ರಸ್ತೆ ಕಾಮಗಾರಿ ಸ್ಥಗಿತಗೊಳಿಸಿ ಗ್ರಾಮಸ್ಥರ ಆಕ್ರೋಶ
Team Udayavani, Dec 14, 2019, 2:46 PM IST
ಮುಂಡಗೋಡ: ತಾಲೂಕಿನ ಮಲವಳ್ಳಿಯಿಂದ ಕಾಳಗನಕೊಪ್ಪ ಮಾರ್ಗವಾಗಿ ಮುಂಡಗೋಡವರೆಗೆ ನಿರ್ಮಿಸುತ್ತಿರುವ ಡಾಂಬರ್ ರಸ್ತೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಗ್ರಾಮಸ್ಥರು ಕಾಮಗಾರಿ ಸ್ಥಗಿತಗೊಳಿಸಿದ ಘಟನೆ ಶುಕ್ರವಾರ ನಡೆದಿದೆ. ಮಲವಳ್ಳಿಯಿಂದ ಮುಂಡಗೋಡವರೆಗೂ ಡಾಂಬರ್ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ. ರಸ್ತೆಯ ಮೆಟಲಿಂಗ್ ಮಾಡಬೇಕು. ಖಡೀಕರಣ ಮೆಟಲಿಂಗ್ ಡಾಂಬರು ಸೇರಿದಂತೆ ಒಂಬತ್ತು ಇಂಚು ದಪ್ಪ ರಸ್ತೆ ನಿರ್ಮಿಸಬೇಕು. ಆದರೆ ಕೇವಲ ಐದು ಇಂಚು ದಪ್ಪ ರಸ್ತೆ ನಿರ್ಮಿಸಲಾಗುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಲೋಕೋಪಯೋಗಿ ಇಲಾಖೆಯವರು ತಯಾರಿಸಿರುವ ಕಾಮಗಾರಿ ಕ್ರಿಯಾ ಯೋಜನೆ ಕೈಯಲ್ಲಿ ಹಿಡಿದುಕೊಂಡು ಯೋಜನೆಯಂತೆ ಕಾಮಗಾರಿ ಮಾಡಬೇಕು ಎಂದು ಪಟ್ಟು ಹಿಡಿದಿದ್ದು ಈಗಾಗಲೆ ಮಲವಳ್ಳಿಯಿಂದ ಒಂದು ಕಿಮೀ ರಸ್ತೆ ಸಂಪೂರ್ಣ ಡಾಂಬರ್ ಮಾಡಿ ಮುಗಿಸಲಾಗಿದೆ. ಇದನ್ನು ಪರಿಶೀಲಿಸಬೇಕು. ಕ್ರಿಯಾ ಯೋಜನೆಯಲ್ಲಿರುವ ಹಾಗೆ ಕೆಲಸ ಮಾಡಬೇಕು ಎಂದು ಗ್ರಾಮಸ್ಥರು ಪಟ್ಟು ಹಿಡಿದು ಕೆಲಸ ಸ್ಥಗಿತಗೊಳಿಸಿದ್ದು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಕ್ರಿಯಾ ಯೋಜನೆಯಲ್ಲಿ ಇರುವ ಹಾಗೆ ರಸ್ತೆ ಮಾಡುತ್ತೇವೆ ಎಂದು ಭರವಸೆ ನೀಡಿದರು. ಆದರೆ ಈಗಾಗಲೆ ಮುಗಿದಿರುವ ರಸ್ತೆಯನ್ನು ಸಹ ಸರಿ ಪಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.