ಜನರ ಪ್ರೋತ್ಸಾಹವೇ ದೊಡ್ಡದು: ರಮಾನಂದ
Team Udayavani, Nov 10, 2017, 2:24 PM IST
ಯಲ್ಲಾಪುರ: ಅರ್ಜಿ ಹಾಕಿ ಪಡೆಯುವ ಸರ್ಕಾರದ ಪ್ರಶಸ್ತಿಗಿಂತ ಜನರ ಪ್ರೋತ್ಸಾಹವೇ ದೊಡ್ಡದು. ಅದು ಪ್ರಮೋದ ಹೆಗಡೆಯವರಿಗೆ ಸಿಕ್ಕಿದೆ. ಈ ಪ್ರಶಸ್ತಿ ಗಳಿಸುವುದು ಕಷ್ಟ ಎಂದು ಜಿ.ಪಂ ಮಾಜಿ ಅಧ್ಯಕ್ಷ ರಮಾನಂದ ನಾಯಕ ಹೇಳಿದರು.
ಅವರು ಪಟ್ಟಣದ ಎಲ್‌ಎಸ್‌ಎಂಪಿ ಮೈದಾನದ ಚಿಟ್ಟಾಣಿ ವೇದಿಕೆಯಲ್ಲಿ ನಡೆಯುತ್ತಿರುವ 31ನೇ ಸಂಕಲ್ಪ ಉತ್ಸವದಲ್ಲಿ
8ನೇ ದಿನದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶ್ರೀಮಾತಾ ಸೌಹಾರ್ದ ಸಹಕಾರಿ ಅಧ್ಯಕ್ಷ ಜಿ.ಎನ್. ಹೆಗಡೆ ಹಿರೇಸರ ಮಾತನಾಡಿ, ಜನರ ಸಹಭಾಗಿತ್ವ ಮತ್ತು ನೆರವಿನೊಂದಿಗೆ ಸಂಕಲ್ಪ ಉತ್ಸವ ಅತ್ಯಂತ ವ್ಯವಸ್ಥಿತವಾಗಿ ವೈಶಿಷ್ಟಪೂರ್ಣವಾಗಿ ನಡೆಸುತ್ತಿರುವುದು ಅಸಾಧಾರಣವಾದದ್ದು ಎಂದರು.
ಹಿರಿಯ ಪತ್ರಕರ್ತ ಕಾಶ್ಯಪ ಪರ್ಣಕುಟಿ ಚಿಟ್ಟಾಣಿಯವರಿಗೆ ನುಡಿನಮನ ಸಲ್ಲಿಸಿದರು. ಕೆಎಸ್‌ಆರ್ ಟಿಸಿ ನಿಗಮದ ಸದಸ್ಯ ಜಿ.ಎಂ. ಶೆಟ್ಟಿ, ಪ್ರಮುಖರಾದ ಡಿ.ಎನ್. ನಾಯ್ಕ, ಜಿ.ಎನ್. ಗಾಂವಾರ, ವಿನಾಯಕ ಪೈ, ನಾಗೇಶ ಕವಡಿಕೆರೆ, ಪ್ರಭಾವತಿ ಜಯರಾಜ್, ಬಾಬು ಬಾಂದೇಕರ್, ಡಿ.ಎನ್. ಗಾಂವಾರ, ಎಂ.ಎನ್. ಭಟ್ಟ, ಎನ್.ಎನ್. ಹೆಬ್ಟಾರ್ ಇದ್ದರು.
ನಂತರ ಗೌರಿ ಕುಲಕರ್ಣಿ ಬೆಂಗಳೂರು ಅವರ ಸಂಗೀತ ಕಾರ್ಯಕ್ರಮ ಕಲಾಸಕ್ತರ ಮನ ತಣಿಸಿತು. ಗಣೇಶ ಗುಂಡ್ಕಲ್ ತಬಲಾ, ಕಿರಣ ಕಾನಗೋಡ, ಚಂದ್ರಣ್ಣ ಕುಮಟಾ ಕೀಬೋರ್ಡ್ ಸಾಥ್ ನೀಡಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.