ಉಡುಪಿ ಪರ್ಯಾಯಕ್ಕೆ ಸೋದೆ ಶ್ರೀಗಳಿಗೆ ಪಲಿಮಾರು ಶ್ರೀ ಆಹ್ವಾನ
Team Udayavani, Dec 19, 2017, 2:13 PM IST
ಶಿರಸಿ: ಉಡುಪಿಯಲ್ಲಿ ನಡೆಯಲಿರುವ ಪರ್ಯಾಯದ ಎರಡೂ ವರ್ಷ ನಮ್ಮೊಂದಿಗೆ ಇದ್ದು ಧಾರ್ಮಿಕ ಕಾರ್ಯದಲ್ಲಿ ಸಹಕಾರ
ನೀಡುವಂತೆ ಸೋದೆ ವಾದಿರಾಜ ಮಠಾಧೀಶ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದಂಗಳವರನ್ನು ಪಲಿಮಾರು ಮಠಾಧೀಶ ವಿದ್ಯಾಧೀಶ ತೀರ್ಥ ಶ್ರೀಪಾದರು ಆಹ್ವಾನಿಸಿದರು.
ಪರ್ಯಾಯದ ಪೂರ್ವಭಾವಿಯಾಗಿ ಪವಿತ್ರ ಕ್ಷೇತ್ರ ಸೋದೆ ವಾದಿರಾಜ ಮಠಕ್ಕೆ ಆಗಮಿಸಿದ್ದ ಪಲಿಮಾರು ಶ್ರೀಗಳನ್ನು ಬರಮಾಡಿಕೊಂಡ ಬಳಿಕ ನಡೆದ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು. ಕೃಷ್ಣನ ಅಲಂಕಾರದಲ್ಲಿ ಸೋದೆಯ ಹಿಂದಿನ
ಶ್ರೀಗಳು ಪರಿಣಿತರಾಗಿದ್ದರು. ವಿಶೊತ್ತಮರು ಕೃಷ್ಣನನ್ನು ಅಲಂಕರಿಸಿದಾಗ ತೆಗೆದ ಫೋಟೋಗಳೇ ಮನೆ ಮನೆಗಳಲ್ಲಿ ಇದೆ. ಈ ಬಾರಿ ಸೋದೆ ಶ್ರೀಗಳೂ ನಮ್ಮೊಂದಿಗೆ ಇದ್ದು, ಚಾತುರ್ಮಾಸ್ಯ ಕೂಡ ಅಲ್ಲೇ ನಡೆಸಬೇಕು ಎಂದು ಆಶಿಸಿದರು. ಸೋದೆಯಲ್ಲಿ ಅಭಿವೃದ್ಧಿ ಪರ್ವವೇ ನಡೆದಿದೆ. ಇಲ್ಲಿನ ಯೋಜನೆಗಳು, ಜೀರ್ಣೋದ್ಧಾರ ಕಾರ್ಯಗಳು ಚೆನ್ನಾಗಿ ನಡೆಯುತ್ತಿವೆ ಎಂದೂ
ಬಣ್ಣಿಸಿದರು.
ಸಾನ್ನಿಧ್ಯ ನೀಡಿದ್ದ ಸೋದೆ ವಾದಿರಾಜ ಮಠಾಧೀಶ ವಿಶ್ವವಲ್ಲಭ ಶ್ರೀಪಾದರು, ಹಿಂದಿನ ಪರ್ಯಾಯದಲ್ಲಿ ಕೃಷ್ಣನಿಗೆ ಮುತ್ತಿನ ಕಿರೀಟ ಆಗಿತ್ತು. ಈ ಬಾರಿ ಬಂಗಾರದ ಮೇಲ್ಛಾವಣಿ ಆಗಲಿ ಎಂದರು. ಈ ವೇಳೆ ಮಠದ ದಿವಾನರಾದ ಶ್ರೀನಿವಾಸ ತಂತ್ರಿಗಳು, ಮಾಣಿಕ್ಯ ಉಪಾಧ್ಯಾಯ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirasi: ಭಾರತಕ್ಕೆ ಆಮದಾಗುವ ಅಕ್ರಮ ಅಡಿಕೆಗಳಿಗೆ ತಡೆಯೊಡ್ಡಿ; ಬೆಳೆಗಾರರ ಪ್ರತಿನಿಧಿಗಳ ನಿಯೋಗ
Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ
Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’
ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್ ಮಾದರಿಯಲ್ಲಿ ವಿಶೇಷ ಪೊಲೀಸ್ ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.