ಲಾಭದಾಯಕ ಬೆಳೆ ಕೋಕಂ

Team Udayavani, May 5, 2019, 4:27 PM IST

nc-2

ಶಿರಸಿ: ಜಿಲ್ಲೆಯ ಜನತೆ ಬೆಟ್ಟ ಪ್ರದೇಶಗಳನ್ನು ಸೂಕ್ತವಾಗಿ ಬಳಸಿಕೊಂಡು ಲಾಭದಾಯಕ ಕೋಕಂ ಬೆಳೆ ಬೆಳೆಯುವ ಮೂಲಕ ಆರ್ಥಿಕಾದಾಯ ಹೆಚ್ಚಿಕೊಳ್ಳಬೇಕೆಂದು ಗೋವಾದ ಕೋಕಂ ಫೌಂಡೇಶನ್‌ ಅಧ್ಯಕ್ಷ ಅಜಿತ್‌ ಶಿರೋಳಕರ್‌ ಕರೆ ನೀಡಿದರು.

ಇಲ್ಲಿಯ ಕದಂಬ ಮಾರ್ಕೆಟಿಂಗ್‌ ಸೌಹಾರ್ದ ಸಹಕಾರಿ ಸಂಸ್ಥೆ ಹಾಗೂ ನಾನಾ ಸಂಘಟನೆಗಳ ಸಹಭಾಗಿತ್ವದಲ್ಲಿ ಪ್ರಸಕ್ತ ಸಾಲಿನ ಆತ್ಮ ಯೋಜನೆಯಡಿ ಕದಂಬ ಮಾರ್ಕೆಟಿಂಗ್‌ ಆವರಣದಲ್ಲಿ ಶನಿವಾರ ನಡೆಸಲಾದ ರಾಜ್ಯಮಟ್ಟದ ಕೋಕಂ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಶಿರಸಿಯಂತ ಸಣ್ಣ ಪಟ್ಟಣದಲ್ಲಿನ ಕೃಷಿಕರು ಕೋಕಂ ಬೆಳೆಯ ಮೂಲಕ ಜಗತ್ತಿನ ಗಮನ ಸೆಳೆಯುವಂತಾಗಬೇಕು. ಶೇ. 70ರಷ್ಟು ಕೃಷಿಯನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಕೃಷಿಕರು ಬದಲಾವಣೆ ಹಾದಿಯಲ್ಲಿ ಸಾಗಬೇಕು. ಮುಂದಿನ ಪೀಳಿಗೆಯ ಜನರಿಗೆ ಕೃಷಿ ಪಾಠ ಹೇಳಿಕೊಡುವ ಕಾರ್ಯಗಳು ಅವಶ್ಯವಾಗಿ ನಡೆಯಬೇಕಿದೆ ಎಂದರು. ನೆರೆಯ ಗೋವಾದಲ್ಲಿ ಕೋಕಂ ಬೆಳೆಯನ್ನು ದೇಶದಲ್ಲೆ ಅತಿಯಾಗಿ ಬೆಳೆಯಲಾಗುತ್ತಿದೆ. ಮುರುಗಲ ಹಣ್ಣು ಆರೋಗ್ಯದಾಯಕದ ಜೊತೆಗೆ ಹೆಚ್ಚಿನ ಆದಾಯ ತಂದುಕೊಡುವ ಬೆಳೆಯಾಗಿದೆ. ಮುರುಗಲಿನಿಂದ ತಯಾರಿಸಲ್ಪಡುವ ಮೌಲ್ಯವರ್ಧಿತ ಉತ್ಪನ್ನಗಳನ್ನು ಆಯುರ್ವೇದ ವೈದ್ಯರ ಸಲಹೆಯಿಂದ ತಯಾರಿಸುವುದು ಉತ್ತಮ ಎಂದರು.

ಮುರುಗಲ ಹಣ್ಣು ಕ್ಯಾನ್ಸರ್‌ ರೋಗ ನಿಯಂತ್ರಿಕ ಅಂಶಗಳನ್ನು ಹೊಂದಿದೆ. ಒಮ್ಮೆ ಜಿಲ್ಲೆಯಲ್ಲಿ ಅಧಿಕ ಪ್ರಮಾಣದಲ್ಲಿ ಕೋಕಂ ಬೆಳೆ ಬೆಳೆಯುತ್ತೇವೆಂದು ತೋರ್ಪಡಿಸಿ, ಆ ನಂತರದಲ್ಲಿ ಕೋಕಂ ಉತ್ಪನ್ನಗಳನ್ನು ತಯಾರಿಸಲ್ಪಡುವ ಕಂಪನಿಗಳು ರೈತರ ಮನೆ ಬಾಗಿಲಿಗೆ ಬರುತ್ತವೆ. ಮಾರುಕಟ್ಟೆ ಸಮಸ್ಯೆ ಉಂಟಾಗುವುದಿಲ್ಲ ಎಂದರು.

ಕೃಷಿ ಅಧಿಕಾರಿ ಸತೀಷ ಹೆಗಡೆ ಮಾತನಾಡಿ, ಸಹ್ಯಾದ್ರಿ ತಪ್ಪಲಿನಲ್ಲಿ ಮುರುಗಲು ವ್ಯಾಪಕವಾಗಿ ಬೆಳೆಯಲ್ಪಡುತ್ತದೆ. ಕೇರಳದಿಂದ ಮಹಾರಾಷ್ಟ್ರದ ತನಕ ಮುರುಗಲು ಬೆಳೆ ವ್ಯಾಪಕವಾಗಿ ಹಬ್ಬಿದೆ. ಗೋವಾ ಮತ್ತು ಮಹಾರಾಷ್ಟ್ರದಲ್ಲಿ ಉದ್ಯಮದ ರೀತಿಯಲ್ಲಿ ಕೋಕಂ ಬೆಳೆಯಲಾಗುತ್ತಿದೆ. ಇಲಾಖೆಯಿಂದ ಲಕ್ಷಕ್ಕೂ ಅಧಿಕ ಕೋಕಂ ಗಿಡಗಳನ್ನು ಬೆಳೆಸಿ ರೈತರಿಗೆ ನೀಡಲಾಗಿದೆ. ಜಿಲ್ಲೆಯಲ್ಲಿ ಮೊದಲು ನಾಲ್ಕು ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದ ಕೋಕಂ ಬೆಳೆ ಈಗ ಜಿಲ್ಲೆಯ 41.45 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ ಎಂದರು.

ಕೋಕಂ ದರದಲ್ಲಿ ಅಗಾಧ ಪ್ರಮಾಣದ ವ್ಯತ್ಯಾಸದಿಂದ ರೈತರಿಗೆ ನಷ್ಟ ಉಂಟಾಗುತ್ತಿತ್ತು. ಆ ನಿಟ್ಟಿನಲ್ಲಿ ಕೋಕಂ ಸಂಸ್ಕರಿಸುವ ಘಟಕಗಳನ್ನು ತಯಾರಿಸಲಾಗಿದೆ. ಕೋಕಂ ಸಂಸ್ಕರಿಸಿ ಮಾರಾಟ ಮಾಡುತ್ತಿರುವುದಿಂದ ನಿರ್ದಿಷ್ಟ ದರ ಕೃಷಿಕರಿಗೆ ದೊರೆಯುತ್ತಿದೆ. ಸಂಸ್ಕರಣೆಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವ ಅಗತ್ಯತೆ ಇದೆ. ಗುಣಮಟ್ಟ ಕಾಯ್ದುಕೊಳ್ಳಲು ಸಂಸ್ಕರಣ ಘಟಕಗಳ ನಿರ್ವಹಣಾದಾರರಿಗೆ ಅಗತ್ಯ ಮಾಹಿತಿ ನೀಡಬೇಕಿದೆ ಎಂದರು. ಕದಂಬ ಅಧ್ಯಕ್ಷ ಶಂಭುಲಿಂಗ ಹೆಗಡೆ, ನಬಾರ್ಡ್‌ ಡಿ.ಡಿ.ಎಂ. ಯೋಗೇಶ, ಪಿ.ಆರ್‌. ಭಟ್ಟ, ಕೃಷಿ ವಿಜ್ಞಾನ ಕೇಂದ್ರದ ಡಾ| ರೂಪಾ ಪಾಟೀಲ್, ಐಭವನ ಸಿಂಗ್‌, ಕೋಕಂ ಮೌಲ್ಯವರ್ಧಿತ ಉತ್ಪನ್ನ ತಯಾರಿಸುವ ಸಾಗರ ಗೋಖಲೆ ಹಾಗೂ ಅಮಯ್‌ ಕುಲಕರ್ಣಿ, ವಿಜ್ಞಾನಿ ಐಬೋ ಎಮಿನೋ ಸಿಂಗ್‌ ಇದ್ದರು.

ಕದಂಬ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ವಿಶ್ವೇಶ್ವರ ಭಟ್ಟ ಸ್ವಾಗತಿಸಿದರು. ಮಂಜುನಾಥ ಭಟ್ಟ ನಿರೂಪಿಸಿದರು.

ಟಾಪ್ ನ್ಯೂಸ್

Chhattisgarh: ನಕ್ಸಲೀಯರ ಅಟ್ಟಹಾಸ- ಐಇಡಿ ಸ್ಫೋಟಕ್ಕೆ 9 ಯೋಧರ ದೇಹ ಛಿದ್ರ, ಛಿದ್ರ…

Chhattisgarh: ನಕ್ಸಲೀಯರ ಅಟ್ಟಹಾಸ- ಐಇಡಿ ಸ್ಫೋಟಕ್ಕೆ 9 ಯೋಧರ ದೇಹ ಛಿದ್ರ, ಛಿದ್ರ…

ಸಚಿವ ಸತೀಶ್ ಜಾರಕಿಹೊಳಿ

Yadagiri: ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇದೆ: ಸಚಿವ ಸತೀಶ್ ಜಾರಕಿಹೊಳಿ

Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ

Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ

Chamarajanagara: A third-grade girl passed away after collapsing in class.

Chamarajanagara: ತರಗತಿಯಲ್ಲಿ ಕುಸಿದು ಬಿದ್ದು ಮೂರನೇ ತರಗತಿ ಬಾಲಕಿ ಸಾವು

Bumrah’s injury worries Team India: Out of England series

Team India; ಬುಮ್ರಾ ಗಾಯದಿಂದ ಟೀಂ ಇಂಡಿಯಾಗೆ ಆತಂಕ: ಪ್ರಮುಖ ಸರಣಿಯಿಂದ ಔಟ್

Kerala: ತಂಜಾವೂರು ಪ್ರವಾಸ ಮುಗಿಸಿ ವಾಪಸ್ಸಾಗುತ್ತಿದ್ದ ಬಸ್ ಅಪಘಾತ: ನಾಲ್ವರು ಮೃತ್ಯು

Kerala: ತಂಜಾವೂರು ಪ್ರವಾಸ ಮುಗಿಸಿ ವಾಪಸ್ಸಾಗುತ್ತಿದ್ದ ಬಸ್ ಅಪಘಾತ: ನಾಲ್ವರು ಮೃತ್ಯು

HMP ವೈರಸ್:‌ ಜನರು ಭಯಪಡುವ ಅಗತ್ಯವಿಲ್ಲ-ಮಾಸ್ಕ್‌ ಬಗ್ಗೆ ಸಚಿವ ಗುಂಡೂರಾವ್‌ ಹೇಳಿದ್ದೇನು?

HMP ವೈರಸ್:‌ ಜನರು ಭಯಪಡುವ ಅಗತ್ಯವಿಲ್ಲ-ಮಾಸ್ಕ್‌ ಬಗ್ಗೆ ಸಚಿವ ಗುಂಡೂರಾವ್‌ ಹೇಳಿದ್ದೇನು?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Honnavara: ಲಾರಿ ಪಲ್ಟಿಯಾಗಿ ಇಬ್ಬರು ಸಾವು; ಮೂವರಿಗೆ ಗಾಯ

Honnavara: ಲಾರಿ ಪಲ್ಟಿಯಾಗಿ ಇಬ್ಬರು ಸಾವು; ಮೂವರಿಗೆ ಗಾಯ

KPTCL: ಕೆಪಿಸಿಗೆ 30 ಸಾವಿರ ಕೋಟಿ ರೂ. ಬಾಕಿ ಸಂಕಷ್ಟ !

KPTCL: ಕೆಪಿಸಿಗೆ 30 ಸಾವಿರ ಕೋಟಿ ರೂ. ಬಾಕಿ ಸಂಕಷ್ಟ !

7-dandeli

Dandeli: ಗಾಂಜಾ ಅಕ್ರಮ ಮಾರಾಟ ಯತ್ನ; ಮಾಲು ಸಹಿತ ಆರೋಪಿಯ ಬಂಧನ

6-honnavara

Honnavar: ಮೂವರು ಯುವಕರ ಬಲಿ ತೆಗೆದುಕೊಂಡ ಭೀಕರ ರಸ್ತೆ ಅಪಘಾತ

5-1

Mundgod: ಹಾವು ಕಡಿದು ಅಂಗನವಾಡಿ ಬಾಲಕಿ ಸಾವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Chhattisgarh: ನಕ್ಸಲೀಯರ ಅಟ್ಟಹಾಸ- ಐಇಡಿ ಸ್ಫೋಟಕ್ಕೆ 9 ಯೋಧರ ದೇಹ ಛಿದ್ರ, ಛಿದ್ರ…

Chhattisgarh: ನಕ್ಸಲೀಯರ ಅಟ್ಟಹಾಸ- ಐಇಡಿ ಸ್ಫೋಟಕ್ಕೆ 9 ಯೋಧರ ದೇಹ ಛಿದ್ರ, ಛಿದ್ರ…

ಸಚಿವ ಸತೀಶ್ ಜಾರಕಿಹೊಳಿ

Yadagiri: ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇದೆ: ಸಚಿವ ಸತೀಶ್ ಜಾರಕಿಹೊಳಿ

Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ

Kalaburagi: ಇನ್ಸೂರೆನ್ಸ್ ಆಸೆಗೆ ತಂದೆಯನ್ನೇ ಆಕ್ಸಿಡೆಂಟ್ ರೂಪದಲ್ಲಿ ಕೊಲೆ ಮಾಡಿದ ಮಗ

15(1

Udupi: ಜ.15ಕ್ಕೆ ಗಡುವು; ಕಾಮಗಾರಿ ಇನ್ನೂ ಮುಗಿದಿಲ್ಲ

ಗದಗ: ಸರ್ಕಾರಿ ಶಾಲೆ ಗೋಡೆಗೆ ಚಂದದ ಚಿತ್ತಾರ – ಬಂದಿದೆ ಜಿಲ್ಲಾಮಟ್ಟದ ಪ್ರಶಸ್ತಿ…

ಗದಗ: ಸರ್ಕಾರಿ ಶಾಲೆ ಗೋಡೆಗೆ ಚಂದದ ಚಿತ್ತಾರ – ಬಂದಿದೆ ಜಿಲ್ಲಾಮಟ್ಟದ ಪ್ರಶಸ್ತಿ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.