ಶಂಕರನಾಗ್ ಅಭಿಮಾನಿ ಕಥೆ ಸಿನಿಮಾ ಬಿಡುಗಡೆಗೆ ಸಿದ್ಧ
Team Udayavani, Aug 9, 2019, 1:20 PM IST
ಹೊನ್ನಾವರ: ಚಿತ್ರ ನಿರ್ದೇಶಕ ದರ್ಶಿತ್ ಭಟ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಹೊನ್ನಾವರ: ತಾಲೂಕಿನ ಯುವಕ ದರ್ಶಿತ್ ಭಟ್ ನಿರ್ದೇಶನದ ಫ್ಯಾನ್ ಚಲನಚಿತ್ರ ಆ.23 ರಂದು ತೆರೆ ಕಾಣಲಿದ್ದು, ಈ ಚಿತ್ರವು ಉತ್ತರ ಕನ್ನಡದಲ್ಲಿ ಮತ್ತು ಇಲ್ಲಿಯ ಭಾಷೆಯನ್ನು ಶೇ.80 ರಷ್ಟು ಅಳವಡಿಸಿಕೊಂಡು ಚಿತ್ರೀಕರಣ ಮಾಡಲಾಗಿದೆ. ಜಿಲ್ಲೆಯ ಜನತೆ ಇದನ್ನು ಹೆಚ್ಚಿನ ರೀತಿಯಲ್ಲಿ ಚಲನಚಿತ್ರ ಮಂದಿರದಲ್ಲೆ ವೀಕ್ಷಿಸಿ ಪ್ರೋತ್ಸಾಹಿಸುವಂತೆ ಅವರು ಕೋರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಚಲನ ಚಿತ್ರವನ್ನು ಶಂಕರನಾಗ್ ಹುಟ್ಟೂರಾದ ಹೊನ್ನಾವರ ಹಾಗೂ ಸುತ್ತುಮುತ್ತಲೇ ಶೇ.80 ರಷ್ಟು ಚಿತ್ರೀಕರಿಸಲಾಗಿದೆ. ದೊಡ್ಡ ಸಿನೆಮಾ ಸ್ಟಾರ್‌ಗಳಿಗೆ ಇರುವಷ್ಟೇ ಜನಪ್ರಿಯತೆ ಮತ್ತು ಅಭಿಮಾನಿ ಬಳಗ ಸೂಪರ್ ಹಿಟ್ ಸೀರಿಯಲ್ನ ಹೀರೋ- ಹೀರೋಯಿನ್‌ಗಳಿಗೆ ಇದ್ದಾರೆ. ಈ ಅಂಶವನ್ನೇ ಎಳೆಯಾಗಿಟ್ಟುಕೊಂಡು ಒಂದು ಸೂಪರ್ ಹಿಟ್ ಸೀರಿಯಲ್ನ ಒಬ್ಬ ಹೀರೋ ಮತ್ತು ಆ ಹೀರೋನ ಸಿಕ್ಕಾಪಟ್ಟೆ ಇಷ್ಟ ಪಡುವ ಒಬ್ಬಳು ಅಪ್ಪಟ ಅಭಿಮಾನಿ ಇವರ ನಡುವೆ ನಡೆಯುವ ಅಭಿಮಾನಿಯ ಅಭಿಮಾನದ ಕಥೆಯೇ ಫ್ಯಾನ್ ಸಿನಿಮಾ ಎಂದರು.
ಸಿನೆಮಾದ ಮತ್ತೂಂದು ದೊಡ್ಡ ಆಕರ್ಷಣೆ ಶಂಕರ ನಾಗ್, ಚಿತ್ರದ ನಾಯಕ ಶಂಕರನಾಗ ಅವರ ದೊಡ್ಡ ಅಭಿಮಾನಿ. ಹಾಸ್ಯ ಪ್ರಧಾನವಾಗಿ ಸಿನೇಮಾವನ್ನು ನಿರೂಪಿಸಲಾಗಿದೆ. ಕುಟುಂಬದ ಎಲ್ಲರೂ ಕುಳಿತು ನೋಡುವಂಥಹ ಚಿತ್ರ ಇದು ಎಂದು ಹೇಳಿದರು.
ಬೆಂಗಳೂರು, ಹೊನ್ನಾವರ, ಚಿತ್ರಾಪುರ, ಅಗ್ರಹಾರ, ಕುಮಟಾ, ಮುರ್ಡೇಶ್ವರ, ಇಡಗುಂಜಿ ಮುಂತಾದ ಉತ್ತರ ಕನ್ನಡ ಜಿಲ್ಲೆಯ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆದಿದೆ. ಮುಖ್ಯ ತಾರಾಗಣದಲ್ಲಿ ನಾಯಕ ಆರ್ಯನ್, ನಾಯಕಿ ಅದ್ವಿತಿ ಶೆಟ್ಟಿ, ಸೆಲಿಬ್ರಿಟಿ ನಾಯಕಿ ಸಮೀಕ್ಷಾ, ವಿಜಯ ಕಾಶಿ, ಮಂಡ್ಯ ರಮೇಶ, ನವೀನ್ ಪಡೀಲ್, ರವಿ ಭಟ್, ರಘು ಪಾಂಡೇಶ್ವರ, ಸ್ವಾತಿ ವಿಟ್ಲ, ಮಂಗೇಶ ಭಟ್, ವಿಜಯಲಕ್ಷ್ಮಿ ಉಪಾಧ್ಯಾಯ, ಪ್ರಸನ್ನ ಶೆಟ್ಟಿ, ಸಂಗೀತಾ ಭಟ್, ಪೃಥ್ವಿ ಸಾಗರ, ಗಣೇಶ ಗೌಡ, ಪ್ರಣತಿ ಗಾಣಿಗ ಇದ್ದಾರೆ ಎಂದು ತಿಳಿಸಿದರು.
ಎಸ್‌ಎಲ್ಎನ್ ಸಿನೇಮಾಸ್ ಬ್ಯಾನರ್ ಅಡಿ ಸಿನಿಮಾ ನಿರ್ಮಾಣವಾಗಿದೆ. ಸವಿತಾ ಈಶ್ವರ ನಿರ್ಮಾಪಕರು. ರಾಜಮುಡಿ ದತ್ತ ಕಾರ್ಯಕಾರಿ ನಿರ್ಮಾಪಕರು, ಕಥೆ, ಚಿತ್ರಕಥೆ, ಸಂಭಾಷಣೆ ಬಲವಳ್ಳಿ ದರ್ಶಿತ್ ಭಟ್, ಛಾಯಾಗ್ರಹಣ ವಿ. ಪವನಕುಮಾರ, ಸಂಕಲನ ಗಣಪತಿ ಭಟ್, ಸಾಹಿತ್ಯ ಜಯಂತ ಕಾಯ್ಕಿಣಿ, ಯೋಗರಾಜ ಭಟ್, ದರ್ಶಿತ್ ಭಟ್, ಹಿನ್ನೆಲೆ ಸಂಗೀತ ಬಿ. ಅಜನೀಶ ಲೋಕನಾಥ, ಹಾಡುಗಳು ವಿಕ್ರಮ್- ಚಂದನ, ಹಿನ್ನೆಲೆ ಗಾಯನ ವಿಜಯ ಪ್ರಕಾಶ, ಸಂಚಿತ ಹೆಗಡೆ, ಕಾರ್ತಿಕ, ಅನನ್ಯ ಭಟ್, ಅಂಕಿತ ಕುಂದು, ನೃತ್ಯ ಸದಾ, ಬಾಲು, ಸಾಹಸ ಮಾಸ್ ಮಾದ ಎಂದು ತಿಳಿಸಿದರು.
ಹಿರಿಯ ಸಾಹಿತಿ ಶ್ರೀಪಾದ ಶೆಟ್ಟಿ ಮಾತನಾಡಿ ನಮ್ಮ ತಾಲೂಕಿನ ಯುವಕ ದರ್ಶಿತ್ ಭಟ್ ನಿರ್ದೇಶನದ ಚಲನಚಿತ್ರ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು. ಸಿನಿಮಾ ತಂಡಕ್ಕೆ ಸತ್ಯ ಜಾವಗಲ್, ಮಂಜುನಾಥ ಗೌಡ ನಾಜಗಾರ ಅಭಿನಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Dandeli: ವಿದ್ಯುತ್ ಕಂಬದ ಜಿಓಎಸ್ ಕಳವು ಮಾಡಿದ್ದ ಆರೋಪಿ;ಮಾಲು ಸಹಿತ ವಶಕ್ಕೆ ಪಡೆದ ಪೊಲೀಸರು
Gujjar Kere: ಕೆರೆ ಪರಿಸರದ ರಕ್ಷಣೆಗೆ ಆದ್ಯತೆ ಅಗತ್ಯ; ತಹಶೀಲ್ದಾರ್‌ಗೆ ಮರು ಮನವಿ
MUST WATCH
ಹೊಸ ಸೇರ್ಪಡೆ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?
Bengaluru: ಬಸ್‌ಗಳಲ್ಲಿ ಮೊಬೈಲ್ ಕಳ್ಳತನ: ಇಬ್ಬರು ಆರೋಪಿಗಳ ಸೆರೆ, 60 ಫೋನ್ ಜಪ್ತಿ
Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್ ನ ಅನ್ನಪೂರ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.