ಖಾಸಗಿ ಶಾಲೆಯಲ್ಲಿ ರಾಖಿ ರಾದ್ಧಾಂತ: ಪ್ರತಿಭಟನೆ
ವಿದ್ಯಾರ್ಥಿಗಳು ಕಟ್ಟಿ ಕೊಂಡಿದ್ದ ರಾಖಿ ಬಿಚ್ಚಿಸಿದ್ದಕ್ಕೆ ಆಕ್ರೋಶ; ಶಾಲಾ ಆಡಳಿತ ಮಂಡಳಿಯಿಂದ ಕ್ಷಮೆಯಾಚನೆ
Team Udayavani, Aug 19, 2022, 4:00 PM IST
ಮುಂಡಗೋಡ: ಇಲ್ಲಿನ ಖಾಸಗಿ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳು ಕಟ್ಟಿಕೊಂಡಿದ್ದ ರಾಖಿಯನ್ನು ಬಿಚ್ಚಿಸಲಾಗಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳ ಪಾಲಕರು ಹಾಗೂ ಹಿಂದೂ ಪರ ಸಂಘಟನೆಗಳು ಗುರುವಾರ ಪ್ರತಿಭಟನೆ ನಡೆಸಿವೆ.
ಬುಧವಾರ ಬೆಳಗ್ಗೆ ಶಾಲಾ ಆವರಣದಲ್ಲಿ ಪ್ರಾರ್ಥನೆ ವೇಳೆಯಲ್ಲಿ ವಿದ್ಯಾರ್ಥಿಗಳು ಕೈಗೆ ಕಟ್ಟಿಕೊಂಡ ರಾಖಿಯನ್ನು ತೆಗೆಯುವಂತೆ ಸೂಚಿಸಲಾಗಿದೆ. ಅದರಂತೆ ಮಕ್ಕಳು ತಮ್ಮ ಕೈಗೆ ಕಟ್ಟಿಕೊಂಡ ರಾಖೀಯನ್ನು ಕತ್ತರಿಯಿಂದ ಕಟ್ ಮಾಡಿಕೊಂಡಿದ್ದಾರೆ. ಬಳಿಕ ಮನೆಗೆ ಹೋದ ನಂತರ ಪಾಲಕರಿಗೆ ಈ ವಿಷಯ ತಿಳಿಸಿದ್ದಾರೆ. ನಂತರ ಇದು ಹಿಂದೂಪರ ಸಂಘಟನೆಗಳ ಗಮನಕ್ಕೆ ಬಂದು ಶಾಲೆಗೆ ಮುತ್ತಿಗೆ ಹಾಕಲು ತೀರ್ಮಾನಿಸಲಾಗಿದೆ. ವಿಷಯ ಅರಿತ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಶಾಲಾ ಆಡಳಿತ ಸಮಿತಿಯವರನ್ನು ಹಾಗೂ ಪ್ರಿನ್ಸಿಪಾಲ್ ಅವರನ್ನು ಕರೆಯಿಸಿ ಠಾಣೆಯಲ್ಲಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಿದ್ದಾರೆ ಆದರೆ ಇದು ಯಶಸ್ವಿಯಾಗಿರಲಿಲ್ಲ.
ಗುರುವಾರ ಹಿಂದೂಪರ ಸಂಘಟನೆಗಳು ಹಾಗೂ ಪಾಲಕರು ಶಾಲೆ ಎದುರು ಪ್ರತಿಭಟನೆ ಆರಂಭಿಸಿದರು. ಆಡಳಿತ ಮಂಡಳಿ ಹಾಗೂ ರಾಖೀ ತೆಗೆಯುವಂತೆ ಸೂಚಿಸಿದ ಶಿಕ್ಷಕಿಯನ್ನು ಸ್ಥಳಕ್ಕೆ ಕರೆಸುವಂತೆ ಪ್ರತಿಭಟನಾಕಾರರು ಘೋಷಣೆ ಕೂಗುತ್ತಾ ಪಟ್ಟು ಹಿಡಿದರು. ಸ್ಥಳಕ್ಕೆ ಆಗಮಿಸಿದ ಆಡಳಿತ ಮಂಡಳಿ ಸದಸ್ಯ ಹಾಗೂ ಪ್ರಿನ್ಸಿಪಾಲ್ “ನಾವು ರಾಖೀ ತೆಗೆಯಲು ಹೇಳಿಲ್ಲ. ಮಕ್ಕಲೇ ಅದನ್ನು ಬಿಚ್ಚಿ ಆಟ ಆಡುತ್ತಿದ್ದರು ಎಂದು ಹೇಲಿದರು. ಆದರೆ ಪ್ರತಿಭಟನಾಕಾರರು ಮಕ್ಕಳ ಕೈಯಲ್ಲಿ ಕತ್ತರಿ ಹೇಗೆ ಬಂತು? ಮನೆಯಿಂದ ತರುತ್ತಾರಾ ಎಂದು ಮರು ಪ್ರಶ್ನಿಸಿದರು. ಇದಕ್ಕೆ ಆಡಳಿತ ಮಂಡಳಿಯವರು ಮೌನವಾದರು.
ಹಿಂದೂಪರ ಸಂಘಟನೆಗಳ ಆಕ್ರೋಶ: ಈ ಸಂಸ್ಥೆಯಲ್ಲಿ ಇತ್ತೀಚಿನ ದಿನಗಳಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ತರುವಂತಹ ಕೆಲಸ ಆಗುತ್ತಿದೆ. ಹಿಂದೂಗಳ ಪವಿತ್ರ ಹಬ್ಬವಾದ ರಕ್ಷಾಬಂಧನದಲ್ಲಿ ಕಟ್ಟಿರುವ ರಾಖೀಯನ್ನು ತೆಗೆಯುವಂತೆ ಹೇಳಿದ್ದು ಉದ್ಧಟತನ. ಶಾಲೆಯಲ್ಲಿ ಎಲ್ಲ ಧರ್ಮದ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಾರೆ. ಹಿಂದೂಗಳ ಬಗ್ಗೆ ಇಂತಹ ತಾರತಮ್ಯ ಯಾಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಲೆಯ ಅವ್ಯವಸ್ಥೆಗೆ ಪಾಲಕರ ಕಿಡಿ: ರಕ್ಷಾಬಂಧನವನ್ನು ಹಿಂದಿನಿಂದಲೂ ಆಚರಿಸಿಕೊಂಡು ಬರಲಾಗಿದೆ. ಆದರೆ ಪ್ರಾರ್ಥನೆ ವೇಳೆ ಮಕ್ಕಳ ಕೈಯಲ್ಲಿ ಇದ್ದ ರಾಖೀ ಹಾಗೂ ಇತರ ಪವಿತ್ರ ದಾರವನ್ನು ತೆಗೆಯುವಂತೆ ಹೇಳುತ್ತಾರೆ. ಈ ಶಾಲೆಯಲ್ಲಿ ಕುಂಕುಮ, ಕೈಯಲ್ಲಿರುವ ಬಳೆ, ಕೇಸರಿ ದಾರ, ಕೊರಳಿನಲ್ಲಿ ಹಾಕಿದ ಸರಗಳನ್ನು ತೆಗೆಸಲಾಗುತ್ತದೆ. ಅಲ್ಲದೆ ಬಿಸಿ ಊಟದಲ್ಲಿ ಹುಳಗಳು ಇದ್ದರೂ ಅದನ್ನೇ ಮಕ್ಕಳಿಗೆ ನೀಡಲಾಗುತ್ತದೆ. ಇದನ್ನು ಪ್ರಶ್ನಿಸಿದ ಮಕ್ಕಳನ್ನು ಗದರಿಸಲಾಗುತ್ತದೆ. ಅಲ್ಲದೇ ನೂರಾರು ಮಕ್ಕಳು ಊಟ ಮಾಡಿದ ಪ್ಲೇಟ್‌ಗಳನ್ನೆಲ್ಲ ನೀರು ತುಂಬಿದ ಎರಡು ಬಕೆಟ್‌ನಲ್ಲಿ ತೊಳೆಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೇ ಇದರಿಂದ ಮಕ್ಕಳ ಆರೋಗ್ಯ ಹಾಳಾದರೆ ಯಾರು ಹೊಣೆ ಎಂದು ಆಡಳಿತ ಮಂಡಳಿಯವರನ್ನು ಹಾಗೂ ಬಿಇಒ ಅವರನ್ನು ಪ್ರಶ್ನಿಸಿದರು.
ಕ್ಷಮೆ ಯಾಚನೆ: ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳಲಾಗುವುದು ಆ ಶಿಕ್ಷಕರಿಗೆ ಏನು ನಿರ್ದೇಶನ ನೀಡಬೇಕೋ ಅದನ್ನು ನೀಡಲಾಗುವುದು. ಆದ ಪ್ರಮಾದಕ್ಕೆ ಕ್ಷಮೆ ಕೋರುವೆ ಎಂದು ಆಡಳಿತ ಮಂಡಳಿಯ ಸದಸ್ಯರು ಹೇಳಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ಪ್ರತಿಭಟನೆಯಲ್ಲಿ ಮುಂಖಡರಾದ ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷ ಪ್ರಕಾಶ ಬಡಗೇರ, ಶ್ರೀರಾಮ ಸೇನೆಯ ಅಧ್ಯಕ್ಷ ಮಂಜುನಾಥ ಹರಿಜನ, ಭಜರಂಗದಳದ ಅಧ್ಯಕ್ಷ ಮಂಜುನಾಥ ಪವಾರ್, ಶಂಕರ ಲಮಾಣಿ, ಗೋ ಪರಿವಾರದ ರಕ್ಷಕ ವಿಶ್ವನಾಥ ಭಜಂತ್ರಿ, ರಾಮಸೇನೆ ಅದ್ಯಕ್ಷ ಷಣ್ಮುಖ ಕೊಳುರ, ಸಾಲಗಾಂವ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸುನಿಲ್ ಲಮಾಣಿ, ಮುಖಂಡರಾದ ಸಂತೋಷ ತಳವಾರ, ಗಣೇಶ ಶಿರಾಲಿ, ಶ್ರೀಧರ ಉಪ್ಪಾರ, ಮಂಗೇಶ ಲಮಾಣಿ ಸೇರಿದಂತೆ ಪಾಲಕರು ಉಪಸ್ಥಿತರಿದ್ದರು.
ಬೇರೆ ಕಡೆಯಿಂದ ಈ ಶಾಲೆಗೆ ಬಂದ ಮುಖ್ಯೋಪಾಧ್ಯಾಯರಿಂದ ಸಮಸ್ಯೆ ಸಂಭವಿಸಿದೆ. ಇಲ್ಲಿಯ ಶಿಷ್ಟಾಚಾರ ಮರೆತು ಅವರು ಮೂಲ ಶಾಲೆಯಲ್ಲಿ ಕಾರ್ಯನಿರ್ವಹಿಸುವ ಪದ್ಧತಿ ಇಲ್ಲಿ ಅನುಸರಿಸಿದ್ದರಿಂದ ಸಮಸ್ಯೆ ಉಂಟಾಗಿದೆ. ಮುಂದೆ ಈ ರೀತಿ ಆಗದಂತೆ ಆಡಳಿತ ಮಂಡಳಿ ಹಾಗೂ ಶಿಕ್ಷಣ ಇಲಾಖೆ ಸೇರಿ ಮುತುವರ್ಜಿ ವಹಿಸಲಿದೆ. ಪೋಷಕರ ಸಹಕಾರ ಅಗತ್ಯ. –ವಿ.ಎಸ್.ಪಟಗಾರ, ಕ್ಷೇತ್ರ ಶಿಕ್ಷಣಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೆಳೆವಿಮೆ ಸಿಗದೆ ಕೃಷಿಕರ ಪರದಾಟ: ಅಡಕೆ ಬೆಳೆಗಾರರ ಸಂಕಷ್ಟಕ್ಕೆ ಸ್ಪಂದಿಸದ ಸರ್ಕಾರ
Belekeri Mining Case: ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಜೈಲು ಶಿಕ್ಷೆಗೆ ಹೈಕೋರ್ಟ್ ತಡೆ
ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಹೊತ್ತಿ ಉರಿದ ಲಾರಿ… ಅಪಾರ ಪ್ರಮಾಣದ ಸೊತ್ತು ಬೆಂಕಿಗಾಹುತಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.