ಸಮುದ್ರ ತೀರದಲ್ಲಿ ತೈಲ ಮಿಶ್ರಿತ ಡಾಂಬರು


Team Udayavani, May 5, 2019, 4:44 PM IST

nc-3

ಅಂಕೋಲಾ: ತಾಲೂಕಿನ ಸಮುದ್ರ ತೀರದಲ್ಲಿ ವಿಷಕಾರಿ ತೈಲ ಮಿಶ್ರಿತ ಡಾಂಬರು ಕಡಲ ದಂಡೆಯುದ್ದಕ್ಕೂ ಶೇಖರಣೆ ಆಗುತ್ತಿದ್ದು, ಇದು ಮೀನುಗಾರರ ನಿದ್ದೆಗೆಡಿಸಿದೆ.

ಬೆಳಂಬಾರ, ನದಿಬಾಗ, ಹೊನ್ನೆಗುಡಿ, ಶೇಡಿಕುಳಿ, ಕೇಣಿ, ಹನಿಬೀಚ್, ಬೇಲೆಕೇರಿ, ಹಾರವಾಡಾ ಭಾಗದ ಸಮುದ್ರ ತೀರಗಳಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸಮುದ್ರ ನೀರಿನಲ್ಲಿ ತೇಲಿ ಬರುವ ಈ ವಿಷಕಾರಿ ಡಾಂಬರು ಶೇಖರಣೆ ಆಗುತ್ತಿರುವುದು ಕಂಡುಬಂದಿದೆ. ಕಳೆದೆರಡು ದಿನಗಳಂದಂತೂ ಈ ಪ್ರಮಾಣ ಏರುಗತಿಯಲ್ಲಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಹಡಗುಗಳಿಂದ ವಿಸರ್ಜಿಸಲಾಗುತ್ತಿರುವ ಎಂಜಿನ್‌ ಆಯಿಲ್ ಕಾರಣವಾಗಿರುವ ಸಾಧ್ಯತೆ ದಟ್ಟವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ನೂರಾರು ದೊಡ್ಡ ಹಡಗುಗಳು ಸಮುದ್ರದಲ್ಲಿ ಸಂಚರಿಸುತ್ತವೆ. ಇತರ ವಾಹನಗಳಂತೆ ಇಂತಿಷ್ಟು ಕಿ.ಮೀ ಓಡಿದ ಮೇಲೆ ಹಡಗುಗಳ ಎಂಜಿನ್‌ ಆಯಿಲ್ಬ ದಲಾಯಿಸಬೇಕಾಗುತ್ತದೆ. ಎಂಜಿನ್‌ ಆಯಿಲ್ ಬದಲಿಸಲು ಬಂದರಿನಲ್ಲಿ ನಿಲ್ಲಿಸಿದರೆ ಶುಲ್ಕ ಕಟ್ಟಬೇಕು. ಹಾಗಾಗಿ ಅವರು ಸಮುದ್ರಕ್ಕೆ ಬಿಡುತ್ತಾರೆ ಎನ್ನುತ್ತಾರೆ.

ಕರಾವಳಿ ತೀರದ ಕೆಲವು ಸಮುದ್ರ ತೀರಗಳಲ್ಲಿಯು ಇಂಥ ಡಾಂಬರು ಉಂಡೆಗಳನ್ನು ಸಮುದ್ರ ಹೊರಹಾಕುತ್ತಿದೆ ಎನ್ನುವ ಮಾಹಿತಿ ಸಿಕ್ಕಿದೆ. ಸಮುದ್ರ ತೀರಗಳಲ್ಲಿ ಕಂಡುಬರುತ್ತಿರುವ ಡಾಂಬರ್‌ಗಳು ಜಲಚರಗಳಿಗೆ ಮಾರಕವಾಗಿದ್ದು ಈ ಬಗ್ಗೆ ಪರಿಸರ ಅಧಿಕಾರಿಗಳು ನಿರ್ಲಕ್ಷಿಸುತ್ತಿದ್ದಾರೆ ಎಂದು ಮೀನುಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಡಲ ತೀರದಲ್ಲೀಗ ಮೀನಿಗೆ ಬರ!
ಸಮುದ್ರ ಕಲುಷಿತಗೊಂಡಿರುವುದರಿಂದ ಈ ಬಾರಿ ಕಡಲ ತೀರದಲ್ಲಿ ಸಾಕಷ್ಟು ಮೀನು ಸಿಗದೆ ಮೀನುಗಾರ ಕುಟುಂಬಗಳು ಸಂಕಷ್ಟದಲ್ಲಿವೆ. ನಾಡದೋಣಿ, ಪರ್ಸೀನ್‌ ಬೋಟುಗಳಿಗೆ ಕಳೆದ 2-3 ತಿಂಗಳಿಂದ ಮೀನು ಸಿಗುತ್ತಿಲ್ಲ. ಪ್ರತಿ ವರ್ಷ ಏಪ್ರಿಲ್-ಮೇ ತಿಂಗಳಲ್ಲಿ ಉತ್ತಮ ಮೀನು ಸಿಗುತ್ತಿತ್ತು. ಬಂಗುಡೆ, ತಾರ್ಲಿ ಸಿಗುತ್ತಿದ್ದವು. ಗುಂಪಾಗಿ ತೆಪ್ಪದಲ್ಲಿ ಬರುವ ಮೀನುಗಳು ಸಿಗುವುದರಿಂದ ಪರ್ಸಿನ್‌ ಬೋಟುಗಳ ಮಾಲೀಕರಿಗೆ ಸಾಕಷ್ಟು ಆದಾಯ ಸಿಗುತ್ತಿತ್ತು. ಆದರೆ ಈ ಬಾರಿ ಮೀನು ಸಿಗದೆ ತೀವ್ರ ಸಂಕಷ್ಟ ಅನುಭವಿಸಬೇಕಾಗಿದೆ.
•ಸುಧಾಕರ ಜಾಂಬಾವಾಳಿಕರ, ಮೀನುಗಾರ ಮುಖಂಡ ಬೇಲೇಕೇರಿ

ಟಾಪ್ ನ್ಯೂಸ್

Delhi Polls: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಕೇಜ್ರಿವಾಲ್‌ ವಿರುದ್ಧ ವರ್ಮಾ

Delhi Polls: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಕೇಜ್ರಿವಾಲ್‌ ವಿರುದ್ಧ ವರ್ಮಾ

Divorce Rumours: ಚಹಾಲ್‌ – ಧನಶ್ರೀ ದಾಂಪತ್ಯದಲ್ಲಿ ಬಿರುಕು? ಶೀಘ್ರದಲ್ಲಿ ವಿಚ್ಛೇದನ?

Divorce Rumours: ಚಹಾಲ್‌ – ಧನಶ್ರೀ ದಾಂಪತ್ಯದಲ್ಲಿ ಬಿರುಕು? ಶೀಘ್ರದಲ್ಲಿ ವಿಚ್ಛೇದನ?

New Delhi; Argument with classmates;

New Delhi; ಸಹಪಾಠಿಗಳೊಂದಿಗೆ ವಾಗ್ವಾದ; 7ನೇ ತರಗತಿ ವಿದ್ಯಾರ್ಥಿಯನ್ನು ಇರಿದು ಹತ್ಯೆ

Thane; Businessman, key witness in criminal case,

Thane; ಕ್ರಿಮಿನಲ್‌ ಕೇಸ್‌ ನ ಮುಖ್ಯ ಸಾಕ್ಷಿ, ಉದ್ಯಮಿಯನ್ನು ಗುಂಡಿಕ್ಕಿ ಹತ್ಯೆ

13-bng

Road Mishap: ಎಚ್ಚರ! ಬೆಂಗ್ಳೂರಲ್ಲಿದೆ 64 ಆಕ್ಸಿಡೆಂಟ್‌ ಡೇಂಜರ್‌ ಸ್ಪಾಟ್‌

12-chowta

Brijesh Chowta: ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾದ ಕ್ಯಾ. ಬ್ರಿಜೇಶ್‌ ಚೌಟ

11-udupi

Udupi: ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ಆರೋಪಿ ಬಂಧನ: 3.25 ಲಕ್ಷ ಮೌಲ್ಯದ MDMA, ಚರಸ್ ವಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

KPTCL: ಕೆಪಿಸಿಗೆ 30 ಸಾವಿರ ಕೋಟಿ ರೂ. ಬಾಕಿ ಸಂಕಷ್ಟ !

KPTCL: ಕೆಪಿಸಿಗೆ 30 ಸಾವಿರ ಕೋಟಿ ರೂ. ಬಾಕಿ ಸಂಕಷ್ಟ !

7-dandeli

Dandeli: ಗಾಂಜಾ ಅಕ್ರಮ ಮಾರಾಟ ಯತ್ನ; ಮಾಲು ಸಹಿತ ಆರೋಪಿಯ ಬಂಧನ

6-honnavara

Honnavar: ಮೂವರು ಯುವಕರ ಬಲಿ ತೆಗೆದುಕೊಂಡ ಭೀಕರ ರಸ್ತೆ ಅಪಘಾತ

5-1

Mundgod: ಹಾವು ಕಡಿದು ಅಂಗನವಾಡಿ ಬಾಲಕಿ ಸಾವು

1-up

Dandeli; ಕುಸಿದು ಬಿದ್ದು ಯುಪಿ ಮೂಲದ ಯುವಕ ಸಾ*ವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Delhi Polls: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಕೇಜ್ರಿವಾಲ್‌ ವಿರುದ್ಧ ವರ್ಮಾ

Delhi Polls: ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಕೇಜ್ರಿವಾಲ್‌ ವಿರುದ್ಧ ವರ್ಮಾ

Divorce Rumours: ಚಹಾಲ್‌ – ಧನಶ್ರೀ ದಾಂಪತ್ಯದಲ್ಲಿ ಬಿರುಕು? ಶೀಘ್ರದಲ್ಲಿ ವಿಚ್ಛೇದನ?

Divorce Rumours: ಚಹಾಲ್‌ – ಧನಶ್ರೀ ದಾಂಪತ್ಯದಲ್ಲಿ ಬಿರುಕು? ಶೀಘ್ರದಲ್ಲಿ ವಿಚ್ಛೇದನ?

14-aranthodu

Aranthodu: ವ್ಯಕ್ತಿಯ ಮೇಲೆ ಕಾಡಾನೆ ದಾಳಿ

kuladalli keelyavudo movie

Sandalwood: ಫಸ್ಟ್‌ಲುಕ್‌ನಲ್ಲಿ”ಕುಲದಲ್ಲಿ ಕೀಳ್ಯಾವುದೋ’

New Delhi; Argument with classmates;

New Delhi; ಸಹಪಾಠಿಗಳೊಂದಿಗೆ ವಾಗ್ವಾದ; 7ನೇ ತರಗತಿ ವಿದ್ಯಾರ್ಥಿಯನ್ನು ಇರಿದು ಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.