ಕರಾವಳಿ ಹೆಮ್ಮೆಯ ಸಂಸ್ಥೆ : ಆರ್‌.ಎನ್‌. ಶೆಟ್ಟಿ ರೂರಲ್‌ ಪಾಲಿಟೆಕ್ನಿಕ್‌


Team Udayavani, Jul 3, 2022, 10:00 AM IST

thumb ad 2 college

ಕರ್ನಾಟಕ ಕರಾವಳಿಯ ಹೆಮ್ಮೆಯ ಶಿಕ್ಷಣ ಸಂಸ್ಥೆಯಾದ ಆರ್‌.ಎನ್‌.ಶೆಟ್ಟಿ ರೂರಲ್‌ ಪಾಲಿಟೆಕ್ನಿಕ್‌ ರಾಜ್ಯದ ಶ್ರೇಷ್ಠ ಉದ್ಯಮಿ ಹಾಗೂ ಕೊಡುಗೈ ದಾನಿಯೆಂದೇ ಖ್ಯಾತರಾದ ಶ್ರೀಯುತ ದಿವಂಗತ ಡಾ|ಆರ್‌.ಎನ್‌. ಶೆಟ್ಟಿಯವರಿಂದ 1987ರಲ್ಲಿ ಸ್ಥಾಪಿಸಲ್ಪಟ್ಟು 35 ವರ್ಷಗಳಿಂದ ನಿರಂತರವಾಗಿ ಗ್ರಾಮೀಣ ಭಾಗದಲ್ಲಿ ತಾಂತ್ರಿಕ ಶಿಕ್ಷಣ ನೀಡುತ್ತ ಬಂದಿದೆ. ಎಷ್ಟೋ ಬಡ ಕುಟುಂಬದವರ ಬದುಕಿನಲ್ಲಿ ಬೆಳಕಾಗಿರುವ ಈ ಸಂಸ್ಥೆ ಕರ್ನಾಟಕ ರಾಜ್ಯದ ಕೆಲವೇ ಕೆಲವು ಶ್ರೇಷ್ಠ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿರುವುದು ನಾಡಿನ ಹೆಮ್ಮೆ. ಪ್ರಕೃತಿಯ ಸುಂದರವಾದ ಪರಿಸರದಲ್ಲಿ ತಾಂತ್ರಿಕ ಶಿಕ್ಷಣಕ್ಕೆ ಬೇಕಿರುವ ಎಲ್ಲಾ ಮೂಲ ಸೌಕರ್ಯಗಳನ್ನೊಳಗೊಂಡಿರುವ ಸುಸಜ್ಜಿತವಾದ ಪ್ರಯೋಗಾಲಯಗಳು, ಪ್ರತಿ ವಿಭಾಗಕ್ಕೂ ಬೇರೆಯದ್ದೇ ಆದ ಗಣಕ ಕೇಂದ್ರ, ಬೃಹತ್ತಾದ ಗ್ರಂಥಾಲಯ, ಇ-ಲೈಬ್ರರಿ ಸೌಲಭ್ಯ, ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಸುಸಜ್ಜಿತ ವಸತಿ ನಿಲಯದ ಸೌಲಭ್ಯ, ಅರ್ಹ, ಸಮರ್ಥ ಹಾಗೂ ಪರಿಣಿತಿ ಹೊಂದಿರುವ ಶಿಕ್ಷಕ ವೃಂದ ಸಂಸ್ಥೆಯ ವೈಶಿಷ್ಟ್ಯಗಳಾಗಿವೆ.

ಸಂಸ್ಥೆಯ ಏಳು ಎಂಜಿನಿಯರಿಂಗ್‌ ವಿಭಾಗದಲ್ಲಿ ಮೂರು ವರ್ಷ(ಆರು ಸೆಮಿಸ್ಟರ್‌) ಡಿಪ್ಲೊಮಾ ಶಿಕ್ಷಣ ನೀಡುತ್ತಿದೆ.
ಅವುಗಳು ಈ ಕೆಳಗಿನಂತಿವೆ.
1.ಕಂಪ್ಯೂಟರ್ ಸೈನ್ಸ್‌.
2.ಆಟೋಮೊಬೈಲ್‌ ಇಂಜಿನಿಯರಿಂಗ್‌
3.ಮೆಕ್ಯಾನಿಕಲ್‌ ಇಂಜಿನಿಯರಿಂಗ್‌
4.ಸಿವಿಲ್‌ ಇಂಜಿನಿಯರಿಂಗ್‌
5.ಎಲೆಕ್ಟ್ರಿಕಲ್‌-ಎಲೆಕ್ಟ್ರಾನಿಕ್ಸ್‌ ಇಂಜಿನಿಯರಿಂಗ್‌.
6.ಎಲೆಕ್ಟ್ರಾನಿಕ್ಸ್‌ ಆ್ಯಂಡ್‌ ಕಮ್ಯೂನಿಕೇಶನ್‌ ಇಂಜಿನಿಯರಿಂಗ್‌.
7.ಸಿರಾಮಿಕ್‌ ಟೆಕ್ನಾಲಜಿ
ಈ ಸಂಸ್ಥೆಯು ಬೆಂಗಳೂರು ತಾಂತ್ರಿಕ ಶಿಕ್ಷಣ ಮಂಡಳಿಯಿಂದ ಮಾನ್ಯತೆ ಪಡೆದಿದ್ದು, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯಿಂದ ಅನುಮೋದನೆ ಪಡೆದಿದೆ. ಪ್ರತಿ ವರ್ಷ ಕಾಲೇಜಿನ ಫಲಿತಾಂಶ ಅತ್ಯುತ್ತಮವಾಗಿದೆ. 2020-21ನೇ ಸಾಲಿನಲ್ಲಿ ಸುಮಾರು 85 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ ಹಾಗೂ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಪಾಸಾಗಿರುವುದು ಕಾಲೇಜಿನ ಶಿಕ್ಷಣ ವೃಂದದವರ ಕಾಳಜಿ ಮತ್ತು ಪರಿಶ್ರಮವನ್ನು ತೋರಿಸುತ್ತದೆ. ಸಂಸ್ಥೆ ತಾಂತ್ರಿಕ ಶಿಕ್ಷಣ ಜತೆಗೆ ಪಠ್ಯೇತರ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತ ಬಂದಿದ್ದು, ವಿದ್ಯಾರ್ಥಿಗಳ ಸಂಪೂರ್ಣ ವ್ಯಕ್ತಿತ್ವ ವಿಕಸನಕ್ಕೆ ಅನುಕೂಲಕರವಾದ ವೇದಿಕೆಯನ್ನು ನಿರ್ಮಿಸಿದೆ. ಅಲ್ಲದೇ ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ನಿರಂತರವಾಗಿ ಶ್ರಮಿಸುತ್ತಿದೆ. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ಸೇವಾ ಮನೋಭಾವ ಬೆಳೆಸಲು ಅನುಕೂಲ ಮಾಡುವಲ್ಲಿ ಸಂಸ್ಥೆಯು ರಾಷ್ಟ್ರೀಯ ಸೇವಾ ಯೋಜನೆಯಡಿಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಪ್ರತಿ ವರ್ಷ ಆಯೋಜಿಸುತ್ತ ಬಂದಿದೆ.

ಈ ಸಂಸ್ಥೆಯ ಪ್ಲೆಸ್‌ಮೆಂಟ್‌ ಘಟಕವು ಅತ್ಯಂತ ಸಮರ್ಥನೀಯವಾಗಿದ್ದು, ಪ್ರತಿ ವರ್ಷ ಪ್ರತಿಷ್ಠಿತ ಕಂಪನಿಗಳ ಸಂದರ್ಶನ ಆಯೋಜಿಸಿ ಹಲವಾರು ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶ ನೀಡಲು ಹಾಗೂ ಉದ್ಯೋಗವಕಾಶ‌ ಪಡೆಯಲು ಮಾರ್ಗದರ್ಶನ ನೀಡುತ್ತ ಬಂದಿದೆ. ಎಂ.ಸಿ.ಎಲ್‌. ಬೆಂಗಳೂರು,  ರಿಪ್ರಾಕ್ಟರರಿಸ್‌ ಲಿಮಿಟೆಡ್‌ ಬಳ್ಳಾರಿ, ಟಾಟಾ ಸಿರಾಮಿಕ್‌ ಲಿಮಿಟೆಡ್‌ ಕೇರಳ, ಹೆಚ್‌.ಎಸ್‌.ಪಿ.ಎಲ್‌. ಲಿಮಿಟೆಡ್‌ ಹೈದ್ರಾಬಾದ, ಸೌಸಿರಾಮಿಕ್‌ ಲಿಮಿಟೆಡ್‌ ಯು.ಎ.ಇ., ಕಾವೇರಿ ಪೋರ್‌ ಎಂಡ್‌ ಮ್ಯಾಗನಮ್‌ ಹೊಂಡಾ ಬೆಂಗಳೂರು, ಟೊಯೋಟಾ ಇಂಡಸ್ಟ್ರೀಸ್‌ ಇಂಜಿನ್‌ ಲಿಮಿಟೆಡ್‌ ಬೆಂಗಳೂರು, ಮೇಹಲೆ ಬೇಹರ್‌ ಇಂಡಿಯಾ ಲಿಮಿಟೆಡ್‌ ಪುಣೆ, ರಿಜನ್‌ ಪವರ್‌ಟೆಕ್‌ ಲಿಮಿಟೆಡ್‌, ಸ್ಟರ್‌ಲೈಟ್‌ ಟೆಕ್‌ ಮಹಾರಾಷ್ಟ್ರ, ಮುರುಡೇಶ್ವರ ಸಿರಾಮಿಕ್‌ ಲಿಮಿಟೆಡ್‌ ತುಮಕೂರು ಇಲ್ಲಿ ಸುಮಾರು 150 ವಿದ್ಯಾರ್ಥಿಗಳು ಉದ್ಯೋಗ ಪಡೆದಿರುವುದು ಸಂಸ್ಥೆಯ ಹೆಗ್ಗಳಿಕೆ.

ಆರ್‌.ಎನ್‌.ಎಸ್‌. ಪದವಿ ಪೂರ್ವ ಕಾಲೇಜು
ಆರ್‌.ಎನ್‌. ಶೆಟ್ಟಿ ಪದವಿ ಪೂರ್ವ ಕಾಲೇಜನ್ನು 1998ರಲ್ಲಿ ಮುರುಡೇಶ್ವರದ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶದ ಜನರ ಅನುಕೂಲಕ್ಕಾಗಿ ಕಲೆ, ವಿಜ್ಞಾನ, ವಾಣಿಜ್ಯ ವಿಭಾಗಗಳೊಂದಿಗೆ ಸ್ಥಾಪಿಸಲಾಯಿತು.ಭಾರತೀಯ ಮೌಲ್ಯಗಳನ್ನು ಗಮನದಲ್ಲಿಟ್ಟುಕೊಂಡು ಅವರ ಬೌದ್ಧಿಕ, ಭಾವನಾತ್ಮಕ, ಸಾಮಾಜಿಕ ಅಗತ್ಯಗಳನ್ನು ಪೂರೈಸಲು ಹದಿ ಹರೆಯದವರಿಗೆ ಮಾರ್ಗದರ್ಶನ ನೀಡುವುದು. ಪ್ರತಿಯೊಬ್ಬರು ಅನನ್ಯ ಮತ್ತು ಮುಖ್ಯವಾದ ವಾತಾವರಣದಲ್ಲಿ ವಿದ್ಯಾರ್ಥಿಗಳು ತಮ್ಮದೇ ಆದ ಹಿಂದಿನ ಕಾರ್ಯಕ್ಷಮತೆಯ ಆಧಾರದ ಮೇಲೆ ಉತ್ತಮವಾಗಿ ಕಾರ್ಯ ನಿರ್ವಹಿಸಲು ಸಕ್ರಿಯಗೊಳಿಸಲು ಸಂಸ್ಥೆ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ.ರಾಜ್ಯದಲ್ಲಿಯೇ ಉತ್ತಮ ಶಿಕ್ಷಣ ನೀಡುವ ಸಂಸ್ಥೆಗಳಲ್ಲಿ ಒಂದಾಗಿರುವ ಪಿಯು ಕಾಲೇಜಿನಲ್ಲಿ ವಿಜ್ಞಾನ-ವಾಣಿಜ್ಯ ವಿಷಯಗಳನ್ನು ಬೋ ಧಿಸಲಾಗುತ್ತಿದೆ.ವಿಜ್ಞಾನ-ವಾಣಿಜ್ಯ ವಿಭಾಗದಲ್ಲಿ ಸ್ಪರ್ಧಾತ್ಮಕ, ಕೈಗೆಟುಕುವ ಮತ್ತು ಪ್ರವೇಶಿಸಬಹುದಾದ ಶಿಕ್ಷಣ ಒದಗಿಸುತ್ತದೆ. ಮಧ್ಯಮ ವರ್ಗದ ಗುಂಪಿನ ಹದಿಹರೆಯದವರಿಗೆ ಪ್ರಯೋಜನ ನೀಡುತ್ತಿದ್ದು ಮೂಲ ಸೌಕರ್ಯ, ಆಟದ ಮೈದಾನ, ವಿಶಾಲವಾದ ತರಗತಿ ಕೊಠಡಿಗಳು, ಸುಸಜ್ಜಿತ ಪ್ರಯೋಗಾಲಯಗಳನ್ನು ಒಳಗೊಂಡಿದ್ದು, ವಿದ್ಯಾರ್ಥಿಗಳು ಕಲಿಕಾ ವಾತಾವರಣದಲ್ಲಿ ಕಲಿಕೆ ಮುಂದುವರಿಸಿದ್ದಾರೆ.ಕಾಲೇಜಿನಲ್ಲಿ ಸುಧಾರಿತ ಶಿಕ್ಷಣವು ವಿದ್ಯಾರ್ಥಿಗಳ ಮನಸ್ಸನ್ನು ಚೈತನ್ಯಗೊಳಿಸುತ್ತದೆ ಮತ್ತು ಅವರನ್ನು ಉಜ್ವಲ ಭವಿಷ್ಯಕ್ಕೆ ಕೊಂಡೊಯ್ಯುತ್ತದೆ ಇದರಿಂದ ಪೋಷಕರು, ಸಮಾಜ ಮತ್ತು ರಾಷ್ಟ್ರಕ್ಕೆ ರಚನಾತ್ಮಕವಾಗಿ ಕೊಡುಗೆ ನೀಡುವಲ್ಲಿ ಸಮರ್ಥರಾಗುತ್ತಾರೆ. ವಿವಿಧ ಸಹಪಠ್ಯ ಚಟುವಟಿಕೆಗಳು, ಕ್ರೀಡೆಗಳು, ಪ್ರಾಜೆಕ್ಟ್ ಎಕ್ಸಿಬಿಷನ್‌ ಮತ್ತು ಇಂಟರ್‌ ಕಾಲೇಜ್‌ ಫೆಸ್ಟ್‌ ಅನ್ನು ಆಯೋಜಿಸುವ ಮೂಲಕ ವಿದ್ಯಾರ್ಥಿಗಳಿಗೆ ಪ್ರತಿಭೆ ಮತ್ತು ಸಾಮರ್ಥ್ಯವನ್ನು ಅನ್ವೇಷಿಸಲು ವೇದಿಕೆ ಕಲ್ಪಿಸುವುದು, ವಿದ್ಯಾರ್ಥಿಗಳ ಶೈಕ್ಷಣಿಕ ಉತ್ಕೃಷ್ಟತೆ ಮತ್ತು ಅವರ ಸರ್ವತೋಮುಖ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಿಸುವುದು ಉದ್ದೇಶವಾಗಿದೆ. ಶ್ರೀ ದಿನೇಶ ಗಾಂವಕರ್‌ ಆಡಳಿತಾ ಧಿಕಾರಿಯಾಗಿ ಪ್ರಾಂಶುಪಾಲ ಮಾಧವ ಪಿ. ಅವರು ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವುದು ಸಂಸ್ಥೆಯ ಬೆಳವಣಿಗೆಗೆ ನೀಡಿದ ಕೊಡುಗೆಯಾಗಿದೆ.

ಆರ್‌.ಎನ್‌.ಎಸ್‌ ವಿದ್ಯಾನಿಕೇತನ ಮುರುಡೇಶ್ವರ
ಅಂದು ಟ್ರಸ್ಟ್‌ ಅಧ್ಯಕ್ಷರಾಗಿದ್ದ ಡಾ| ಆರ್‌.ಎನ್‌.ಶೆಟ್ಟಿ ಅವರು ತಮ್ಮೂರಿನ ಅಭಿಮಾನದಿಂದ ಗ್ರಾಮೀಣ ಭಾಗದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಕೊಡುವ ಉದ್ದೇಶದಿಂದ 2004-05ನೇ ಸಾಲಿನಲ್ಲಿ ಆರ್‌.ಎನ್‌ ಶೆಟ್ಟಿ ಟ್ರಸ್ಟ್‌ ಮುರುಡೇಶ್ವರದ ಅಂಗ ಸಂಸ್ಥೆಯಾದ ಆರ್‌.ಎನ್‌.ಎಸ್‌ ವಿದ್ಯಾನಿಕೇತನ ಶಾಲೆಯನ್ನು ಸ್ಥಾಪಿಸಿದರು. ಸಂಸ್ಥೆ ಇಂದು ಸಾವಿರಾರು ವಿದ್ಯಾರ್ಥಿಗಳಿಗೆ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿದೆ. 2009-2010ರಲ್ಲಿ ಪ್ರಪ್ರಥಮವಾಗಿ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಗೆ 18 ವಿದ್ಯಾರ್ಥಿಗಳು ಹಾಜರಾಗಿದ್ದು 16 ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದರು. 2011-12, 2014-15, 2015-16ರಲ್ಲಿ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಗೆ ಹಾಜರಾಗಿದ್ದ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶಾಲೆಗೆ ಶೇ.100 ಫಲಿತಾಂಶ ಬಂದಿದೆ. 2016-17ನೇ ಸಾಲಿನಿಂದ ರಾಜ್ಯ ಪಠ್ಯಕ್ರಮದಿಂದ ರಾಷ್ಟ್ರೀಯ ಪಠ್ಯಕ್ರಮಕ್ಕೆ ಬದಲಾಯಿಸಿಕೊಂಡ ಶಾಲೆ ತನ್ನ ಸಾಧನೆಯನ್ನು ಮುಂದುವರಿಸಿಕೊಂಡು ಬಂದಿದೆ.

2020-21, 2021-22ನೇ ಸಾಲಿನಲ್ಲಿ ಎಸ್‌.ಎಸ್‌.ಎಲ್‌.ಸಿ ಶಾಲೆಗೆ ಶೇ.100 ಫಲಿತಾಂಶ ಬಂದಿದ್ದು 7 ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಶಾಲೆಯ ವಿದ್ಯಾರ್ಥಿಗಳು ಪ್ರತಿಭಾ ಕಾರಂಜಿ, ವಿಜ್ಞಾನ, ಗಣಿತ ಮಾದರಿ ತಯಾರಿಕೆ, ಯುವ ವಿಜ್ಞಾನಿ ಸ್ಪರ್ಧೆ, ಐಟಿ ಕ್ವಿಜ್‌, ಕ್ರೀಡಾ ಸ್ಪರ್ಧೆಗಳಲ್ಲಿ ತಾಲೂಕು, ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ಭಾಗವಹಿಸಿ ಪ್ರಶಸ್ತಿ ಗಳಿಸಿರುತ್ತಾರೆ. ಶಾಲೆಯ ಆಡಳಿತ ಮಂಡಳಿ, ಶಿಕ್ಷಕರು, ಸಿಬ್ಬಂದಿ ವರ್ಗದವರು ಶಾಲೆಯ ಏಳ್ಗೆಗೆ ಅವಿರತವಾಗಿ ಶ್ರಮಿಸುತ್ತಿದ್ದು ಜನವರಿ 2022ರಲ್ಲಿ ಅಃಖಇ ಮಂಡಳಿಯಿಂದ ಅಫಿಲಿಏಟೆಡ್‌ ಆಗಿರುತ್ತದೆ. ಪ್ರಸಕ್ತ ಸಾಲಿನಲ್ಲಿ ಆಡಳಿತ ನಿರ್ದೇಶಕ ಶ್ರೀ ಸತೀಶ ಶೆಟ್ಟಿ, ಶ್ರೀ ಕರಣ ಶೆಟ್ಟಿ ಅವರ ನಿರ್ದೇಶನದಲ್ಲಿ ಶ್ರೀ ಪೈ ಕೆ.ಎಲ್‌. ಮುಖ್ಯ ಆಡಳಿತಾಧಿ ಕಾರಿಯಾಗಿ, ಶ್ರೀಮತಿ ರಾಧಾ ಸಂಪತ್‌ ಸಲಹೆಗಾರರಾಗಿ ಎಲ್ಲಾ ಅಗತ್ಯದ ಸಲಹೆ-ಸೂಚನೆಗಳನ್ನು ನೀಡುತ್ತ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪೂರಕವಾಗಿ ಶಿಕ್ಷಣ ಸಂಸ್ಥೆಯ ಉನ್ನತೀಕರಣಕ್ಕಾಗಿ ಶ್ರಮಿಸುತ್ತಿದ್ದಾರೆ. ಆಡಳಿತಾ ಧಿಕಾರಿ ಶ್ರೀ ದಿನೇಶ ಗಾಂವಕರ್‌, ಪ್ರಾಂಶುಪಾಲೆ ಶ್ರೀಮತಿ ಗೀತಾ ಕಿಣಿ ಕಾರ್ಯ ನಿರ್ವಹಿಸುತ್ತಿದ್ದು, ಪ್ರತಿಯೊಂದು ವಿದ್ಯಾರ್ಥಿಯನ್ನು ಕೂಡಾ ವೈಯಕ್ತಿಕ ನೆಲೆಯಲ್ಲಿ ಗುರುತಿಸಿ ಅವರನ್ನು ಅಣಿಗೊಳಿಸುವ ಕಾರ್ಯ ನಡೆಯುತ್ತಿದೆ. ವಿದ್ಯಾರ್ಥಿಗಳಿಗೆ ಶಾಲಾ ವಾಹನ, ಉದ್ಯಾನವನ, ಮಧ್ಯಾಹ್ನದ ಬಿಸಿಯೂಟ, ಒಳಾಂಗಣ-ಹೊರಾಂಗಣ ಕ್ರೀಡೆಗಳು, ಸ್ಕೌಟ್‌-ಗೈಡ್ಸ್‌ ತರಬೇತಿ, ಸ್ಮಾರ್ಟ್‌ಕ್ಲಾಸ್‌ ಸೌಲಭ್ಯ, ಕಂಪ್ಯೂಟರ್ ಪ್ರಯೋಗಾಲಯ, ಗ್ರಂಥಾಲಯ, ವಿಜ್ಞಾನ ಪ್ರಯೋಗಾಲಯ, ಗಣಿತ ಪ್ರಯೋಗಾಲಯ, ಯೋಗ ತರಬೇತಿ, ಪಠ್ಯೇತರ ಚಟುವಟಿಕೆಗಳಿದ್ದು, ಉತ್ತಮ ಶಿಕ್ಷಣ ಜತೆಗೆ ಸಂಸ್ಕಾರ ದೊರೆಯುತ್ತಿರುವುದು ಸಂಸ್ಥೆಯ ಹೆಮ್ಮೆಯಾಗಿದೆ.

ಟಾಪ್ ನ್ಯೂಸ್

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Ajit Pawar

BJP;’ಬಟೆಂಗೆ ತೊ ಕಟೆಂಗೆ’ ಹೇಳಿಕೆಗೆ ಬೆಂಬಲವಿಲ್ಲ ಎಂದ ಅಜಿತ್ ಪವಾರ್

01

Catacombs: ಇದು ಎಲುಬುಗಳೇ ತುಂಬಿಕೊಂಡ ಸುರಂಗ; ಸುಂದರ ದೇಶದ ಕರಾಳ ಇತಿಹಾಸ

DVG-Rail

Save Life: ಆಯತಪ್ಪಿ ಬಿದ್ದು ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನ ಕಾಪಾಡಿದ ಹೋಂಗಾರ್ಡ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-dandeli

Dandeli:ತುಂಡಾಗಿ ಬಿದ್ದಿದ್ದ ಕೇಬಲ್ ವೈರ್ ಸುತ್ತಿ ದ್ವಿಚಕ್ರ ವಾಹನ ಸ್ಕಿಡ್: ಸವಾರನಿಗೆ ಗಾಯ

1-dandeli

Dandeli; ಆತ್ಮಹ*ತ್ಯೆಗೆ ಯತ್ನಿಸಿದ ವೃದ್ಧನ ರಕ್ಷಣೆ

10

Dandeli: ಅಂಬೇವಾಡಿಯ ಬಿಸಿಎಂ ವಸತಿ ನಿಲಯದಲ್ಲಿ ವಿದ್ಯಾರ್ಥಿ ಸಾವು

7-

Dandeli: ವಿವಾಹಿತ ವ್ಯಕ್ತಿ ಆತ್ಮಹತ್ಯೆ

Yellapur: ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಲಾರಿ; ಪ್ರಾಣಾಪಾಯದಿಂದ ಪಾರು…!

Yellapur: ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಲಾರಿ; ಪ್ರಾಣಾಪಾಯದಿಂದ ಪಾರು…!

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

5

Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು

1-aaccc

PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ

Ashok-1

Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್‌.ಅಶೋಕ್‌

HDK (4)

50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ

1-kangu

‘Kanguva’; ಮೊದಲ ದಿನವೇ 58.62 ಕೋಟಿ ರೂ. ಬಾಚಿದ ಕಂಗುವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.