳೆದರು. ಸುದೀರ್ಘ‌ ಚರ್ಚೆ ಆಲಿಸಿದ ಮೀನುಗಾರಿಕೆ ಮತ್ತು ಬಂದರು ಸಚಿವರು ಮೀನುಗಾರರಿಗೆ ತೊಂದರೆಯಾಗದಿರುವುದನ್ನು ಮತ್ತೂಮ್ಮೆ ಖಚಿತ ಮಾಡಲಾಗುವುದು. ಉನ್ನತ ಅಧಿಕಾರಿಗಳು ಹಾಗೂ ತಾಂತ್ರಿಕ ತಜ್ಞರ ಜೊತೆ ಚರ್ಚಿಸಲಾಗುವುದು. ಈ ಯೋಜನೆಯಿಂದ ಮೀನುಗಾರರಿಗೆ ತೊಂದರೆ ಇಲ್ಲ ಎಂದು ಅಧಿಕಾರಿಗಳಿಂದ ಲಿಖೀತ ಭರವಸೆ ನೀಡಲಾಗುವುದು. ಉನ್ನತ ಮಟ್ಟದ ಚರ್ಚೆಯ ನಂತರವೇ ಖಚಿತ ನಿರ್ಧಾರಕ್ಕೆ ಬರಲಾಗುವುದು. ಈಗ ಮೀನುಗಾರರಿಗೆ ತೊಂದರೆ ಕೊಡುವ ಯಾವುದೇ ಕೆಲಸ ಮಾಡಲ್ಲ ಎಂಬ ಭರವಸೆ ನೀಡಬಲ್ಲೆ.

ಈ ಯೋಜನೆಯ ಸಾಧಕ ಬಾಧಕಗಳ ಬಗ್ಗೆ ಇವತ್ತಿನ ಸಭೆಯಲ್ಲಿ ಬೆಳಕು ಚೆಲ್ಲಲಾಗಿದೆ. ತಂತ್ರಜ್ಞರಿಂದ ಮಾಹಿತಿ ಪಡೆದು, ಸರ್ಕಾರದ ನಿಲುವು ತಿಳಿಸಲಾಗುವುದು ಎಂದರು. ಯೋಜನೆ ನಿಲ್ಲಲಿದೆ ಅಥವಾ ಮುಂದುವರಿಯಲಿದೆ ಎಂಬ ಸ್ಪಷ್ಟ ನಿರ್ಣಯ ಅಂತಿಮವಾಗಿ ಹೊರಡಲಿಲ್ಲ. ಜಿಲ್ಲಾಧಿ ಕಾರಿ ಕಚೇರಿ ಹೊರ ಆವರಣದಲ್ಲಿದ್ದ ಸಾವಿರಾರು ಮೀನುಗಾರರನ್ನು, ಸಭೆಯ ನಂತರ ಸಚಿವ ಪೂಜಾರಿ ಭೇಟಿ ಮಾಡಿದರು.

ಟಾಪ್ ನ್ಯೂಸ್

4-new-year

New Year 2025:ಹಳೆ ವ್ಯಕ್ತಿಗೆ ಹೊಸ ವರ್ಷ….ಹಳೆ ವರ್ಷದಲ್ಲಿ ಕಲಿತ ಎಲ್ಲಾ ಅನುಭವ ಪಾಠವಾಗಲಿ

ಹತ್ತಾರು ಸಿನಿಮಾ.. ನೂರಕ್ಕೆ ನೂರು ನಿರೀಕ್ಷೆ.. ಈ ವರ್ಷದ ಬಹು ನಿರೀಕ್ಷಿತ ಕನ್ನಡ ಚಿತ್ರಗಳಿವು

ಹತ್ತಾರು ಸಿನಿಮಾ.. ನೂರಕ್ಕೆ ನೂರು ನಿರೀಕ್ಷೆ.. ಈ ವರ್ಷದ ಬಹು ನಿರೀಕ್ಷಿತ ಕನ್ನಡ ಚಿತ್ರಗಳಿವು

Analysis:ರಂಗೇರಿದ ದೆಹಲಿ ಚುನಾವಣ ಅಖಾಡ-ಭ್ರಷ್ಟಾಚಾರ ವಿಷಯ ಗೌಣ..ಹಿಂದುತ್ವ ಪ್ರಧಾನ

Analysis:ರಂಗೇರಿದ ದೆಹಲಿ ಚುನಾವಣ ಅಖಾಡ-ಭ್ರಷ್ಟಾಚಾರ ವಿಷಯ ಗೌಣ..ಹಿಂದುತ್ವ ಪ್ರಧಾನ

3-ullala

Ullala: ಲಾರಿ ಅಪಘಾತ; ಡೆಲಿವರಿ ಬಾಯ್ ದಾರುಣ ಸಾವು

eart

Kutch; 3.2 ತೀವ್ರತೆಯ ಭೂ ಕಂಪನ

1-gundlupete

Gundlupete: ವಿದ್ಯುತ್ ಕಂಬಕ್ಕೆ ‌ಗುದ್ದಿದ್ದ ಕಾರು: ಸ್ಥಳದಲ್ಲೇ ‌ಇಬ್ಬರು ಸಾವು

crime (2)

Lucknow; ಯುವಕನಿಂದ ತಾಯಿ ಮತ್ತು ನಾಲ್ವರು ಸಹೋದರಿಯರ ಬರ್ಬರ ಹ*ತ್ಯೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-honnavara

Honnavar: ಮೂವರು ಯುವಕರ ಬಲಿ ತೆಗೆದುಕೊಂಡ ಭೀಕರ ರಸ್ತೆ ಅಪಘಾತ

5-1

Mundgod: ಹಾವು ಕಡಿದು ಅಂಗನವಾಡಿ ಬಾಲಕಿ ಸಾವು

1-up

Dandeli; ಕುಸಿದು ಬಿದ್ದು ಯುಪಿ ಮೂಲದ ಯುವಕ ಸಾ*ವು

16-yellapura

Yellapura: ಬಸ್‌- ಬೈಕ್‌ ಡಿಕ್ಕಿ; ಟಯರ್‌ ತಲೆ ಮೇಲೆ ಹರಿದು ಇಬ್ಬರು ಸ್ಥಳದಲ್ಲೇ ಮೃತ್ಯು

ಬೆಳೆವಿಮೆ ಸಿಗದೆ ಕೃಷಿಕರ ಪರದಾಟ: ಅಡಕೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸದ ಸರ್ಕಾರ

ಬೆಳೆವಿಮೆ ಸಿಗದೆ ಕೃಷಿಕರ ಪರದಾಟ: ಅಡಕೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸದ ಸರ್ಕಾರ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

2

Belthangady: ಖಾಸಗಿ ಕಟ್ಟಡದ ಅವ್ಯವಸ್ಥೆ ವಿರುದ್ಧ ಸದಸ್ಯರು ಗರಂ

4-new-year

New Year 2025:ಹಳೆ ವ್ಯಕ್ತಿಗೆ ಹೊಸ ವರ್ಷ….ಹಳೆ ವರ್ಷದಲ್ಲಿ ಕಲಿತ ಎಲ್ಲಾ ಅನುಭವ ಪಾಠವಾಗಲಿ

1

Bantwal: ಸಾಮಾನ್ಯ ಸೈಕಲನ್ನೇ ಎಲೆಕ್ಟ್ರಿಕ್‌ ಆಗಿ ಪರಿವರ್ತಿಸಿದ ಬಾಲಕ!

ಹತ್ತಾರು ಸಿನಿಮಾ.. ನೂರಕ್ಕೆ ನೂರು ನಿರೀಕ್ಷೆ.. ಈ ವರ್ಷದ ಬಹು ನಿರೀಕ್ಷಿತ ಕನ್ನಡ ಚಿತ್ರಗಳಿವು

ಹತ್ತಾರು ಸಿನಿಮಾ.. ನೂರಕ್ಕೆ ನೂರು ನಿರೀಕ್ಷೆ.. ಈ ವರ್ಷದ ಬಹು ನಿರೀಕ್ಷಿತ ಕನ್ನಡ ಚಿತ್ರಗಳಿವು

Analysis:ರಂಗೇರಿದ ದೆಹಲಿ ಚುನಾವಣ ಅಖಾಡ-ಭ್ರಷ್ಟಾಚಾರ ವಿಷಯ ಗೌಣ..ಹಿಂದುತ್ವ ಪ್ರಧಾನ

Analysis:ರಂಗೇರಿದ ದೆಹಲಿ ಚುನಾವಣ ಅಖಾಡ-ಭ್ರಷ್ಟಾಚಾರ ವಿಷಯ ಗೌಣ..ಹಿಂದುತ್ವ ಪ್ರಧಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.