ಕಾರವಾರ ಜಿಪಂಗೆ ಶಾಲಿನಾ ಸಿದ್ದಿ ಏಕ್ ದಿನ್ ಕಾ ಸಿಇಒ
Team Udayavani, Jan 30, 2021, 3:21 PM IST
ಕಾರವಾರ: ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ನಿಮಿತ್ತ ಜಿಪಂನಲ್ಲಿ ಹಮ್ಮಿಕೊಂಡ ಕಾರ್ಯಕ್ರಮಕ್ಕೆ ಆಗಮಿಸಿದ್ದ ಕಾಲೇಜು ವಿದ್ಯಾರ್ಥಿಗಳ ಪೈಕಿ ಹಳಿಯಾಳ ಕ್ರೀಡಾಪಟು ಶಾಲಿನಾ ಶಾಯರ್ ಸಿದ್ದಿಗೆ ಒಂದು ದಿನ ಜಿಪಂ ಸಿಇಒ ಆಗಿ ಕೆಲಸ ಮಾಡುವ ಅವಕಾಶ ಅಚಾನಕ್ ಆಗಿ ದಕ್ಕಿತು.
ಇದು ಯುವತಿಯರಲ್ಲಿ ಆತ್ಮವಿಶ್ವಾಸ ಹಾಗೂ ದೃಢತೆ ತುಂಬಲು ಸಹಾಯವಾಯಿತು. ಐಎಎಸ್ ಅಧಿಕಾರಿ, ಜಿಪಂ ಸಿಇಒ ಪ್ರಿಯಂಕಾ ಅವರು ಈ ಅವಕಾಶವನ್ನು ಸಿದ್ದಿ ಸಮುದಾಯದ ಯುವತಿಗೆ ಕಲ್ಪಿಸಿದರು. ಪ್ರಿಯಂಕಾ ಅವರು ತಮ್ಮ ಕಾರ್ಯನಿರ್ವಹಣೆ ಕುರ್ಚಿ ಮೇಲೆ ಶಾಲಿನಾ ಸಿದ್ದಿ ಕುಳ್ಳಿರಿಸಿ, ಜಿಪಂ ಕಾರ್ಯನಿರ್ವಹಣೆಯನ್ನು ಕಲಿಸಿದರು.
ಯುವತಿಯರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರು. ಪ್ರತಿವರ್ಷ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ನಿಮಿತ್ತ ವಿದ್ಯಾರ್ಥಿನಿಯರನ್ನು ಆಹ್ವಾನಿಸಿ, ಜಿಪಂ ಕಾರ್ಯನಿರ್ವಹಣೆ ಹೇಳಿಕೊಡುವುದಾಗಿ ಪ್ರಕಟಿಸಿದರು. ಇದು ಲಿಂಗ ಅಸಮಾನತೆ ಹೋಗಲಾಡಿಸುವ ಪ್ರಕ್ರಿಯೆ ಎಂದರು. ಪುರುಷರಿಗಿಂತ ಮಹಿಳೆಯರು ಕಡಿಮೆಯಲ್ಲ. ಅವರು ಎಲ್ಲಾ ರೀತಿಯಿಂದ ಸಮಾನರು. ಜಾತಿ ಮತ್ತು ಲಿಂಗಕ್ಕಿಂತ ಮನುಷ್ಯತ್ವ, ಪ್ರತಿಭೆ ಹಾಗೂ ಕಾರ್ಯಕ್ಷಮತೆ ಮುಖ್ಯ. ಆತ್ಮವಿಶ್ವಾಸ ತುಂಬುವ ಘಟನೆಯಾಗಿ ಇತಿಹಾಸದಲ್ಲಿ ದಾಖಲಾಯಿತು.
ಇದನ್ನೂ ಓದಿ:ಬೆಳೆ ಹಾನಿ ಪರಿಹಾರಕ್ಕೆ ಆಗ್ರಹಿಸಿ ಮನವಿ
ಸರ್ಕಾರಿ ಪದವಿ ಕಾಲೇಜು ವಿದ್ಯಾರ್ಥಿನಿಯರನ್ನು ಜಿಪಂನ ವಿವಿಧ ಶಾಖೆಗಳಿಗೆ ಕರೆದೊಯ್ದು ಮಹಿಳೆಯರು ಹೇಗೆ ಸಮರ್ಥವಾಗಿ ಕೆಲಸ ಮಾಡಲು ಸಾಧ್ಯ ಎಂದು ತೋರಿಸಲಾಯಿತು. ಕಲಿಕೆ ಜೀವನದಲ್ಲಿ ಎಷ್ಟು ಮುಖ್ಯ ಎಂಬುದನ್ನು ಅಕ್ಷರಶಃ ಸಿಇಒ ವಿದ್ಯಾರ್ಥಿನಿಯರಿಗೆ ವಿವರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೆಳೆವಿಮೆ ಸಿಗದೆ ಕೃಷಿಕರ ಪರದಾಟ: ಅಡಕೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸದ ಸರ್ಕಾರ
Belekeri Mining Case: ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಜೈಲು ಶಿಕ್ಷೆಗೆ ಹೈಕೋರ್ಟ್ ತಡೆ
ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಹೊತ್ತಿ ಉರಿದ ಲಾರಿ… ಅಪಾರ ಪ್ರಮಾಣದ ಸೊತ್ತು ಬೆಂಕಿಗಾಹುತಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.