ಬಾವಿಗಳಲ್ಲೂ ಸೇರಿಕೊಳ್ಳುತ್ತಿದೆ ಉಪ್ಪು ನೀರು !
Team Udayavani, Apr 29, 2019, 4:27 PM IST
ಸಾಂದರ್ಭಿಕ ಚಿತ್ರ
ಕುಮಟಾ: ತಾಲೂಕಿನ ಬಹಳಷ್ಟು ಪ್ರದೇಶಗಳಲ್ಲಿ ಮಾರ್ಚ್‌ನಿಂದ ನೀರಿಗಾಗಿ ಪರದಾಟ ಪ್ರಾರಂಭವಾಗಿದೆ. ಸರಕಾರ ಕುಡಿಯುವ ನೀರು ಪೂರೈಸಲು ಹಲವಾರು ಯೋಜನೆ ಜಾರಿಗೊಳಿಸಿದರೂ, ಪ್ರಯೋಜನವಾಗುತ್ತಿಲ್ಲ. ನೀರಿಗಾಗಿ ಕಾತರಿಸುವ ಜನತೆಯ ಬಯಕೆ ಈಡೇರಿಲ್ಲ.
ತಾಲೂಕಿನ ಹಳಕಾರ, ಮದ್ಗುಣಿ, ಹಣ್ಣೇಮಠ, ಹೊಲನಗದ್ದೆ, ಕಾಗಾಲ, ಮೊಸಳೆಸಾಲ, ಕೂಜಳ್ಳಿ, ಹಿರೇಗುತ್ತಿ, ತೊರ್ಕೆ, ಬರ್ಗಿ, ಕಿಮಾನಿ, ಮಿರ್ಜಾನ್, ದೀವಗಿ, ಹೆಗಡೆ ಹಾಗೂ ಇನ್ನೂ ಹಲವಾರು ಕಡೆ ನೀರಿನ ಕೊರತೆಯಿದ್ದು, ಈ ಎಲ್ಲಾ ಗ್ರಾಮಗಳು ನೀರಿನ ಅತೀ ಸಮಸ್ಯೆ ಎದುರಿಸುತ್ತಿವೆ. ಶೀಘ್ರವೇ ಈ ಎಲ್ಲಾ ಗ್ರಾಮಗಳಿಗೂ ಕುಡಿಯುವ ನೀರಿನ ಪೂರೈಸಬೇಕಿದೆ. ಅನೇಕ ಕಡೆ ನೀರಿನ ಟ್ಯಾಂಕ್ ಹಾಳಾಗಿ ನೀರು ಸರಬರಾಜು ಆಗುತ್ತಿಲ್ಲ. ಇನ್ನು ಕೆಲವು ಕಡೆ ಕೊಳವೆ ಬಾವಿಗೆ ಅಳವಡಿಸಿದ ಪಂಪ್ ಹಾಳಾಗಿದ್ದು, ರಿಪೇರಿಗೂ ಬಾರದ ಪರಿಸ್ಥಿತಿಯಿದೆ.
ಇನ್ನು ಹೆಗಡೆಯ ತಾರಿಬಾಗಿಲು, ಹೊಲನಗದ್ದೆ, ಕಾಗಾಲ, ಮೊಸಳೆಸಾಲ ಮದ್ಗುಣಿಗಳಲ್ಲಿ ಈಗಾಗಲೇ 80ಕ್ಕೂ ಅಧಿಕ ಬಾವಿಗಳಲ್ಲಿ ಉಪ್ಪುನೀರು ತುಂಬಿ, ಕುಡಿಯಲೂ ನೀರಿಲ್ಲದಂತಾಗಿದೆ.
ಕೆಲಕಡೆ ನೀರಿಗಾಗಿ ಮೈಲುಗಟ್ಟಲೆ ನಡೆಯಬೇಕಾದ ಪರಿಸ್ಥಿತಿಯಿದೆ. ನಲ್ಲಿಯ ನೀರಿಗಾಗಿ ಉರಿಬಿಸಿಲಿನಲ್ಲಿ ಸಾಲಾಗಿ ನಿಂತ ದೃಶ್ಯ ಮರುಕಹುಟ್ಟಿಸುತ್ತದೆ. ಈಗಲೇ ಕೆಲವು ಕಡೆ ಟ್ಯಾಂಕರ್‌ಗಳಲ್ಲಿ ನೀರು ಸರಬರಾಜು ಮಾಡಲಾಗುತ್ತಿದೆ.
ಸರಕಾರವು ನೀರಿನ ದಾಹವನ್ನು ಶಾಶ್ವತವಾಗಿ ಪರಿಹರಿಸುವ ನಿಟ್ಟಿನಲ್ಲಿ ಹಲವಾರು ಯೋಜನೆ ಗಳನ್ನು ಹಮ್ಮಿಕೊಂಡಿದೆ. ಅಂತರ್ಜಲ ಹೆಚ್ಚಿಸುವ ನಿಟ್ಟಿನಲ್ಲಿ ಜಲಾನಯನ ಇಲಾಖೆ ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತಿದೆ. ಮನೆಮನೆಗೆ ನೀರನ್ನು ಒದಗಿಸುವ ನಿಟ್ಟಿನಲ್ಲಿ ಜಲನಿರ್ಮಲ ಯೋಜನೆ ಇದೆ. ಆದರೂ ಜನತೆಯ ನೀರಿನ ಸಮಸ್ಯೆ ನೀಗುತ್ತಿಲ್ಲ. ದಿನಪೂರ್ತಿ ಕೆಲಸ ಮಾಡಿ ಜೀವನ ಸಾಗಿಸಬೇಕಾದವರ ಪರಿಸ್ಥಿತಿ ನೀರನ್ನು ತರುವುದರಲ್ಲಿಯೇ ಮುಗಿಯುತ್ತಿದೆ. ಹೀಗೆ ನೀರಿಗಾಗಿ ದುಡಿಮೆಯನ್ನು ಬಿಟ್ಟು ಕುಳಿತರೆ, ಅವರ ಜೀವನದ ಗತಿಯೇನು ಎಂಬುದು ಪ್ರಶ್ನೆಯಾಗಿದೆ. ಸರಕಾರದ ಎಷ್ಟೋ ಕೊಳವೆ ಬಾವಿಗಳು, ತೆರೆದ ಬಾವಿಗಳು ಇಂದು ಉಪಯೋಗಕ್ಕೆ ಬಾರದೇ ನಿರುಪಯುಕ್ತವಾಗಿವೆ.
ತಾಪಂ, ಜಿಪಂ ಹಾಗೂ ಶಾಸಕರ ನಿಧಿಯಿಂದ ನೀರಿಗಾಗಿ ಎಷ್ಟೋ ಬಾವಿಗಳು ಮಂಜೂರಾಗುತ್ತದೆ. ಗುತ್ತಿಗೆದಾರ ಬಾವಿಯನ್ನೂ ತೆಗೆಯುತ್ತಾನೆ. ಆದರೆ ಇದರ ಪ್ರಯೋಜನ ಮಾತ್ರ ಜನತೆಗೆ ಸಿಗುತ್ತಿಲ್ಲ.
ಮೊದಲು ಕೃಷಿ ಕಾರ್ಯಗಳು ಜಾಸ್ತಿ ಮಾಡುವುದರಿಂದಾಗಿ ನೀರಿನ ಇಂಗುವಿಕೆ ಜಾಸ್ತಿಯಾಗುತ್ತಿತ್ತು. ಈಗ ಕೃಷಿ ಪ್ರಮಾಣ ಕಡಿಮೆಯಾಗಿ ನೀರು ಇಂಗುವಿಕೆ ಪ್ರಮಾಣ ಇಳಿದಿರುವುದರಿಂದ ಅಂತರ್ಜಲ ಕುಸಿದಿದೆ ಎಂದು ಇಲ್ಲಿನ ತಜ್ಞರ ಅಭಿಪ್ರಾಯವಾಗಿದೆ.
ದೊಡ್ಡ ದೊಡ್ಡ ಕೆರೆಗಳ ಸ್ವಚ್ಛ ಮಾಡುವ ಕೆಲಸವಾಗಬೇಕು. ತಾಲೂಕಿನಾದ್ಯಂತ ಅನೇಕ ಚಿಕ್ಕಚಿಕ್ಕ ಝರಿಗಳಿದ್ದು ಅವುಗಳ ನೀರನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳುವ ನಿಟ್ಟಿನಲ್ಲಿ ಚಿಂತನೆ ನಡೆಸಿ ಯೋಜನೆ ರೂಪಿಸಿದರೆ ಶಾಶ್ವತ ಪರಿಹಾರ ಸಿಗಬಹುದಾಗಿದೆ. ಅಧಿಕಾರಿಗಳು ಜನಪ್ರತಿನಿಧಿಗಳು ಈ ಕುರಿತು ಗಮನಹರಿಸಬೇಕು ಎಂಬುದು ಈ ಭಾಗದ ಜನರ ಆಶಯವಾಗಿದೆ.
.ದಿನೇಶ ಗಾಂವ್ಕರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ
Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ
Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
NH Highway Works: ಬಿ.ಸಿ.ರೋಡು: ಟ್ರಾಫಿಕ್ ಜಾಮ್
Rain: ಪುತ್ತೂರು, ಸುಳ್ಯ; ವಿವಿಧೆಡೆ ಲಘು ಮಳೆ
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.