ನೂರು ಕೋಟಿ ಉಳಿಕೆಗೆ ಯೋಜನೆ
Team Udayavani, Sep 22, 2019, 12:07 PM IST
ಶಿರಸಿ: ಕಳೆದ 2015-16ರಿಂದ ಆರಂಭಗೊಂಡಿದ್ದ 14ನೇ ಹಣಕಾಸು ಯೋಜನೆ 2019 ಮಾರ್ಚ್‌ಗೆ ಪೂರ್ಣವಾಗಲಿದೆ. ಆದರೆ, ಈವರೆಗೆ ಬರೋಬ್ಬರಿ 100 ಕೋ.ರೂ. ಜಮಾ ಇದ್ದ ಅನುದಾನದ ಮಾಡಿಕೊಳ್ಳದೇ ಹಣ ವಾಪಸ್ ಹೋಗುವ ಸಾಧ್ಯತೆ ಇದೆ. ಈ ಕಾರಣದಿಂದ ಕ್ರಿಯಾ ಯೋಜನೆ ಪೂರ್ಣ ಅನುಷ್ಠಾನಕ್ಕೆ ಜಿಪಂ ಖಡಕ್ ಸೂಚನೆ ನೀಡಿದೆ.
ಜಿಪಂ ಮುಖ್ಯ ಯೋಜನಾಧಿಕಾರಿ ವಿ.ಎಂ. ಹೆಗಡೆ ಆಲ್ಮನೆ ಇಲ್ಲಿಯ ತಾಪಂ ಸಭಾಭವನದಲ್ಲಿ ಶನಿವಾರ ಗ್ರಾಪಂ ಪಿಡಿಓಗಳ ಸಭೆಯ ನಂತರ ಅವರು ಮಾಹಿತಿ ನೀಡಿದರು. ಜಿಲ್ಲೆಯ ಗ್ರಾಪಂಗಳಲ್ಲಿ ಒಟ್ಟು 100 ಕೋಟಿ ರೂ. ಬಾಕಿಯಿದ್ದು ಅದನ್ನು
ಬರುವ ಮಾರ್ಚ್ ಅಂತ್ಯದೊಳಗೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಬಳಸುವ ಬಗ್ಗೆ ಸೂಚನೆ ನೀಡಲಾಗಿದೆ. ಈ ಯೋಜನೆಯಡಿ ಕುಡಿಯುವ ನೀರು ಸೌಲಭ್ಯ, ರಸ್ತೆ, ಮೂಲಭೂತ ವ್ಯವಸ್ಥೆ, ಬೀದಿದೀಪ ನಿರ್ವಹಣೆ ಹೀಗೆ ವಿವಿಧ ಅಭಿವೃದ್ಧಿ ಕಾರ್ಯ ಕೈಗೊಳ್ಳುವುದಕ್ಕೆ ಅವಕಾಶವಿದೆ. ಅದನ್ನು ಶೀಘ್ರ ಕಾರ್ಯಯೋಜನೆ ರೂಪಿಸಿ ಹಣ ಬಳಸುವಂತೆ ತಿಳಿಸಲಾಗಿದೆ.
ಯಾವುದೇ ಕಾರಣಕ್ಕೂ ಹಣ ವಾಪಸ್ ಹೋಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ ಎಂದರು. ಜಿಪಂ, ತಾಪಂ ಹಾಗೂ ಗ್ರಾಪಂ ಜನಪ್ರತಿನಿಧಿಗಳು, ಅಭಿವೃದ್ಧಿ ಅಧಿಕಾರಿಗಳೊಂದಿಗೆ ಜಿಲ್ಲೆಯಲ್ಲಿ ಚಿಂತನ ಮಂಠನ ಸಭೆ ನಡೆಸಿ ಗ್ರಾಮದ ಅಭಿವೃದ್ಧಿಗೆ ಏನು ಕಾರ್ಯಕ್ರಮ ಕೈಗೊಳ್ಳಬೇಕು, ಯೋಜನೆಗಳ ಕಾರ್ಯರೂಪಕ್ಕೆ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದೆ. ಪ್ರತಿ ತಾಲೂಕಿನಲ್ಲೂ ನಡೆಸಲಾಗುತ್ತಿದ್ದು ಭಟ್ಕಳ, ಹೊನ್ನಾವರ, ಕಾರವಾರದಲ್ಲಿ ನಡೆಸಲಾಗಿದೆ ಎಂದರು.
ಜಿಲ್ಲೆಯ ಆರು ಗ್ರಾಪಂನಲ್ಲಿ ದ್ರವ ಹಾಗೂ ಘನತ್ಯಾಜ್ಯ ಘಟಕ ಸ್ಥಾಪನೆ ಮಾಡಲಾಗಿದೆ. ಗೋಕರ್ಣದಲ್ಲಿ ಸ್ಥಾಪಿಸಿರುವ ಘಟಕ ಮಾದರಿಯಾಗಿದೆ. ಸಾಕಷ್ಟು ಕಡೆಗಳಿಂದ ಅಲ್ಲಿಗೆ ಬಂದು ವೀಕ್ಷಿಸಿ ಮಾಹಿತಿ ಪಡೆಯುತ್ತಿದ್ದಾರೆ. ಶಿರಸಿಯ ತಾಲೂಕಿನಲ್ಲಿ 1ಘಟಕ ಈಗಾಗಲೇ ನಿರ್ಮಾಣವಾಗಿದ್ದು ಇನ್ನೂ ಐದು ಕಡೆಗಳ ಪ್ರಸ್ತಾವನೆಕಳುಹಿಸಲಾಗಿದೆ ಎಂದರು.
ಇನ್ನು ಬನವಾಸಿ, ಸಹ್ರಸಲಿಂಗ, ಗುಡ್ನಾಪುರ, ಉಂಚಳ್ಳಿ ಸೇರಿದಂತೆ ಪ್ರೇಕ್ಷಣಿಯ ಸ್ಥಳಗಳಲ್ಲೂ ಇಂತಹ ಘಟಕ ನಿರ್ಮಿಸುವ ಉದ್ದೇಶವಿದೆ.ತಾಲೂಕಿನಲ್ಲಿ ವಸತಿ ಯೋಜನೆ, ಸ್ವತ್ಛಭಾರತ ಹಾಗೂ ಉದ್ಯೋಗ ಖಾತ್ರಿ ಯೋಜನೆ ಸಾಧನೆ ಚೆನ್ನಾಗಿದೆ ಎಂದರು. ತಾಪಂ ಕಾರ್ಯನಿರ್ವಹಣಾ ಅಧಿಕಾರಿ ಎಫ್.ಜಿ. ಚಿನ್ನಣ್ಣವರ ಪಾಲ್ಗೊಂಡಿದ್ದರು. ಈ ಮಧ್ಯೆ ಜನಪ್ರತಿನಿಧಿಗಳ ಜೊತೆ ಸಂವಾದಕ್ಕೆ ಆಗಮಿಸಿದ್ದ ಜನಪ್ರತಿನಿಧಿಗಳು ಚುನಾವಣಾ ನೀತಿ ಸಂಹಿತೆ ಘೋಷಣೆ ಆದದ್ದರಿಂದ ಪಾಲ್ಗೊಳ್ಳಲಾಗದೇ ವಾಪಸ್ ಆದರು. ಚುನಾವಣಾ ಕರ್ತವ್ಯದ ಹಿನ್ನೆಲೆಯಲ್ಲಿ ಸಿಇಓ ವಾಪಸ್ ಆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Order: ಶಿರೂರು ಗುಡ್ಡ ಕುಸಿತ: 2 ತಿಂಗಳೊಳಗೆ 5 ಲ.ರೂ. ಪರಿಹಾರಕ್ಕೆ ಹೈಕೋರ್ಟ್ ಸೂಚನೆ
Dandeli: ಸಾರಿಗೆ ಬಸ್ಸಿನಲ್ಲೇ ಪ್ರಯಾಣಿಕನಿಗೆ ಹೃದಯಾಘಾತ… ಆಸ್ಪತ್ರೆ ಮಾರ್ಗದಲ್ಲಿ ಮೃತ್ಯು
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Dandeli: ವಕ್ಫ್ ಮಂಡಳಿ ಮತ್ತು ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ಬಿಜೆಪಿಯಿಂದ ಪ್ರತಿಭಟನೆ
Dandeli: ನಗರಸಭೆಯ ಜವಾನನನ್ನು ನಿಂದಿಸಿರುವುದರ ವಿರುದ್ಧ ನಗರ ಸಭೆಯ ಪೌರಾಯುಕ್ತರಿಗೆ ದೂರು
MUST WATCH
ಹೊಸ ಸೇರ್ಪಡೆ
MUDA Case: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಿಚಾರಣೆ ನ.26ಕ್ಕೆ ಮುಂದೂಡಿದ ಹೈಕೋರ್ಟ್
Belagavi: ತಹಶೀಲ್ದಾರ್ ಕೊಠಡಿಯಲ್ಲೇ ಸಿಬ್ಬಂದಿ ನೇಣಿಗೆ ಶರಣು, ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUDA Case: ಲೋಕಾಯುಕ್ತ ನೋಟಿಸ್ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಸಿಎಂ
Mangaluru: ಪರಿಶಿಷ್ಟ ಜಾತಿ ಪಟ್ಟಿಗೆ ಮರುಸೇರ್ಪಡೆ ಆಗ್ರಹಿಸಿ ಕುಡುಬಿ ಸಮಾಜದವರಿಂದ ಜಾಥಾ
Canada: ಹಿಂದೂ ದೇಗುಲದ ಮೇಲೆ ದಾಳಿ-ಖಲಿಸ್ತಾನಿಗಳ ವಿರುದ್ಧ ಸಾವಿರಾರು ಭಾರತೀಯರ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.