ಜಾಕ್‌ವೆಲ್ ಕಾಮಗಾರಿ ತಡೆಗೆ ಸಾರ್ವಜನಿಕರ ಒತ್ತಾಯ
Team Udayavani, Mar 14, 2021, 3:54 PM IST
ದಾಂಡೇಲಿ: ದಾಂಡೇಲಿಯಿಂದ ಅಳ್ನಾವರಕ್ಕೆ ನೀರುಕೊಂಡೊಯ್ಯುವ ಯೋಜನೆಗೆ ಸಂಬಂಧಪಟ್ಟಂತೆ,ಹಳೆದಾಂಡೇಲಿಯಲ್ಲಿ ಜಾಕ್ವೆಲ್ ಕಾಮಗಾರಿ ಪುನರಾರಂಭಿಸಿದ ಕುರಿತಂತೆ ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ ಪದಾಧಿಕಾರಿಗಳುಅಧ್ಯಕ್ಷ ಅಕ್ರಂ ಖಾನ್ ನೇತೃತ್ವದಲ್ಲಿ ಜಾಕ್ವೆಲ್ ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು.
ತಹಶೀಲ್ದಾರ್ ಶೈಲೇಶ ಪರಮಾನಂದ, ಕರ್ನಾಟಕ ನೀರು ಸರಬರಾಜು ಹಾಗೂಒಳಚರಂಡಿ ಮಂಡಳಿ ಸಹಾಯಕ ಕಾರ್ಯಪಾಲ ಅಭಿಯಂತರ ರವಿಕುಮಾರ್.ಕೆ, ಡಿವೈಎಸ್ಪಿ ಗಣೇಶ ಕೆ.ಎಲ್, ದಾಂಡೇಲಿ ಸಿಪಿಐ ಪ್ರಭು ಗಂಗನಹಳ್ಳಿ,ಹಳಿಯಾಳ ಸಿಪಿಐ ಮೋತಿಲಾಲ್ ಪವಾರ್ ಮುಂದೆ ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಅಕ್ರಂ ಖಾನ್ ಹಾಗೂ ಪದಾಧಿಕಾರಿಗಳಾದವಾಸುದೇವ ಪ್ರಭು, ಮಿಲಿಂದ ಕೋಡ್ಕಣಿ, ಅಬ್ದುಲ್ ವಹಾಬ ಬಾಂಸಾರಿ, ರಮೇಶ ನಾಯ್ಕ, ರಾಮಲಿಂಗ ಜಾಧವ, ಬಲವಂತ ಬೊಮ್ಮನಳ್ಳಿ, ಆರ್.ವಿ. ಗಡೆಪ್ಪನವರ ಮೊದಲಾದವರು ಮಾತನಾಡಿ, ನಾವೇನಿದ್ದರೂ ಕಾನೂನಾತ್ಮಕ ವಾಗಿ ಹೋರಾಟ ಮಾಡುತ್ತಿದ್ದೇವೆ. ಸಾರ್ವಜನಿಕವಾಗಿ ಅಹವಾಲು ಸಭೆ ಕರೆಯದೇ ದಾಂಡೇಲಿಯಿಂದ ಅಳ್ನಾವರಕ್ಕೆ ನೀರು ಕೊಂಡೊಯ್ಯುವ ಯೋಜನೆ ಅನುಷ್ಠಾನ ಪಡಿಸಿರುವುದು ಸರಿಯಲ್ಲ. ಜೈನ್ ವರದಿ ಅನುಷ್ಠಾನವಾಗಬೇಕು. ದಾಂಡೇಲಿ ಹಾಗೂ ರಾಮನಗರ, ಜಗಲಪೇಟೆ ಸೇರಿದಂತೆ ಜೊಯಿಡಾ ತಾಲೂಕಿಗೆ 24×7 ಕುಡಿಯುವ ನೀರು ಒದಗಿಸಬೇಕು. ನಮ್ಮೂರಿನಲ್ಲೆ ಕುಡಿಯುವ ನೀರಿನ ಸಮಸ್ಯೆಗಳಿರುವಾಗ ಅದನ್ನು ಪರಿಹರಿಸದೇ ಹೊರಜಿಲ್ಲೆಗೆ ನೀರು ಹರಿಸುವುದು ಎಷ್ಟರ ಮಟ್ಟಿಗೆ ಸರಿ.
ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ.ನಮ್ಮ ಜೊತೆ ಅಧಿಕಾರಿಗಳು ಸಭೆ ನಡೆಸಿ, ನಾವು ವಿರೋಧಿಸಿದರೂ, ಕಾಮಗಾರಿ ಆರಂಭಿಸಲಾಗಿದೆ.ಹಾಗಾದರೇ ಸಭೆ ನಡೆಸುವ ಉದ್ದೇಶವೇನಿತ್ತು?, ಸಭೆಯಲ್ಲಿ ಸಲ್ಲಿಸಿದ ನಮ್ಮ ಅಭಿಪ್ರಾಯಗಳಿಗೆ ಬೆಲೆ ಇಲ್ಲವೆ ಎಂದು ಪ್ರಶ್ನಿಸಿದ ಅವರು, ಈ ಯೋಜನೆ ಕುರಿತಂತೆ ಮತ್ತು ಸ್ಥಳೀಯ ಕುಡಿಯುವ ನೀರಿನ ಸಮಸ್ಯೆಗಳ ಪರಿಹಾರದ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಬೇಕು. ಅಲ್ಲಿಯವರೆಗೆ ಕಾಮಗಾರಿ ಸ್ಥಗಿತಗೊಳಿಸುವಂತೆ ಆಗ್ರಹಿಸಿದರು. ತಹಶೀಲ್ದಾರ್ ಶೈಲೇಶ ಪರಮಾನಂದ, ನಾವು ಸರಕಾರದಹಾಗೂ ಮೇಲಾಧಿಕಾರಿಗಳ ಆದೇಶದಂತೆ ಕಾರ್ಯ ನಿರ್ವಹಿಸಬೇಕಾಗಿದೆ. ಮೇಲಾಧಿಕಾರಿಗಳಆದೇಶವನ್ನು ಪಾಲಿಸುವುದು ನಮ್ಮ ಕರ್ತವ್ಯ.ಆದಾಗ್ಯೂ ಇಂದಿನ ಬೆಳವಣಿಗೆಗಳನ್ನುಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.
ಮಧ್ಯಪ್ರವೇಶಿಸಿದ ಡಿವೈಎಸ್ಪಿ ಗಣೇಶ ಕೆ.ಎಲ್, ದಾಂಡೇಲಿ ಸಿಪಿಐ ಪ್ರಭು ಗಂಗನಹಳ್ಳಿ, ಹಳಿಯಾಳ ಸಿಪಿಐ ಮೋತಿಲಾಲ್ ಪವಾರ್‌ಹೋರಾಟಗಾರರನ್ನು ಸಮಾಧಾನಪಡಿಸಿ, ಸರಕಾರದ ಯೋಜನೆಗೆ ಅಡ್ಡಿಪಡಿಸಬಾರದು. ಬೇಡಿಕೆಗಳಿದ್ದಲ್ಲಿ ಆಯಾಯ ಇಲಾಖೆಗೆ ಅರ್ಜಿ ಸಲ್ಲಿಸುವಂತೆ ಹೇಳಿದರು.
ದಾಂಡೇಲಿ ನಗರ ಹಾಗೂ ರಾಮನಗರ,ಜಗಲಪೇಟೆ ಸೇರಿದಂತೆ ಜೊಯಿಡಾ ತಾಲೂಕಿಗೆ24×7 ಕುಡಿಯುವ ನೀರಿನ ಯೋಜನೆತ್ವರಿತಗತಿಯಲ್ಲಿ ಅನುಷ್ಠಾನ ಪಡಿಸಿದಲ್ಲಿಸಧ್ಯದಲ್ಲಿರುವ ಅಸಮಾಧಾನದ ಹೊಗೆಯನ್ನುನಿಯಂತ್ರಿಸಲು ಸಾಧ್ಯವಿದ್ದು, ಈ ನಿಟ್ಟಿನಲ್ಲಿಜನಪ್ರತಿನಿಧಿಗಳು ಚಿಂತನೆ ನಡೆಸುವುದು ಒಳಿತೆಂಬ ಅಭಿಪ್ರಾಯ ಕೇಳಿಬರುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shimoga; ಕಾಂಗ್ರೆಸ್-ಮುಸ್ಲೀಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Manipal: ನಿತ್ಯ ಅಪಘಾತ ತಾಣವಾದ ಈಶ್ವರ ನಗರ-ಪರ್ಕಳ ರಸ್ತೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.