ಬೇಡ್ತಿ -ಶಾಲ್ಮಲಾ ನದಿ ತಿರುವು ಯೋಜನೆಗೆ ತೀವ್ರ ವಿರೋಧ
ಶಾಲ್ಮಲಾ-ಬೇಡ್ತಿ ನದಿಗಳಿಗೆ ಅಣೆಕಟ್ಟು ನಿರ್ಮಾಣ ಬಡ ; ಮಂಚಿಕೇರಿ ಸಮಾವೇಶದ ಪೂರ್ವಭಾವಿ ಅಭಿಯಾನ
Team Udayavani, Jun 13, 2022, 12:53 PM IST
ಶಿರಸಿ: ಬೇಡ್ತಿ ಕಣಿವೆ ಸಂರಕ್ಷಣೆ ಅಭಿಯಾನದ ಹಿನ್ನಲೆಯಲ್ಲಿ ತಾಲೂಕಿನ ತಟ್ಟಿàಸರ, ಸಾಲ್ಕಣಿ, ವಾನಳ್ಳಿ, ಜಡ್ಡಿಗದ್ದೆ ಪ್ರದೇಶದಲ್ಲಿ ಬೇಡ್ತಿ ಸಭೆಗಳು ನಡೆದವು. ಓಣಿಕೆರೆ ತಟ್ಟಿàಸರ ಸಹಕಾರ ಸಂಘದ ಸಭಾಭವನದಲ್ಲಿ ನಡೆದ ಬೇಡ್ತಿ ಜಾಗೃತಿ ಸಭೆ ಪಟ್ಟಣದ ಹೊಳೆ ಶಾಲ್ಮಲಾ-ಬೇಡ್ತಿ ನದಿಗಳಿಗೆ ಅಣೆಕಟ್ಟು ನಿರ್ಮಾಣ, ನದಿ ತಿರುವ ಯೊಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿತು.
ಬೇಡ್ತಿ ಸಮಿತಿ ಅಧ್ಯಕ್ಷ ವಿ.ಎನ್. ಹೆಗಡೆ ಬೊಮ್ಮನಳ್ಳಿ, ಮಂಚಿಕೇರಿಯ ಜೂ.14ರ ಸಮಾವೇಶದ ಹಿನ್ನೆಲೆಯಲ್ಲಿ ಈ ಅಭಿಯಾನ ನಡೆಯುತ್ತಿದೆ ಎಂದರು. ಸಹಕಾರಿ ಸಂಘದ ಉಪಾಧ್ಯಕ್ಷ ಎಂ.ಎನ್. ಹೆಗಡೆ ಪಟ್ಟಣದ ಹೊಳೆ ಯೋಜನೆಯನ್ನು ತಡೆಗಟ್ಟಲೇಬೇಕು ಎಂದರು.
ಹಿರಿಯ ಸಹಕಾರಿ ಧುರೀಣ ಜಿ.ಟಿ. ಹೆಗಡೆ ತಟ್ಟಿàಸರ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂದಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಿದ್ದೇವೆ ಎಂದು ಪಂಚಾಯತ್ ಸದಸ್ಯ ಜಿ.ವಿ. ಹೆಗಡೆ ತಿಳಿಸಿದರು.
ಗ್ರಾಪಂ ಅಧ್ಯಕ್ಷರು, ಸಹಕಾರಿ ಸಂಘದ ಅಧ್ಯಕ್ಷರು, ಸದಸ್ಯರು, ರೈತರು ಭಾಗವಹಿಸಿದ್ದರು. ವಾನಳ್ಳಿಯಲ್ಲಿ ನಡೆದ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ಶಾಂತಾರಾಂ ಸಿದ್ಧಿ ಪಾಲ್ಗೊಂಡು ವನವಾಸಿಗಳನ್ನು ಅತಂತ್ರವಾಗಿಸುವ ಅರಣ್ಯನಾಶಿ ಯೋಜನೆ ಬೇಡ್ತಿ -ವರದಾ ಯೋಜನೆ ಎಂಬ ಅಂಶ ದಿಗಿಲು ಹುಟ್ಟಿಸುತ್ತದೆ. ಜನತೆ ಧ್ವನಿ ಎತ್ತಬೇಕು. ಜಿಲ್ಲೆಯ ಜನಪ್ರತಿನಿಧಿಗಳು ಪಕ್ಷ ಭೇದ ಮರೆತು ಬೇಡ್ತಿ ಕಣಿವೆ ಸಂರಕ್ಷಣೆಗೆ ಮುಂದಾಗಬೇಕು ಎಂದು ಕರೆ ನೀಡಿದರು.
ಬೇಡ್ತಿ ಸಮಿತಿ ಪ್ರಧಾನ ಕಾರ್ಯದರ್ಶಿ ಅನಂತ ಹೆಗಡೆ ಅಶೀಸರ ವಾನಳ್ಳಿ, ಜಡ್ಡಿಗದ್ದೆ ಪ್ರದೇಶದ ಜನತೆಯ ಹೋರಾಟದಿಂದಲೇ ಗಣೇಶಪಾಲ್ ಅಣೆಕಟ್ಟು ಮುಳುಗಡೆ ಯೋಜನೆಗೆ ತಡೆಬಿದ್ದಿದೆ. ಪುನಃ ಬೇಡ್ತಿ ಶಾಲ್ಮಲಾ ಕಣಿವೆ ಉಳಿಸಿ ಹೋರಾಟ ಶುರು ಆಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಹಕಾರಿ ಧುರೀಣ ವಿ.ಆರ್. ಹೆಗಡೆ ಮಣ್ಮನೆ ಸ್ವರ್ಣವಲ್ಲೀ ಶ್ರೀಗಳ ಕರೆಗೆ ಓಗೂಟ್ಟು ಮಂಚಿಕೆರೆಗೆ ಹೋಗಲು ತಯಾರಿ ಮಾಡೋಣ ಎಂದು ಕರೆ ನೀಡಿದರು.
ಜಡ್ಡಿಗದ್ದೆ, ವಾನಳ್ಳಿ ಭಾಗದ ಪಂಚಾಯತ ಅಧ್ಯಕ್ಷರು, ಸದಸ್ಯರು, ಸಹಕಾರಿ ಸಂಘದ ಸದಸ್ಯರು, ಮಹಿಳೆಯರು ಸೇರಿ ನೂರಾರು ರೈತರು ಪಾಲ್ಗೊಂಡಿದ್ದರು.
ಸ್ವರ್ಣವಲ್ಲೀ ಮಠದ ಅಧ್ಯಕ್ಷ ವಿ.ಎನ್. ಹೆಗಡೆ ಬೊಮ್ಮನಳ್ಳಿ ಪ್ರಾಸ್ತಾವಿಕ ಮಾತನಾಡಿದರು. ಯಲ್ಲಾಪುರ, ಉಮ್ಮಚ್ಚಿಗಿ, ಕುಂದರಗಿಯಲ್ಲಿ ಜಾಗೃತ ಸಭೆಗಳು ನಡೆದಿವೆ. ಮಂಚಿಕೇರಿ ಸಹಕಾರಿ ಸಂಘದಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ಆರ್.ಎನ್. ಹೆಗಡೆ ಗೋರ್ಸಗದ್ದೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷ ಪುರಂದರ, ಸದಸ್ಯ ಎಂ.ಕೆ. ಭಟ್, ಸಮಾವೇಶದ ಸಂಚಾಲಕ ಶ್ರೀಪಾದ ಶಿರನಾಲಾ ಮುಂತಾದವರು ಇದ್ದರು.
ಬೇಡ್ತಿ ಸಮಿತಿ ಮುಖಂಡರು ಆಗಮಿಸಿದ್ದರು. ಮುಂಡಗೋಡ, ಯಲ್ಲಾಪುರ ತಾಲೂಕಿನ ಹುಣಶೆಟ್ಟಿಕೊಪ್ಪ, ಕಾತೂರು, ಮೈನಳ್ಳಿ ಮದನೂರು, ಗುಂಜಾವತಿ ಮುಂತಾದ ಪಂಚಾಯತಗಳ ಪ್ರದೇಶಕ್ಕೆ ಶ್ರೀಪಾದ ಶಿರನಾಲಾ ಹಾಗೂ ತಂಡ ಭೇಟಿ ನೀಡಿ ಪಂಚಾಯತ ಸದಸ್ಯರು, ಗ್ರಾಮ ಮುಖಂಡರ ಜೊತೆ ಸಂವಾದ ನಡೆಸಿದೆ ಎಂದು ಬೇಡ್ತಿ ಸಮಿತಿ ನಾರಾಯಣ ಗಡೀಕೈ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಯಲ್ಲಾಪುರ ಬಳಿ ಭೀಕರ ಅಪಘಾತ: ಪ್ರಧಾನಿ ಮೋದಿ ಸಂತಾಪ, ಕೇಂದ್ರ ಸರಕಾರದಿಂದ ಪರಿಹಾರ ಘೋಷಣೆ
Yellapur; ಹೆದ್ದಾರಿಯಲ್ಲಿ ಭೀಕರ ಅಪಘಾ*ತ:10 ಮಂದಿ ದಾರುಣ ಸಾ*ವು
Ankola: 10 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿ ಸೆರೆ
ತಡರಾತ್ರಿ ಸಾರ್ವಜನಿಕ ಸ್ಥಳಗಳಲ್ಲಿ ಹರಟೆ ಹೊಡೆಯುತ್ತಿದ್ದ ಯುವಕರ ಚಳಿ ಬಿಡಿಸಿದ ಪೊಲೀಸರು
Dandeli: ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದವರಿಗೆ ಖಡಕ್ ಎಚ್ಚರಿಕೆ ನೀಡಿದ ಡಿವೈಎಸ್ಪಿ