DC Order; ಅ.15ರಿಂದ ಶಿರಸಿ-ಕುಮಟಾ ರಸ್ತೆಯಲ್ಲಿ ಘನ ವಾಹನಗಳಿಗೆ ನಿಷೇಧ
ಇಲ್ಲಿದೆ ಪರ್ಯಾಯ ಮಾರ್ಗ ವಿವರ...
Team Udayavani, Jun 25, 2024, 8:19 PM IST
ಶಿರಸಿ: ಭಾರತೀಯ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದಿಂದ ಭಾರತ್ ಮಾಲಾ ಯೋಜನೆ ಅಡಿಯಲ್ಲಿ ಹೆದ್ದಾರಿ ಅಭಿವೃದ್ಧಿ ಕಾಮಾಗಾರಿ ನಡೆಯುತ್ತಿದ್ದು, ಬಾಕಿ ಉಳಿದ ರಸ್ತೆ ಅಭಿವೃದ್ಧಿ, ಸೇತುವೆಗಳ ಪುನರ್ ನಿರ್ಮಾಣ ಕಾಮಗಾರಿ ನಡೆಸಲು ಜಿಲ್ಲಾಡಳಿತವು ಅ. 15ರಿಂದ ಭಾರೀ ಗಾತ್ರದ ವಾಹನಗಳಿಗೆ ಸಂಚಾರ ನಿರ್ಬಂಧಿಸಲು ಆದೇಶ ಹೊರಡಿಸಿದ್ದಾರೆ.
ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಈ ಆದೇಶವನ್ನು ಮಾಡಿದ್ದು, 27.15 ಕಿಲೋ ಮೀಟರ್ ದಿಂದ 60ರ ವರೆಗಿನ ದೂರದಲ್ಲಿ ಅಭಿವೃದ್ಧಿ ಕಾಮಗಾರಿ ಆಗಬೇಕಿದೆ. ಈ ಹಿನ್ನಲೆಯಲ್ಲಿ ಭಾರೀ ಗಾತ್ರದ ವಾಹನಗಳಿಗೆ ಬದಲಿ ಮಾರ್ಗವನ್ನು ಬಳಸಿ ಕರಾವಳಿಯಿಂದ ಶಿರಸಿಗೆ ಪ್ರಯಾಣಿಸಲು ಸೂಚಿಸಿ ಆದೇಶ ಮಾಡಲಾಗಿದೆ.
ಪರ್ಯಾಯ ಮಾರ್ಗ
ಕುಮಟಾದಿಂದ ಶಿರಸಿಗೆ ತೆರಳುವ ಲಘು ವಾಹನಗಳು ರಾಷ್ಟ್ರೀಯ ಹೆದ್ದಾರಿ- 766E ಬಳಸಿ ತೆರಳಬಹುದು. ಭಾರೀ ಗಾತ್ರದ ವಾಹನಗಳು ಸಿದ್ದಾಪುರದ ರಾಜ್ಯ ಹೆದ್ದಾರಿ-69 ಮಾರ್ಗವಾಗಿ, ಅಂಕೋಲಾ ಕಡೆಯಿಂದ ಶಿರಸಿಗೆ ತೆರಳುವ ಯಲ್ಲಾಪುರ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ- 63 ಹಾಗೂ ರಾಜ್ಯ ಹೆದ್ದಾರಿ- 93 ಬಳಸಿ ತಲುಪಬಹುದು.
ಮಂಗಳೂರು, ಹೊನ್ನಾವರ ಕಡೆಯ ವಾಹನಗಳು ಮಾವಿನಗುಂಡಿ ಸಿದ್ದಾಪುರ ಮಾರ್ಗವಾಗಿ ಶಿರಸಿಗೆ ತೆರಳಬಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.
2020ರಲ್ಲಿ ವಾಹನ ಸಂಚಾರ ನಿರ್ಬಂಧ ಮನವಿ ಇತ್ತಾದರೂ ಸಾರ್ವಜನಿಕರ ಬೇಡಿಕೆ ಅನ್ವಯ ವಾಹನಗಳ ಓಡಾಟ ಮುಂದುವರಿದಿತ್ತು. ಇದರಿಂದ ನಿಗದಿತ ಸಮಯಕ್ಕೆ ಕಾಮಗಾರಿ ಪೂರ್ಣಗೊಳಿಸಲಾಗಿರಲಿಲ್ಲ ಎಂದು ಹೆದ್ದಾರಿ ನಿಗಮದ ಅಧಿಕಾರಿಗಳು ಅಕ್ಟೋಬರ್ 15ರಿಂದ 2025ರ ಫೆ. 25ರ ತನಕ ಸಂಚಾರ ನಿರ್ಬಂಧಕ್ಕೆ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಿದ್ದರು ಎಂಬುದು ಉಲ್ಲೇಖನೀಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್ ಸೂಚನೆ
Dandeli: ಸಾರಿಗೆ ಬಸ್ಸಿನಲ್ಲೇ ಪ್ರಯಾಣಿಕನಿಗೆ ಹೃದಯಾಘಾತ… ಆಸ್ಪತ್ರೆ ಮಾರ್ಗದಲ್ಲಿ ಮೃತ್ಯು
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Dandeli: ವಕ್ಫ್ ಮಂಡಳಿ ಮತ್ತು ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ಬಿಜೆಪಿಯಿಂದ ಪ್ರತಿಭಟನೆ
Dandeli: ನಗರಸಭೆಯ ಜವಾನನನ್ನು ನಿಂದಿಸಿರುವುದರ ವಿರುದ್ಧ ನಗರ ಸಭೆಯ ಪೌರಾಯುಕ್ತರಿಗೆ ದೂರು
MUST WATCH
ಹೊಸ ಸೇರ್ಪಡೆ
BBK11: ಕ್ಯಾಪ್ಟನ್ ಹನುಮಂತುಗೆ ನಿಯತ್ತಿನ ಪ್ರಶ್ನೆ ಹಾಕಿ, ರೇಗಾಡಿದ ಚೈತ್ರಾ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.