ಸೇತುವೆ ಇಲ್ಲವೆಂದು ಊರನ್ನೇ ತೊರೆದ ಜನ!
Team Udayavani, May 9, 2019, 4:40 PM IST
ಯಲ್ಲಾಪುರ: ತಾಲೂಕಿನ ಚಂದ್ಗುಳಿ ಗ್ರಾಪಂ ವ್ಯಾಪ್ತಿಯ ನಾಗುಂದ ಭಾಗದವರು ಸರಕಾರಕ್ಕೆ ಹಿಡಿಶಾಪ ಹಾಕುತ್ತ ಕಾಲು ಸಂಕದ ಮೇಲೆ ಓಡಾಡುತ್ತಿದ್ದಾರೆ. ಇಲ್ಲಿನ ಕೆಲ ಕುಟುಂಬಗಳು ಸೇತುವೆ ಇಲ್ಲವೆಂದು ಊರನ್ನೇ ತೊರೆದಿವೆ. ಚುನಾವಣೆ ವೇಳೆ ಕೋಟಿ ವೆಚ್ಚದ ಮಾತನಾಡುವ ಸರಕಾರಕ್ಕೆ ಈ ಜನರ ಕಷ್ಟ ಇನ್ನೂ ಕಂಡಿಲ್ಲ.
ಮಳಲಗಾಂವ್ ಸಮೀಪದ ನಾಗುಂದ ಬೃಹತ್ ಹಳ್ಳ ಮಳೆಗಾದಲ್ಲಿ ಗ್ರಾಮಸ್ಥರಿಗೆ ಆಚೆ-ಈಚೆ ಹೋಗುವುದಾದರೆ ಸಾವಿನ ನೆನಪಾಗುತ್ತದೆ. ನಾಗುಂದ ಮಜರೆಯ ಆರೆಂಟು ಮನೆಗಳು ಮಳೆಗಾಲದಲ್ಲಿ ತುಂಬಿ ಹರಿಯುವ ಹಳ್ಳದಿಂದಾಗಿ ಅತಂತ್ರಸ್ಥಿತಿ ಅನುಭವಿಸಬೇಕಾಗುತ್ತದೆ. ಸಣ್ಣ ವಸ್ತುಗಳನ್ನು ತರಲು ಕನಿಷ್ಠ 5-6 ಕಿ.ಮೀ ದೂರದ ಉಪಳೇಶ್ವರಕ್ಕೆ ಬರಬೇಕು. ಮಕ್ಕಳು ಶಾಲೆಗೆ ಬರಬೇಕೆಂದರೆ ಹಳ್ಳ ಮಳೆಗಾಲದಲ್ಲಿ ಅಡ್ಡಿಯಾಗಿ ನಿಲ್ಲುತ್ತದೆ. ಅಪಾಯಕಾರಿ ಹಳ್ಳ ದಾಟಿದರೆ ಎರಡೂವರೆ ಕಿಮೀ ಕೃಮಿಸಿ ಯಲ್ಲಾಪುರ-ಶಿರಸಿ ರಾಜ್ಯ ಹೆದ್ದಾರಿ ಪಕ್ಕದಲ್ಲಿರುವ ಮಳಲಗಾಂವ್ ಶಾಲೆಗೆ ಬರಬೇಕು. ಏರಿಳಿತದ ಬೆಟ್ಟ-ಗುಡ್ಡ ಕಾಡು ಕಣಿವೆಯ ದಾರಿಯಲ್ಲಿ ಬರಬೇಕು. ಕೃಷಿಯನ್ನು ನಂಬಿಕೊಂಡು ಬಂದಿರುವ ಇಲ್ಲಿನವರ ಏಕೈಕ ಬೇಡಿಕೆ ಎಂದರೆ ಹಳ್ಳಕ್ಕೆ ಸೇತುವೆ ನಿರ್ಮಿಸಿಕೊಡಿ ಎಂಬುದಾಗಿದೆ.
ಸೇತುವೆಯ ಸಲುವಾಗಿ ಮನವಿ ಕೊಟ್ಟು ಸಾಕಾಗಿದೆ. ಗ್ರಾಮಸ್ಥರು ಹಳ್ಳದಲ್ಲಿರುವ ಮರಕ್ಕೆ ಸಂಕಕಟ್ಟಿ ಹಳ್ಳದಾಟಲು ತಾತ್ಕಾಲಿಕ ಕಾಲುಸಂಕ ನಿರ್ಮಿಸಿಕೊಂಡಿದ್ದಾರೆ. ಶಿಥಿಲಗೊಂಡ ಕಾಲುಸಂಕ ಮೇಲೆ ಮಳೆಗಾಲದ ಸಂದರ್ಭದಲ್ಲಿ ತುಂಬಿ ಹರಿಯುವ ಹಳ್ಳವನ್ನು ಜೀವ ಕೈಯಲ್ಲಿ ಹಿಡಿದು ದಾಟಬೇಕಾದ ಸ್ಥಿತಿ ಇದೆ. ಶಾಲೆಯ ಮಕ್ಕಳು ಇಂತಹ ಸ್ಥಿತಿಯಲ್ಲಿ ಶಾಲೆಗೆ ಹೋಗುವುದು ದುಸ್ತರವಾಗಿದೆ. ಕಾರಣ ಸೇತುವೆ ನಿರ್ಮಿಸಿಕೊಡಬೇಕಾಗಿದೆ. ಕೆಲವರು ಈ ಹಳ್ಳದ ಕಾಲುಸಂಕದ ಹಿನ್ನೆಲೆಯಲ್ಲಿ ಜಮೀನನ್ನೇ ಬಿಟ್ಟು ಬಂದಿದ್ದಾರೆ. ಕೆಲವೇ ಜನರಿರುವ ಹಳ್ಳಿಯಾದ್ದರಿಂದ ಇವರ ಕೂಗು ಈವರೆಗೆ ಯಾರಿಗೂ ಕೇಳಿಸಿಲ್ಲ.
ಸಾಮಾಜಿಕ ಕಾರ್ಯಕರ್ತರಾದ ಎನ್.ಎನ್. ಹೆಬ್ಟಾರ ಕಳಚೆ, ಮಹಾಬಲೇಶ್ವರ ಭಟ್ಟ, ಗ್ರಾ.ಪಂ. ಸದಸ್ಯ ಎಸ್.ಕೆ. ಭಾಗ್ವತ್, ಗ್ರಾಮಸ್ಥರಾದ ನಾರಾಯಣ ಗೌಡ, ಮಂಜುನಾಥ ಭಂಡಾರಿ, ರಾಜು ಭಂಡಾರಿ ಮುಂತಾದವರು ಸ್ಥಳಿಯರಿಗೆ, ಶಾಲಾ ಮಕ್ಕಳ ಓಡಾಟದ ಅನುಕೂಲತೆಯ ಸಲುವಾಗಿ ಹಳ್ಳಕ್ಕೆ ಸೇತುವೆ ನಿರ್ಮಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.