ನಗರಾಭಿವೃದ್ಧಿಯೋ-ವೃದ್ಧಾಪ್ಯವೋ?
Team Udayavani, Mar 4, 2020, 5:11 PM IST
ಹೊನ್ನಾವರ: ನಗರಾಭಿವೃದ್ಧಿ ನಗರೋತ್ಥಾನ ಎಂಬ ಹೆಸರಿನಲ್ಲಿ ಆರಂಭವಾದ ಕಾಮಗಾರಿ ಸರಿಪಡಿಸುವ ಅಧಿಕಾರ ಪಪಂಗೂ ಇಲ್ಲ, ಶಾಸಕರ ಮಾತು ಕೇಳುವುದಿಲ್ಲ. ಈ ಯೋಜನೆಯಡಿ
ಆರಂಭವಾದ ಹೊನ್ನಾವರ ಒಳಚರಂಡಿ ಕಾಮಗಾರಿ ಅರ್ಧದಷ್ಟು ಮುಗಿದಿಲ್ಲ. ಈಗ ಕೆಲವರು ಬೇಡವಾಗಿತ್ತು ಅನ್ನುತ್ತಾರೆ. ಹೊಟ್ಟೆ ಸೀಳಿ ಶಸ್ತ್ರಚಿಕಿತ್ಸೆ ಮಾಡಿ ಹೊಲಿಗೆ ಹಾಕಿದಂತೆ ರಸ್ತೆ ಮಧ್ಯೆ ಸರಿಯಾದ ರಸ್ತೆಯನ್ನು ಅಗೆದು ಒಳಚರಂಡಿ ಪೈಪ್ ಸೇರಿಸಿ, ಚೇಂಬರ್ ನಿರ್ಮಿಸಿದ್ದು ಇದು ರಸ್ತೆಗಿಂತ ಎತ್ತರವಾಗಿದೆ. ಒಬ್ಬ ಅರ್ಧ ಓದಿದ ಸರ್ಜನ್ ಮಾಡಿದ ಶಸ್ತ್ರಕ್ರಿಯೆಯಂತಿದೆ. ಪ್ರಭಾತನಗರ, ಪೇಟೆ ಮತ್ತು ದುರ್ಗಾಕೇರಿ ಎಂಬ ಮೂರು ಹಂತದಲ್ಲಿ ಹರಡಿರುವ ಹೊನ್ನಾವರ ಪಟ್ಟಣದಲ್ಲಿ ಗುಡ್ಡದ ಓರೆಗಳಲ್ಲಿ ಕೆಳಗಿನಪಾಳ್ಯ, ಗುಂಡಿಬೈಲ್, ಮಡಿವಾಳ ಹಳ್ಳ ಮೊದಲಾದ ಪ್ರದೇಶಗಳು ಎತ್ತರ, ತಗ್ಗಿನಲ್ಲಿದೆ. ಇಲ್ಲಿ ಹೇಗೆ ಒಳಚರಂಡಿ ಮಾಡಿದರೂ ಸಮಸ್ಯೆ ಖಂಡಿತ ಆಗಿರುವಾಗ ಕಳಪೆ ಕಾಮಗಾರಿ ನಗರದ ಸೌಂದರ್ಯ ಮುಕ್ಕು ಮಾಡಿದೆ.
ಶುರುವಿಂದಲೂ ಸಮಸ್ಯೆಗಳ ಸರಮಾಲೆ ಸೃಷ್ಟಿಸುತ್ತಿರುವ ನಗರಾಭಿವೃದ್ಧಿ ಯೋಜನೆಯ ಒಳಚರಂಡಿ ಕಾಮಗಾರಿ ಅವಾಂತರ ಜನರ ನೆಮ್ಮದಿ ಕೆಡಿಸಿದೆ. ಜನ ಹಲವು ಬಾರಿ ಪ್ರತಿಭಟಿಸಿ ಮುಗಿದಿದೆ. ಪಟ್ಟಣದ ಪ್ರಮುಖ ಮಾರ್ಗದ ರಸ್ತೆಗಳನ್ನೆಲ್ಲ ಅಗೆದು ನಾನಾಚಾರ ಮಾಡಿರುವ ಗುತ್ತಿಗೆದಾರರು ತಮ್ಮ ಮನಸ್ಸಿಗೆ ತೋಚಿದಂತೆ ಕೆಲಸ ಮಾಡುತ್ತಿದ್ದಾರೆ ಎನ್ನುವ ಆರೋಪ ಇಂದು ನಿನ್ನೆಯದಲ್ಲ. ಆದರೂ ಇದನ್ನು ಪ್ರಶ್ನಿಸಿದವರಿಗೆ ಒಂದಲ್ಲ ಒಂದು ಸಬೂಬು ಹೇಳಿ ಜಾರಿಕೊಳ್ಳುತ್ತಿದ್ದಾರೆ ಎಂದು ಶಾಸಕರಲ್ಲಿಯೂ ಜನ ದೂರಿದ್ದರು. ಹಿಂದಿನ ಶಾಸಕಿ ಶಾರದಾ ಶೆಟ್ಟಿಯವರ ಕಾಲದಲ್ಲಿ ಯೋಜನೆ ಜಾರಿಗೆ ಬಂತು, ಆಗ ಕಾಮಗಾರಿ ಸರಿ ಇಲ್ಲ ಎಂದು ಪ್ರತಿಭಟಿಸಿದ ಪಕ್ಷದವರು ಈಗ ಅಧಿಕಾರದಲ್ಲಿದ್ದಾರೆ. ಕಾಮಗಾರಿ ನಿಂತೇ ಹೋಗಿದೆ. ಇವರು ಬಾಯಿ ಬಿಡುತ್ತಿಲ್ಲ. ಆಗ ಒಳಚರಂಡಿ ನೀರು
ಶುದ್ಧಗೊಳಿಸುವ ಘಟಕಕ್ಕೆ ಆಯ್ಕೆಯಾದ ಜಾಗದ ಪರಿಸರದವರು ಈಗ ನಮ್ಮಲ್ಲಿ ಬೇಡ, ಕೋರ್ಟಿಗೆ ಹೋಗುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ. ಒಟ್ಟಾರೆ ಕಾಮಗಾರಿ ನಿಂತಿದೆ. ಹತ್ತು ಹಲವಾರು ಮನವಿ ಸಲ್ಲಿಕೆಯ ಜೊತೆಗೆ ಕೆಲದಿನಗಳ ಹಿಂದೆ ಶಾಸಕರ ನೇರೃತ್ವದಲ್ಲಿ ಸಭೆ ಸೇರಿ ಅಧಿಕಾರಿಗಳು ಹಾಗೂ ಸಾರ್ವಜನಿಕರ ಮುಖಾಮುಖೀ ಚರ್ಚೆಯೂ ನಡೆದು ಜನರಿಗೆ ತೊಂದರೆಯಾಗದ ರೀತಿಯಲ್ಲಿ ಗುಣಮಟ್ಟದ ಕಾಮಗಾರಿ ನಡೆಸುವಂತೆ ಶಾಸಕರು ಸಂಬಂಧಪಟ್ಟವರಿಗೆ ಸೂಚಿಸಿದ್ದರು ಅಂತೂ ಇಂದು ಸಮಸ್ಯೆ ಬಗೆಹರಿಯಿತು ಎಂದುಕೊಂಡಿದ್ದ ನಗರದ ನಿವಾಸಿಗಳ ನಿರೀಕ್ಷೆ ಹುಸಿಯಾಗಿದ್ದು ಗುತ್ತಿಗೆದಾರರು ತಮ್ಮ ಹಳೆಯ ಚಾಳಿಯನ್ನು ಮುಂದುವರಿಸಿರುವುದು ಕಂಡುಬಂದಿದೆ.
ಸಾರಿಗೆ ಬಸ್ಸು, ಪ್ರಯಾಣಿಕರ ಟೆಂಪೋ ನಿಲ್ದಾಣಕ್ಕೆ ಮರಳುವ ಮಾರ್ಗವಾದ ಕೋರ್ಟ್ ರಸ್ತೆಯನ್ನು ಕೆಲದಿನಗಳ ಹಿಂದೆ ಅಗೆದು ಹೊಂಡ ಗುಂಡಿಗಳನ್ನು ನಿರ್ಮಿಸಿದ್ದಾರೆ. ಇದರಿಂದ ತಾಲೂಕಾಸ್ಪತ್ರೆಗೆ ಬರುವ ರೋಗಿಗಳಿಗೆ, ಕೋರ್ಟ್‌ಗೆ ಬರುವವರಿಗೆ, ತೋಟಗಾರಿಕೆ ಇಲಾಖೆಗೆ ಬರುವ ರೈತರಿಗೆ, ಪಕ್ಕದಲ್ಲಿರುವ ಶಾಲೆಗೆ ಆಗಮಿಸುವ ಸಾವಿರಾರು ವಿದ್ಯಾರ್ಥಿಗಳಿಗೆ ನಿತ್ಯ ಸಂಕಟ ತಂದಿಟ್ಟಿದ್ದು ಯಾವಾಗ ಮುಗಿಯುತ್ತೋ ಅಂದುಕೊಂಡಿದ್ದು ಮುಗಿದರೂ ಸಮಸ್ಯೆ ತಪ್ಪಿಲ್ಲ. ಮುಚ್ಚಳಗಳು ಎದ್ದು ನಿಂತಿವೆ.
ಕೇವಲ ಸಾರ್ವಜನಿಕರಿಗಷ್ಟೇ ಅಲ್ಲದೆ ಪಟ್ಟಣದಲ್ಲಿ ಸಂಚರಿಸುವ ಆಟೋ ಚಾಲಕರಿಗೂ ಸವಾಲಾಗಿರುವ ರಸ್ತೆಯನ್ನು ಪಪಂನವರು ಮುತುವರ್ಜಿವಹಿಸಿ ತಕ್ಷಣ ಸರಿಪಡಿಸಬೇಕು ಎಂದು ರಿಕ್ಷಾದವರು ಪ್ರತಿಭಟಿಸಿದ್ದರೂ ಪ್ರಯೋಜನವಿಲ್ಲವಾಗಿದೆ. ಹೇಳಿಕೊಳ್ಳುವುದಕ್ಕೆ ಪ್ರಭಾತ ನಗರ ಹೊನ್ನಾವರ ಪಟ್ಟಣದ ಪ್ರತಿಷ್ಠಿತ ಏರಿಯಾ ಇಲ್ಲಿನ ಬಹತೇಕ ಮನೆಗಳಲ್ಲಿ ವಾಸಿಸುವವರು ವೈದ್ಯರು, ಉಪನ್ಯಾಸಕರು, ಉದ್ಯಮಿಗಳು ರಾಜಕೀಯ ನಾಯಕರುಗಳೇ ಆಗಿದ್ದಾರೆ. ಕೇವಲ ಸಿರಿವಂತರ ಬಡಾವಣೆ ಎನ್ನುವುದಕ್ಕಿಂತ ಹೆಚ್ಚಿನ ಶಾಲಾ ಕಾಲೇಜುಗಳು ಕೇಂದ್ರೀಕೃತ ವಾಗಿರುವುದು ಇದೇ ಪ್ರದೇಶದಲ್ಲಿಯೇ ಆಗಿರುವುದರಿಂದ ತಾಲೂಕಿನ ಹಲವಾರು ಕಡೆಗಳಿಂದ ಬರುವ ವಿದ್ಯಾರ್ಥಿಗಳು ಹದಗೆಟ್ಟ ರಸ್ತೆಯಲ್ಲಿ ಓಡಾಡುವುದಕ್ಕೆ ಕಷ್ಟವಾಗಿದೆ. ಕೋಟ್ಯಾಂತರ ರೂ. ವೆಚ್ಚದಲ್ಲಿ ಕೆಲವೆಡೆ ಕಾಂಕ್ರೀಟು, ಕೆಲವೆಡೆ ಟಾರು ರಸ್ತೆ ಅಲ್ಲಲ್ಲಿ ತೇಪೆ ಹಾಕಿದಂತೆ ನಿರ್ಮಾಣವಾಗುತ್ತಿದೆ. ಒಳಚರಂಡಿಗಿಂತ ಹೊರಚರಂಡಿ ಇನ್ನೂ ಅವ್ಯವಸ್ಥಿತವಾಗಿದೆ. ನಗರಸಭೆ ಸದಸ್ಯರು ಆಯ್ಕೆಯಾಗಿ ವರ್ಷವಾದರೂ ಅಧಿಕಾರವಿಲ್ಲದೇ ಕೂತಿದ್ದಾರೆ. ಅಭಿವೃದ್ಧಿ ಅನಾಥವಾಗಿದೆ.
-ಜೀಯು, ಹೊನ್ನಾವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೆಳೆವಿಮೆ ಸಿಗದೆ ಕೃಷಿಕರ ಪರದಾಟ: ಅಡಕೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸದ ಸರ್ಕಾರ
Belekeri Mining Case: ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಜೈಲು ಶಿಕ್ಷೆಗೆ ಹೈಕೋರ್ಟ್ ತಡೆ
ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಹೊತ್ತಿ ಉರಿದ ಲಾರಿ… ಅಪಾರ ಪ್ರಮಾಣದ ಸೊತ್ತು ಬೆಂಕಿಗಾಹುತಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Hollywood: Billy the kid- ಹಾಲಿವುಡ್ ಹಿರಿಯ ನಟ ಜೆಫ್ರಿ ಡ್ಯುಯೆಲ್ ಇನ್ನಿಲ್ಲ
Snowfall; ಭಾರೀ ಹಿಮಪಾತದಿಂದಾಗಿ ಜಮ್ಮು-ಶ್ರೀನಗರ ಹೆದ್ದಾರಿ ಬಂದ್; ಸಿಲುಕಿದ ವಾಹನಗಳು
Cooking Oil: ಅಡುಗೆ ಎಣ್ಣೆ ಆಮದು ಸವಾಲು
National Emblem: ರಾಷ್ಟ್ರ ಲಾಂಛನ ದುರ್ಬಳಕೆಯ ದುಸ್ಸಾಹಸಕ್ಕೆ ಬೀಳಲಿ ಕಡಿವಾಣ
Ullala; ನೇಮದ ಗದ್ದೆಯಲ್ಲಿ ತ್ಯಾಜ್ಯ ರಾಶಿ: ವೈದ್ಯನಾಥ ದೈವದ ಕೋಪಾವೇಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.