ಕಟ್ಟಿಗೆ, ಬಟ್ಟೆಗೆ ಹೊಸ ರೂಪ ಕೊಟ್ಟ  ಕೈದಿಗಳು


Team Udayavani, Nov 19, 2018, 5:29 PM IST

19-november-23.gif

ಬೆಳಗಾವಿ: ಸಿಟ್ಟಿನ ಕೈಯಲ್ಲಿ ಬುದ್ಧಿ ಕೊಟ್ಟು ಅಪರಾಧವೆಸಗಿ ಪ್ರಾಯಶ್ಚಿತ ಪಟ್ಟು ನಾಲ್ಕು ಗೋಡೆಗಳ ಮಧ್ಯೆ ಬದುಕು ದೂಡುವ ಜೈಲು ಬಂಧಿಗಳು ಈಗ ಕತ್ತಲಿನಾಚೆ ಬದುಕು ರೂಪಿಸಿಕೊಳ್ಳುತ್ತಿದ್ದು, ಜೈಲಿನಲ್ಲಿದ್ದುಕೊಂಡೇ ತಮ್ಮ ಕಲಾ ಕೈಚಳಕದಲ್ಲಿ ಕಟ್ಟಿಗೆ ಹಾಗೂ ಬಟ್ಟೆಗೆ ರೂಪ ಕೊಟ್ಟು ಮಾರುಕಟ್ಟೆಯಲ್ಲಿ ತಮ್ಮ ಛಾಪು ಮೂಡಿಸುತ್ತಿದ್ದಾರೆ.

ಸುಮಾರು 95 ವರ್ಷಗಳ ಇತಿಹಾಸ ಹೊಂದಿರುವ ಬ್ರಿಟಿಷರ ಕಾಲದ ಹಿಂಡಲಗಾ ಜೈಲು ಈಗ ಕಲಾಕೌಶಲದತ್ತ ಮುಖ ಮಾಡಿದೆ. ಕಸದಿಂದಲೇ ರಸ ಮಾಡುತ್ತ ತಮ್ಮ ಪ್ರತಿಭೆ ಮೂಲಕ ಇಲ್ಲಿಯ ಜೈಲು ಬಂಧಿಗಳ ವಿನೂತನ ಶೈಲಿಯ ಬದುಕು ಇತರರಿಗೆ ಮಾದರಿಯಾಗಿದೆ. ಬ್ರಿಟಿಷರ ಕಾಲದಿಂದಲೂ ಇಲ್ಲಿಯ ಕೈದಿಗಳು ಒಂದಲ್ಲ ಒಂದು ಕೆಲಸ ಮಾಡುತ್ತ ತಮ್ಮನ್ನು ತಾವು ರೂಪಿಸಿಕೊಂಡು ಮನಪರಿವರ್ತನೆಯತ್ತ ಹೆಜ್ಜೆ ಹಾಕುತ್ತಿದ್ದಾರೆ. ಕೈದಿಗಳು ಒಂದೆಡೆ ಕಟ್ಟಿಗೆ ಪೀಠೊಪಕರಣ ತಯಾರಿಸಿದರೆ, ಇನ್ನೊಂದೆಡೆ ವಿವಿಧ ತರಹದ ಬಟ್ಟೆಗಳನ್ನು ಹೊಲೆಯುವುದರಲ್ಲಿ ಮಗ್ನರಾಗಿದ್ದಾರೆ.

ಕೈದಿಗಳ ಕಲಾಕೌಶಲಕ್ಕೆ ಹೆಚ್ಚಿದ ಬೇಡಿಕೆ: ಕೆಟ್ಟ ಘಳಿಗೆಯಲ್ಲಿ ಮಾಡಿದ ತಪ್ಪಿಗೆ ಬಂಧಿಯಾಗಿರುವ ಹಿಂಡಲಗಾ ಜೈಲಿನ ಅನೇಕರು ವಿವಿಧ ಕಲಾ ಕೌಶಲಗಳಿಂದ ಗುರುತಿಸಿಕೊಂಡಿದ್ದಾರೆ. ಮರಗೆಲಸ ಮಾಡಿ ನಾವೀಣ್ಯ ರೂಪದ ಪೀಠೊಪಕರಣಗಳನ್ನು ತಯಾರಿಸುವ ರಾಜ್ಯದ ಏಕಮೇವ ಜೈಲು ಇದಾಗಿದೆ. ನಿತ್ಯ ಬೆಳಗ್ಗೆ 7:30ರಿಂದ ಆರಂಭವಾಗುವ ಇವರ ಕೆಲಸ ಸಂಜೆವರೆಗೂ ದುಡಿಯುತ್ತಾರೆ. ಇವರು ತಯಾರಿಸಿದ ವಸ್ತುಗಳಿಗೆ ಬೇಡಿಕೆ ಹೆಚ್ಚಾಗುತ್ತಿದ್ದು, ಸರಕಾರಿ ಹಾಗೂ ಖಾಸಗಿ ವಲಯದಿಂದಲೂ ಆರ್ಡರ್‌ಗಳು ಬರುತ್ತಿರುವುದು ಕೆಲಸಗಾರರಲ್ಲಿ ಮತ್ತಷ್ಟು ಸಂತಸ ಮೂಡಿಸಿದೆ.

ಕೈಚಳಕದಲ್ಲಿ ಮೂಡಿದ ಕಲೆ: ವಿಶಾಲವಾದ ಜೈಲಿನ ಆವರಣದ ಮೂಲೆಯಲ್ಲಿರುವ 20 x80 ಅಡಿಯ ಕೊಠಡಿಯಲ್ಲಿ ಸುಮಾರು 10 ಜನ ಪರಿಣಿತ ಕೈದಿಗಳು ಮರಗೆಲಸದಲ್ಲಿ ತೊಡಗಿಕೊಂಡಿದ್ದಾರೆ. ಕೆಲವೊಂದಕ್ಕೆ ಮಾತ್ರ ಯಂತ್ರಗಳ ಸಹಾಯ ಪಡೆದುಕೊಂಡರೆ ಇನ್ನುಳಿದಂತೆ ಕೈಚಳಕದಲ್ಲಿಯೇ ವಿವಿಧ ನಮೂನೆಯ ವಸ್ತುಗಳನ್ನು ತಯಾರಿಸುತ್ತಿದ್ದಾರೆ. ಟೇಬಲ್‌, ಕುರ್ಚಿ, ಮಂಚ, ಕಂಪ್ಯೂಟರ್‌ ಟೇಬಲ್‌, ಶೋ ಕೇಸ್‌, ಸೋಪಾ ಸೆಟ್‌, ಬಾಕ್‌, ಡಯಾಸ್‌, ಪ್ಲೈವುಡ್‌ನ‌ಲ್ಲಿ ತಯಾರಿಸುವ ಪೀಠೊಪಕರಣ ಸೇರಿದಂತೆ ಎಲ್ಲ ವಸ್ತುಗಳು ಜೈಲಿನಲ್ಲೇ ತಯಾರಾಗುತ್ತಿವೆ.

ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವಿದ್ಯಾರ್ಥಿಗಳ ಹಾಸ್ಟೆಲ್‌ಗೆ ಅಗತ್ಯ ಇರುವ 70 ಮಂಚಗಳನ್ನು ತಯಾರಿಸಲಾಗಿದೆ. ಸದ್ಯ 35 ಬೆಡ್‌ ನೀಡಲಾಗಿದ್ದು, ಇನ್ನೂ 35 ಬೆಡ್‌ಗಳ ತಯಾರಿಕೆ ಕಾರ್ಯದಲ್ಲಿ ಕೈದಿಗಳು ನಡೆಸಿದ್ದಾರೆ. ಇದಕ್ಕೂ ಮುನ್ನ ಸರಕಾರಿ ವಲಯದ ಬಹುತೇಕ ಕಚೇರಿಗಳಿಗೆ ಇಲ್ಲಿಂದಲೇ ಪೀಠೊಪಕರಣ ಪೂರೈಸಲಾಗುತ್ತಿದ್ದು, ಕೋರ್ಟ್‌, ಶಾಲಾ-ಕಾಲೇಜುಗಳಿಗೆ ಅಗತ್ಯ ಇರುವ ವಸ್ತುಗಳನ್ನೂ ಸರಬರಾಜು ಮಾಡಲಾಗಿದೆ.

ಸಮವಸ್ತ್ರಗಳ ತಯಾರಿಕೆಗೂ ಸೈ: ಸುಮಾರು 40 ಹೊಲಿಗೆ ಯಂತ್ರಗಳನ್ನು ಇಟ್ಟುಕೊಂಡು ನೂರಾರು ಬಟ್ಟೆಗಳು, ಸಮವಸ್ತ್ರಗಳನ್ನು ತಯಾರಿಸುವ ಇಲ್ಲಿನ ಕೈದಿಗಳು ವೃತ್ತಿಪರರಂತೆ ಕೆಲಸ ಮಾಡುತ್ತಿದ್ದಾರೆ. 17 ಜನ ಕೈದಿಗಳು ಹೊಲಿಗೆ ಯಂತ್ರದ ಮೇಲೆ ಕೆಲಸ ನಿರ್ವಹಿಸುತ್ತಿದ್ದು, ಇದರಲ್ಲಿ ಮೂವರು ವೃತ್ತಿಪರರಾಗಿದ್ದಾರೆ. ವಿವಿಧೆಡೆ ಅಗತ್ಯ ಇರುವ ಬಟ್ಟೆಗಳನ್ನು ಹೊಲೆದು ಕೊಡುವುದೇ ಇವರ ಕಾಯಕ.

ಬೆಳಗ್ಗೆ 7 ಗಂಟೆಯಿಂದ ಆರಂಭವಾಗುವ ಇವರ ಕಾಯಕ ಸಂಜೆ 6:30ರ ವರೆಗೂ ನಡೆಯುತ್ತದೆ. ಸದ್ಯ ಗೃಹ ಇಲಾಖೆ ಸಿಬ್ಬಂದಿಗೆ ಬೇಕಾಗುವ 1358 ಸಮವಸ್ತ್ರಗಳ ಬೇಡಿಕೆ ಬಂದಿದ್ದು, ಈಗ 250 ಸಮವಸ್ತ್ರಗಳನ್ನು ತಯಾರಿಸಿದ್ದಾರೆ. ಜತೆಗೆ ವಿವಿಧ ಶಾಲೆಗಳ ಸಮವಸ್ತ್ರಗಳನ್ನೂ ಕೈದಿಗಳೇ ಹೊಲೆಯುತ್ತಾರೆ. ಜೊತೆಗೆ ತಮ್ಮ ಕೈದಿಗಳ ಬಿಳಿ ಬಣ್ಣದ ಸಮವಸ್ತ್ರಗಳು, ಜೈಲಿನ ಅಧಿಕಾರಿಗಳು, ಸಿಬ್ಬಂದಿಗಳ ಸಮವಸ್ತ್ರಗಳೂ ಇವರೇ ಹೊಲೆಯುತ್ತಾರೆ.

ಈಗ ಜೈಲಿನ ಮುಖ್ಯ ಅಧೀಕ್ಷಕ ಟಿ.ಪಿ. ಶೇಷ ಅವರ ವಿಶೇಷ ಪ್ರಯತ್ನದಿಂದ ಗುಡಿ ಕೈಗಾರಿಕೆಗೆ ಉತ್ತೇಜನ ನೀಡಲಾಗುತ್ತಿದೆ. ಹೀಗಾಗಿ ಕೈದಿಗಳೂ ಸ್ವ ಆಸಕ್ತಿಯಿಂದ ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಅರಣ್ಯ ಇಲಾಖೆಯಿಂದ ಸಿಗುವ ಕಟ್ಟಿಗೆಗಳಿಂದಲೇ ವಿವಿಧ ನಮೂನೆಯ ಪೀಠೊಪಕರಣಗಳನ್ನು ನಿರ್ಮಿಸಲಾಗುತ್ತಿದೆ. ಮಾರುಕಟ್ಟೆಯಲ್ಲಿ ಲಭ್ಯವಾಗುವ ವಸ್ತುಗಳಿಗಿಂತಲೂ ನಮ್ಮ ಜೈಲು ಬಂಧಿಗಳು ತಯಾರಿಸುವ ವಸ್ತುಗಳು ಗುಣಮಟ್ಟದ್ದಾಗಿವೆ. ಯಾವುದನ್ನೂ ಕಳಪೆ ಮಟ್ಟದಲ್ಲಿ ತಯಾರಿಸುವುದಿಲ್ಲ ಎನ್ನುತ್ತಾರೆ ಜೈಲು ಅಧೀಕ್ಷಕ ಟಿ.ಪಿ. ಶೇಷ.

ಜೈಲಿನ ಬಟ್ಟೆ ಬೇರೆ ಜಿಲ್ಲೆಗೂ ಪೂರೈಕೆ
ಹಿಂಡಲಗಾ ಜೈಲಿನಲ್ಲಿ ಕೈದಿಗಳು ಹೊಲೆಯುವ ಸಮವಸ್ತ್ರಗಳು ಬೇರೆ ಬೇರೆ ಜಿಲ್ಲೆಗಳಿಗೂ ಕಳುಹಿಸಲಾಗುತ್ತದೆ. ಬೆಳಗಾವಿಯಂತೆ ಬೇರೆ ಜಿಲ್ಲೆಗಳಲ್ಲಿರುವ ಜೈಲಿನಲ್ಲಿ ಕೈದಿಗಳು ಹೊಲೆಗೆ ಕೆಲಸ ಮಾಡುವುದಿಲ್ಲ. ಧಾರವಾಡ, ವಿಜಯಪುರ, ಬಾಗಲಕೋಟೆಗೂ ಸಮವಸ್ತ್ರಗಳನ್ನು ಕಳುಹಿಸಲಾಗುತ್ತಿದೆ. ಬೆಂಗಳೂರು, ಮೈಸೂರು, ಬಳ್ಳಾರಿ ಹಾಗೂ ಬೆಳಗಾವಿ ಜೈಲುಗಳಲ್ಲಿ ಮಾತ್ರ ಬಟ್ಟೆ ಹೊಲೆಯಾಗುತ್ತಿದೆ. 

ಗುಡಿ ಕೈಗಾರಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಹಿಂಡಲಗಾ ಜೈಲಿನ ಬಂಧಿಗಳು ವಿನೂತನ ಬದುಕಿನತ್ತ ಹೆಜ್ಜೆ ಹಾಕುತ್ತಿದ್ದಾರೆ. ತಮ್ಮ ಕಲಾ ಕೌಶಲದಿಂದ ಕಟ್ಟಿಗೆಯಲ್ಲಿ ವಿವಿಧ ನಮೂನೆಯ ಪೀಠೊಪಕರಣಗಳನ್ನು ತಯಾರಿಸುವ ಮೂಲಕ ತಮ್ಮ ಜೀವನ ರೂಪಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಬಟ್ಟೆ, ಸಮವಸ್ತ್ರ ಹೊಲೆಯುವುದರಲ್ಲೂ ಮಗ್ನರಾಗಿದ್ದಾರೆ. ಇದರಿಂದ ಜೈಲು ಬಂಧಿಗಳು ಮಾನಸಿಕವಾಗಿ ಸಿದ್ಧಗೊಳ್ಳುವುದರ ಜೊತೆಗೆ ಸನ್ನಡತೆಯ ಪಟ್ಟವೂ ಸಿಗುತ್ತದೆ. ಮುಂದೆ ಕಲಾಕೌಶಲ ಹಾಗೂ ಸ್ವಾವಲಂಬಿ ಬದುಕು ಸಾಗಿಸಬಹುದಾಗಿದೆ.
 ಟಿ.ಪಿ. ಶೇಷ, ಮುಖ್ಯ ಅಧೀಕ್ಷಕರು, ಹಿಂಡಲಗಾ ಜೈಲು

ಬೈರೋಬಾ ಕಾಂಬಳೆ

ಟಾಪ್ ನ್ಯೂಸ್

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-dandeli

Dandeli:ತುಂಡಾಗಿ ಬಿದ್ದಿದ್ದ ಕೇಬಲ್ ವೈರ್ ಸುತ್ತಿ ದ್ವಿಚಕ್ರ ವಾಹನ ಸ್ಕಿಡ್: ಸವಾರನಿಗೆ ಗಾಯ

1-dandeli

Dandeli; ಆತ್ಮಹ*ತ್ಯೆಗೆ ಯತ್ನಿಸಿದ ವೃದ್ಧನ ರಕ್ಷಣೆ

10

Dandeli: ಅಂಬೇವಾಡಿಯ ಬಿಸಿಎಂ ವಸತಿ ನಿಲಯದಲ್ಲಿ ವಿದ್ಯಾರ್ಥಿ ಸಾವು

7-

Dandeli: ವಿವಾಹಿತ ವ್ಯಕ್ತಿ ಆತ್ಮಹತ್ಯೆ

Yellapur: ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಲಾರಿ; ಪ್ರಾಣಾಪಾಯದಿಂದ ಪಾರು…!

Yellapur: ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಲಾರಿ; ಪ್ರಾಣಾಪಾಯದಿಂದ ಪಾರು…!

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.