Bhatkal: ಸಾರ್ವಕರ್ ನಾಮಫಲಕ, ಭಗವಾಧ್ವಜ ತೆರವು
Team Udayavani, Mar 7, 2024, 11:43 PM IST
ಭಟ್ಕಳ: ತಾಲೂಕಿನ ತೆಂಗಿನಗುಂಡಿ ಬಂದರಿನಲ್ಲಿ ಸೋಮವಾರ ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ನೇತೃತ್ವದಲ್ಲಿ ಹಾಕಿದ್ದ ವೀರ ಸಾರ್ವಕರ್ ನಾಮಫಲಕ ಹಾಗೂ ಭಗವಾಧ್ವಜವನ್ನು ಬುಧವಾರ ಮಧ್ಯರಾತ್ರಿ ಹೆಬಳೆ ಗ್ರಾಪಂ ಅಧಿಕಾರಿಗಳು ತೆರವುಗೊಳಿಸಿದ್ದಾರೆ.
ಈ ಹಿಂದೆ ಹಾಕಲಾಗಿದ್ದ ನಾಮ ಫಲಕವನ್ನು ಗ್ರಾಪಂ ಅಧಿಕಾರಿಗಳು ಜ.28ರಂದು ತೆರವುಗೊಳಿಸಿ ಜೆಸಿಬಿ ಮೂಲಕ ಕಟ್ಟೆಯನ್ನು ತೆಗೆದಿದ್ದರು. ನಾಮಫಲಕ ಮರುಸ್ಥಾಪನೆ ಆಗ್ರಹಿಸಿ ಬಿಜೆಪಿ ಬೆಂಬಲಿತ ಗ್ರಾಪಂ ಸದಸ್ಯರು, ಬಿಜೆಪಿಗರು ಜ.30ರಂದು ಹೆಬಳೆ ಗ್ರಾಪಂ ಎದುರು ಪ್ರತಿಭಟನೆ ನಡೆಸಿ, ನಾಮಫಲಕ ಹಾಕಲು ಕಟ್ಟೆಯನ್ನು ಪುನಃ ನಿರ್ಮಿಸಿದ್ದರು. ಸೋಮವಾರ ಕಾರ್ಯಕರ್ತರ ಭೇಟಿಗೆ ಭಟ್ಕಳಕ್ಕೆ ಆಗಮಿಸಿದ್ದ ಅನಂತಕುಮಾರ ಹೆಗಡೆ ನೇತೃತ್ವದಲ್ಲಿ ಸಾರ್ವಕರ್ ನಾಮಫಲಕ ಅಳವ ಡಿಸಿ, ಭಗವಾಧ್ವಜ ಹಾರಿಸಲಾಗಿತ್ತು. ಘಟನೆಗೆ ಸಂಬಂಧಿಸಿ ಅನಂತ ಕುಮಾರ ಸಹಿತ 21 ಜನರ ಮೇಲೆ ಪ್ರಕರಣ ಕೂಡ ದಾಖಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
INDWvsIREW: ಪ್ರತಿಕಾ ರಾವಲ್ ಭರ್ಜರಿ ಬ್ಯಾಟಿಂಗ್; ಐರ್ಲೆಂಡ್ ವಿರುದ್ದ ಸರಣಿ ಶುಭಾರಂಭ
Mega Concert: Black ಮಾರ್ಕೆಟ್ ಟಿಕೆಟ್ ಮಾರಾಟ ತಡೆಗೆ ಮಾರ್ಗಸೂಚಿ ಬೇಕು: ಪಿಐಎಲ್ ವಜಾ
Gudibande: ಬಸ್‌ಗೆ ಟಿಪ್ಪರ್ ಡಿಕ್ಕಿ; ತಪ್ಪಿದ ಭಾರಿ ಅನಾಹುತ; ಇಬ್ಬರಿಗೆ ಗಾಯ
Maharashtra ವಿಧಾನಸಭೆಯಲ್ಲಿ ಬಿಜೆಪಿ ಗೆಲುವಿಗೆ ಆರ್‌ಎಸ್‌ಎಸ್ ಕಾರಣ: ಶರದ್ ಪವಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.