ರಾಂಪತ್ರೆಜಡ್ಡಿಯ ಗಿಡ ನರ್ಸರಿಯಲ್ಲಿ ಸಿದ್ಧ
ಜಿಲ್ಲೆಯಲ್ಲೆ ಹೆಚ್ಚು ಬೆಳೆಯಲಾಗಿದೆ ರಾಂಪತ್ರೆ ಗಿಡ ; ಬೆಳೆಸಲಾಗಿದೆ 15 ಸಾವಿರ ಗಿಡ
Team Udayavani, Jun 7, 2022, 12:26 PM IST
ಶಿರಸಿ: ನೆಲ ಹಾಗೂ ಜಲದ ಸಂಬಂಧಿಯ ರಾಂಪತ್ರೆ ಜಡ್ಡಿಯ ಗಿಡಗಳನ್ನೂ ಶಿರಸಿ ಅರಣ್ಯ ವಲಯದಲ್ಲಿ ಬೆಳೆಸಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಅಜ್ಜಯ್ಯ ಹೇಳಿದರು.
ಅವರು ಅರಣ್ಯ ನರ್ಸರಿಗಳ ವೀಕ್ಷಣೆಯ ಬಳಿಕ ವೃಕ್ಷಾರೋಪಣ ನಡೆಸಿ, ಇಡೀ ಕೆನರಾ ವೃತ್ತದಲ್ಲಿ ಅತಿ ಹೆಚ್ಚು ರಾಮಪತ್ರೆಜಡ್ಡಿ ಗಿಡಗಳನ್ನು ಬೆಳೆಸಲಾಗಿದೆ. ಸಿದ್ದಾಪುರದ ಕ್ಯಾದಗಿ, ಶಿರಸಿ ಜಾನ್ಮನೆ, ಹುಲೆಕಲ್ ವಲಯಾರಣ್ಯಗಳಲ್ಲಿ ನೆಲ ಹಾಗೂ ಜಲಸಂಬಂಧಿ ನೆಲದಲ್ಲಿ ನಾಟಿ ಮಾಡಲಾಗುತ್ತದೆ ಎಂದರು.
ಅರಣ್ಯ ಕಾಲೇಜಿನ ವಿಜ್ಞಾನಿ ಡಾ| ವಾಸುದೇವ, ಕೇಶವ ಕೊರ್ಸೆ ಇತರರ ನೆರವನ್ನೂ ಪಡೆಯಲಾಗಿದೆ. ಅರಣ್ಯ ಕಾಲೇಜು ವಿದ್ಯಾರ್ಥಿಗಳು, ಇಲಾಖೆ ಸೇರಿ ನೂರಕ್ಕೂ ಅಧಿಕ ಜಾಗದ ವೃತ್ತದಲ್ಲಿ ನಾಟಿ ಮಾಡಲಾಗುತ್ತದೆ ಎಂದರು.
ಇದೇ ಪ್ರಥಮ ಬಾರಿಗೆ ಜಿಲ್ಲೆಯಲ್ಲೆ ಹೆಚ್ಚು ರಾಂಪತ್ರೆ ಗಿಡ ಬೆಳೆಸಲಾಗಿದೆ. 12-15 ಸಾವಿರ ಗಿಡಗಳನ್ನು ಉಪ ಅರಣ್ಯ ವ್ಯಾಪ್ತಿಯಲ್ಲಿ ಬೆಳೆಸಲಾಗಿದೆ. ಮೊದಲು 2-3 ಸಾವಿರ ಗಿಡಗಳು ಅಷ್ಟೇ ಇದ್ದವು. ಮುಂದೆ ರಾಂಪತ್ರೆ ಜಡ್ಡಿ ಸಂರಕ್ಷಣೆಗೆ ಜಾಗೃತಿ ಮೂಡಿಸುವ ಕಾರ್ಯ ಕೂಡ ಮಾಡುತ್ತೇವೆ ಎಂದರು.
ರಾಂಪತ್ರೆ ಜಡ್ಡಿಯಲ್ಲಿ ಸಸ್ಯದಲ್ಲಿ ಎಂಟರಿಂದ ಹತ್ತು ಬೇರೆ ಬೇರೆ ಜಾತಿಗಳನ್ನೂ ಬೆಳೆಸಲಾಗಿದೆ ಎಂದರು. ರಾಜ್ಯ ಸರಕಾರ ಇಡೀ ರಾಜ್ಯದಲ್ಲಿ ಜೂ. 12ರ ತನಕ ಬೀಜೋತ್ಸವ ನಡೆಯಲಿದೆ. ರಾಜ್ಯದ 50 ವಿಭಾಗ, 234 ವಲಯದಲ್ಲಿ ಇದು ಅಭಿಯಾನವಾಗಿ ನಡೆಯಲಿದೆ. ರಾಜ್ಯದಲ್ಲಿ 250ಕ್ಕೂ ಅಧಿಕ ಹಾಗೂ ಶಿರಸಿ ವಿಭಾಗದಲ್ಲಿ 80 ಕಾರ್ಯಕ್ರಮ ಜರುಗಲಿದೆ ಎಂದರು.
ಮಳೆಗಾಲ ಆರಂಭವಾಗಲಿದ್ದು, ನೆಡುತೋಪು ನಿರ್ಮಾಣಕ್ಕೆ ವಿಭಾಗದ ಆರು ವಲಯದ ಹತ್ತು ನರ್ಸರಿಗಳಲ್ಲಿ ನೆಡಲು ನೂರಕ್ಕೂ ಅಧಿಕ ಜಾತಿಯ 21 ಲಕ್ಷ ಸಸಿಗಳನ್ನು ಬೆಳೆಸಲಾಗಿದೆ. ಆರುವರೆ ಲಕ್ಷ ಸಸಿಗಳನ್ನು ಅಳಿವಿನಂಚಿನ ಏಕನಾಯಕ ಸೇರಿದಂತೆ ವಿವಿಧ ಗಿಡಗಳನ್ನು ಧಾರ್ಮಿಕ, ಆರ್ಥಿಕ, ಕಿರು ಅರಣ್ಯ ಮಹತ್ವದ ಸಸಿಗಳನ್ನೂ ಬೆಳೆಸಿದ್ದೇವೆ. ಬಿಲ್ವಪತ್ರೆ ಸಸಿಗಳೂ ಇದೆ. ನೆಡುತೋಪಿಗಾಗಿ ಅಕೇಶಿಯಾ ಕೂಡ ಬೆಳೆಸಿದ್ದೇವೆ ಎಂದರು.
ಎಸಿಎಫ್ ಅಶೋಕ ಹುಲಗೂರು, ಪ್ರೊಬೇಶನರಿ ಐಎಫ್‌ಎಸ್ ಯೋಗೇಶ, ವಲಯ ಅರಣ್ಯ ಅಧಿಕಾರಿ ಬಸವರಾಜ ಬೋಚಳ್ಳಿ, ಮಂಜುನಾಥ ಹೆಬ್ಟಾರ, ಉಷಾ ಕಬ್ಬೇರ ಇತರರು ಇದ್ದರು.
ವನ್ಯಜೀವಿಗಳಿಂದಾದ ಬೆಳೆ ಹಾನಿ ಪರಿಹಾರ ಮಾರ್ಚ್ ತನಕ ವಿತರಿಸಲಾಗಿದೆ. ಬೆಳೆ ಹಾನಿ ತಪ್ಪಿಸಲೂ ಐಬೆಕ್ಸ್ ಬೇಲಿ ಅರ್ಜಿ ಕೂಡ ಕರೆಯಲಾಗಿದೆ. –ಅಜ್ಜಯ್ಯ, ಡಿಎಫ್‌ಒ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dandeli: ಸಾರಿಗೆ ಬಸ್ಸಿನಲ್ಲೇ ಪ್ರಯಾಣಿಕನಿಗೆ ಹೃದಯಾಘಾತ… ಆಸ್ಪತ್ರೆ ಮಾರ್ಗದಲ್ಲಿ ಮೃತ್ಯು
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Dandeli: ವಕ್ಫ್ ಮಂಡಳಿ ಮತ್ತು ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ ಬಿಜೆಪಿಯಿಂದ ಪ್ರತಿಭಟನೆ
Dandeli: ನಗರಸಭೆಯ ಜವಾನನನ್ನು ನಿಂದಿಸಿರುವುದರ ವಿರುದ್ಧ ನಗರ ಸಭೆಯ ಪೌರಾಯುಕ್ತರಿಗೆ ದೂರು
ಕೃಷಿ ಭೂಮಿ ಉಳಿಸುವ ಪ್ರಯತ್ನವಾಗಲಿ: ರಾಮಕೃಷ್ಣ ಶ್ರೀಪಾದ ಹೆಗಡೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.