ನಿಯಮ ಉಲ್ಲಂಘನೆ: ವ್ಯಾಪಾರಿ ತರಾಟೆಗೆ
Team Udayavani, Apr 29, 2020, 7:08 PM IST
ಸಾಂದರ್ಭಿಕ ಚಿತ್ರ
ಅಂಕೋಲಾ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಮಾರಾಟಕ್ಕೆ ಮಾತ್ರ ಸರಕಾರ ಅನುವು ಮಾಡಿರುವ ಸಂದರ್ಭದಲ್ಲಿ ಪಟ್ಟಣದ ಕೆಲವು ಬಟ್ಟೆ ಅಂಗಡಿಗಳು ಬಾಗಿಲು ತೆರೆದು ವ್ಯಾಪಾರ ನಡೆಸುತ್ತದ್ದ ವೇಳೆ ಪುರಸಭೆ ಮುಖ್ಯಾಧಿಕಾರಿ ಬಿ.ಪ್ರಹ್ಲಾದ ದಾಳಿ ನಡೆಸಿ ಅಂಗಡಿ ಮಾಲೀಕರನ್ನು ತರಾಟೆಗೆ ತೆಗದುಕೊಂಡು ಅಂಗಡಿ ಬಂದ್ ಮಾಡಿಸಿದ್ದಾರೆ.
ಲಾಕ್‌ಡೌನ್ ಇದ್ದರೂ ಪಟ್ಟಣದಲ್ಲಿ ಅಗತ್ಯ ವಸ್ತು ಪೂರೈಕೆ ಮಾಡುವ ಹೊರತು ಇನ್ನಿತರ ಅಂಗಡಿಗಳಲ್ಲಿ ವ್ಯಾಪಾರ ವಹಿವಾಟು ಕದ್ದುಮುಚ್ಚಿ ನಡೆಯುತ್ತಿತ್ತು. ಈ ಕುರಿತು ಮಾಹಿತಿಯನ್ನು ಪಡೆದುಕೊಂಡಿರುವ ಅಂಕೋಲಾ ಪುರಸಭೆ ಮುಖ್ಯಾಧಿಕಾರಿ ಬಿ.ಪ್ರಹ್ಲಾದ ಮಂಗಳವಾರ ಪಟ್ಟಣದಲ್ಲಿ ಅಂತಹ ಅಂಗಡಿಗಳ ಮೇಲೆ ದಾಳಿ ನಡೆಸಿದ್ದಾರೆ.
ಕೆಲವು ಬಟ್ಟೆ ಅಂಗಡಿಯವರು ಗ್ರಾಹಕರನ್ನು ಒಳಗಡೆ ಕರೆದುಕೊಂಡು ಬಾಗಿಲು ಬಂದ್ ಮಾಡಿ ವ್ಯಾಪಾರ ನಡೆಸುತ್ತಿರುವುದು ಈ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ. ಅಂತಹ ಅಂಗಡಿ ಮಾಲೀಕರನ್ನು ತರಾಟೆ ತೆಗೆದುಕೊಂಡಿದ್ದರಲ್ಲದೆ. ಮತ್ತೂಮ್ಮೆ ಹೀಗೆ ಮಾಡಿದರೆ ಅಂಗಡಿಯನ್ನು ಸೀಜ್ ಮಾಡಲಾಗುವುದು ಎಂದು ತಿಳಸಿದ್ದಾರೆ.
ಪಟ್ಟಣದ ವ್ಯಾಪ್ತಿಯಲ್ಲಿ ಹಾರ್ಡ್ ವೇರ್ ಮತ್ತು ಅಗತ್ಯ ವಸ್ತುಗಳ ಪೂರೈಕೆ ಮಾಡುವ ಅಂಗಡಿಗಳಿಗೆ ಮಾತ್ರ ಅವಕಾಶ ಇರುತ್ತದೆ. ಹೊಟೇಲ್‌ಗಳಲ್ಲಿ ಪಾರ್ಸಲ್ ವ್ಯವಸ್ಥೆಗೆ ಅನುವು ಮಾಡಲಾಗಿದೆ. ಇದಲ್ಲದೆ ಕಾಸ್ಮೆಟಿಕ್, ಬಟ್ಟೆ, ಇನ್ನಿತರ ಅಂಗಡಿಗಳು ಬಾಗಿಲು ತೆರೆದರೆ ಸೂಕ್ತ ಕ್ರಮ ಜರುಗಿಸಲಾಗುತ್ತದೆ. -ಬಿ.ಪ್ರಹ್ಲಾದ, ಅಂಕೋಲಾ ಪುರಸಭೆ ಮುಖ್ಯಾಧಿಕಾರಿ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.