ಸಾಗರ ದಿನಾಚರಣೆ; ಕೊಳೆಯದ ವಸ್ತುಗಳ ಬಳಕೆ ಬೇಡ; ಜಿಲ್ಲಾಧಿಕಾರಿ
ಸಾಗರ ಮಾಲಿನ್ಯದ ಇಂದಿನ ಸ್ಥಿತಿಗತಿ ಬಗ್ಗೆ ವಿಶೇಷ ಉಪನ್ಯಾಸ
Team Udayavani, Jun 10, 2023, 6:13 PM IST
ಕಾರವಾರ: ಇಂದಿನ ದಿನಗಳಲ್ಲಿ ಪರಿಸರ ಸ್ವಚ್ಛತೆ ಕಾಪಾಡುವುದು ಮೊದಲ ಆದ್ಯತೆಯಾಗಿದೆ. ಪ್ಲಾಸ್ಟಿಕ್ ಹಾಗೂ ಕೊಳೆಯದೆ ಇರುವ ವಸ್ತುಗಳ ಅತೀಯಾದ ಬಳಕೆ ಬಗ್ಗೆ ಜನರಲ್ಲಿ ತಿಳಿವಳಿಕೆ ಮೂಡಿಸುವುದು ಅನಿವಾರ್ಯ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು.
ನಗರದ ರವೀಂದ್ರನಾಥ ಕಡಲತೀರದಲ್ಲಿ ವಿಶ್ವ ಸಾಗರ ದಿನಾಚಾರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸ್ವತ್ಛತೆ ಹಾಗೂ ಪ್ಲಾಸ್ಟಿಕ್ ಕುರಿತ ಬಳಕೆಯಲ್ಲಿ ಕೇವಲ ಸರಕಾರದ ಕೆಲಸವಾಗದೆ ಎಲ್ಲ ಜನಸಾಮಾನ್ಯರು ಕ್ರಿಯಾತ್ಮಕವಾಗಿ ಪಾಲ್ಗೊಂಡಾಗ ಮಾತ್ರ ಇಂಥಹ ಕಾರ್ಯಕ್ರಮ ಯಶಸ್ವಿಯಾಗುತ್ತವೆ. ನದಿಗಳ ಮೂಲಕ ಸಮುದ್ರ ಸೇರುವ ಪ್ಲಾಸ್ಟಿಕ್‌ನ್ನು ತಡೆಯಲು ಕೇಂದ್ರ ಸರಕಾರವು ದೊಡ್ಡ ಮಟ್ಟದ ಕಾರ್ಯಕ್ರಮ ತರಲಿದೆ ಎಂದರು.
ಡಾ| ರಾಠೊಡ ಮತ್ತು ಜಯೇಶ ಎ.ಸಿ.ಎಸ್ ಅವರು ಕಾರ್ಯಕ್ರಮದ ಮಹತ್ವದ ಬಗ್ಗೆ ಮತ್ತು ಸಾಗರ ಮಾಲಿನ್ಯದ ಇಂದಿನ ಸ್ಥಿತಿಗತಿ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ವಿಶ್ವ ವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿ, ಅರಣ್ಯ ಇಲಾಖೆಯ ಸಿಬ್ಬಂದಿ
ಹಾಗೂ ಜಿಲ್ಲಾ ವಿಜ್ಞಾನ ಕೇಂದ್ರದ ಸಿಬ್ಬಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸುಮಾರು 1 ಕಿ.ಮೀ ಕ್ರಮಿಸಿ 566 ಕೆ.ಜಿ ವಿವಿಧ ರೀತಿಯ ತ್ಯಾಜ್ಯವನ್ನು ಸಂಗ್ರಹಿಸಿದರು. 140 ಕೆ.ಜಿ ಯಷ್ಟು ಗಾಜಿನ ಮದ್ಯದ ಬಾಟಲಿಗಳು, 70 ಕೆ.ಜಿ ಡೈಪರ್, 83 ಕೆ.ಜಿ ಇತರೆ ವಿವಿಧ ಪ್ಲಾಸ್ಟಿಕ್ ವಸ್ತುಗಳು, 28 ಕೆ.ಜಿ ಚಪ್ಪಲಿ ಮತ್ತು ಶ್ಯೂಗಳು, ಆಹಾರ
ಪೊಟ್ಟಣಗಳು, 5 ಕೆ.ಜಿ ಗಾಜಿನ ಬಾಟಲಿಗಳು, 4 ಕೆ.ಜಿ ಪ್ಲಾಸ್ಟಿಕ್ ಕಪ್, 5 ಕೆ.ಜಿ ಥರ್ಮೊಕೊಲ ಇತ್ಯಾದಿ ತ್ಯಾಜ ವಸ್ತುಗಳು ಸ್ವತ್ಛತೆಯ ವೇಳೆ ಸಂಗ್ರಹವಾದವು.
ಕ.ವಿ.ವಿ ಸ್ನಾತಕೋತ್ತರ ಕೇಂದ್ರ ಆಡಳಿತಾಧಿಕಾರಿ ಶಾಹಿನ ಶೇಖ್, ಡಾ| ಜಗನ್ನಾಥ ಎಲ್. ರಾಠೊಡ, ಡಾ| ಶಿವಕುಮಾರ ಹರಗಿ, ಪ್ರಮೋದ ನಾಯಕ, ಅನು ನಾಯರ್, ಡಾ| ಗುಲ್ನಾಪ್, ಡಾ| ಪ್ರಜ್ಞಾ ಬಾಂದೇಕರ, ಡಾ| ಶ್ರೀದೇವಿ ಹಕ್ಕಿಮನಿ, ಸುಜಲ ರೇವಣಕರ, ಸೂರಜ ಪೂಜಾರ, ಶಾನವಾಜ ಕಡಪ, ಶ್ರೀ ರಾಮು ರಾಠೊಡ ಹಾಗೂ ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ಕೇಂದ್ರದ ಸಿಬ್ಬಂದಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.