ನಾಗರಬೆಟ್ಟದ ಆಕ್ಸ್‌ಫರ್ಡ್‌ ಪಾಟೀಲ್ಸ್‌ ನೀಟ್‌ ಅಕಾಡೆಮಿ ಅತ್ಯುತ್ತಮ ಸಾಧನೆ

ಉ.ಕ.ದಲ್ಲೇ ನಂ.1 ಸ್ಥಾನ

Team Udayavani, Mar 21, 2022, 11:13 AM IST

5

ಮುದ್ದೇಬಿಹಾಳ: ತಾಲೂಕಿನ ವಿದ್ಯಾಕಾಶಿ ನಾಗರಬೆಟ್ಟ ಗುಡ್ಡದ ಬಳಿಯ ಆಕ್ಸ್‌ಫರ್ಡ್‌ ಪಾಟೀಲ್ಸ್‌ ಸೈನ್ಸ್‌ ಪಿಯು ಕಾಲೇಜಿನಲ್ಲಿರುವ ನೀಟ್‌ ಅಕಾಡೆಮಿ 2021-22ನೇ ಸಾಲಿನ ನೀಟ್‌ ಪರೀಕ್ಷೆಯಲ್ಲಿ ಹೊಸದೊಂದು ಸಾಧನೆ ಮಾಡಿದೆ. ನೀಟ್‌ ಪರೀಕ್ಷೆಗೆ ಹಾಜರಾಗಿದ್ದ 220 ವಿದ್ಯಾರ್ಥಿಗಳ ಪೈಕಿ 141 ವಿದ್ಯಾರ್ಥಿಗಳು ಸಾಧಕರಾಗಿ ಹೊರಹೊಮ್ಮಿ ರಾಜ್ಯದ ಪ್ರತಿಷ್ಠಿತ ಮೆಡಿಕಲ್‌ ಕಾಲೇಜುಗಳಲ್ಲಿ ಎಂಬಿಬಿಎಸ್‌ ಸೇರಿ ವೈದ್ಯಕೀಯ ಪದವಿ ಸೀಟು ಪಡೆದಿದ್ದಾರೆ. ಇದರಿಂದಾಗಿ ಸಂಸ್ಥೆಯು ನೀಟ್‌ ತರಬೇತಿಯಲ್ಲಿ ಉತ್ತರ ಕರ್ನಾಟಕದ ನಂಬರ್‌ ಒನ್‌ ಶಿಕ್ಷಣ ಸಂಸ್ಥೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಈ ವರ್ಷದ ನೀಟ್‌ ಫಲಿತಾಂಶಕ್ಕೂ ಮುನ್ನವೇ 120ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮೆಡಿಕಲ್‌ಗೆ ಅರ್ಹತೆ ಗಳಿಸುವುದಾಗಿ ಸಂಸ್ಥೆಯ ರೂವಾರಿ, ಚೇರಮನ್‌ ಎಂ.ಎಸ್‌.ಪಾಟೀಲ ಅತ್ಯಂತ ಆತ್ಮವಿಶ್ವಾಸದ ಮಾತುಗಳನ್ನಾಡಿದ್ದರು. ಫಲಿತಾಂಶ ಹೊರ ಬಿದ್ದು ಕಾಲೇಜುಗಳ ಸೀಟು ಹಂಚಿಕೆ ಮುಕ್ತಾಯ ಹಂತಕ್ಕೆ ಬಂದಾಗ ಅವರ ಆತ್ಮವಿಶ್ವಾಸ ಇನ್ನೂ ಹೆಚ್ಚಾಗಿರುವುದು ದೃಢಪಟ್ಟು 2022-23ನೇ ಸಾಲಿನಲ್ಲಿ ಇದಕ್ಕೂ ಹೆಚ್ಚು ಸಾಧನೆ ಮಾಡಲು ಪ್ರೇರಣೆ ನೀಡಿದಂತಾಗಿದೆ. ಇದು ಕಾಲೇಜಿನ ಸಾಧನೆಯ ಕಿರೀಟಕ್ಕೆ ಇನ್ನಷ್ಟು ಗರಿಗಳನ್ನು ಸೇರಿಸಿದಂತಾಗಿದೆ. ವರ್ಷದಿಂದ ವರ್ಷಕ್ಕೆ ಪ್ರಗತಿ ಸಾಧಿಸುತ್ತ ಗ್ರಾಮೀಣ ಭಾಗದ ಬಡವರು, ಕೃಷಿಕರ ಮಕ್ಕಳು ವೈದ್ಯರಾಗುವ ಕನಸು ನನಸು ಮಾಡುತ್ತ ಗ್ರಾಮೀಣ ಭಾಗದ ಶೈಕ್ಷಣಿಕ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡುತ್ತ ಮುನ್ನುಗ್ಗುತ್ತಿರುವುದು ಜನಮೆಚ್ಚುಗೆಗೆ ಪಾತ್ರವಾಗಿದೆ.

2003-04ನೇ ಸಾಲಿನಲ್ಲಿ ಆರಂಭಗೊಂಡ ಸಂಸ್ಥೆ ಇಂದಿನವರೆಗೆ ಹಿಂತಿರುಗಿ ನೋಡಿಲ್ಲ. 2008ರಲ್ಲಿ ಆರಂಭಗೊಂಡ ಸೈನ್ಸ್‌ ಪಿಯು ಕಾಲೇಜು ವರ್ಷದಿಂದ ವರ್ಷಕ್ಕೆ ಅತ್ಯುತ್ತಮ ಫಲಿತಾಂಶ ದಾಖಲಿಸುತ್ತ ತನ್ನ ದಾಖಲೆಯನ್ನು ತಾನೇ ಮುರಿಯುತ್ತ ಪ್ರತಿವರ್ಷ ನೂರಾರು ವಿದ್ಯಾರ್ಥಿಗಳ ಮೆಡಿಕಲ್‌ ಶಿಕ್ಷಣದ ಕನಸನ್ನು ನನಸುಗೊಳಿಸುತ್ತ ಅವರ ಭವಿಷ್ಯ ಉಜ್ವಲಗೊಳಿಸುವತ್ತ ದಾಪುಗಾಲಿಡುತ್ತಿದೆ. ಈ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ ಪಿಸಿಎಂಬಿಗೆ ಹೆಚ್ಚು ಒತ್ತು ನೀಡುವುದರಿಂದ ಈ ವಿಭಾಗಗಳಲ್ಲಿ ಶೇ.100 ಸಾಧನೆ ಮಾಡುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದು ಗುಣಮಟ್ಟದ ಶಿಕ್ಷಣಕ್ಕೆ ಕನ್ನಡಿ ಹಿಡಿದಂತಿದೆ.

ನಗರ ಪ್ರದೇಶದ ಜಂಜಾಟದಿಂದ ದೂರ ನೈಸರ್ಗಿಕ ಪ್ರಶಾಂತ ವಾತಾವರಣದಲ್ಲಿ ಶಾಲೆಯ ಭವ್ಯ ಕಟ್ಟಡವಿದೆ. ಸ್ಪರ್ಧಾ ಪರೀಕ್ಷೆಗಳು, ಪ್ರತಿ ವಾರ ಕಿರು ಪರೀಕ್ಷೆ, ವಿದ್ಯಾರ್ಥಿಗಳ ವೈಯಕ್ತಿಕ ಕಾಳಜಿ, ವಾರ್ಷಿಕ ಪರೀಕ್ಷೆ ಎದುರಿಸುವವರಿಗೆ ಪ್ರತ್ಯೇಕ ಸ್ಟಡಿ ಅವರ್ಸ್‌, ಪ್ರತ್ಯೇಕ ಸ್ಟಡಿ ಮಟೇರಿಯಲ್‌ ಸೇರಿ ಹಲವು ಸೌಲಭ್ಯ ಒದಗಿಸಲಾಗಿದೆ. ಕಲಿಕೆಯ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದೆ ಇಂಟೆಲಿಜೆಂಟ್‌ ಲರ್ನಿಂಗ್‌ಗೆ ಹೆಚ್ಚು ಒತ್ತು ನೀಡಲಾಗಿದೆ.

ಪ್ರತಿಭೆಗೆ ತಕ್ಕಂತೆ ಲಕ್ಷಾಂತರ ರೂ. ಸಂಬಳ ಪಡೆಯುವ ಆಂಧ್ರ, ತೆಲಂಗಾಣ, ಕೇರಳ, ಕರ್ನಾಟಕ ರಾಜ್ಯಗಳ ಪ್ರತಿಭಾವಂತ ಉಪನ್ಯಾಸಕರ ತಂಡವೇ ಇಲ್ಲಿದೆ. ನೀಟ್‌, ಕೆ-ಸೆಟ್‌, ಜೆಇಇ, ಐಐಟಿಗೆ ಕ್ರ್ಯಾಶ್‌ ಕೋರ್ಸ್‌ ನಡೆಸಲಾಗುತ್ತಿದೆ. ಪರಿಣಾಮಕಾರಿ ನೋಟ್ಸ್‌ ಬಳಸಿ ಬೋಧನೆ, ಕಲಿಕೆಯಲ್ಲಿ ನಗರದವರ ಜತೆ ಗ್ರಾಮೀಣರೂ ಸರಿಸಾಟಿಯಾಗಿ ನಿಲ್ಲುವ ಸಾಮರ್ಥಯ ತಂದುಕೊಡಲು 6-10ನೇ ಕ್ಲಾಸ್‌ ವಿದ್ಯಾರ್ಥಿಗಳಿಗೆ ಮೂಲದಲ್ಲೇ ಐಐಟಿ, ನೀಟ್‌ ಫೌಂಡೇಶನ್‌ನ ತರಬೇತಿ ಕೊಟ್ಟು ಗಟ್ಟಿಗೊಳಿಸಲಾಗುತ್ತಿದೆ.

ಪ್ರತಿಭಾವಂತರಿಗಾಗಿ 1.5 ಕೋಟಿ ರೂ. ಮೀಸಲು

ಬಡವರು, ಕೃಷಿಕರ ಬಗ್ಗೆ ಕಾಳಜಿ, ಕನಿಕರ ಹೊಂದಿರುವ ಸರಳ ವ್ಯಕ್ತಿತ್ವದ ಸಂಸ್ಥೆಯ ಚೇರ್ಮನ್‌ ಎಂ.ಎಸ್‌.ಪಾಟೀಲರು ಪ್ರತಿ ವರ್ಷ ತಮ್ಮ ಕಾಲೇಜಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿವಿಧ ರೀತಿಯಲ್ಲಿ ಅಂದಾಜು 1.5 ಕೋಟಿ ರೂ.ಗಳ ಆರ್ಥಿಕ ನೆರವು ಮೀಸಲಿರಿಸಿದ್ದಾರೆ. 25 ಪ್ರತಿಭಾವಂತ ಬಡ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ದತ್ತು ಪಡೆದು ಉಚಿತ ಶಿಕ್ಷಣ, ಎಸ್ಸೆಸ್ಸೆಲ್ಸಿಯಲ್ಲಿ ಶೇ.98ಕ್ಕಿಂತ ಹೆಚ್ಚು ಅಂಕ ಗಳಿಸಿದವರಿಗೆ ಪಿಯುಸಿ ಉಚಿತ ಶಿಕ್ಷಣ, ಶೇ.95-98ರೊಳಗಿನ ಅಂಕ ಗಳಿಸಿದವರಿಗೆ ಶುಲ್ಕದಲ್ಲಿ ಶೇ.20, ಶೇ.90-95ರೊಳಗೆ ಅಂಕ ಗಳಿಸಿದವರಿಗೆ ಶುಲ್ಕದಲ್ಲಿ ಶೇ.10 ವಿನಾಯಿತಿ ಕೊಡುವ ಯೋಜನೆ ರೂಪಿಸಿದ್ದಾರೆ. ನೀಟ್‌ ಗಾಗಿಯೇ ಪ್ರತ್ಯೇಕ ತರಬೇತಿ ಸೌಲಭ್ಯ ಜಾರಿಗೊಳಿಸಿ ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಲು, ಬಡವರ ಮೆಡಿಕಲ್‌ ಕನಸು ನನಸು ಮಾಡಲು ಜೀವವನ್ನು ಗಂಧದಂತೆ ತೇಯುತ್ತ ಸಾಧನೆಯ ಪರಿಮಳ ಹರಿಸತೊಡಗಿದ್ದಾರೆ.

ನೀಟ್‌ ಸಾಧಕರ ಮೆಡಿಕಲ್‌ ಕಾಲೇಜುಗಳ ವಿವರ

ಇಲ್ಲಿನ ಉಪನ್ಯಾಸಕರು 9 ವರ್ಷಗಳಿಂದ ನೀಟ್‌ ಸಹಿತ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತರಬೇತಿ ನೀಡಿದ ಅನುಭವ ಹೊಂದಿದ್ದಾರೆ. ಪ್ರಸಕ್ತ ಸಾಲಿನ ನೀಟ್‌ ಸಾಧಕರು ಬೆಂಗಳೂರು, ಮಂಗಳೂರು, ಮೈಸೂರು, ಶಿವಮೊಗ್ಗ, ದಾವಣಗೆರೆ, ಹುಬ್ಬಳ್ಳಿ, ಕಾರವಾರ, ಗದಗ, ಬಳ್ಳಾರಿ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಬೀದರ್‌, ರಾಯಚೂರ, ಕಾರವಾರ, ಮಡಿಕೇರಿ, ಚಾಮರಾಜನಗರ, ಕೊಪ್ಪಳ, ಮಂಗಳೂರು, ರಾಮನಗರ ಸೇರಿ ವಿವಿಧ ಪ್ರತಿಷ್ಠಿತ ಮೆಡಿಕಲ್‌ ಕಾಲೇಜುಗಳಲ್ಲಿ ಸೀಟು ಪಡೆದಿರುವುದು ಸಾಧನೆಗೆ ಕೈಗನ್ನಡಿಯಂತಿದೆ. ಇಲ್ಲಿ ದೊರಕುವ ತರಬೇತಿಯನ್ನು ಮಾತುಗಳಲ್ಲಿ ಹೇಳುವುದರ ಬದಲು ಇಲ್ಲಿಗೆ ಬಂದು ಅನುಭವಿಸಿದರೇನೆ ಅದರ ನೈಜತೆ, ಸಾಮರ್ಥಯ, ಮಹತ್ವ ಅರ್ಥವಾಗುವಂತಹದ್ದು.

 

ಗ್ರಾಮೀಣ ಮಕ್ಕಳ ಮೆಡಿಕಲ್‌ ಸಹಿತ ವೃತ್ತಿಪರ ಶಿಕ್ಷಣಕ್ಕೆ ವೇದಿಕೆ ಒದಗಿಸಿಕೊಟ್ಟು ನೈಜ ಪ್ರತಿಭೆಗೆ ಮನ್ನಣೆ ದೊರಕಿಸಿಕೊಡುವುದು ನನ್ನ ಸಂಕಲ್ಪ. ಸಂಸ್ಥೆಗೆ ಕೀರ್ತಿ ತಂದಿರುವ ವಿದ್ಯಾರ್ಥಿಗಳಿಗೆ, ಪ್ರೋತ್ಸಾಹಿಸಿದ ಪಾಲಕರಿಗೆ, ಉತ್ತಮ ತರಬೇತಿ ಮತ್ತು ಮಾರ್ಗದರ್ಶನ ನೀಡಿದ ನನ್ನೆಲ್ಲ ಸಿಬ್ಬಂದಿ ವರ್ಗಕ್ಕೆ ಋಣಿಯಾಗಿದ್ದೇನೆ. ಎಂ.ಎಸ್‌.ಪಾಟೀಲ, ಚೇರ್ಮನ್‌.

-ಡಿ.ಬಿ.ವಡವಡಗಿ

ಟಾಪ್ ನ್ಯೂಸ್

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

1-dm

Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು

1-sssss

Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ

1-ladakk

China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-dandeli

Dandeli: ಗಾಂಜಾ ಅಕ್ರಮ ಮಾರಾಟ ಯತ್ನ; ಮಾಲು ಸಹಿತ ಆರೋಪಿಯ ಬಂಧನ

6-honnavara

Honnavar: ಮೂವರು ಯುವಕರ ಬಲಿ ತೆಗೆದುಕೊಂಡ ಭೀಕರ ರಸ್ತೆ ಅಪಘಾತ

5-1

Mundgod: ಹಾವು ಕಡಿದು ಅಂಗನವಾಡಿ ಬಾಲಕಿ ಸಾವು

1-up

Dandeli; ಕುಸಿದು ಬಿದ್ದು ಯುಪಿ ಮೂಲದ ಯುವಕ ಸಾ*ವು

16-yellapura

Yellapura: ಬಸ್‌- ಬೈಕ್‌ ಡಿಕ್ಕಿ; ಟಯರ್‌ ತಲೆ ಮೇಲೆ ಹರಿದು ಇಬ್ಬರು ಸ್ಥಳದಲ್ಲೇ ಮೃತ್ಯು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

1-dm

Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.