ಬಿಎಸ್‌ಎನ್‌ಎಲ್ ದುರವಸ್ಥೆ ಸರಿಪಡಿಸಲು ಆಗ್ರಹಿಸಿ ಮನವಿ
Team Udayavani, Aug 23, 2020, 1:31 PM IST
ಯಲ್ಲಾಪುರ: ಕಳೆದೆರಡು ವರ್ಷದಿಂದ ದುರವಸ್ಥೆಗೊಳಗಾದ ತಾಲೂಕಿನ ಉಪಳೇಶ್ವರ ದೂರವಾಣಿ ವಿನಿಮಯ ಕೇಂದ್ರ ಹಾಗೂ ತಾಲೂಕಿನಲ್ಲಿ ಹದಗೆಟ್ಟ ದೂರವಾಣಿಯನ್ನು ಸರಿಪಡಿಸಿ ಗ್ರಾಹಕರಿಗೆ ಸರಿಯಾದ ನ್ಯಾಯ ಕೊಡಿಸುವಂತೆ ಭಾರತೀಯ ಕಿಸಾನ್ ಸಂಘ ತಾಲೂಕು ಘಟಕ ತಹಶೀಲ್ದಾರ್ ಗೆ ಮನವಿ ಸಲ್ಲಿಸಿದೆ.
ಸ್ಥಿರ ದೂರವಾಣಿ ಜೊತೆಗೆ ಹಲವೆಡೆ ನೆಟ್‌ವರ್ಕ್ ಸಮಸ್ಯೆಯೂ ಇದ್ದು ಈ ಬಗ್ಗೆ ಇಲ್ಲಿ ಯಾರೂ ಗಮಮನ ಹರಿಸುತ್ತಿಲ್ಲ ಎಂದು ಆರೋಪಿಸಿದರು. ಗ್ರಾಹಕರ ಗೋಳು ಕೇಳುವವರಿಲ್ಲ. ದೂರಿದರೂ ಕ್ಯಾರೇ ಎನ್ನುವುದಿಲ್ಲ. ಜನ ಇದರಿಂದ ತೊಂದರೆಗೊಳಗಾಗಿದ್ದಾರೆ. ತಾಲೂಕಿನಲ್ಲಿ ವಿನಿಮಯಕೇಂದ್ರಗಳು ಲೆಕ್ಕಕ್ಕಿದ್ದರೂ ಕಾರ್ಯನಿರ್ವಹಿಸುತ್ತಿಲ್ಲ ಎಂದು ದೂರಿದರು.
ಗ್ರಾಹಕರಿಗೆ ನ್ಯಾಯ ಒದಗಿಸಬೇಕು. ನಷ್ಟವನ್ನು ನಿಗಮ ಭರಿಸಬೇಕು. ತಾಲೂಕಿನಲ್ಲಿ 15 ದಿನಗಳೊಳಗೆ ದೂರವಾಣಿ ವ್ಯವಸ್ಥೆ ಸ್ವಲ್ಪಮಟ್ಟಿಗೆ ಸುಧಾರಿಸದಿದ್ದಲ್ಲಿ ವಿಶೇಷ ಪ್ರತಿಭಟನೆ ನಡೆಸಲು ಕಿಸಾನ್ ಸಂಘ ಮುಂದಾಗುತ್ತದೆ. ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರುವ ಮೂಲಕ ತಮಗಾದ ಸಮಸ್ಯೆಗೆ ಪರಿಹಾರ ಪಡೆಯಲು ಪ್ರಯತ್ನಿಸುತ್ತದೆ ಎಂದು ಮನವಿಯಲ್ಲಿ ತಿಳಿಸಿದೆ.
ದೂರನ್ನು ಸಂಚಾರ ನಿಗಮದ ವಿವಿಧ ಸ್ಥರದ ಅಧಿಕಾರಿಗಳಿಗೆ ಹಾಗೂ ಕೇಂದ್ರ ಸಚಿವರಿಗೆ ರವಾನಿಸಿದೆ. ಭಾರತೀಯ ಕಿಸಾನ್ ಸಂಘದ ತಾಲೂಕಾಧ್ಯಕ್ಷ ನರಸಿಂಹ ಸಾತೊಡ್ಡಿ, ಪ್ರಮುಖರಾದ ಕೆ.ಎಸ್. ಭಟ್ಟ ಆನಗೋಡ, ಸುಬ್ರಾಯ ಗಾಂವಾRರ್, ಶ್ರೀಧರ ಭಟ್ಟ, ಕೃಷ್ಣ ಹೆಗಡೆ ಜಂಬೆಸಾಲ,ಸುಬ್ಬಣ್ಣ ಉದ್ದಾಬೈಲ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.