ಪಾದುಕೆ ದರ್ಶನ: ಸಂಭ್ರಮ ಹೆಚ್ಚಿಸಿದ ಮಂತ್ರಾಲಯ ಶ್ರೀಗಳ ಸಂಚಾರ
Team Udayavani, Mar 27, 2024, 6:10 PM IST
ಉದಯವಾಣಿ ಸಮಾಚಾರ
ಹೊನ್ನಾವರ: ಲೋಕಪ್ರಸಿದ್ಧ ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದ ಶ್ರೀ ಸುಭುದೇಂದ್ರ ತೀರ್ಥ ಸ್ವಾಮಿಗಳು ಉತ್ತರ ಕನ್ನಡ ಜಿಲ್ಲೆಗೆ ಪ್ರಥಮ ಬಾರಿ ಆಗಮಿಸಿ ಶ್ರೀಕ್ಷೇತ್ರ ಸುಬ್ರಹ್ಮಣ್ಯದಲ್ಲಿ ವಾಸ್ತವ್ಯ ಹೂಡಿದ್ದರು. ನಂತರ ಮುರ್ಡೇಶ್ವರಕ್ಕೂ ಭೇಟಿ ನೀಡಿ ಮುರ್ಡೇಶ್ವರನ ದರ್ಶನ ಪಡೆದರು.
ಎಸ್‌ಆರ್‌ಎಲ್ ಸಾರಿಗೆ ಸಂಸ್ಥೆ ಮಾಲಕ ವೆಂಕಟ್ರಮಣ ಹೆಗಡೆ ಮತ್ತು ಕರಿಕಾನ ಪರಮೇಶ್ವರಿ ದೇವಾಲಯದ ಮುಖ್ಯ ಅರ್ಚಕ ಸುಬ್ರಹ್ಮಣ್ಯ ಭಟ್ ಮತ್ತು ಗಣ್ಯರ ಸ್ವಾಗತ ಸಮಿತಿ ಬಾಳೆಗದ್ದೆಯಿಂದ ಮೆರವಣಿಗೆಯಲ್ಲಿ ಮಯೂರ ಮಂಟಪಕ್ಕೆ ಕರೆದೊಯ್ಯಿತು. ಸ್ಥಳೀಯ ಸುಗ್ಗಿ ಕಲಾವಿದರು, ವಾದ್ಯ ವೃಂದದವರು ಮೆರವಣಿಗೆ ಚಂದಗೊಳಿಸಿದ್ದರು. ಸರಳ ವ್ಯಕ್ತಿತ್ವದ ಶ್ರೀಗಳು ತಮ್ಮ ಆರಾಧ್ಯದೇವರ ಸಹಿತ ದೇವಸ್ಥಾನದಲ್ಲಿಯೇ ಬಿಡಾರ ಹೂಡಿದ್ದರು.
ಪೂಜೆ ನಂತರ ಸಹಸ್ರಾರು ಭಕ್ತರಿಗೆ ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಪಾದುಕೆ ಮತ್ತು ಅವರ ಪೂಜಾ ದೇವರುಗಳ ದರ್ಶನ ಮಾಡಿಸಿದರು. ಎಲ್ಲರಿಗೂ ಸ್ವಹಸ್ತದಿಂದ ಮಂತ್ರಾಕ್ಷತೆ ನೀಡಿದರು. ಭಕ್ತರಿಗೆ ಪ್ರಾರ್ಥನೆಯೊಂದಿಗೆ ಆಶೀರ್ವದಿಸಿದರು. ಮಂತ್ರಾಲಯ ಪದ್ಧತಿಯಂತೆ ಸುಬ್ರಹ್ಮಣ್ಯ ದೇವಾಲಯ ಸೇವಾ ಸಮೀತಿಯವರು ವ್ಯವಸ್ಥೆ ಮಾಡಿದ್ದರು. ಆಧ್ಯಾತ್ಮಿಕ ಪ್ರವಚನ
ನಡೆಯಿತು. ಶ್ರೀಗಳಿಗೆ ಸೇವಾ ಸಮೀತಿ ಅರ್ಪಿಸಿದ ಲಕ್ಷ ರೂ. ಗಳನ್ನು ಮಂತ್ರಾಲಯದ ಪ್ರಸಾದವಾಗಿ 10 ಸಾವಿರ ರೂ. ಸೇರಿಸಿ ಒಟ್ಟೂ ಮೊತ್ತವನ್ನು ದೇವಸ್ಥಾನಕ್ಕೆ ಬಳಸಿಕೊಳ್ಳಲು ಶ್ರೀಗಳು ಮರಳಿ ಒಪ್ಪಿಸಿದರು.
ನಂತರ ಶ್ರೀಗಳು ಮುರ್ಡೇಶ್ವರದ ಟ್ರಸ್ಟಿಗಳಾದ ಸತೀಶ ಶೆಟ್ಟಿ ಅವರ ವಿನಂತಿಯಂತೆ ಮುರ್ಡೇಶ್ವರದಲ್ಲಿ ನಡೆದ ಅಭಿವೃದ್ಧಿ
ಕಾರ್ಯಗಳನ್ನು ಕಂಡು ಸಂತೋಷಪಟ್ಟರು. ಸುಬ್ರಹ್ಮಣ್ಯ ಮತ್ತು ಮುಡೇìಶ್ವರ ದೇವರಿಗೆ ಶ್ರೀಗಳು ಪೂಜೆ ಸಲ್ಲಿಸಿದರು. ಮಂತ್ರಾಲಯ ಮಹಿಮೆಯಂತೆ ಸುಭುದೇಂದ್ರ ತೀರ್ಥರ ಆಗಮನ, ಆಶೀರ್ವಾದ ಈ ಭಾಗದಲ್ಲಿ ಸಂಚಲನ ಮೂಡಿಸಿದೆ. ಶ್ರೀಗಳ ಕಾರ್ಯಕ್ರಮದ ವ್ಯವಸ್ಥೆ ಮಾಡಿದ ವೆಂಕಟ್ರಮಣ ಹೆಗಡೆ ಮಂತ್ರಾಲಯದ ಭಕ್ತರ ಅಭಿನಂದನೆಗೆ ಪಾತ್ರರಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೆಳೆವಿಮೆ ಸಿಗದೆ ಕೃಷಿಕರ ಪರದಾಟ: ಅಡಕೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸದ ಸರ್ಕಾರ
Belekeri Mining Case: ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಜೈಲು ಶಿಕ್ಷೆಗೆ ಹೈಕೋರ್ಟ್ ತಡೆ
ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಹೊತ್ತಿ ಉರಿದ ಲಾರಿ… ಅಪಾರ ಪ್ರಮಾಣದ ಸೊತ್ತು ಬೆಂಕಿಗಾಹುತಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.