ಸಾವಯವ ಔಷಧೀಯ ಸಸ್ಯ ಕೃಷಿ


Team Udayavani, May 14, 2019, 3:55 PM IST

nc-2

ಕುಮಟಾ: ಪರಿಸರ ಸಂರಕ್ಷಿಸಿ, ಗಿಡ ಬೆಳೆಸಿ, ಪರಿಸರ ಉಳಿಸಿ ಹೀಗೆ ಎಲ್ಲರೂ ಉಪದೇಶ ಮಾಡುವವರ ಸಂಖ್ಯೆ ಅಧಿಕವಾಗಿದೆ. ಆದರೆ ಉಪದೇಶ ಮಾಡುವವರೆಲ್ಲ ಗಿಡ ನೆಡುವುದೂ ಇಲ್ಲ, ಅರಣ್ಯ ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದೂ ಇಲ್ಲ. ಎಲ್ಲೋ ಕೆಲವರು ತಮ್ಮ ಮಾತಿನಂತೆ ಕೃತಿಗಿಳಿಯುತ್ತಾರೆ. ಅಂತವರು ಸಮಾಜಕ್ಕೆ ತಮ್ಮ ಸಾಧನೆಗಳ ಮೂಲಕವೇ ಆದರ್ಶರಾಗುತ್ತಾರೆ. ಅಂತವರಲ್ಲಿ ತಾಲೂಕಿನ ಕಲ್ಲಬ್ಬೆಯ ರಾಮಚಂದ್ರ ಭಟ್ಟ ಹೆಬ್ಳೇಕೇರಿ ಒಬ್ಬರು.

ಇಂದಿನ ದಿನಗಳಲ್ಲಿ ಹಲವು ಔಷಧೀಯ ಗಿಡ, ಮರಗಳು ಅವನತಿಯಲ್ಲಿವೆ. ಇನ್ನು ಕೆಲವು ಸಸ್ಯಗಳ ಉಪಯೋಗವೇ ಇಂದಿನ ಕೆಲವರಿಗೆ ಗೊತ್ತಿಲ್ಲ. ಅಂತಹ ಔಷಧೀಯ ಗಿಡ ಮರಗಳ ಜೊತೆಗೆ ಹಲವು ಅಮೂಲ್ಯವಾದ ಸಸ್ಯ ಸಂಪತ್ತನ್ನು ತಮ್ಮ 2.3 ಎಕರೆ ಜಮೀನಿನಲ್ಲಿ ಬೆಳೆಸಿ, ಅವುಗಳನ್ನು ಮುಂದಿನ ಪೀಳಿಗೆಗೆ ಕಾದಿಡುವ ಉದ್ದೇಶದಿಂದ ಅವರು ಕಾರ್ಯಪ್ರವ್ರತ್ತರಾಗಿದ್ದಾರೆ.

ಅರಣ್ಯ ಇಲಾಖೆ ಸಹಯೋಗದಲ್ಲಿ ಔಷಧಿ ಗಿಡಗಳನ್ನು ಹಾಗೂ ಅರಣ್ಯದಲ್ಲಿ ಬೆಳೆಯುವ ಗಿಡಗಳನ್ನು ತಂದು ಸತತ 6-7 ವರ್ಷದ ಪರಿಶ್ರಮದಿಂದ ತಮ್ಮ ಜಾಗದಲ್ಲಿ ಬೆಳೆಸುತ್ತಿದ್ದಾರೆ. ರಾಸಾಯನಿಕ ಗೊಬ್ಬರಗಳನ್ನು ಬಳಸದೇ ಕೇವಲ ಸಗಣಿಗೊಬ್ಬರವನ್ನು ಹಾಕಲಾಗಿದೆ. ಸಾವಯವ ಗೊಬ್ಬರಗಳನ್ನು ಬಳಸುವುದರಿಂದ ಗಿಡಗಳಿಗೆ ರೋಗಗಳ ಭೀತಿ ಎದುರಾಗುವುದಿಲ್ಲ. ವರ್ಷಕ್ಕೆ ಒಂದು ಸಲ ಗೊಬ್ಬರ ಹಾಕಿ ಗಿಡಗಳ ಬುಡಕ್ಕೆ ಮಣ್ಣು ಹಾಕಿದರೆ ತಾನಾಗಿಯೇ ಬೆಳೆಯುತ್ತದೆ. ರೈತರು ಮತ್ಯಾವುದೇ ಹಣ ವ್ಯಯಸುವ ಅವಶ್ಯಕತೆ ಇಲ್ಲವೆನ್ನುತ್ತಾರೆ ರಾಮಚಂದ್ರ ಭಟ್ಟ. ಬೇಸಿಗೆಯಲ್ಲಿ ಮೂರು ವರ್ಷಗಳವರೆಗೆ ಗಿಡಗಳಿಗೆ ನೀರು ಕೊಡಬೇಕಾಗುತ್ತದೆ. 3 ವರ್ಷ ಕಳೆದ ನಂತರ ನೀರು ಕೊಡುವ ಅವಶ್ಯಕತೆಯಿಲ್ಲ.

ಎರಡುಕಾಲು ಎಕರೆ ಜಮೀನಿನಲ್ಲಿ ಅರಣ್ಯದಲ್ಲಿ ಬೆಳೆಯುವ ಮುರುಗಲು, ಮುತ್ತುಗಲ, ಅಂಡಮುರುಗಲು, ಸಿವಣೆ, ಸಾಗವಾನಿ, ಚರಣಿಗೆ, ನಂದಿ, ಹೆಬ್ಬಲಸು ವಾಣೆ, ಮತ್ತಿ, ಬೀಟೆ, ಕೆಂದಾಳ, ಬೆನ್ನುಹೊನ್ನೆ, ಸುರಹೊನ್ನೆ, ಹೊಳೆಮತ್ತಿ, ನೇರಲು, ಗುಳಮಾವು, ಕಾಸಗ, ಸಪ್ಪುಗೊದ್ದಲು, ಹೊಳೆಪಂಸ, ಬಿಲ್ಲಕಂಬಿ, ಬಿಲ್ಲ ಹ್ಯಾಗ ಹಾಗೂ ಔಷಧಿ ಸಸ್ಯಗಳಾದ ಅಂಕೋಲೆ, ಮಾಪ, ಏಕನಾಯಕ, ಅಶೋಕಾ ರಕ್ತಚಂದನ, ಆಪತ್ತಿ ಹಾಗೂ ಸ್ವತಃ ಕಸಿ ಮಾಡಿ ಬೆಳೆಸಿದ ಚಿಕ್ಕು, ಮಾವು ಗೇರು ಸಸಿಗಳನ್ನು ಬೆಳೆಸಲಾಗಿದ್ದು ಕೆಲವು ಹಣ್ಣಿನ ಗಿಡಗಳು ಫಲ ನೀಡುತ್ತಿವೆ.

ನಾವು ಗಿಡ ನೆಟ್ಟು ಬೆಳೆಸಿದರೆ ಮುಂದೆ ಅದೇ ಗಿಡಗಳು ನಮ್ಮನ್ನು ಪೊರೆಯುತ್ತವೆ. ಸಿಗುವ ಹಣ್ಣು ಹಂಪಲುಗಳು ಆರ್ಥಿಕತೆಗೆ ಶಕ್ತಿ ನೀಡುತ್ತವೆ. ಜೊತೆಗೆ ಬೇಸಿಗೆಯಲ್ಲಿ ಸಿಗುವ ದೆರಕೆಲೆಗಳು ತೋಟಕ್ಕೆ ಗೊಬ್ಬರವಾಗುತ್ತದೆ. ಪ್ರತೀದಿನ 2 ತಾಸುಗಳನ್ನು ಈ ಗುಡ್ಡದಂತಹ ಸ್ಥಳದಲ್ಲಿ ಗಿಡಗಳ ಆರೈಕೆಗೆಯಲ್ಲಿ ಕಳೆಯುವದರಿಂದ ಮನಸ್ಸಿಗೆ ನೆಮ್ಮದಿ ಮತ್ತು ಆರೋಗ್ಯವೂ ದೊರೆಯುತ್ತಿದೆ ಎಂದು ನುಡಿಯುವ ರಾಮಚಂದ್ರ ಭಟ್ಟರು ಸೆಲ್ಕೋ ಸೋಲಾರ್‌ ಕಂಪನಿಯಲ್ಲಿ ಇನ್ನುಳಿದ ಸಮಯದಲ್ಲಿ ಉದ್ಯೋಗವನ್ನೂ ಮಾಡುತ್ತಾರೆ.

ಅರಣ್ಯ ಇಲಾಖೆ ಗಿಡಗಳನ್ನು ಒದಗಿಸುವ ಜೊತೆಗೆ ಮೂರು ವರ್ಷಗಳವರೆಗೆ ಗಿಡ ಬೆಳೆಸಲು ಸ್ವಲ್ಪಮಟ್ಟಿನ ಅನುದಾನವನ್ನೂ ನೀಡುತ್ತದೆ. ಹೀಗೆ ಪ್ರತಿಯೊಬ್ಬ ರೈತರು ತಮ್ಮ ಜಮೀನಿನಲ್ಲಿ ಈ ರೀತಿಯ ಸಸಿಗಳನ್ನು ಬೆಳೆಸುವುದರ ಮೂಲಕ ಮುಂದಿನ ಪೀಳಿಗೆಗೆ ಕಾಡಿನಲ್ಲಿ ಬೆಳೆಯುವ ಮರಗಳ ಹಾಗೂ ದಿನನಿತ್ಯ ಬೇಕಾಗುವ ಔಷಧಿ ಸಸ್ಯಗಳನ್ನು ಕಾಯ್ದಿರಿಸುವಿಕೆಯಿಂದ ಆರ್ಥಿಕ ಸದೃಢತೆ ಪಡೆಯುವದರ ಜೊತೆಗೆ ಮುಂದಿನ ಸಮಾಜಕ್ಕೆ ನಮ್ಮ ಕೊಡುಗೆಯನ್ನೂ ನೀಡಿದಂತಾಗುತ್ತದೆ.

ಮುಂದಿನ ಪೀಳಿಗೆಗೆ ಹಲವು ಔಷಧ ಸಸ್ಯಗಳು ಮತ್ತು ಕೆಲವು ವಿಶೇಷ ಜಾತಿಯ ಮರಗಳು ಕಾಣಲೂ ಸಿಗಲಾರದು. ಅದಕ್ಕಾಗಿ ನಾನು ಹಲವು ವಿಶೇಷ ಗಿಡಗಳನ್ನು ನೆಟ್ಟು ಬೆಳೆಸುವ ಯೋಚನೆ ಮಾಡಿದ್ದೇನೆ. ಹಲವು ಪ್ರಬೇಧದ ಗಿಡಗಳು ಮತ್ತು ಅವುಗಳ ಪ್ರಯೋಜನವನ್ನು ಗೊತ್ತಿಲ್ಲದವರಿಗೆ ತಿಳಿಸುವ ಉದ್ದೇಶದಿಂದ ನನ್ನ ಮಾಲಕಿ ಜಮೀನಿನಲ್ಲಿಯೇ ಅರಣ್ಯ ಬೆಳೆಸಿದ್ದೇನೆ. ಇದಕ್ಕೆ ಅರಣ್ಯ ಇಲಾಖೆಯೂ ಉತ್ತಮವಾಗಿ ಸ್ಪಂದಿಸಿದೆ.
•ರಾಮಚಂದ್ರ ಭಟ್ಟ, ಹೆಬ್ಳೇಕೇರಿ

•ಕೆ. ದಿನೇಶ ಗಾಂವ್ಕರ್‌

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

1-aaaaaaa

Karkala: ಕಾಂಗ್ರೆಸ್ ನಾಯಕ ಡಿ. ಅರ್.‌ರಾಜು ನಿಧನ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-dandeli

Dandeli:ತುಂಡಾಗಿ ಬಿದ್ದಿದ್ದ ಕೇಬಲ್ ವೈರ್ ಸುತ್ತಿ ದ್ವಿಚಕ್ರ ವಾಹನ ಸ್ಕಿಡ್: ಸವಾರನಿಗೆ ಗಾಯ

1-dandeli

Dandeli; ಆತ್ಮಹ*ತ್ಯೆಗೆ ಯತ್ನಿಸಿದ ವೃದ್ಧನ ರಕ್ಷಣೆ

10

Dandeli: ಅಂಬೇವಾಡಿಯ ಬಿಸಿಎಂ ವಸತಿ ನಿಲಯದಲ್ಲಿ ವಿದ್ಯಾರ್ಥಿ ಸಾವು

7-

Dandeli: ವಿವಾಹಿತ ವ್ಯಕ್ತಿ ಆತ್ಮಹತ್ಯೆ

Yellapur: ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಲಾರಿ; ಪ್ರಾಣಾಪಾಯದಿಂದ ಪಾರು…!

Yellapur: ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಲಾರಿ; ಪ್ರಾಣಾಪಾಯದಿಂದ ಪಾರು…!

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.