ಅರ್ಧದಿನ ಬಂದ್‌ಗಿಂತ ಜನರಿಂದ ನಿಯಮ ಪಾಲನೆ ಅಗತ್ಯ
Team Udayavani, Jul 9, 2020, 3:56 PM IST
ಸಾಂದರ್ಭಿಕ ಚಿತ್ರ
ಹೊನ್ನಾವರ: ಜಿಲ್ಲೆಯ ಕುಮಟಾ, ಅಂಕೋಲಾ, ಭಟ್ಕಳಗಳಲ್ಲಿ ಮಧ್ಯಾಹ್ನ 2ರ ನಂತರ ಎಲ್ಲ ವ್ಯವಹಾರವನ್ನು ಸ್ಥಗಿತಗೊಳಿಸಲಾಗುತ್ತಿದೆ. ಇದರಿಂದ ಕೊರೊನಾ ತಡೆಗೆ ಎಷ್ಟು ಅನುಕೂಲ ಎಂಬುದನ್ನು ಅಧ್ಯಯನ ಮಾಡಿದಂತಿಲ್ಲ. ಮೂರು ತಿಂಗಳು ಸುಮಾರು ಪೂರ್ತಿ ಬಂದ್ ಆಚರಿಸಲಾಯಿತು, ಆಗ ಸಮಾಧಾನವಿತ್ತು.
ವ್ಯವಹಾರ ನಿಂತರೂ ಜೀವ ಉಳಿದಿತ್ತು. ಮುಂಬೈ, ಬೆಂಗಳೂರಿನಿಂದ ಜನ ಬರತೊಡಗಿದ ಮೇಲೆ ಜಿಲ್ಲೆಯಲ್ಲಿ ಕೋವಿಡ್ ವಿಸ್ತರಿಸುತ್ತಿದೆ. ಇನ್ನೂ ಹೊರಗಿನ ಜನ ನಿತ್ಯವೂ ಬರುತ್ತಿದ್ದಾರೆ. ಭಟ್ಕಳದಲ್ಲಿ ತೀವ್ರಸ್ವರೂಪ ಪಡೆದಿರುವುದರಿಂದ ಅರ್ಧದಿನ ಜಿಲ್ಲಾಧಿಕಾರಿಗಳು ಲಾಕ್ ಡೌನ್ ಘೋಷಿಸಿದ್ದಾರೆ. ಇದರಿಂದ ಸ್ಫೂರ್ತಿಗೊಂಡವರಂತೆ ಕುಮಟಾ, ಅಂಕೋಲಾ ಸ್ವಯಂ ಲಾಕ್‌ಡೌನ್ ಘೋಷಣೆಯಾಗಿದ್ದು, ಹೊನ್ನಾವರ ಸಿದ್ಧತೆಯಲ್ಲಿದೆ. ಕೆಲವು ವೃತ್ತಿಯವರು ಅರ್ಧದಿನ ಬಂದ್ ಘೋಷಿಸಿದ್ದಾರೆ.
ಸಂಜೆ ಬಂದ್ ಆದರೆ ಜನ ತಮ್ಮ ಕೆಲಸವನ್ನು ಅರ್ಧದಿನದಲ್ಲಿ ಮುಗಿಸಲು ಧಾವಿಸಿ ಬರುತ್ತಾರೆ. ದಟ್ಟಣೆಯೇನೂ ಕಡಿಮೆಯಾಗುವುದಿಲ್ಲ. ಸಂಜೆ ತಲೆ ಎತ್ತಲಾರಂಭಿಸಿದ ಗೂಡಂಗಡಿ, ತರಕಾರಿ, ಹಣ್ಣುಹಂಪಲು ವ್ಯಾಪಾರ ಸ್ಥಗಿತವಾಗಿ ಅವರ ಹೊಟ್ಟೆಗೆ ಕಲ್ಲುಬೀಳುತ್ತದೆ. ಗ್ರಾಮೀಣ ಬಸ್‌ಗಳು ಓಡಾಡುವುದಿಲ್ಲ. ಹೇಗೋ ಜನ 10ಗಂಟೆಗೆ ಬಂದರೆ ಮರಳಿ ಹೋಗುವ ಧಾವಂತದಲ್ಲಿರುತ್ತಾರೆ. ಹೊಟೇಲ್‌ನಲ್ಲಿ ಮಾಡಿದ ತಿಂಡಿಗಳು ಹಾಳಾಗುತ್ತವೆ. ಇದರಿಂದ ಅಂಗಡಿಕಾರರಿಗೂ, ಉದ್ಯೋಗಿಗಳಿಗೂ, ಸಣ್ಣಪುಟ್ಟ ಕೈಗಾರಿಕೆ ನಡೆಸುವವರಿಗೂ ತೊಂದರೆ. ಅರ್ಧದಿನ ಬಂದ್ ಮಾಡಿದರೆ ವ್ಯವಹಾರದ
ಮಟ್ಟಿಗೆ ಪೂರ್ತಿ ದಿನ ಬಂದ್ ಮಾಡಿದಂತೆ. ಜನ ಬರುವುದನ್ನು ತಡೆಯಲಾಗುವುದಿಲ್ಲ. ಇಂತಹ ಬಂದ್‌ಗಳು ಕೋವಿಡ್ ಎದುರಿಸಲು
ಸಹಕಾರಿಯೇ ? ಅಥವಾ ರಿಕ್ಷಾ ಸಹಿತ ಸಣ್ಣಪುಟ್ಟ ವ್ಯವಹಾರಸ್ಥರನ್ನು ಮುಳುಗಿಸಲು ಅರ್ಧದಿನ ಬಂದ್ ಆಚರಿಸಲಾಗುತ್ತಿದೆಯೇ ? ಜನ ಮಾಸ್ಕ್ ಧರಿಸದೆ ಓಡಾಡುತ್ತಾರೆ.
ಕಂಡಕಂಡಲ್ಲಿ ಉಗುಳುತ್ತಾರೆ, ಅಂತರ ಇಟ್ಟುಕೊಳ್ಳದೆ ಓಡಾಡುತ್ತಾರೆ. ಹೊರ ಜಿಲ್ಲೆಯಿಂದ ಬಂದವರನ್ನು ತುತ್ಛವಾಗಿ ಕಾಣುತ್ತಾರೆ. ಕೋವಿಡ್ ಬರದಿದ್ದರೂ
ರಿಕ್ಷಾದವರು ಇವರನ್ನು ಹತ್ತಿಸಿಕೊಳ್ಳುವುದಿಲ್ಲ. ಕ್ವಾರಂಟೈನ್‌ನಲ್ಲಿ ಉಳಿದು ಮನೆಗೆ ಹೋದರೂ ಸ್ವೀಕರಿಸಲು ಮನೆಯವರೂ, ಕೇರಿಯವರೂ
ಸಿದ್ಧರಿಲ್ಲ. ಇನ್ನು ಆಸ್ಪತ್ರೆಯಿಂದ ಮರಳಿದವರಿಗೆ ದೇವರೇ ಗತಿ. ಆಕಸ್ಮಾತ್ ಸತ್ತರೆ ಪಿಪಿಇ ಕಿಟ್ ಕೊಡುತ್ತೇವೆ, ಧರಿಸಿ ನಿಮ್ಮ ಪದ್ಧತಿಯಂತೆ ಸಂಸ್ಕಾರಮಾಡಿ ಎಂದರೂ ಮನೆಯ ಜನ ಮುಂದೆ ಬರುವುದಿಲ್ಲ. ಸ್ಮಶಾನದಲ್ಲಿ ಹೆಣ ಸುಡಲು ಬಿಡುವುದಿಲ್ಲ. ಕದ್ದುಮುಚ್ಚಿ ಹೆಣ ಸುಡಬೇಕಾದ ಪರಿಸ್ಥಿತಿ ಇದೆ. ಕೋವಿಡ್
ನವರಿಗೆ ದೂರ ಸ್ಮಶಾನ ಮಾಡಿ ಎಂದು ಜನಪ್ರತಿನಿಧಿಗಳೇ ಹೇಳುತ್ತಾರೆ. ಕ್ವಾರಂಟೈನ್‌ಗೆ ನಮ್ಮಲ್ಲಿ ಬೇಡ ಎಂದು ಹೋಟೆಲ್, ಹೊಸ್ಟೆಲ್ ಸುತ್ತಮುತ್ತಲಿನವರು ಹೇಳುತ್ತಾರೆ. ಮುಂಬೈ, ಬೆಂಗಳೂರಿನಿಂದ ಬಂದವರು ಕದ್ದುಮುಚ್ಚಿ ಮನೆ ಸೇರುತ್ತಾರೆ. ಹೊರಗಿನಿಂದ ಬಂದವರನ್ನೆಲ್ಲ ಕೋವಿಡ್ ಪೀಡಿತರಂತೆ ಕಾಣುತ್ತಾರೆ. ಈ
ಮನೋಭಾವ ಬದಲಾಗಿ ಯಾರು ಬಂದರೂ ಸಾಮಾನ್ಯ ಆರೋಗ್ಯದ ನಿಯಮಾವಳಿಯನ್ನು ಪಾಲಿಸಿ, ಸೋಂಕು ಬಂದವರನ್ನು ಸಾಂತ್ವನ ದೃಷ್ಟಿಯಿಂದ ನೋಡಿದರೆ ಮಾತ್ರ ಸಮಸ್ಯೆ ತಿಳಿಯಾಗುತ್ತದೆಯೇ ವಿನಃ ಎರಡು ಗಂಟೆಯವರೆಗೆ ವ್ಯಾಪಾರ ಮಾಡಿ ಬಂದ್ ಮಾಡುವುದರಿಂದ ಕೊರೊನಾ ತೊಲಗುವುದಿಲ್ಲ.
ಜನ ಬದಲಾಗದಿದ್ದರೆ ಕೊರೊನಾ ಓಡಿಸುವುದು ಕಷ್ಟ. ಇದನ್ನು ಜನ ಅರ್ಥಮಾಡಿಕೊಳ್ಳಲಿ. ಬಂದ್‌ನಿಂದ ಈಗಾಗಲೇ ಆರ್ಥಿಕ ವಲಯ ನೆಲಕಚ್ಚಿದ್ದು, ಮತ್ತೆ ಮತ್ತೆ ಬಂದ್ ಆಚರಣೆ ಎಂದಿಗೂ ತಲೆಎತ್ತದಂತೆ ಮಾಡುತ್ತದೆ.
ಜನ ಬದಲಾಗದಿದ್ದರೆ ನಿಯಂತ್ರಣ ಕಷ್ಟ
ಮುಂಬೈ, ಬೆಂಗಳೂರಿನಿಂದ ಬಂದವರು ಕದ್ದುಮುಚ್ಚಿ ಮನೆ ಸೇರುತ್ತಾರೆ. ಹೊರಗಿನಿಂದ ಬಂದವರನ್ನೆಲ್ಲ ಕೋವಿಡ್ ಪೀಡಿತರಂತೆ ಕಾಣುತ್ತಾರೆ. ಈ ನೋಭಾವ ಬದಲಾಗಿ ಯಾರು ಬಂದರೂ ಸಾಮಾನ್ಯ ಆರೋಗ್ಯದ ನಿಯಮಾವಳಿಯನ್ನು ಪಾಲಿಸಿ, ಸೋಂಕು ಬಂದವರನ್ನು ಸಾಂತ್ವನ ದೃಷ್ಟಿಯಿಂದ ನೋಡಿದರೆ ಮಾತ್ರ ಸಮಸ್ಯೆ ತಿಳಿಯಾಗುತ್ತದೆಯೇ ವಿನಃ ಎರಡು ಗಂಟೆಯವರೆಗೆ ವ್ಯಾಪಾರ ಮಾಡಿ ಬಂದ್ ಮಾಡುವುದರಿಂದ ಕೊರೊನಾ ತೊಲಗುವುದಿಲ್ಲ. ಜನ
ಬದಲಾಗದಿದ್ದರೆ ಕೊರೊನಾ ಓಡಿಸುವುದು ಕಷ್ಟ.
ಜಿಯು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ
Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.