ಶಿರಸಿಯಲ್ಲಿ ಸ್ಯಾನಿಟೈಜೇಷನ್ ಗೂಡು
Team Udayavani, May 13, 2020, 5:23 AM IST
ಶಿರಸಿ: ಮನೆಮನೆ ಕಸ ಸಂಗ್ರಹಕ್ಕೆ ತೆರಳುವ ಪೌರಕಾರ್ಮಿಕರ ಸುರಕ್ಷತೆ ದೃಷ್ಟಿಯಿಂದ ಜಿಲ್ಲೆಯಲ್ಲೇ ಮೊದಲ ಬಾರಿಗೆ ಇಲ್ಲಿಯ ನಗರಸಭೆ ಸ್ಥಳೀಯವಾಗಿ ಸಿದ್ಧಪಡಿಸಿರುವ ಸ್ಯಾನಿಟೈಜೇಷನ್ ಟನೆಲ್ ಗೂಡನ್ನು ರೂಪಿಸಿ ಗಮನ ಸೆಳೆದಿದೆ.
ಪ್ರತಿದಿನ ಕಸ ಸಂಗ್ರಹಕ್ಕೆ ತೆರಳುವ ಕಾರ್ಮಿಕರು ಬೆಳಗ್ಗೆ ತೆರಳುವಾಗ ಹಾಗೂ ವಾಪಸ್ ಬಂದ ನಂತರ ನಗರಸಭೆ ಎದುರಿನಲ್ಲಿ ಇಟ್ಟಿರುವ ಈ ಗೂಡಿನಲ್ಲಿ ಹೊಕ್ಕು ಸ್ಯಾನಿಟೈಜೇಷನ್ ಮಾಡಿಕೊಳ್ಳಬೇಕು. ಈ ಟನೆಲ್‌ಗೆ ಪ್ರಾಕ್ಸಿಮಿಟಿ ಸೆನ್ಸರ್ ಅಳವಡಿಸಿದ್ದು, ಪೌರಕಾರ್ಮಿಕರು ಇದರೊಳಗೆ ತೆರಳಿದಾಗ ತನ್ನಿಂದತಾನೆ ಕಾರ್ಯ ನಿರ್ವಹಿಸುತ್ತದೆ. ಸ್ಯಾನಿಟೈಜೇಷನ್ ಗೆ ತೆರಳುವ ಪೌರಕಾರ್ಮಿಕರು ಗಮ್ ಬೂಟ್, ಹ್ಯಾಂಡ್‌ಗ್ಲೌಸ್, ಮಾಸ್ಕ್ ಧರಿಸಿರಬೇಕಾಗುತ್ತದೆ. ಅದರಲ್ಲೂ ಮುಖ್ಯವಾಗಿ ಓವರ್‌ಗೌನ್ ತೊಟ್ಟುಕೊಂಡೇ ಒಳಗೆ ತೆರಳಬೇಕಾಗುತ್ತದೆ. ನಿತ್ಯ ಕಸ ಸಂಗ್ರಹಣೆಗೆ ತೆರಳುವ ನಗರಸಭೆಯ 11 ಪೌರಕಾರ್ಮಿಕರು ಸ್ಯಾನಿಟೈಜೇಷನ್‌ಗೆ ಒಳಗಾಗುತ್ತಾರೆ ಎಂದು ನಗರಸಭೆ ಪರಿಸರ ಅಭಿಯಂತ ಶಿವರಾಜ ತಿಳಿಸಿದ್ದಾರೆ.
ಮೈಸೂರಿನಲ್ಲಿ ಸ್ಯಾನಿಟೈಜೆಷನ್ ಗೂಡನ್ನು ರೂಪಿಸಿದ್ದನ್ನು ತಿಳಿದು ಉತ್ತೇಜಿತರಾಗಿ ಇಲ್ಲಿಯೂ ಇದನ್ನು 48 ಸಾವಿರ ರೂ. ಮೊತ್ತದಲ್ಲಿ ತಯಾರಿಸಲಾಗಿದೆ. ನಗರಪಟ್ಟಣ ಸ್ಥಳೀಯ ಸಂಸ್ಥೆಗಳಲ್ಲಿ ಜಿಲ್ಲೆಯಲ್ಲೇ ಇದೇ ಪ್ರಥಮವಾಗಿದೆ. ಮನೆಮನೆ ಕಸ ಸಂಗ್ರಹದ ಸಂದರ್ಭದಲ್ಲಿ ಕ್ವಾರಂಟೈನ್ ಮನೆಗಳಿಂದ ಪ್ರತ್ಯೇಕವಾಗಿ ಹಳದಿ ಬಣ್ಣದ ಚೀಲಗಳಲ್ಲಿ ಕಸವನ್ನು ಸಂಗ್ರಹಿಸಿ ಪ್ರತ್ಯೇಕವಾಗಿ ವೈಜ್ಞಾನಿಕ ವಿಲೇವಾರಿ ಮಾಡಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttara kannada: ತಳಕು-ಬಳುಕಿನ ಹೊನ್ನಾವರ ನಿಲ್ದಾಣದೊಳಗೆ ಬರೀ ಹುಳುಕು!
ಕಾಣದ ಕಾನನಕ್ಕೆ ಹಂಬಲಿಸಿದ ಮನ! ಸಾವಿರಾರು ಸಸಿಗಳನ್ನು ಮಕ್ಕಳಂತೆ ಜೋಪಾನ ಮಾಡಿದ್ದ ತುಳಸಿ ಗೌಡ
Ankola; ವೃಕ್ಷಮಾತೆ ಪದ್ಮಶ್ರೀ ತುಳಸಿ ಗೌಡ ಇನ್ನಿಲ್ಲ
Ankola: ರಕ್ತದೊತ್ತಡ ಕುಸಿದ ಪರಿಣಾಮ ಕಬಡ್ಡಿ ಆಡುವಾಗಲೇ ಕ್ರೀಡಾಳು ಸಾವು
Murdeshwar: ನಾಲ್ವರು ವಿದ್ಯಾರ್ಥಿನಿಯರು ಸಮುದ್ರಪಾಲು; 1 ಶವ ಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.