ರೋಟರಿ-ಎಂಇಎಸ್ ಜಂಟಿ ಸಾಧನೆ; ಜಲಕೊಯ್ಲಿಗೆ ಚಾಲನೆ
Team Udayavani, Jul 15, 2019, 3:38 PM IST
ಶಿರಸಿ: ಎಂಇಎಸ್ ಶಿಕ್ಷಣ ಸಂಸ್ಥೆ ಆವಾರದಲ್ಲಿ ನಿರ್ಮಾಣಗೊಂಡ ನೂತನ ಜಲತೊಟ್ಟಿ, ಜಲಕೊಯ್ಲಿನ ಘಟಕವನ್ನು ಲೋಕಾರ್ಪಣೆಗೊಳಿಸಲಾಯಿತು.
ಶಿರಸಿ: ವಿದ್ಯಾರ್ಥಿನಿಯರಿಗೆ ಬೇಸಿಗೆಯಲ್ಲಿ ಉಂಟಾಗುತ್ತಿದ್ದ ನೀರಿನ ಬವಣೆ ತಪ್ಪಿಸಲು ಇಲ್ಲಿನ ರೋಟರಿ ಕ್ಲಬ್, ದಾನಿಗಳು ಹಾಗೂ ಎಂಇಎಸ್ ಶಿಕ್ಷಣ ಸಂಸ್ಥೆ ನೆರವಿನಿಂದ ಆರುವರೆ ಲಕ್ಷ ಲೀಟರ್ ಸಾಮರ್ಥ್ಯದ ನಾಲ್ಕು ಘಟಕಗಳನ್ನು ರವಿವಾರ ಲೋಕಾರ್ಪಣೆಗೊಳಿಸಲಾಯಿತು.
ಘಟಕಕ್ಕೆ ಆರ್ಥಿಕ ನೆರವು ಒದಗಿಸಿದ ಅಮೆರಿಕನ್ ರೋಟರಿ ಸೆಂಟ್ರಲ್ ಚೆಸ್ಟರ್ ಕೌಂಟಿ ಅಧ್ಯಕ್ಷ ಡಾ| ವಸಂತ ಪ್ರಭು ನೂತನ ಜಲ ಕೊಯ್ಲಿನ ಘಟಕಕ್ಕೆ ಚಾಲನೆ ನೀಡಿ, ವಿದ್ಯಾರ್ಥಿನಿಯರು ವಸತಿ ಮಾಡುವ ನಾಲ್ಕು ಹಾಸ್ಟೆಲ್ಗಳಲ್ಲಿ ಈ ಘಟಕಗಳ ನಿರ್ಮಾಣ ಖುಷಿ ತಂದಿದೆ. ಸುಮಾರು 130 ಟ್ಯಾಂಕ್‌ಗಳಿಂದ ಆರುವರೆ ಲಕ್ಷ ಲೀಟರ್ ಸಂಗ್ರಹಣೆಯ ಸಾಮರ್ಥ್ಯ ಈ ನಾಲ್ಕೂ ವಸತಿ ನಿಲಯಗಳಿಂದ ಸಾಧ್ಯವಾಗಿದೆ. ಸುಮಾರು 550 ವಿದ್ಯಾರ್ಥಿನಿಯರು ಇದರ ಲಾಭಪಡೆದುಕೊಳ್ಳಲಿದ್ದಾರೆ. ಶಿಕ್ಷಣ ಸಂಸ್ಥೆ ಹಾಗೂ ರೋಟರಿ ಜಂಟಿಯಾಗಿ ಮಾಡಿದ ಸಾಧನೆ ಇದು. ಜಲ ಸಂರಕ್ಷಣೆ ಇಂದಿನ ಎಲ್ಲರ ಹೊಣೆ. ಮುಂದೆ ಇನ್ನೂ ಹೆಚ್ಚಿನ ಅನುದಾನ ನೀಡುತ್ತೇವೆ. ಈ ಮಾದರಿಯಲ್ಲಿ ಇನ್ನೆಲ್ಲೂ ಕಾರ್ಯ ಆಗಿಲ್ಲ. ಬೇರೆ ಬೇರೆ ದೇಶದಲ್ಲಿಯೂ ಈ ಮಾದರಿ ಅನುಷ್ಠಾನಕ್ಕೆ ಸಲಹೆ ಮಾಡುತ್ತೇವೆ ಎಂದರು.
ರೋಟರಿ ಕ್ಲಬ್‌ನ ನಿಕಟಪೂರ್ವ ಅಧ್ಯಕ್ಷ ಪ್ರವೀಣ ಕಾಮತ್ ಮಾತನಾಡಿ, ಈ ಜಲಕೊಯ್ಲು ಕೇವಲ ಎಂಇಎಸ್ ಕ್ಯಾಂಪಸ್‌ಗೆ ಮಾತ್ರವಲ್ಲ, ಸುತ್ತಲಿನ ಆರು ಸಾವಿರಕ್ಕೂ ಅಧಿಕ ಕುಟುಂಬಗಳಿಗೆ, ವಸತಿ ಉಳ್ಳವರಿಗೆ ನೆರವಾಗಲಿದೆ. ಅವರ ಬಾವಿಯ ನೀರೂ ಏರಿಕೆ ಆಗಲಿದೆ. ಶಾಂತಿ ನಗರ, ಆದರ್ಶನಗರ, ಗಾಯತ್ರಿ ನಗರ, ಕೆಎಚ್ಬಿ ಕಾಲೋನಿ, ವಿವೇಕಾನಂದ ನಗರ, ಸಹ್ಯಾದ್ರಿ ಕಾಲೋನಿಗಳಿಗೂ ಅನುಕೂಲ ಆಗಲಿದೆ. ಈ ಯೋಜನೆಗೆ ಸುಮಾರು 58 ಲಕ್ಷ ರೂ. ತಗುಲಿದೆ ಎಂದು ತಿಳಿಸಿದರು.
ಎಂಇಎಸ್ ಉಪಾಧ್ಯಕ್ಷ ನಿತಿನ್ ಕಾಸರಕೋಡ, ಡಾ| ಪ್ರಾಣೇಶ ಜಹಗೀರದಾರ್, ಆನಂದ ಕುಲಕರ್ಣಿ, ರೋಟರಿ ಅಧ್ಯಕ್ಷ ಡಾ| ಶಿವರಾಮ ಕೆ.ವಿ, ಪಾಂಡುರಂಗ ಪೈ ಇತರರು ಇದ್ದರು. ಜೀವ ಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಟಾರ, ಜಲ ತಜ್ಞ ಶಿವಾನಂದ ಕಳವೆ, ವೈಶಾಲಿ ವಿ.ಪಿ. ಹೆಗಡೆ ಇನ್ನಿತರರಿದ್ದರು. ಬಿ.ಡಿ. ಕಾಮತ್ ಹಾಗೂ ಗಣಪತಿ ಭಟ್ಟ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
Murdeshwar: ನಾಲ್ವರು ವಿದ್ಯಾರ್ಥಿನಿಯರು ಸಮುದ್ರಪಾಲು; 1 ಶವ ಪತ್ತೆ
MUST WATCH
ಹೊಸ ಸೇರ್ಪಡೆ
BBK11: ಮತ್ತೆ ಬಿಗ್ ಬಾಸ್ ಮನೆಗೆ ಗೋಲ್ಡ್ ಸುರೇಶ್..? ವಿಡಿಯೋದಲ್ಲಿ ಸುಳಿವು
Kundapura: ಹೆಜ್ಜೇನು ದಾಳಿ; ವ್ಯಕ್ತಿ ಸಾವು
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Belagavi: ಮಹಿಳೆಯರ ಸಬಲರಾಗಿಸುವ ಗೃಹಲಕ್ಷ್ಮಿ ಯೋಜನೆ ನಿಲ್ಲಿಸುವ ಮಾತೇ ಇಲ್ಲ: ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.