ಕಾರ್ಮಿಕ ವಿರೋಧಿ ನೀತಿ ವಿರುದ್ಧ ಪ್ರತಿಭಟನೆ
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ
Team Udayavani, Nov 27, 2020, 5:20 PM IST
ಹೊನ್ನಾವರ: ದುಡಿಯುವ ವರ್ಗಗಳ ಸಂವಿಧಾನಾತ್ಮಕ ಬೇಡಿಕೆ ಈಡೇರಿಸಲು ದೇಶಾದ್ಯಂತ 11 ಸಂಘಟನೆಗಳು ಜಂಟಿಯಾಗಿ ಮುಷ್ಕರ ನಡೆಸುತ್ತಿದ್ದು ತಾಲೂಕಿನಲ್ಲಿಯೂ ಸಿಐಟಿಯು ಜೊತೆ ವಿವಿಧ ಸಂಘಟನೆಯವರು ಒಗ್ಗೂಡಿ ಶರಾವತಿ ವೃತ್ತದ ಬಳಿಯಿಂದ ತಹಶೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣೆಗೆ ನಡೆಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಬೆಲೆ ಏರಿಕೆ ನಿಯಂತ್ರಣ ಮಾಡಲು ವಿಫಲವಾಗಿದ್ದು, ಎಲ್ಲಾ ವರ್ಗದ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕಾರ್ಮಿಕರನ್ನು ಗುಲಾಮರನ್ನಾಗಿಸುವ ಕಾಯ್ದೆ ಜಾರಿಗೆ ತರಲು ಮುಂದಾಗಿದೆ. ಅಂಗನವಾಡಿ ಬಿಸಿಯೂಟ ಆಶಾ ಸೇರಿದಂತೆ ವಿವಿಧ ರೀತಿಯಲ್ಲಿ ದುಡಿಯುವ ನೌಕರರನ್ನು ಕಾಯಂ ಮಾಡಲು ಮೀನಾಮೇಷ ಮಾಡುತ್ತಿದ್ದು, ಸೂಕ್ತ ವೇತನ ನೀಡುತ್ತಿಲ್ಲ.
ಹೊಸ ಶಿಕ್ಷಣ ನೀತಿ ಜಾರಿಗೆ ತರಲು ಮುಂದಾಗಿದ್ದು ಇದನ್ನು ಕೂಡಲೇ ರದ್ದುಗೊಳಿಸಬೇಕು. ಹಣಕಾಸು ವಲಯ, ರೈಲ್ವೆ, ರಕ್ಷಣಾ ವಲಯ ಖಾಸಗೀಕರಣ ಮಾಡುವುದನ್ನು ನಿಲ್ಲಿಸಬೇಕು. ಸರ್ಕಾರಿ ನೌಕರರ ಮೇಲಿನ ಅಕಾಲಿಕ ನಿವೃತ್ತಿ ವಾಪಸ್ ಪಡೆಯಬೇಕು.
ಇದನ್ನೂ ಓದಿ:ಮಲೆನಾಡ ಗಂಗೆ ಎಂದೇ ಪ್ರಸಿದ್ದಿ ಪಡೆದ ಹೇಮಾವತಿ ನದಿ ಉಗಮವಾಗಿದ್ದೇ ಇಲ್ಲಿ
ಎಲ್ಲರನ್ನು ಪಿಂಚಣೆವ್ಯಾಪ್ತಿಗೆ ತಂದು ಎನ್‌ಪಿಎಸ್ ಪದ್ಧತಿ ರದ್ದುಗೊಳಿಸಬೇಕು. ಉದ್ಯೋಗಖಾತ್ರಿ ಯೋಜನೆ ಕೆಲಸದ ದಿನವನ್ನು 200 ದಿನಗಳಿಗೆ ಹೆಚ್ಚಿಸಿ ಕೂಲಿಯ ಹಣ ಹೆಚ್ಚಿಸಬೇಕು. ನಾಗರಿಕ ಸೇವಾ ಅಧಿನಿಯಮ ಕಾಯ್ದೆ 2020ನ್ನು ಕೂಡಲೇ ವಾಪಸ್ ಪಡೆಯುವಂತೆ ಪ್ರಮುಖ 12 ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು.
ತಾಲೂಕು ದಂಡಾಧಿಕಾರಿ ವಿವೇಕ ಶೇಣ್ವಿ ಮನವಿ ಸ್ವೀಕರಿಸಿದರು. ಸಿಐಟಿಯು ಜಿಲ್ಲಾಧ್ಯಕ್ಷ ತಿಲಕ ಗೌಡ, ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಗೀತಾ ನಾಯ್ಕ, ಸಿಐಟಿಯು ತಾಲೂಕು ಅಧ್ಯಕ್ಷ ತಿಮ್ಮಪ್ಪ ಗೌಡ, ರೈತ ಸಂಘದ ಅಧ್ಯಕ್ಷ ಗಣೇಶ ಭಂಡಾರಿ, ಬಿಸಿಯೂಟ ನೌಕರರ ಸಂಘದ ತಾಲೂಕು ಅಧ್ಯಕ್ಷೆ ಶ್ರೀಮತಿ ನಾಯ್ಕ, ವಿವಿಧ ಸಂಘಟನೆ ಪ್ರಮುಖರಾದ ಬೀರ ಗೌಡ, ಗೋವಿಂದ ಮುಕ್ರಿ, ಅಣ್ಣಪ್ಪ ಗೌಡ, ವನಿತಾ ಆಚಾರಿ, ಮಂಜುನಾಥ ಗೌಡ ಸೇರಿದಂತೆ ಅಂಗನವಾಡಿ ಹಾಗೂ ಬಿಸಿಯೂಟ ನೌಕರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.