![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Jul 8, 2019, 4:01 PM IST
ದಾಂಡೇಲಿ: ರಸ್ತೆ ಹೊಂಡಗಳನ್ನು ಮುಚ್ಚಿಸುವಂತೆ ಮತ್ತು ಮರು ಡಾಂಬರೀಕರಣಕ್ಕೆ ಆಗ್ರಹಿಸಿ ಮನವಿ ಸಲ್ಲಿಸಲಾಯಿತು.
ದಾಂಡೇಲಿ: ನಗರದ ಜೆ.ಎನ್. ರಸ್ತೆ ಅಸ್ತವ್ಯಸ್ಥಗೊಂಡಿದ್ದು, ಶೀಘ್ರದಲ್ಲಿ ಮರು ಡಾಂಬರೀಕರಣ ಮಾಡಬೇಕು ಮತ್ತು ರಸ್ತೆಯಲ್ಲಿರುವ ಹೊಂಡಗಳನ್ನು ಮುಚ್ಚಿಸಬೇಕೆಂದು ಆಗ್ರಹಿಸಿ ನಗರದ ಅಟಲ್ ಅಭಿಮಾನಿ ಸಂಘಟನೆಯವರು ನಗರಸಭೆಗೆ ಮನವಿ ನೀಡಿದ್ದಾರೆ.
ಸಂಘಟನೆ ಅಧ್ಯಕ್ಷ ವಿಷ್ಣು ನಾಯರ್ ನೇತೃತ್ವದಲ್ಲಿ ನೀಡಲಾದ ಮನವಿಯಲ್ಲಿ, ದಾಂಡೇಲಿ ನಗರದ ಪ್ರಮುಖ ರಸ್ತೆಗಳಲ್ಲಿ ಒಂದಾದ ಜೆ.ಎನ್. ರಸ್ತೆಯಿಂದ ಮಾರುಕಟ್ಟೆಯ ತನಕ ಹೊಂಡಗಳು ಬಿದ್ದು ಹಾಳಾಗಿದೆ. ಅಲ್ಲದೆ ರಸ್ತೆ ತೀರಾ ಹದಗೆಟ್ಟಿದೆ. ಇದರಿಂದ ವಾಹನ ಸವಾರರಿಗೆ ತುಂಬಾ ತೊಂದರೆ ಉಂಟಾಗುತ್ತಿದೆ. ಈ ರಸ್ತೆಯಲ್ಲಿ ಅಲ್ಲಲ್ಲಿ ಹೊಂಡಗಳಿರುವುದರಿಂದ ಮಳೆಯ ನೀರು ತುಂಬಿ ಅಪಘಾತಗಳು ಸಂಭವಿಸುವಂತಾಗಿದೆ. ಈ ರಸ್ತೆ ಡಾಂಬರೀಕರಣ ಮಾಡಿ ವರ್ಷಗಳೇ ಕಳೆದರೂ ಇಲ್ಲಿಯವರೆಗೆ ಮರು ಡಾಂಬರೀಕರಣ ಆಗಲಿಲ್ಲ. ನಗರಸಭೆಯಿಂದ ನಂದಗೋಕುಲ ಉದ್ಯಾನವನದವರೆಗಷ್ಟೇ ಡಾಂಬ ರಿಕರಣ ಮಾಡಲಾಗಿದ್ದು, ಮುಂದೆ ಮಾಡಿಲ್ಲ. ಶೀಘ್ರವೇ ರಸ್ತೆ ಮೇಲಿನ ಹೊಂಡಗಳನ್ನು ಮುಚ್ಚಿಸಿ ಮಳೆಗಾಲದ ನಂತರ ನಗರದ ರಸ್ತೆಗಳನ್ನು ಆದಷ್ಟು ಬೇಗ ಮರು ಡಾಂಬರೀಕರಣಗೊಳಿಸಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ಪವನ್ ಅವುರ್ಲಿ, ಎಸ್.ಕೆ. ಹಿರೇಮಠ, ಎಂ.ಎಸ್. ನಾಯಕ್, ರವೀಂದ್ರ ಶಾ, ಜ್ಯೋತಿಬಾ ತುಳಸೆಕರ, ಮಹಾಂತೇಶ ಮಡಿವಾಳ, ರಾಮಾ ನಾಯ್ಡು, ವೆಂಕಟರಾವ್ ಕಾಂಬಳೆ, ಪ್ರಶಾಂತ ಕಲಾಲ ಮೊದಲಾದವರಿದ್ದರು.
Dandeli: ಯಾತ್ರಾರ್ಥಿಗಳ ತಂಡದಿಂದ ಹಲ್ಲೆ, ಇಬ್ಬರಿಗೆ ಗಂಭೀರ ಗಾಯ
Dandeli: ಮರಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಕಾರು… ಎಂಟು ಜನರಿಗೆ ಗಾಯ, ಓರ್ವ ಗಂಭೀರ
ಹಾಡು ನಿಲ್ಲಿಸಿದ ಜಾನಪದ ಕೋಗಿಲೆ… ಪದ್ಮಶ್ರೀ ಪುರಸ್ಕೃತೆ ಸುಕ್ರಿ ಬೊಮ್ಮಗೌಡ ನಿಧನ
Dandeli: ಬರ್ಚಿ- ಗಣೇಶಗುಡಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಸ್ಕಿಡ್, ಸವಾರನಿಗೆ ಗಾಯ
Yellapur: ನಿಯಂತ್ರಣ ತಪ್ಪಿ ಪಲ್ಟಿಯಾದ ಸರಕಾರಿ ಬಸ್… ಇಬ್ಬರಿಗೆ ಗಂಭೀರ ಗಾಯ
You seem to have an Ad Blocker on.
To continue reading, please turn it off or whitelist Udayavani.