ದೈವಜ್ಞ ಬ್ರಾಹ್ಮಣರಿಗೆ ರಾಜಕೀಯ ಪ್ರಾತಿನಿಧ್ಯ ಅತ್ಯಗತ್ಯ
ಚಿನ್ನದ ಕೆಲಸದ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ, ದೇವರಾಜ ಅರಸು ನಮ್ಮನ್ನು ಒಬಿಸಿಗೆ ಸೇರಿಸಿದ್ರು
Team Udayavani, Jun 13, 2022, 6:03 PM IST
ಕಾರವಾರ: ಚಿನ್ನ, ಬೆಳ್ಳಿ ದರ ಏರಿಕೆಯಾಗಿದ್ದು, ಆಭರಣ ತಯಾರಿಸುವ ಕಾರ್ಮಿಕರ ಬದುಕು ಕಷ್ಟವಾಗಿದೆ. ಇನ್ನೊಂದೆಡೆ ನಮ್ಮನ್ನು ಮತದಾರರಾಗಿ ಮಾತ್ರ ಈಗ ಅಧಿಕಾರದಲ್ಲಿರುವ ಪಕ್ಷ ಬಳಸಿಕೊಂಡಿದೆ ಎಂದು ದೈವಜ್ಞ ಸಮಾಜದ ಮುಖಂಡ ವಿಜಯ್ ವರ್ಣೇಕರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗ ಅಧಿಕಾರದಲ್ಲಿರುವ ಸರ್ಕಾರ ನಮ್ಮ ಸಮಾಜದ ಸಮಸ್ಯೆಗಳನ್ನು ಪರಿಹರಿಸುತ್ತಿಲ್ಲ ಎಂದರು.
ಚಿನ್ನ, ಬೆಳ್ಳಿ ದರ ಏರಿದೆ. ಸರ್ಕಾರ ನಮ್ಮ ಕಡೆ ನೋಡುತ್ತಿಲ್ಲ. ಬಂಗಾರದ ಕೆಲಸ ಮಾಡುವ ನಾವು ರಾಜ್ಯದ 18 ವಿಧಾನಸಭೆ ಮತ್ತು 5 ಲೋಕಸಭಾ ಕ್ಷೇತ್ರದಲ್ಲಿ ಪ್ರಭಾವಶಾಲಿ ಮತಾದರರಾಗಿದ್ದೇವೆ. ಬಿಜೆಪಿ ಗೆಲ್ಲಿಸುತ್ತಾ ಬಂದಿದ್ದೇವೆ. ಹಾಗಾಗಿ ನಾವು ಬಿಜೆಪಿಗೆ ಬ್ರಾಂಡ್ ಆಗಿದ್ದೇವೆ. 2013, 2018 ರಲ್ಲಿ ನಮ್ಮ ಸಮುದಾಯಕ್ಕೆ ಟಿಕೆಟ್ ತಪ್ಪಿಸಲಾಯಿತು. ನಮಗೆ ರಾಜಕೀಯ ಪ್ರಾತಿನಿಧ್ಯವೇ ಇಲ್ಲವಾಗಿದೆ ಎಂದರು.
ನಮ್ಮನ್ನು ಕೇವಲ ಕಾರ್ಯಕರ್ತರಾಗಿ ಬಳಸಿಕೊಳ್ಳಲಾಗುತ್ತದೆ. ಹಾಗಾಗಿ ನಾವು ಇವತ್ತು ನಮ್ಮ ಸಮಾಜದ ರಾಷ್ಟ್ರೀಯ ಅಧ್ಯಕ್ಷರ ನೇತೃತ್ವದಲ್ಲಿ ಸಭೆ ಮಾಡಿ ನಿರ್ಣಾಯಕಕ್ಕೆ ಬರುತ್ತಿದ್ದೇವೆ. ನಾವು ಭಾರತಕ್ಕೆ ರೈಲ್ವೆ ಪ್ರಾರಂಭಕ್ಕೆ ಮಹತ್ವದ ಪಾತ್ರ ವಹಿಸಿದ್ದೆವು. ಭಾರತದ ಬೆಳವಣಿಗೆಗೆ ಸಮಾಜ ಕೆಲಸ ಮಾಡಿದೆ ಎಂದರು.
ನಮಗಿಂತ ಕಡಿಮೆ ಜನಸಂಖ್ಯೆ ಇರುವ ಸಮಾಜಕ್ಕೆ ಎರಡು ಮಂತ್ರಿ ಸ್ಥಾನ, ಕೇಂದ್ರದಲ್ಲಿ ಹಲವು ಸಚಿವ ಸ್ಥಾನ ನೀಡಿದ್ದಾರೆ. ಆದರೆ ದೈವಜ್ಞ ಸಮಾಜವನ್ನು ನಿರ್ಲಕ್ಷಿಸಲಾಗಿದೆ ಎಂದರು.
ದೈವಜ್ಞ ಸಮಾಜದ ರಾಷ್ಟ್ರೀಯದ ಅಧ್ಯಕ್ಷ ದೆಹಲಿಯ ದಿನಕರ ಬೈಕೇರಿಕರ್ ಮತನಾಡಿ, ನಮ್ಮ ಭಾವನೆಗಳನ್ನು ಮಾಧ್ಯಮದವರು ಸರಕಾರಕ್ಕೆ ತಿಳಿಸಬೇಕು. ಬಂಗಾರ, ವಜ್ರ, ವೈಢೂರ್ಯ ವ್ಯವಹಾರ ಮಾಡ್ತಿವಿ. ನಾವು ಹೆಚ್ಚು ತೆರಿಗೆ ಕಟ್ಟುತ್ತೇವೆ. ನಾವು ಓಬಿಸಿಯಲ್ಲಿದ್ದೇವೆ. ಆಭರಣ ಮಾಡುವ ವಿದ್ಯೆ ನಾವೇ ಕಲಿಯುತ್ತೇವೆ. ಆದರೆ ಸರ್ಕಾರ ನಮ್ಮನ್ನು ನಿರ್ಲಕ್ಷಿಸಿದೆ ಎಂದರು.
ಭಿಕ್ಷೆ ಬೇಡುವುದು ನಮ್ಮ ಸಮಾಜದ ಸ್ವಭಾವವಲ್ಲ. ನಮ್ಮ ಶ್ರಮಕ್ಕೆ ಸರ್ಕಾರವೇ ನೆರವು ನೀಡಬೇಕು ಎಂದರು. ಹಾಲಿ ಬಿಜೆಪಿ ಸರ್ಕಾರ ಹಜಾಮರಿಗೆ ಸೌಕರ್ಯ ನೀಡುತ್ತದೆ. ಪ್ರಾತಿನಿಧ್ಯ ನೀಡುತ್ತದೆ ನಮ್ಮನ್ನು ನಿರ್ಲಕ್ಷಿಸಿದೆ ಎಂದರು.
ನಮ್ಮನ್ನು ಕರ್ನಾಟಕದಲ್ಲಿ ನಿರ್ಲಕ್ಷಿಸಿದೆ. ಮಹಾರಾಷ್ಟ್ರದಲ್ಲಿ ನಮಗೆ ಪ್ರಾತಿನಿಧ್ಯವಿದೆ. ಅಲ್ಲಿನ ಸರ್ಕಾರ ಚೆನ್ನಾಗಿ ನೋಡಿಕೊಳ್ತದೆ. ಹಣ, ಅಧಿಕಾರ, ದೈಹಿಕ ಶಕ್ತಿ ಸಮಾಜಕ್ಕೆ ಬೇಕು. ಇವತ್ತು ಮಂತ್ರಿಗಳ ಜತೆ ನಾಲ್ಕು ಗೂಂಡಾ ಇರ್ತಾರೆ. ಹಾಗಾಗಿ ನಮಗೆ ರಾಜಕೀಯ ಪ್ರಾತಿನಿಧ್ಯ ಬೇಕು. ನಮ್ಮ ಸಮಾಜದ ನಾನಾ ಶಂಕರ್ ಶೇಟ್ ಸಮಾಜಕ್ಕೆ ಉಪಕಾರ ಮಾಡಿದ್ದಾರೆ. ಅವರನ್ನು ಆರ್ಕಿಟೆಕ್ಟ್ ಆಫ್ ಇಂಡಿಯಾ ಎಂದು ಕರೀತಾರೆ. ಆದರೆ ಅವರ ನಂತರ ನಮ್ಮನ್ನ ಸರ್ಕಾರ ನಿರ್ಲಕ್ಷಿಸಿದೆ. ಜುವೆಲರಿ ಪಾರ್ಕ್ ಮಾಡಲಿಲ್ಲ. ಇನ್ನಾದರೂ ಸರ್ಕಾರ ನಮಗೆ ರಾಜಕೀಯ ಪ್ರಾತಿನಿಧ್ಯ ನೀಡಲಿ ಎಂದರು.
ಧಾರವಾಡ ರವಿ ಗಾಂವ್ಕರ್ ಮಾತನಾಡಿ, ನಮಲ್ಲಿ ಸಂಘಟನೆ ಕೊರತೆಯಿದೆ. ನಾವು ಜನಸಂಘದ ಕಾಲದಿಂದ ರಾಜಕೀಯ ಪ್ರೋತ್ಸಾಹದಲ್ಲಿ ಇದ್ದೀವಿ. ರಾಜಕೀಯ ಪಕ್ಷಗಳ ಮುಂದೆ ಹಠ ಮಾಡಿಲ್ಲ. ಇನ್ನು ಜನಸಮೂಹ ಒಟ್ಟಾಗಬೇಕಿದೆ. ಒಟ್ಟಾಗುತ್ತೇವೆ ಎಂದರು.
ಇವತ್ತಿನ ಪತ್ರಿಕಾಗೋಷ್ಠಿ ಯಾವ ಪಕ್ಷದ ವಿರುದ್ಧವಲ್ಲ, ಪರವೂ ಅಲ್ಲ. ಆದರೆ ಬಿಜೆಪಿ ನಮ್ಮನ್ನ ನಿರ್ಲಕ್ಷಿಸಿದೆ. 2008 ರಲ್ಲಿ ಸಿಟ್ಟಿಂಗ್ ಎಂಎಲ್‌ಎ ಗಂಗಾಧರ ಭಟರನ್ನು ನಿರ್ಲಕ್ಷಿಸಿದೆ. ಅವರಿಗೆ ಟಿಕೆಟ್ ತಪ್ಪಿಸಲು ಕಾರಣವೇ ಇರಲಿಲ್ಲ. ಎಂಎಲ್‌ಸಿ ಚುನಾವಣೆಯಲ್ಲಿ ನಮ್ಮನ್ನು ನಿರ್ಲಕ್ಷಿಸಿದೆ. ಮುಂದೆ ಯಾವ ರಾಜಕೀಯ ಪಕ್ಷ ನಮಗೆ ಪ್ರಾತಿನಿಧ್ಯ ಕೊಡ್ತಾರೋ ಅವರ ಜೊತೆ ಇರ್ತೇವೆ. ಕಾಂಗ್ರೆಸ್ ಬಿಂಬಾ ರಾಯ್ಕರ್‌ಗೆ ಶಾಸಕರನ್ನು ಮಾಡಿತ್ತು. ಆದರೆ ಬಿಜೆಪಿ ಗಂಗಾಧರ ಭಟ್ಟರನ್ನು ನಿರ್ಲಕ್ಷಿಸಿತು ಎಂದು ವಿಜಯ್ ವರ್ಣೇಕರ್ ಹೇಳಿದರು.
ಬಿಜೆಪಿ ಬ್ರಾಂಡ್ ಆಗಿದ್ದೆವು. ಈಗ ಇದನ್ನು ಮರು ಪರಿಶೀಲನೆ ಮಾಡ್ತೇವೆ. ದೇವರಾಜು ಅರಸು ನಮ್ಮನ್ನ ಹಿಂದುಳಿದ ವರ್ಗಕ್ಕೆ ಸೇರಿಸಿದರು. ನಾವು ಸೌಮ್ಯವಾದಿಗಳು. ಇನ್ನು ಮುಂದೆ ಬದಲಾವಣೆ ತರುತ್ತೇವೆ ಎಂದರು. ಮಂಗಳೂರು, ಕೇರಳ, ಗೋವಾ ದೈವಜ್ಞ ಸಮಾಜದ ಮೋಹನ್ ಶೇಟ್, ಉದಯ ರಾಯ್ಕರ್, ಸುಧಾಕರ ಶೇಟ್, ಹಾಗೂ ಇತರೆ ಮುಖಂಡರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.