Raju Talikote: ಗುಬ್ಬಿ ಗೂಡು ಕಟ್ಟುವಂತೆ ರಂಗಾಯಣ ಕಟ್ಟುವೆವು
Team Udayavani, Oct 24, 2024, 6:16 PM IST
ಶಿರಸಿ: ಗುಬ್ಬಿ ಗೂಡು ಕಟ್ಟುವಂತೆ ಒಂದೊಂದೇ ಎಳೆ ರಂಗಾಯಣ ಕಟ್ಟುವೆವು. ಎಲ್ಲರ ಸಹಕಾರ ಪಡೆದು ಮುನ್ನಡೆಯುತ್ತೇವೆ ಎಂದು ಧಾರವಾಡದ ರಂಗಾಯಣ ನಿರ್ದೇಶಕ ರಾಜು ತಾಳಿಕೋಟೆ ಹೇಳಿದರು.
ನಗರದ ರಂಗಧಾಮದಲ್ಲಿ ಗುರುವಾರ ಸುದ್ದಿಗೋಷ್ಟಿ ನಡೆಸಿ ಗುಬ್ಬಿಯ ಗೂಡಿಗೆ ಒಂದೊಂದು ಎಳೆನೂ ಮುಖ್ಯವಾದಂತೆ ರಂಗಾಯಣಕ್ಕೂ ಮಹತ್ವದ್ದು. ಧಾರವಾಡದ ರಂಗಾಯಣಕ್ಕೆ ಏಳು ಜಿಲ್ಲೆಗಳಿವೆ. ರಂಗಾಯಣಕ್ಕೆ ಸವಾಲು ಕೂಡ ಇದೆ. ರಂಗಾಯಣ ಚೌಕಟ್ಟು ಮೀರದೆ ಸವಾಲು ಎದುರಿಸಿ ಗೆಲ್ಲಿಸಬೇಕು ಎಂದರು.
ರಂಗಾಯಣಕ್ಕೆ ಅದರದ್ದೇ ಆದ ಇತಿಮಿತಿಗಳಿವೆ. ಚೌಕಟ್ಟು ಮೀರದಂತೆ ಕೆಲಸ ಮಾಡಬೇಕು. ಒಳ್ಳೆ ನಾಟಕ, ಒಳ್ಳೆ ಕಲಾವಿದರು, ಸಂಘಟನೆಗಳು ಬೇಕಿದೆ. ಪ್ರೇಕ್ಷಕರಿಗೆ ಪೌರಾಣಿಕ ನಾಟಕಗಳನ್ನು ಹೆಚ್ಚೆಚ್ಚು ತಲುಪಿಸಬೇಕಾಗಿದೆ ಎಂದ ಅವರು, ಮೈಸೂರು ರಂಗಾಯಣದ ಮಾದರಿ ಗೌರವ ಸಿಗಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಧಾರವಾಡ ರಂಗಾಯಣಕ್ಕೆ ಶಿಕ್ಷಕರು ಹಾಗು ರಂಗ ಶಾಲೆ ಒದಗಿಸಿವಂತೆ ಬೇಡಿಕೆ ಇದೆ ಎಂದರು.
ಸರಕಾರದ ಮುಂದೆ ಕಂದಗಲ್ ಹನುಮಂತರಾಯರ ನಾಟಕ ಪ್ರಸ್ತುತಿಗೆ ನೆರವಿಗೆ ಕೇಳಿದ್ದೇವೆ.ಕಂದಗಲ್ ಮಹಾಭಾರತ ಎಂಟು ನಾಟಕಗಳನ್ನು ಯುವ ಪೀಳಿಗೆಗೆ ಕೊಂಡೊಯ್ಯಬೇಕು. ರಂಗಭೂಮಿಯ ಪ್ರೇಕ್ಷಕರ ಹೆಚ್ಚು ಮಾಡುವುದು ನಮ್ಮ ಆಶಯ ಎಂದರು.
ರಂಗಾಯಣವು ಗ್ರಾಮೀಣ ಹಾಗೂ ಸ್ಥಳೀಯ ಕಲಾವಿದರನ್ನು ನಾಟಕದ ಮೂಲಕ ಬೆಂಬಲಿಸಲು ಮುಂದಾಗಿದ್ದೇವೆ. ರಂಗಾಯಣದ ರಿಜಿಸ್ಟಾರ್ ಶಶಿಕಲಾ ಹುಡೇದ, ರಂಗಾಯಣ ಧಾರವಾಡದಿಂದ ರಂಗಭೂಮಿಯ ಚಟುವಟಿಕೆಗೆ ಉತ್ತೇಜನ ನೀಡಬೇಕು. ನಾಟಕ ಶಿಬಿರ ನಡೆಸಿ ರಂಗ ಚಟುವಟಿಕೆಯತ್ತ ಒಲಿಸಿಕೊಳ್ಳುವ ಪ್ರಯತ್ನ ಮಾಡಬೇಕು. ಅದಕ್ಕಾಗಿ ಶಿಬಿರವನ್ನು ಉತ್ತೇಜನಕಾರಿಯಾಗಿ ಚಟುವಟಿಕೆಗಳನ್ನು ನಡೆಸಲು ಯೋಜಿಸಲಾಗಿದೆ ಎಂದರು. ಚಂದ್ರು ಉಡುಪಿ ಸ್ವಾಗತಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೈಕನ್ನೇ ಬೆನ್ನಟ್ಟಿ ದಾಳಿ ಮಾಡಿದ ಕರಡಿಗಳು… ಗ್ರಾಮ ಪಂಚಾಯತ್ ಸದಸ್ಯನಿಗೆ ಗಂಭೀರ ಗಾಯ
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Sullia: ಬಸ್ ನಿಲ್ದಾಣದಲ್ಲಿ ಮಲಗಿದ್ದ ಪ್ರಯಾಣಿಕನ ಬ್ಯಾಗ್, ಶೂ ಕಳವು
Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
BJP; ಬಣ ರಾಜಕೀಯ ತಪ್ಪಿಸಲು ತೃತೀಯ ಬಣ ಸಭೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.